Horoscope: ಈ ರಾಶಿಯವರು ಸಿಕ್ಕ ಅವಕಾಶಗಳನ್ನು ದುರುಪಯೋಗ ಮಾಡಿಕೊಳ್ಳುವಿರಿ

11 ಜನವರಿ​​ 2025: ಶನಿವಾರದಂದು ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ಮನೆಯವರನ್ನು ಕಾಣದೇ ನಿಮಗೆ ಬೇಸರವಾದೀತು. ಅಧ್ಯಾತ್ಮದ ಚಿಂತನೆಯನ್ನು ಇಂದು ಮಾಡುವಿರಿ. ಆರ್ಥಿಕವಾಗಿ ನೀವು ಸಬಲರಾಗುವುದು ನಿಮ್ಮ ನಡತೆಯಲ್ಲಿ ಕಾಣುವುದು. ಹಾಗಾದರೆ ಜನವರಿ 11ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Horoscope: ಈ ರಾಶಿಯವರು ಸಿಕ್ಕ ಅವಕಾಶಗಳನ್ನು ದುರುಪಯೋಗ ಮಾಡಿಕೊಳ್ಳುವಿರಿ
ಈ ರಾಶಿಯವರು ಸಿಕ್ಕ ಅವಕಾಶಗಳನ್ನು ದುರುಪಯೋಗ ಮಾಡಿಕೊಳ್ಳುವಿರಿ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jan 11, 2025 | 12:12 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಪೂರ್ವಾಷಾಢ, ಮಾಸ: ಪೌಷ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ದ್ವಾದಶೀ / ತ್ರಯೋದಶೀ, ನಿತ್ಯನಕ್ಷತ್ರ: ಮೃಗಶಿರಾ, ಯೋಗ: ಬ್ರಹ್ಮ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 07 ಗಂಟೆ 01 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 19 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 09:51 ರಿಂದ 11:16ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:05 ರಿಂದ 03:30 ರವರೆಗೆ, ಗುಳಿಕ ಬೆಳಿಗ್ಗೆ 07:02 ರಿಂದ 08: 27 ರವರೆಗೆ.

ತುಲಾ ರಾಶಿ; ಸ್ವಾಭಿಮಾನಕ್ಕೆ ಧಕ್ಕೆಯಾದಲ್ಲಿ ಸೋಲುವಿರಿ. ನಿಮ್ಮ ವ್ಯಾಪಾರ ಯೋಜನೆಗೆ ಸರಿಯಾದ ರೂಪ ಸಿಗಲಿದೆ‌ ಯಶಸ್ಸು. ಮಾತಿನಲ್ಲಿ ಉದ್ವೇಗವು ಹೆಚ್ಚಿರಲಿದೆ. ನಿಮ್ಮೊಳಗೇ ನಾನಾ ದ್ವಂದ್ವಗಳು ಕಾಣಿಸಿಕೊಳ್ಳಲಿವೆ. ನಕಾರಾತ್ಮಕ ಭಾವನೆಗಳಿಂದ ನಿಮಗೆ ಕಿರಿಕಿರಿಯಾಗಿ ಬಿಡಲೂ ಸಾಧ್ಯವಾಗದು. ಸಾಲ ಹೆಚ್ಚಾಗುವ ಭೀತಿಯು ಇರುವುದು. ಸಂಗಾತಿಯ ಪರವಾಗಿ ನೀವು ಮಾತನಾಡುವುದು ಅಚ್ಚರಿಯಾದೀತು. ಎಲ್ಲದಕ್ಕೂ ಲೆಕ್ಕಾಚಾರವನ್ನು ಹಾಕಿ ಮಾಡಿದರೂ ಅನಂತರ ಅದು ಕೈ ತಪ್ಪಬಹುದು. ನಿಮ್ಮ ಔದಾರ್ಯವನ್ನು ದುರ್ಬಳಕೆ ಮಾಡಿಕೊಳ್ಳಬಹುದು. ಒರಟು ಸ್ವಭಾವವನ್ನು ಬಿಡುವುದು ಉತ್ತಮ. ಅಧ್ಯಾತ್ಮ ಬಲದಿಂದ ದ ಅತ್ಮಬಲವನ್ನು ತಂದುಕೊಳ್ಳುವಿರಿ. ಅತಿಯಾದ ಧನಾರ್ಜನೆಯ ಚಿಂತೆಯು ನಿಮ್ಮ ಎಲ್ಲ‌ ಕೆಲಸಗಳನ್ನು ಮರೆಸುವುದು. ಕಾನೂನು ಸಮರದಲ್ಲಿ ಸೋಲುಣ್ಣಬೇಕಾಗುವುದು. ನಿಮ್ಮ ವ್ಯಕ್ತಿತ್ವದ ನಿರ್ಮಾಣವು ಇನ್ನಷ್ಟು ಆಗಬೇಕಿದೆ. ನಿಮ್ಮ‌ ಮೇಲೆ ಯಾರಾದರೂ ಆರೋಪವನ್ನು ಮಾಡಬಹುದು.

ವೃಶ್ಚಿಕ ರಾಶಿ: ಸಹನೆಯು ಬೇಕಾದಲ್ಲಿ ಉದ್ವಿಗ್ನವಾಗುವಿರಿ. ಔದ್ಯೋಗಿಕ ನಿರ್ಣಯವನ್ನು ತೆಗೆದುಕೊಳ್ಳಲು ಸಮಯವನ್ನು ಪಡೆಯಿರಿ. ಸದಾ ಕಾಲ ಹೊಸತನ್ನು ಅಪೇಕ್ಷಿಸುವಿರಿ. ನಿಮ್ಮ ವಸ್ತುವನ್ನು ಅನ್ಯರಿಗೆ ಕೊಟ್ಟು ಕಳೆದುಕೊಂಡು ಸಂಕಟಪಡುವಿರಿ. ಆದಾಯವನ್ನು ಹೆಚ್ಚು ಮಾಡಿಕೊಳ್ಳುವುದು ಅನಿವಾರ್ಯವಾದೀತು. ಒತ್ತಾಯದಿಂದ ಯಾರನ್ನೂ ಬಳಸಿಕೊಳ್ಳವುದು ಬೇಡ. ನಿಮಗೆ ವಹಸಿದ ಕೆಲಸದಲ್ಲಿ ನಿಷ್ಠೆಯನ್ನು ತೋರಿಸುವಿರಿ. ನೀವು ಅಂದುಕೊಂಡ ಕಾರ್ಯವು ಪ್ರಶಾಂತವಾಗಿ ಕೊನೆಗೊಳ್ಳುವುದು. ಆರ್ಥಿಕ ವ್ಯವಹಾರದಲ್ಲಿ ನೀವು ಇಂದು ದುರ್ಬಲರಾಗುವಿರಿ. ಹೊಸ ಕಾರ್ಯದಲ್ಲಿ ಹುಮ್ಮಸ್ಸು ಅತಿಯಾಗುವುದು. ಕೆಲವು ಸ್ವಭಾವವನ್ನು ತೋರಿಸುವುದು ಉಚಿತವಾಗದು. ಸ್ವಾವಲಂವನೆಯಿಂದ ಜೀವನವನ್ನು ನಡೆಸುವಿರಿ. ನಿಮಗೆ ವಹಸಿದ ಕೆಲಸದಲ್ಲಿ ನಿಷ್ಠೆಯನ್ನು ತೋರಿಸುವಿರಿ. ಇಂದಿನ ಅಶುಭವಾರ್ತೆ ನಿಮ್ಮನ್ನು ಅಲ್ಪ ಕುಗ್ಗಿಸಬಹುದು. ವ್ಯರ್ಥ ಕಾಲಹರಣವನ್ನು‌ ಮಾಡಿ ಸಂಪತ್ತನ್ನೂ ಕಳೆದುಕೊಳ್ಳಬೇಕಾಗುವುದು.

ಧನು ರಾಶಿ: ಹಣಕ್ಕಾಗಿ ಮಕ್ಕಳು ಪೀಡಿಸಬಹುದು. ಪ್ರೇಮವನ್ನು ಪೂರ್ಣವಾಗಿ ನಂಬಲಾಗದು. ಇಂದು ಅನಗತ್ಯ ಓಡಾಟದಿಂದ ಆರಂಭ. ನೀವು ಕೆಲವು ಅಹಿತಕರ ಸುದ್ದಿಗಳು ನಿಮ್ಮನ್ನು ಕುಗ್ಗಿಸಬಹುದು. ಸ್ನೇಹಿತರು ನಿಮ್ಮ ಸಮಯವನ್ನು ವ್ಯರ್ಥ ಮಾಡಬಹುದು. ಸ್ವಾಭಿಮಾನವನ್ನು ಬಿಟ್ಟು ಇರುವುದು ಕಷ್ಟವಾದೀತು. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗಬಹುದು. ಕೋಪದಲ್ಲಿ ಏನನ್ನಾದರೂ ಹೇಳುವಿರಿ. ಕಠಿಣ ಕೆಲಸವನ್ನು ಸರಳ ಮಾಡಿಕೊಳ್ಳುವ ವಿಧಾನವು ಗೊತ್ತಿರಲಿ. ಹಳೆಯ ಸ್ನೇಹಿತರ ಭೇಟಿಯನ್ನು ಮಾಡುವ ಮನಸ್ಸಾಗುವುದು. ಇಂದು ಶಾರೀರಿಕ ಪೀಡೆ ಅತಿಯಾಗಬಹುದು. ಇಂದಿನ ಖರ್ಚು ನಿಮ್ಮನ್ನು ಕುಗ್ಗಿಸಬಹುದು. ಅಶಿಸ್ತಿನ ಕಾರಣ ಹಿರಿಯರಿಂದ ಬೈಸಿಕೊಳ್ಳಬೇಕಾಗುವುದು. ನಿಮ್ಮ ವಸ್ತುವನ್ನು ಅನ್ಯರಿಗೆ ಕೊಟ್ಟು ಕಳೆದುಕೊಂಡು ಸಂಕಟಪಡುವಿರಿ. ಹಳೆಯ ವಸ್ತುಗಳನ್ನು ದುರಸ್ತಿ ಮಾಡಿಕೊಂಡು ಬಳಸುವಿರಿ. ಇಂದು ಸ್ವಂತ ಉದ್ಯಮವು ಹೆಚ್ಚು ಸವಾಲಿನಿಂದ ಇರುವುದು. ಭೂಮಿಯ ಉತ್ಪನ್ನದಿಂದ ಲಾಭವಾಗಲಿದೆ.

ಮಕರ ರಾಶಿ: ಆತ್ಮಪ್ರಶಂಸೆಯು ಇತರರಿಗೆ ಕೇಳಲಾಗದು. ನೀವು ವಿವಿಧ ಕಡೆಯಿಂದ ಒಳ್ಳೆಯ ಸುದ್ದಿಗಳನ್ನು ಪಡೆಯುತ್ತೀರಿ. ಸಿಕ್ಕ ಅವಕಾಶಗಳನ್ನು ದುರುಪಯೋಗ ಮಾಡಿಕೊಳ್ಳುವಿರಿ. ನಂಬಿಕೆಯಲ್ಲಿ ದ್ರೋಹವಾಗಿದೆ ಎಂದು ಅನ್ನಿಸಬಹುದು. ಕಛೇರಿಯ ನಿಯಮಗಳನ್ನು ನೀವೇ ಉಲ್ಲಂಘಿಸುವಿರಿ. ಮೇಲಧಿಕಾರಿಗಳ ಜೊತೆ ನಿಮಗೆ ಆಪ್ತತೆ ಬೇಡ. ಪರರ ದ್ರವ್ಯವನ್ನು ಕೊಟ್ಟು ನಿಶ್ಚಿಂತರಾಗಿ. ಸಂಗಾತಿಯ ಮನಃಸ್ಥಿತಿಯನ್ನು ಬದಲಿಸಲು ಪ್ರಯತ್ನಿಸುವಿರಿ. ನಿಮಗೆ ಸ್ಥಿರಾಸ್ತಿಯನ್ನು ಮಾರಾಟ ಮಾಡುವ ಅನಿವಾರ್ಯತೆ ಬರಬಹುದು. ಹಳೆಯ ಪ್ರೇಮವನ್ನು ಸಂಗಾತಿಯಲ್ಲಿ ಹೇಳಿಕೊಳ್ಳುವಿರಿ. ನೀವು ಇದರಿಂದ ನಿರಾಳರಾಗುವಿರಿ. ಕಛೇರಿಯಲ್ಲಿ ನಿಮ್ಮ ಮಾತನ್ನು ಪಾಲಿಸುವರು. ವಿದೇಶೀ ವಿನಿಮಯದಿಂದ ಲಾಭವಾಗಲಿದೆ. ನಿಮ್ಮ ಅನುಪಸ್ಥಿತಿಯಲ್ಲಿ ಕೆಲಸವನ್ನು ಬೇರೆಯವರು ಮಾಡುವರು. ಅನಾರೋಗ್ಯವು ಬೆನ್ನು‌ ಬಿಡದ ಬೇತಾಳದಂತೆ ಕಾಡಬಹುದು. ಯಾರ ನಕಾರಾತ್ಮಕ ಮಾತುಗಳೂ ನಿಮ್ಮ ಲೆಕ್ಕಕ್ಕೆ ಬಾರದು. ನಿರುದ್ಯೋಗಿಗಳಿಗೆ ಉದ್ಯೋಗದಲ್ಲಿ ಅವಕಾಶ ಪ್ರಾಪ್ತಿ.

ಕುಂಭ ರಾಶಿ; ತಪ್ಪುಗ್ರಹಿಕೆಯಿಂದ ಸುಮ್ಮನೇ ಇರಬೇಕಾದೀತು. ವೃತ್ತಿಯ ಕಾರಣಕ್ಕೆ ಮಾಡುವ ಪ್ರಯಾಣದಲ್ಲಿ ಇಷ್ಟವಿರದು. ಸಂಕುಚಿತ ಮನಃಸ್ಥಿತಿಯು ಎಲ್ಲದರಿಂದ ನಿಮ್ಮನ್ನು ದೂರವಿಡುವುದು. ಪಕ್ಷಪಾತವು ನಿಮ್ಮ ಎಲ್ಲ ಸದ್ಭಾವವನ್ನು ನುಂಗಿ ಹಾಕುವುದು. ದಾಂಪತ್ಯದಲ್ಲಿ ಬೇಸರವಿರಲಿದೆ. ಯಾರ ಮೇಲೂ ದೂರನ್ನು ಹೇಳುವುದು ಬೇಡ. ಸಮಯ ಬಂದಾಗ ಎಲ್ಲವೂ ಸ್ಪಷ್ಟವಾಗಿ ಗೋಚರಿಸುವುದು. ಸಮಾರಂಭಗಳಲ್ಲಿ ನೀವು ಹೇಳಿದ ಮಾತು ವಿವಾದವಾಗಬಹುದು. ಸ್ನೇಹಿತರನ್ನು ಕಳೆದುಕೊಂಡಿರುವುದರ ಪರಿಣಾಮವು ಕೂಡಲೇ ಗೊತ್ತಾಗದು. ಅಮೂಲ್ಯ ವಸ್ತುವನ್ನು ಕೊಟ್ಟು ಆರ್ಥಿಕ ಸಂಕಷ್ಟವನ್ನು ತಂದುಕೊಳ್ಳುವಿರಿ. ಕೆಲವು ಸೂಚನೆಗಳು ನಿಮಗೆ ಭವಿಷ್ಯವನ್ನು ತಿಳಿಸಬಹುದು. ಕುಟುಂಬದಲ್ಲಿ ಶಾಂತಿಯು ಕದಡಲು ನಿಮ್ಮ ಪಾತ್ರವೇ ಇರುವುದು. ಕಳೆದುಕೊಂಡ ವಸ್ತುವನ್ನು ಮರಳಿ ಪಡೆಯುವಿರಿ. ನಿಮ್ಮ ಬಗ್ಗೆ ಇತರರಿಗೆ ತಿಳಿವಳಿಕೆ ಕೊಡುವಿರಿ. ಉನ್ನತ ಅಧಿಕಾರಿಗಳ ಮೇಲೆ ಸಿಟ್ಟನ್ನು ಬೇರೆ ಕಡೆಯಲ್ಲಿ ಹೊರಹಾಕುವಿರಿ.

ಮೀನ ರಾಶಿ: ನೀವು ಮಾಡುವ ಆಸ್ತಿಯ ಹಂಚಿಕೆಯಲ್ಲಿ ಹಳೆಯ ವಿಚಾರಗಳು ಮರುಕಳಿಸುವುದು. ಅನಿರೀಕ್ಷಿತ ಪ್ರಯಾಣದಲ್ಲಿ ಕೆಲವು ಲಾಭವಾಗುವುದು. ಆದರೆ ಅಲ್ಲಿನ ಸಣ್ಣ ವಿಚಾರಕ್ಕೂ ಸಿಟ್ಟಗುವಿರಿ. ರಕ್ಷಣೆಯ ಕಾರ್ಯಗಳಿಗೆ ಸ್ವಲ್ಪ ಅನನುಕೂಲ ಸನ್ನಿವೇಶವು ಇರಲಿದೆ. ಪರಸ್ಪರ ನೆರವಿನಿಂದ ಇಂದಿನ ಕೆಲಸವು ಸಾಧ್ಯವಾಗುವುದು. ಸ್ನೇಹಿತರು ದೂರವಾದ್ದರಿಂದ ನಿಮಗೂ ನೆಮ್ಮದಿ ಸಿಗುವುದು. ಆದಾಯದ ಮೂಲವನ್ನು ಹೆಚ್ಚುಮಾಡಿಕೊಳ್ಳುವಿರಿ. ಸ್ಥಿರಾಸ್ತಿಯನ್ನು ಅಲಕ್ಷ್ಯ ಮಾಡುವಿರಿ‌ ಕಾರಣಾಂತರಗಳಿಂದ ನಿಮ್ಮ‌ ಯಾತ್ರೆಯು ಸ್ಥಗಿತವಾಗುವುದು. ಮನೆಯವರನ್ನು ಕಾಣದೇ ನಿಮಗೆ ಬೇಸರವಾದೀತು. ಅಧ್ಯಾತ್ಮದ ಚಿಂತನೆಯನ್ನು ಇಂದು ಮಾಡುವಿರಿ. ಆರ್ಥಿಕವಾಗಿ ನೀವು ಸಬಲರಾಗುವುದು ನಿಮ್ಮ ನಡತೆಯಲ್ಲಿ ಕಾಣುವುದು. ನಿಮ್ಮ ಬಗ್ಗೆ ಕೀಳರಿಮೆ ಉಂಟಾಗಬಹುದು. ಸಂತೋಷದ ವಾತಾವರಣವು ಮನೆಯಲ್ಲಿ ಇರುವುದು. ನಿರಾಸೆಯಿಂದ ನೀವು ಹೊರಬರುವಿರಿ.

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ