ಭಾರತ ಮತ್ತು ಇಂಡಿಯಾ ನಡುವಿನ ವ್ಯತ್ಯಾಸ ವಿವರಿಸುವ ಲಾಲು ಪ್ರಸಾದ್ ಯಾದವ್ ಹಳೇ ವಿಡಿಯೊ ವೈರಲ್

ಈ ಕಿರು ವಿಡಿಯೊದಲ್ಲಿ ಆರ್‌ಜೆಡಿ (ರಾಷ್ಟ್ರೀಯ ಜನತಾ ದಳ) ಮುಖ್ಯಸ್ಥರು ಬೇವಿನ ಕಡ್ಡಿಯಿಂದ ಹಲ್ಲುಜ್ಜುತ್ತಿರುತ್ತಾರೆ. ದೆಹಲಿಯಲ್ಲಿ ಬೇವಿನ ಕಡ್ಡಿ ಸಿಗುತ್ತದೆಯೇ ಎಂದು ಸಂದರ್ಶಕನು ಕೇಳಿದಾಗ, ಅಲ್ಲಿ ಸಿಗುವುದು ಕಷ್ಟ. ದೆಹಲಿ ಇಂಡಿಯಾದಲ್ಲಿದೆ. ಪಾಟ್ನಾ 'ಭಾರತದಲ್ಲಿದೆ ಎಂದು ಲಾಲು ಹೇಳುತ್ತಾರೆ. ಎನ್​​ಡಿಟಿವಿಗೆ ನೀಡಿದ ಸಂದರ್ಶನ ವಿಡಿಯೊದ ತುಣುಕು ಇದಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಭಾರತ ಮತ್ತು ಇಂಡಿಯಾ ನಡುವಿನ ವ್ಯತ್ಯಾಸ ವಿವರಿಸುವ ಲಾಲು ಪ್ರಸಾದ್ ಯಾದವ್ ಹಳೇ ವಿಡಿಯೊ ವೈರಲ್
ಲಾಲು ಪ್ರಸಾದ್ ಯಾದವ್
Follow us
|

Updated on: Sep 06, 2023 | 4:16 PM

ದೆಹಲಿ ಸೆಪ್ಟೆಂಬರ್ 06: ಜಿ 20 ಶೃಂಗಸಭೆಯ (G20  Summit) ಆಹ್ವಾನ ಪತ್ರಿಕೆಯಲ್ಲಿ ಪ್ರೆಸಿಡೆಂಟ್ ಆಫ್ ಇಂಡಿಯಾ ಬದಲು ಪ್ರೆಸಿಡೆಂಟ್ ಆಫ್ ಭಾರತ್ ಎಂದು ಉಲ್ಲೇಖಿಸಿದ ನಂತರ ದೇಶದ ಹೆಸರು ಬದಲಿಸಲಾಗುತ್ತಿದೆ ಎಂಬ ಸುದ್ದಿ ಸ್ಫೋಟವಾಗಿದೆ. ಇಂಡಿಯಾ- ಭಾರತ ಹೆಸರಿನ ಚರ್ಚೆಗಳ ನಡುವಿಯೇ, ಬಿಹಾರದ (Bihar) ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ (Lalu Prasad Yadav) ಅವರ ಹಳೇ ವಿಡಿಯೊ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಎನ್ ಡಿಟಿವಿಗೆ ನೀಡಿದ ಸಂದರ್ಶನದ ವಿಡಿಯೊ ಇದಾಗಿದ್ದು, ಇದರಲ್ಲಿ ಲಾಲು ಯಾದವ್ ಇಂಡಿಯಾ ಮತ್ತು ಭಾರತ ನಡುವಿನ ವ್ಯತ್ಯಾಸವನ್ನು ವಿವರಿಸುತ್ತಾರೆ.

ಈ ಕಿರು ವಿಡಿಯೊದಲ್ಲಿ ಆರ್‌ಜೆಡಿ (ರಾಷ್ಟ್ರೀಯ ಜನತಾ ದಳ) ಮುಖ್ಯಸ್ಥರು ಬೇವಿನ ಕಡ್ಡಿಯಿಂದ ಹಲ್ಲುಜ್ಜುತ್ತಿರುತ್ತಾರೆ. ದೆಹಲಿಯಲ್ಲಿ ಬೇವಿನ ಕಡ್ಡಿ ಸಿಗುತ್ತದೆಯೇ ಎಂದು ಸಂದರ್ಶಕನು ಕೇಳಿದಾಗ, ಅಲ್ಲಿ ಸಿಗುವುದು ಕಷ್ಟ. ದೆಹಲಿ ಇಂಡಿಯಾದಲ್ಲಿದೆ. ಪಾಟ್ನಾ ‘ಭಾರತದಲ್ಲಿದೆ ಎಂದು ಲಾಲು ಹೇಳುತ್ತಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಪರವಾಗಿ ಕಳುಹಿಸಲಾದ G20 ಔತಣಕೂಟದ ಆಮಂತ್ರಣ ಪತ್ರದಲ್ಲಿ ಪ್ರೆಸಿಡೆಂಟ್ ಆಫ್ ಇಂಡಿಯಾ ಬದಲು ಪ್ರೆಸಿಡೆಂಟ್ ಆಫ್ ಭಾರತ್ ಎಂದ ಉಲ್ಲೇಖಿಸಿದಾಗ ಇಂಡಿಯಾವನ್ನು ಭಾರತ್ ಎಂದು ಮರುನಾಮಕರಣ ಮಾಡಬಹುದು ಎಂಬ ಊಹಾಪೋಹಗಳು ಹರಿದಾಡಿವೆ. ವಿದೇಶಿ ಪ್ರತಿನಿಧಿಗಳಿಗಾಗಿ ನೀಡಿದ ” Bharat, The Mother Of Democracy” ಎಂಬ ಶೀರ್ಷಿಕೆಯ G20 ಪುಸ್ತಕದಲ್ಲಿ ‘ಭಾರತ್’ ಅನ್ನು ಸಹ ಬಳಸಲಾಗಿದೆ. ಅಷ್ಟೇ ಅಲ್ಲದೆ ನರೇಂದ್ರ ಮೋದಿ ಅವರನ್ನು ಪ್ರೈಮ್ ಮಿನಿಸ್ಟರ್ ಆಫ್ ಭಾರತ್ ಎಂದು ಉಲ್ಲೇಖಿಸುವ ಮತ್ತೊಂದು ದಾಖಲೆ ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.

ಈಗ, ಈ ಕ್ರಮವು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಯನ್ನು ಹುಟ್ಟು ಹಾಕಿದೆ. ಸೆಪ್ಟೆಂಬರ್ 18-22 ರ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಹೆಸರು ಬದಲಾವಣೆಗೆ ಕೇಂದ್ರ ಸರ್ಕಾರ ಮಸೂದೆ ಮಂಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ವಿಶೇಷ ಅಧಿವೇಶನಕ್ಕೆ ಸರ್ಕಾರ ಯಾವುದೇ ಅಜೆಂಡಾ ಪ್ರಕಟಿಸದಿರುವುದು ಊಹಾಪೋಹಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.

ಏತನ್ಮಧ್ಯೆ, ವಿಪಕ್ಷಗಳು ತನ್ನ 28-ಪಕ್ಷಗಳ ಮೈತ್ರಿಗೆ ಇಂಡಿಯಾ ಎಂದು ಹೆಸರಿಟ್ಟ ಕಾರಣವೇ ಕೇಂದ್ರ ಸರ್ಕಾರ ದೇಶದ ಹೆಸರನ್ನು ಬದಲಿಸಲು ಹೊರಟಿದೆ ಎಂದಿವೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಬಣವು ‘ಭಾರತ್’ ಎಂದು ಮರುನಾಮಕರಣ ಮಾಡಲು ನಿರ್ಧರಿಸಿದರೆ ಕೇಂದ್ರ ಏನು ಮಾಡುತ್ತದೆ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಮಣಿಪುರ ಪರಿಸ್ಥಿತಿ ಸೇರಿದಂತೆ 9 ವಿಷಯಗಳನ್ನು ಪ್ರಸ್ತಾಪಿಸಿ ಪ್ರಧಾನಿಗೆ ಪತ್ರ ಬರೆದ ಸೋನಿಯಾ ಗಾಂಧಿ

ಹಲವು ವಿರೋಧ ಪಕ್ಷಗಳು ಮೈತ್ರಿ ಮಾಡಿಕೊಂಡು ಇಂಡಿಯಾ ಎಂದು ಕರೆದ ಮಾತ್ರಕ್ಕೆ ಕೇಂದ್ರ ಸರ್ಕಾರ ದೇಶದ ಹೆಸರನ್ನು ಬದಲಾಯಿಸುತ್ತದೆಯೇ? ದೇಶವು 140 ಕೋಟಿ ಜನರಿಗೆ ಸೇರಿದೆ, ಒಂದು ಪಕ್ಷಕ್ಕಲ್ಲ, ಮೈತ್ರಿಯ ಹೆಸರನ್ನು ಭಾರತ ಎಂದು ಬದಲಾಯಿಸಿದರೆ, ಅವರು ಭಾರತ್ ಹೆಸರನ್ನು ಬಿಜೆಪಿ ಎಂದು ಬದಲಾಯಿಸುತ್ತಾರೆ ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Daily Devotional: ನಂಬಿಕೆ ದ್ರೋಹ ಮಾಡಿದ್ರೆ ಪರಿಣಾಮ ಹೇಗಿರುತ್ತೆ ಗೊತ್ತಾ?
Daily Devotional: ನಂಬಿಕೆ ದ್ರೋಹ ಮಾಡಿದ್ರೆ ಪರಿಣಾಮ ಹೇಗಿರುತ್ತೆ ಗೊತ್ತಾ?
ನವರಾತ್ರಿಯ 2ನೇ ದಿನವಾದ ಇಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ? ತಿಳಿಯಿರಿ
ನವರಾತ್ರಿಯ 2ನೇ ದಿನವಾದ ಇಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ? ತಿಳಿಯಿರಿ
ನಿವೃತ್ತರಾದ ತಹಸೀಲ್ದಾರ್ ಬೀಳ್ಕೊಡುಗೆ ವೇಳೆ ಬಾರ್​ ಡ್ಯಾನ್ಸರ್​ಗಳ ನೃತ್ಯ
ನಿವೃತ್ತರಾದ ತಹಸೀಲ್ದಾರ್ ಬೀಳ್ಕೊಡುಗೆ ವೇಳೆ ಬಾರ್​ ಡ್ಯಾನ್ಸರ್​ಗಳ ನೃತ್ಯ
ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಕ್ರಿಸ್ ಗೇಲ್
ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಕ್ರಿಸ್ ಗೇಲ್
ಹೆಚ್​ಡಿ ಕುಮಾರಸ್ವಾಮಿ ಆರೋಪ‌ಕ್ಕೆ ಎಡಿಜಿಪಿ ಚಂದ್ರಶೇಖರ್ ಮತ್ತೆ ತಿರುಗೇಟು
ಹೆಚ್​ಡಿ ಕುಮಾರಸ್ವಾಮಿ ಆರೋಪ‌ಕ್ಕೆ ಎಡಿಜಿಪಿ ಚಂದ್ರಶೇಖರ್ ಮತ್ತೆ ತಿರುಗೇಟು
‘ಮನೆ ಕೆಲಸದವರಿಗೂ ನಾನು ಇಂಥ ಮಾತು ಹೇಳಲ್ಲ’: ಕಣ್ಣೀರು ಹಾಕಿದ ಐಶ್ವರ್ಯಾ
‘ಮನೆ ಕೆಲಸದವರಿಗೂ ನಾನು ಇಂಥ ಮಾತು ಹೇಳಲ್ಲ’: ಕಣ್ಣೀರು ಹಾಕಿದ ಐಶ್ವರ್ಯಾ
ದರ್ಶನ್ ನೋಡಲು ಜೈಲಿಗೆ ಬಂದ ವಿನೀಶ್: ವಿಡಿಯೋ
ದರ್ಶನ್ ನೋಡಲು ಜೈಲಿಗೆ ಬಂದ ವಿನೀಶ್: ವಿಡಿಯೋ
ರಾತ್ರೋರಾತ್ರಿ ಪುಷ್ಪಗಿರಿ ವೇರ್​ಹೌಸ್ ಶೆಡ್ ನಿರ್ಮಾಣ: HDR ತನಿಖೆಗೆ ಆಗ್ರಹ
ರಾತ್ರೋರಾತ್ರಿ ಪುಷ್ಪಗಿರಿ ವೇರ್​ಹೌಸ್ ಶೆಡ್ ನಿರ್ಮಾಣ: HDR ತನಿಖೆಗೆ ಆಗ್ರಹ
ಐಶ್ವರ್ಯಾ, ಧರ್ಮ, ಅನುಷಾ: ಬಿಗ್ ಬಾಸ್ ಮನೆಯಲ್ಲಿ ತ್ರಿಕೋನ ಪ್ರೇಮ ಶುರು?
ಐಶ್ವರ್ಯಾ, ಧರ್ಮ, ಅನುಷಾ: ಬಿಗ್ ಬಾಸ್ ಮನೆಯಲ್ಲಿ ತ್ರಿಕೋನ ಪ್ರೇಮ ಶುರು?
ನಾನು ಇರುವುದನ್ನೇ ಹೇಳಿದ್ದೇನೆ: ಕುಮಾರಸ್ವಾಮಿಗೆ ಜಿಟಿಡಿ ಪರೋಕ್ಷ ಟಾಂಗ್
ನಾನು ಇರುವುದನ್ನೇ ಹೇಳಿದ್ದೇನೆ: ಕುಮಾರಸ್ವಾಮಿಗೆ ಜಿಟಿಡಿ ಪರೋಕ್ಷ ಟಾಂಗ್