ಇಂಡಿಯಾ ಹೆಸರು ಭಾರತ್ ಆಗಿ ಬದಲಾಯಿಸಲು 14,000 ಕೋಟಿ ರೂ ವೆಚ್ಚ? ಇದ್ಯಾವ ಲೆಕ್ಕಾಚಾರ?

Cost of Changing Name of India to Bharat: ಇಂಡಿಯಾ ಹೆಸರನ್ನು ಭಾರತ್ ಆಗಿ ಬದಲಾಯಿಸುವುದು ಯಾಕೆ ಎಂಬ ಚರ್ಚೆ ನಡೆದಿರುವ ಹೊತ್ತಿನಲ್ಲೇ ಹೆಸರು ಬದಲಾವಣೆಗೆ ಎಷ್ಟು ವೆಚ್ಚವಾಗುತ್ತದೆ ಎಂಬ ಲೆಕ್ಕಾಚಾರ ನಡೆದಿದೆ. ಆಫ್ರಿಕಾದ ವಕೀಲ ಡ್ಯಾರೆನ್ ಒಲಿವಿಯರ್ ಅವರು ಈ ಲೆಕ್ಕಾಚಾರಕ್ಕೆ ಆಧಾರವಾಗಿರುವ ಸೂತ್ರವೊಂದನ್ನು ರೂಪಿಸಿದ್ದಾರೆ. ಸ್ವಾಜಿಲ್ಯಾಂಡ್ ದೇಶದ ಹೆಸರನ್ನು ಇಸ್ವಟಿನಿ ಎಂದು ಬದಲಾಯಿಸುವಾಗ ಒಲಿವಿಯರ್ ಈ ಸೂತ್ರ ರಚಿಸಿದ್ದರು. ಅದರಂತೆ ಇಂಡಿಯಾ ಹೆಸರು ಭಾರತ್ ಆಗಲು 14,034 ರೂ ಖರ್ಚಾಗಬಹುದು ಎನ್ನಲಾಗಿದೆ.

ಇಂಡಿಯಾ ಹೆಸರು ಭಾರತ್ ಆಗಿ ಬದಲಾಯಿಸಲು 14,000 ಕೋಟಿ ರೂ ವೆಚ್ಚ? ಇದ್ಯಾವ ಲೆಕ್ಕಾಚಾರ?
ಭಾರತ್
Follow us
|

Updated on: Sep 06, 2023 | 3:12 PM

ದೇಶದ ಹೆಸರಿಗೆ ಸಂಬಂಧಿಸಿದಂತೆ ರಾಜಕೀಯ ವಲಯದಲ್ಲಿ ಚರ್ಚೆಗಳು ತೀವ್ರಗೊಂಡಿವೆ. ಇಂಡಿಯಾ ಎಂದಿದ್ದ ಹೆಸರನ್ನು ಭಾರತ್ (Changing Name of India to Bharat) ಎಂದು ಬದಲಾಯಿಸುವ ವಿಚಾರದಲ್ಲಿ ವಾದ ಪ್ರತಿವಾದಗಳ ಪ್ರಮಾಣ ಹೆಚ್ಚಿದೆ. ಇದುವರೆಗೂ ಸರ್ಕಾರದಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ದೇಶದ ಸಂಸತ್ತಿನಲ್ಲಿ ಕರೆದಿರುವ ವಿಶೇಷ ಅಧಿವೇಶನದಲ್ಲಿ ದೇಶದ ಹೆಸರನ್ನು ಭಾರತ್ ಎಂದು ಅಧಿಕೃತವಾಗಿ ಮರುಹೆಸರಿಸಲು ಮಸೂದೆ ತರುವ ಸಾಧ್ಯತೆ ಇದೆ. ಈ ಮಧ್ಯೆ, ದೇಶದ ಹೆಸರನ್ನು ಬದಲಿಸುವುದರಿಂದ ಏನು ಲಾಭ ಎಂಬ ಚರ್ಚೆಯಂತೂ ಸಾಮಾನ್ಯವಾಗಿದೆ. ಹಾಗೆಯೇ, ದೇಶದ ಹೆಸರು ಬದಲಿಸುವುದು ಹೇಗೆ? ಯಾವೆಲ್ಲಾ ಕಡತಗಳಿಂದ ಇಂಡಿಯಾ ಹೆಸರು ತೆಗೆದು ಭಾರತ್ ಇಡಬೇಕು? ಅದಕ್ಕೆಲ್ಲಾ ಎಷ್ಟು ವೆಚ್ಚವಾಗುತ್ತದೆ ಎಂಬಿತ್ಯಾದಿ ಸಂಗತಿಗಳೂ ಮುನ್ನೆಲೆಗೆ ಬಂದಿವೆ. ಇಂಥದ್ದೊಂದು ಸುದ್ದಿ ಪ್ರಕಾರ ಇಂಡಿಯಾವನ್ನು ಭಾರತವನ್ನಾಗಿ ಪರಿವರ್ತಿಸಲು ಸರ್ಕಾರಕ್ಕೆ 14,000 ಕೋಟಿ ರೂ.ಗೂ ಹೆಚ್ಚು ವೆಚ್ಚವಾಗಬಹುದು ಎಂದು ಹೇಳಲಾಗುತ್ತಿದೆ.

ಹೆಸರು ಬದಲಾವಣೆಗೆ ಎಷ್ಟು ವೆಚ್ಚವಾಗಬಹುದು?

ಔಟ್‌ಲುಕ್ ಇಂಡಿಯಾ ಮತ್ತು ಇಟಿ ವರದಿಗಳ ಪ್ರಕಾರ, ದೇಶದ ಹೆಸರನ್ನು ಇಂಡಿಯಅದಿಂದ ಭಾರತ್ ಎಂದು ಬದಲಾಯಿಸಲು ಅಂದಾಜು ವೆಚ್ಚ 14,034 ಕೋಟಿ ರೂ. ಇದರ ಲೆಕ್ಕಾಚಾರವನ್ನು ದಕ್ಷಿಣ ಆಫ್ರಿಕಾದ ವಕೀಲ ಡ್ಯಾರೆನ್ ಒಲಿವಿಯರ್ (Darren Olivier) ಮಾಡಿದ್ದಾರೆ. ಅದರ ಸಂಪೂರ್ಣ ಸೂತ್ರವನ್ನೂ ಅವರು ಸಿದ್ಧಪಡಿಸಿದ್ದಾರೆ.

2018 ರಲ್ಲಿ, ಸ್ವಾಜಿಲ್ಯಾಂಡ್ (Swaziland) ಹೆಸರನ್ನು ಇಸ್ವತಿನಿ (Eswatini) ಎಂದು ಬದಲಾಯಿಸಲಾಯಿತು. ದೇಶದ ಹೆಸರನ್ನು ಬದಲಾಯಿಸುವ ಉದ್ದೇಶ ವಸಾಹತುಶಾಹಿಯ ಸಂಕೇತವನ್ನು ತೊಡೆದುಹಾಕುವುದಾಗಿತ್ತು. ಆ ಸಮಯದಲ್ಲಿ, ಆಲಿವಿಯರ್ ಅವರು ದೇಶದ ಹೆಸರನ್ನು ಬದಲಾಯಿಸುವ ವೆಚ್ಚ ಎಷ್ಟಾಗಬಹುದು ಎಂಬ ಲೆಕ್ಕಾಚಾರ ಮಾಡಲು ಸೂತ್ರವೊಂದನ್ನು ಸಿದ್ಧಪಡಿಸಿದ್ದರು.

ಇದನ್ನೂ ಓದಿ: ಜಾಂಬಿಯಾ ದೇಶದ ತಾಮ್ರ ಗಣಿಗಾರಿಕೆ ಅಧಿಕಾರ ಮತ್ತೆ ಭಾರತದ ವೇದಾಂತ ಸಂಸ್ಥೆಯ ತೆಕ್ಕೆಗೆ; 4 ವರ್ಷಗಳ ಕಾನೂನು ಸಮರ ಸುಖಾಂತ್ಯ

ಹೆಸರು ಬದಲಾವಣೆಯ ವೆಚ್ಚದ ಲೆಕ್ಕಾಚಾರ ಏನು?

ಡ್ಯಾರೆನ್ ಒಲಿವಿಯರ್ ಅವರು ಸ್ವಾಜಿಲ್ಯಾಂಡ್ ಹೆಸರನ್ನು ಬದಲಾಯಿಸುವ ಪ್ರಕ್ರಿಯೆಯನ್ನು ಒಂದು ದೊಡ್ಡ ಕಾರ್ಪೊರೇಟ್‌ನ ಮರುಬ್ರಾಂಡಿಂಗ್‌ಗೆ ಹೋಲಿಸುತ್ತಾರೆ. ಒಲಿವಿಯರ್ ಪ್ರಕಾರ, ದೊಡ್ಡ ಕಾರ್ಪೊರೇಟ್‌ನ ಸರಾಸರಿ ಮಾರ್ಕೆಟಿಂಗ್ ವೆಚ್ಚವು ಅದರ ಒಟ್ಟು ಆದಾಯದ ಸುಮಾರು 6 ಪ್ರತಿಶತದಷ್ಟಿದೆ. ಅದೇ ಸಮಯದಲ್ಲಿ, ಕಂಪನಿಯ ಒಟ್ಟು ಮಾರ್ಕೆಟಿಂಗ್ ಬಜೆಟ್‌ನ 10 ಪ್ರತಿಶತದವರೆಗೆ ಮರುಬ್ರಾಂಡಿಂಗ್‌ಗೆ ಖರ್ಚು ಮಾಡಬಹುದು. ಈ ಸೂತ್ರದ ಪ್ರಕಾರ, ಸ್ವಾಜಿಲ್ಯಾಂಡ್ ಅನ್ನು ಇಸ್ವಾಟಿನಿ ಎಂದು ಮರುನಾಮಕರಣ ಮಾಡಲು $60 ಮಿಲಿಯನ್ ವೆಚ್ಚವಾಗಬಹುದು ಎಂದು ಒಲಿವಿಯರ್ ಅಂದಾಜಿಸಿದ್ದರು.

ಈಗ ನಾವು ಈ ಸೂತ್ರವನ್ನು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾದ ಭಾರತಕ್ಕೆ ಅನ್ವಯಿಸಿ ನೋಡಬಹುದು. 2023 ರ ಆರ್ಥಿಕ ವರ್ಷದಲ್ಲಿ ಭಾರತ ದೇಶದ ಆದಾಯ 23.84 ಲಕ್ಷ ಕೋಟಿ ರೂ. ಇದು ತೆರಿಗೆ ಮತ್ತು ತೆರಿಗೆಯೇತರ ಆದಾಯ ಎರಡನ್ನೂ ಒಳಗೊಂಡಿದೆ. ಔಟ್​ಲುಕ್ ಪತ್ರಿಕೆ ಒಲಿವಿಯರ್ ಸೂತ್ರವನ್ನು ಆಧರಿಸಿ, ಇಂಡಿಯಾ ಹೆಸರನ್ನು ಭಾರತ್ ಆಗಿ ಬದಲಾಯಿಸಲು ಅಂದಾಜು ವೆಚ್ಚ 14,034 ರೂ ಎಂದು ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ: ಗೇಮಿಂಗ್ ಕಂಪನಿಗಳಿಗೆ ಖುಷಿ ಸುದ್ದಿ; ಸರ್ಕಾರದ ಹೊಸ ಗೇಮಿಂಗ್ ನಿಯಮ ಜಾರಿ ಬಳಿಕ ಗೂಗಲ್ ಪ್ಲೇಸ್ಟೋರ್​ನಲ್ಲಿ ಲಭ್ಯ ಇರಲಿವೆ ಗೇಮಿಂಗ್ ಆ್ಯಪ್​ಗಳು

ಹೆಸರು ಬದಲಾವಣೆಯ ಇತಿಹಾಸವೇನು?

ಈ ವಿಶ್ವದಲ್ಲಿ ದೇಶದ ಹೆಸರು ಬದಲಾವಣೆ ಅಗುತ್ತಿರುವುದು ಇದೇ ಮೊದಲಲ್ಲ. ಹತ್ತಾರು ದೇಶಗಳ ಹೆಸರು ಇತಿಹಾಸದುದ್ದಕ್ಕೂ ಬದಲಾಗಿದ್ದಿದೆ. ಸಿಲೋನ್, ಬರ್ಮಾ, ಸ್ವಾಝಿಲ್ಯಾಂಡ್ ಇತ್ಯಾದಿ ದೇಶಗಳ ಹೆಸರು ನಮ್ಮ ಕಣ್ಮುಂದೆಯೇ ಬದಲಾಗಿದ್ದಿದೆ. ದೇಶದ ಸಂಸ್ಕೃತಿಗೆ ಪ್ರತೀಕವಾಗಿ ಇರಲೆಂದೋ, ಅಥವಾ ಹಿಂದಿನ ವಸಾಹತುಷಾಹಿಯ ಗುಲಾಮಗಿರಿ ಸಂಕೇತವನ್ನು ದೂರ ಮಾಡಲೆಂದೋ, ಉಚ್ಛಾರಣೆ ಸುಲಭವಾಗಲೆಂದೋ ಹೀಗೆ ನಾನಾ ಕಾರಣಗಳಿಗೆ ದೇಶದ ಹೆಸರುಗಳನ್ನು ಬದಲಾಯಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ