Viral Video: ಲಂಡನ್; ಮಧ್ಯರಾತ್ರಿ ರಸ್ತೆಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದ 12 ಅಡಿಯ ದೈತ್ಯಹೆಬ್ಬಾವು

London: ಲಂಡನ್​ನ ರಸ್ತೆಯಲ್ಲಿ ನಡುರಾತ್ರಿ 12 ಅಡಿ ಉದ್ದದ ದೈತ್ಯ ಹೆಬ್ಬಾವು ಸಂಚರಿಸುವಾಗ ಸ್ಥಳೀಯರ ಕಣ್ಣಿಗೆ ಬಿದ್ದಿದೆ. ಪೊಲೀಸರಿಗೆ ತಿಳಿಸಿದಾಗ ಅವರು ತಕ್ಷಣವೇ ಬಂದು, ಈ ಹಾವನ್ನು ರಕ್ಷಿಸಿ ಸುರಕ್ಷಿತವಾದ ಜಾಗಕ್ಕೆ ತಲುಪಿಸಿದ್ದಾರೆ. ನೆಟ್ಟಿಗರು ಇವರ ಈ ಸಾಹಸಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Viral Video: ಲಂಡನ್; ಮಧ್ಯರಾತ್ರಿ ರಸ್ತೆಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದ 12 ಅಡಿಯ ದೈತ್ಯಹೆಬ್ಬಾವು
12 ಅಡಿ ಹೆಬ್ಬಾವನ್ನು ರಕ್ಷಿಸುತ್ತಿರುವ ಪೊಲೀಸರು
Follow us
ಶ್ರೀದೇವಿ ಕಳಸದ
|

Updated on: Sep 07, 2023 | 5:51 PM

Python: ಈ ಹೆಬ್ಬಾವು ಲಂಡನ್​ನ ವೆಸ್ಟ್ ಮಿಡ್‌ಲ್ಯಾಂಡ್ಸ್‌ನ ರಸ್ತೆಯಲ್ಲಿ ನಡುರಾತ್ರಿ ಸಂಚರಿಸುತ್ತಿದ್ದಾಗ ಪೊಲೀಸರ ಕಣ್ಣಿಗೆ ಬಿದ್ದಿದೆ. 12 ಅಡಿಯ ದೈತ್ಯ ಹೆಬ್ಬಾವನ್ನು ರಕ್ಷಿಸುವಲ್ಲಿ ಪೊಲೀಸರು ಸಾಕಷ್ಟು ಶ್ರಮವಹಿಸಿದ್ದಾರೆ. ರಕ್ಷಿಸಿದ ಹಾವನ್ನು ಮೊದಲು ಪಶುವೈದ್ಯಕೀಯ ಚಿಕಿತ್ಸಾಲಯದಲ್ಲಿ ಪ್ರಾಥಮಿಕ ತಪಾಸಣೆಗೆ ಕರೆದೊಯ್ದಿದ್ದಾರೆ. ಆನಂತರ ಸುರಕ್ಷಿತ ಜಾಗಕ್ಕೆ ಅದನ್ನು ತಲುಪಿಸಿದ್ದಾರೆ. ಪೊಲೀಸರ ಈ ಕಾರ್ಯವನ್ನು ನೆಟ್ಟಿಗರು ಮನದುಂಬಿ ಶ್ಲಾಘಿಸುತ್ತಿದ್ದಾರೆ. ಕಾರ್ಯಾಚರಣೆಯ ಫೋಟೋ ಇದೀಗ ಇನ್​ಸ್ಟಾಗ್ರಾಂ (Instagram) ಮೂಲಕ ವೈರಲ್ ಆಗಿದ್ದು ಅನೇಕರು ಮೆಚ್ಚುಗೆಯಿಂದ ಪ್ರತಿಕ್ರಿಯಿಸುತ್ತಿದ್ದಾರೆ.

ಇದನ್ನೂ ಓದಿ : Viral Video: ಜಪಾನ್​; ಅಂಡರ್​​ಗ್ರೌಂಡ್​ ಸೈಕಲ್ ಪಾರ್ಕಿಂಗ್​​ ವಿಡಿಯೋ ವೈರಲ್ 

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಸೆ. 5ರಂದು ಮಧ್ಯರಾತ್ರಿ 1.30 ರ ಸುಮಾರಿಗೆ, 12 ಅಡಿ ಉದ್ದದ ಹಳದಿ ಹೆಬ್ಬಾವು ಹಾರ್ವುಡ್ ಸ್ಟ್ರೀಟ್​ನಲ್ಲಿ ನುಸುಳಾಡುತ್ತಿದೆ ಎಂದು ಪೊಲೀಸರಿಂದ ಸಾರ್ವಜನಿಕರಿಂದ ಕರೆ ಬಂದಿದೆ. ಆನಂತರ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಧೈರ್ಯ ಸಾಹಸದಿಂದ ಹಾವನ್ನು ರಕ್ಷಿಸಿ ವ್ಯಾನ್​ಗೆ ಸಾಗಿಸಿದ್ದಾರೆ.

12 ಅಡಿ ದೈತ್ಯ ಹೆಬ್ಬಾವನ್ನು ರಕ್ಷಿಸುತ್ತಿರುವ ಪೊಲೀಸರು

22 ಗಂಟೆಯ ಹಿಂದೆ ಹಂಚಿಕೊಂಡ ಈ ಪೋಸ್ಟ್​ ಅನ್ನು ಈಗಾಗಲೇ 1,600ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಪೊಲೀಸರು ಹಾವಿಗೆ ಹೇಗೆ ಕೈಕೋಳ ಹಾಕಿದರು? ಎಂದು ತಮಾಷೆ ಮಾಡಿದ್ದಾರೆ ಒಬ್ಬರು. ಅಯ್ಯೋ ಈ ಸಮಯದಲ್ಲಿ ನಾ ಆ ಹಾವಿನ ಹತ್ತಿರ ಇರಬೇಕಾಗಿತ್ತು, ಪರ್ವಾಗಿಲ್ಲ ನೀವು ನಿಭಾಯಿಸಿದ್ದೀರಿ ಒಳ್ಳೆಯದು! ಎಂದಿದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : Viral Video: ಲೋಕಲ್ ಟ್ರೇನ್​ನಲ್ಲಿ ಪಾನೀಪೂರಿ ಮಾರಾಟ; ಈ ಐಡಿಯಾ ಏನೋ ಚೆನ್ನಾಗಿದೆ ಆದರೆ…

ಅಕಸ್ಮಾತ್ ನಾನೇನಾದರೂ ಆ ಜಾಗದಲ್ಲಿ ಇದ್ದರೆ ಖಂಡಿತ ಒಂದು ಮೈಲಿ ದೂರ ಓಡಿಬಿಡುತ್ತಿದ್ದೆ ಎಂದಿದ್ದಾರೆ ಒಬ್ಬರು. ಒಹ್ ನೀವು ನನ್ನ ಹಳೆಯ ಗೆಳೆಯನನ್ನು ರಕ್ಷಿಸಿದ್ದೀರಿ ಎಂದಿದ್ದಾರೆ ಮತ್ತೊಬ್ಬರು. ಏನೇ ಹೇಳಿ, ಇಷ್ಟು ದೊಡ್ಡ ಭಯಂಕರ ಹಾವನ್ನು ಹಿಡಿಯುವುದು ಸಣ್ಣ ಮಾತೇನಲ್ಲ, ಶಭಾಷ್​ ಎಂದಿದ್ದಾರೆ ಅನೇಕರು. ಬರೀಗೈಯಲ್ಲಿ ಅವರು ಹಾವನ್ನು ರಕ್ಷಿಸಿದ್ದಾರೆ, ಅಕಸ್ಮಾತ್ ಅದು ಅವರನ್ನೇ ವಾಪಾಸು ಸುತ್ತಿಕೊಂಡಿದ್ದರೆ? ಎಂದು ತಮಾಷೆ ಮಾಡುವವರನ್ನು ಪ್ರಶ್ನಿಸಿದ್ದಾರೆ ಕೆಲವರು.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ