Viral Video: ಹೈದರಾಬಾದ; ಜಲಾವೃತಗೊಂಡಿದ್ದ ಚರಂಡಿಯನ್ನು ಸ್ವಚ್ಛಗೊಳಿಸಿದ ಮಹಿಳಾ ಪೊಲೀಸ್
Police: ಸಾರ್ವಜನಿಕ ಸೇವಾಕ್ಷೇತ್ರಗಳಲ್ಲಿರುವವರು ತಮ್ಮ ಕರ್ತವ್ಯ ಮೀರಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಈ ಪೈಕಿ ಸಂದರ್ಭಗಳನ್ನು ಅರ್ಥ ಮಾಡಿಕೊಂಡು ಸ್ವಯಂಪ್ರೇರಣೆಯಿಂದ ತೊಡಗಿಕೊಳ್ಳುವವರು ಬೆರಳೆಣಿಕೆಯಷ್ಟು ಜನ ಮಾತ್ರ. ಇದೀಗ ಹೈದರಾಬಾದಿಯ ಮಹಿಳಾ ಎಸಿಪಿ ತಮ್ಮ ಸಹೋದ್ಯೋಗಿಯೊಂದಿಗೆ ಜಲಾವೃತಗೊಂಡಿದ್ದ ರಸ್ತೆಗುಂಡಿಯನ್ನು ಸ್ವಚ್ಛಗೊಳಿಸಿದ್ದಾರೆ.
Hyderabad: ಟ್ರಾಫಿಕ್ ಪೊಲೀಸರೆಂದರೆ ಇಡೀದಿನ ರಸ್ತೆಯಲ್ಲಿ ನಿಂತು ಅತ್ತಿಂದಿತ್ತ ಇತ್ತಿಂದಿತ್ತ ಕೈಚಾಚಿ ಸಂಚಾರವನ್ನು ಸರಾಗಗೊಳಿಸುವವರು ಮಾತ್ರ ಎಂಬ ಕಲ್ಪನೆ ಸಾರ್ವಜನಿಕರಲ್ಲಿರುತ್ತದೆ. ಆದರೆ ಒಮ್ಮೆ ಸಾರ್ವಜನಿಕ ಸೇವೆಗಳಿಗೆ ತೆರೆದುಕೊಂಡ ಮೇಲೆ ಬಂದಿದ್ದೆಲ್ಲವನ್ನೂ ನಿಭಾಯಿಸುವ ಕರ್ತವ್ಯಪರತೆ ಆಯಾ ವ್ಯಕ್ತಿಗಳಿಗೆ ಇರಬೇಕಾಗುತ್ತದೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ, ರಸ್ತೆಯಲ್ಲಿರುವ ಗುಂಡಿ ಕಸದಿಂದಾಗಿ ಜಲಾವೃತಗೊಂಡಿದೆ. ಸಾರ್ವಜನಿಕರ ಸಂಚಾರಕ್ಕೆ ವ್ಯತ್ಯಯವಾಗಬಾರದೆಂದು ಪೊಲೀಸರು ಸ್ವಯಂಪ್ರೇರಣೆಯಿಂದ ಕಸವನ್ನು ಬರಿಗೈಯಿಂದ ಎತ್ತಿ ಶುಚಿಗೊಳಿಸಿದ್ದಾರೆ. ಈ ವಿಡಿಯೋ ಅನ್ನು ಹೈದರಾಬಾದಿನ ಪೊಲೀಸ್ ಇಲಾಖೆಯು (Police Department) ತನ್ನ X ಖಾತೆಯಲ್ಲಿ ಪೋಸ್ಟ್ ಮಾಡಿದೆ.
ಇದನ್ನೂ ಓದಿ : Viral Video: ವೃದ್ಧನನ್ನು ಪ್ರಾಣಾಪಾಯದಿಂದ ಕಾಪಾಡಿದ 16ರ ಹುಡುಗ; ಸೋಶಿಯಲ್ ಮೀಡಿಯಾದಿಂದ ಕಲಿತ ತಂತ್ರ
ಸೆ. 5ರಂದು X ನಲ್ಲಿ ಹಂಚಿಕೊಂಡ ಈ ವಿಡಿಯೋ ಅನ್ನು ಈಗಾಗಲೇ 2.3 ಲಕ್ಷ ಜನರು ನೋಡಿದ್ದಾರೆ. 3,500 ಜನರು ಲೈಕ್ ಮಾಡಿರುವ ಈ ವಿಡಿಯೋಗೆ ಸಾವಿರಾರು ಜನರು ಮೆಚ್ಚಿ ಪ್ರತಿಕ್ರಿಯಿಸಿದ್ದಾರೆ. ತಮ್ಮ ಕರ್ತವ್ಯವನ್ನು ಮೀರಿ ಇವರುಗಳು ಕೆಲಸದಲ್ಲಿ ತೊಡಗಿಕೊಂಡಿರುವ ಬಗ್ಗೆ ಶ್ಲಾಘಿಸಿದ್ದಾರೆ. ಅಷ್ಟೇ ಅಲ್ಲ ಬರೀಗೈಯಲ್ಲಿ ಕಸವನ್ನು ಶುಚಿಗೊಳಿಸಿ ಸಾರ್ವಜನಿಕರಿಗೆ ಅನುವು ಮಾಡಿಕೊಟ್ಟದ್ದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಸ್ತೆಗುಂಡಿಯ ಶುಚಿಕಾರ್ಯದಲ್ಲಿ ಹೈದರಾಬಾದ್ ಪೊಲೀಸರು
#HYDTPinfo Smt. D. Dhana Laxmi, ACP Tr South West Zone, cleared the water logging by removing the clog at drain water near Tolichowki flyover.@AddlCPTrfHyd pic.twitter.com/lXDLix6dMp
— Hyderabad Traffic Police (@HYDTP) September 5, 2023
ಎಸಿಪಿ ಡಿ.ಡಿ. ಧನಲಕ್ಷ್ಮೀ ಸಹಾಯಕ ಸಿಬ್ಬಂದಿಯೊಂದಿಗೆ ಹೈದರಾಬಾದಿನ ಟೋಲಿಚೌಕಿಯ ಬಳಿ ಈ ರಸ್ತೆಗುಂಡಿಯನ್ನು ಶುಚಿಗೊಳಿಸಿದ್ದಾರೆ. ನಿಮ್ಮ ಈ ಕರ್ತವ್ಯಪರತೆಗೆ, ಕಾಳಜಿಗೆ ಧನ್ಯವಾದ ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ. ಕರ್ತವ್ಯದ ಹೊರತಾಗಿಯೂ ಸೇವೆಯನ್ನು ನಿಷ್ಠೆಯಿಂದ ಮಾಡುವ ಇಂಥ ಪೊಲೀಸರು ಇಲಾಖೆಯಲ್ಲಿ ಅನೇಕರಿದ್ದಾರೆ ಅವರನ್ನು ಗುರುತಿಸಿ ಅಭಿನಂದಿಸಬೇಕು ಎಂದಿದ್ದಾರೆ ಮತ್ತೊಬ್ಬರು.
ಇದನ್ನೂ ಓದಿ : Viral Video: ‘ಮೇಕೆಗೂ ಟಿಕೆಟ್ ಖರೀದಿಸಿದ್ದೇನೆ’; ನಮ್ಮ ದೇಶಕ್ಕೆ ಇಂಥ ಪ್ರಾಮಾಣಿಕ ನಾಯಕಿ ಬೇಕು ಎನ್ನುತ್ತಿರುವ ನೆಟ್ಟಿಗರು
ಸೇವಾಕ್ಷೇತ್ರಗಳಲ್ಲಿರುವ ಅನೇಕರು ಹೀಗೆ ಕರ್ತವ್ಯದ ಹೊರತಾಗಿಯೂ ಜನರಿಗೆ ಸಹಾಯ ಮಾಡುತ್ತಾರೆ. ಆದರೆ ಎಲ್ಲರೂ ಕಣ್ಣಿಗೆ ಬೀಳುವುದಿಲ್ಲವಷ್ಟೇ. ಈಗಿನದು ಕ್ಯಾಮೆರಾ ಯುಗ ಕೆಲವರಾದರೂ ಹೀಗೆ ಕಾಣಿಸಿಕೊಳ್ಳುತ್ತಾರೆ. ಇಂಥವರ ಬಗ್ಗೆ ಅಭಿಮಾನ ಮೂಡುತ್ತದೆ.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ