ವೈರಲ್ ವೀಡಿಯೋ ನೋಡಿ: ರಕ್ಷಾಬಂಧನಕ್ಕೆ ಅಣ್ಣನಿಗೆ ರಾಖಿ ಕಟ್ಟಿದ ಮೇಲೆ ಗುಟ್ಕಾ ತಿನ್ನಿಸಿದಳು ತಂಗಿಯವ್ವ!
ಗುಟ್ಕಾ ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದಿದೆ. ಆದರೂ ಈ ತಂಗಿ ಅಣ್ಣನಿಗೆ ರಾಖಿ ಕಟ್ಟಿ ಗುಟ್ಕಾ ತಿನ್ನಿಸಿದ್ದಾಳೆ.. ಇದನ್ನು ನೋಡಿದ ನೆಟ್ಟಿಗರು ಕಂಗಾಲಾಗಿದ್ದಾರೆ. ಒಂದು ಕಡೆ ಅವನ ಸುರಕ್ಷತೆಗಾಗಿ ರಾಖಿ ಕಟ್ಟಿದ್ದೀಯ.. ಇನ್ನೊಂದು ಕಡೆ ಅವನಿಗೆ ಸಾವಿನ ಔಷಧ ತಿನ್ನಿಸುತ್ತಿದ್ದೀಯ ಎಂದಿದ್ದಾರೆ. ಕೆಲವರು ಇದು ತಮಾಷೆಗಾಗಿ ಎಂದು ಕಾಮೆಂಟ್ ಮಾಡಿದ್ದಾರೆ.
ಈಗತಾನೆ ಸಹೋದರ-ಸಹೋದರಿಯರ ಪವಿತ್ರ ರಕ್ಷಾಬಂಧನ (raksha bandhan) ಹಬ್ಬ ಮುಗಿದಿದೆ. ಆದರೆ ಈ ಹಬ್ಬಕ್ಕೆ ಸಂಬಂಧಿಸಿದ ವಿಡಿಯೋವೊಂದು ಅಂತರ್ಜಾಲದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ. ಯಾಕೆಂದರೆ ವೈರಲ್ ಆಗಿರುವ ಈ ವಿಡಿಯೋದಲ್ಲಿ ‘ಅಣ್ಣಾ ತಂಗಿ ‘ (Sister- brother) ಘಟನೆಯೊಂದು ಇನ್‌ಸ್ಟಾಗ್ರಾಮ್‌ನಲ್ಲಿ ಸದ್ದು ಮಾಡುತ್ತಿದೆ. ವಿಡಿಯೋ ನೋಡಿದ ನೆಟ್ಟಿಗರು ಸಖತ್ತಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಈ ವೀಡಿಯೊವನ್ನು Instagram ಬಳಕೆದಾರ @bhaiyraam ಅವರು ಆಗಸ್ಟ್ 31 ರಂದು ಪೋಸ್ಟ್ ಮಾಡಿದ್ದಾರೆ. ಇದು ಇಲ್ಲಿಯವರೆಗೆ 44 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 2 ಲಕ್ಷ 56 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ. ಹೌದು, ವಿಡಿಯೋದಲ್ಲಿರುವ ಅತ್ಯಂತ ಕುತೂಹಲಕಾರಿ ಸಂಗತಿಯೆಂದರೆ, ಸಹೋದರನಿಗೆ ರಾಖಿ ಕಟ್ಟಿದ ಸಹೋದರಿ, ಆತನ ಬಾಯಲ್ಲಿ ಸಿಹಿ ತಿನ್ನಿಸುವುದರ ಹೊರತಾಗಿ ಇನ್ನೇನು ಉಣಬಡಿಸಿದ್ದಾಳೆ ಎಂಬುದನ್ನು ನೋಡಿದರೆ ನೀವೂ ಶಾಕ್ ಆಗುತ್ತೀರಿ.
ರಕ್ಷಾ ಬಂಧನದ ದಿನ ಸಹೋದರಿಯರು ತಮ್ಮ ಸಹೋದರರಿಗೆ ರಾಖಿಗಳನ್ನು ಕಟ್ಟುತ್ತಾರೆ ಮತ್ತು ಅವರಿಗೆ ಸಿಹಿ ತಿನ್ನಿಸುತ್ತಾರೆ. ಆರತಿ ಮಾಡಿ ಆಶೀರ್ವಾದ ಬೇಡುತ್ತಾರೆ. ಪ್ರತಿಯಾಗಿ ಸಹೋದರನು ತನ್ನ ಒಡಹುಟ್ಟಿದವರಿಗೆ ಉಡುಗೊರೆಯನ್ನು ನೀಡುತ್ತಾನೆ. ಆದರೆ ಈ ವಿಡಿಯೋದಲ್ಲಿ ಕಥೆ ಸ್ವಲ್ಪ ವಿಭಿನ್ನವಾಗಿದೆ. ಸಿಹಿತಿಂಡಿಗಳ ಬದಲಿಗೆ ಇಲ್ಲಿ ಗುಟ್ಕಾ (gutkha) ಬಂದಿದೆ. ಹೌದು ಇದನ್ನು ನೋಡಿ ಹಲವರು ಶಾಕ್ ಆಗಿದ್ದಾರೆ.
ನೋಡಿದರೆ ನೀವೂ ಶಾಕ್ ಆಗುತ್ತೀರಿ.. ಈ ವೈರಲ್ ಕ್ಲಿಪ್ ನಲ್ಲಿ ತಂಗಿಯೊಬ್ಬಳು ತನ್ನ ಅಣ್ಣನಿಗೆ ರಾಖಿ ಕಟ್ಟಿದ್ದಾಳೆ. ಅದಕ್ಕೆ ಬೇಕಾದ ಸಾಮಾನುಗಳನ್ನೆಲ್ಲ ತಂದಿಟ್ಟುಕೊಂಡಿದ್ದಾಳೆ. ಕುಂಕುಮ, ರಾಖಿ ಜೊತೆಗೆ ತಟ್ಟೆಯಲ್ಲಿ ಗುಟ್ಕಾ ಪ್ಯಾಕೆಟ್ ಕೂಡ ತೆಗೆದುಕೊಂಡು ಹೋಗಿದ್ದಳು. ಮೊದಲು ಯುವತಿ ನಗುನಗುತ್ತಾ ಅಣ್ಣನಿಗೆ ಗುಟ್ಕಾ ತಿನ್ನಿಸಿ, ನಂತರ ರಾಖಿ ಕಟ್ಟಿದಳು. ಇದಾದ ಬಳಿಕ ಉಳಿದ ಗುಟ್ಕಾ ಪ್ಯಾಕೆಟ್ ಅನ್ನು ಸಹ ನೀಡಿದ್ದಾಳೆ. ಇಬ್ಬರೂ ಖುಷಿಯಿಂದ ನಗುತ್ತಿದ್ದಾರೆ.
View this post on Instagram
ಗುಟ್ಕಾ ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದುಬಂದಿದೆ. ಅಂತೂ ಇಂತೂ ಈ ತಂಗಿ ಅಣ್ಣನಿಗೆ ರಾಖಿ ಕಟ್ಟಿ ಗುಟ್ಕಾ ತಿನ್ನಿಸಿದ್ದಾಳೆ.. ಇದನ್ನು ನೋಡಿದ ನೆಟ್ಟಿಗರು ಕಂಗಾಲಾಗಿದ್ದಾರೆ. ಕೆಲವರು ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಗುಟ್ಕಾ ತಿನ್ನುವ ಪ್ರತಿಯೊಬ್ಬರಿಗೂ ಈ ರೀತಿಯ ಸಹೋದರಿ ಇರಬೇಕು ಎಂದು ಕೆಲವರು ಹೇಳಿದ್ದಾರೆ. ಆದರೆ ಗುಟ್ಕಾ ತಿನ್ನುವುದು ಆರೋಗ್ಯಕ್ಕೆ ಹಾನಿಕರ.. ಅದನ್ನು ತಿಳಿದುಕೊಳ್ಳಿ ಎಂದಿದ್ದಾರೆ ಇತರರು.
ಗುಟ್ಕಾ ಯಾವತ್ತೂ ಸಿಹಿಗೆ ಪರ್ಯಾಯವಲ್ಲ! ಎಂದೂ ಕೆಲವರು ಎಚ್ಚರಿಸಿದ್ದಾರೆ. ಒಂದು ಕಡೆ ಅವನ ಸುರಕ್ಷತೆಗಾಗಿ ರಾಖಿ ಕಟ್ಟಿದ್ದೀಯ.. ಇನ್ನೊಂದು ಕಡೆ ಅವನಿಗೆ ಸಾವಿನ ಔಷಧ ತಿನ್ನಿಸುತ್ತಿದ್ದೀಯ ಎಂದಿದ್ದಾರೆ. ಕೆಲವರು ಇದು ತಮಾಷೆಗಾಗಿ ಎಂದು ಕಾಮೆಂಟ್ ಮಾಡಿದ್ದಾರೆ.