ಜಾಂಬಿಯಾ ದೇಶದ ತಾಮ್ರ ಗಣಿಗಾರಿಕೆ ಅಧಿಕಾರ ಮತ್ತೆ ಭಾರತದ ವೇದಾಂತ ಸಂಸ್ಥೆಯ ತೆಕ್ಕೆಗೆ; 4 ವರ್ಷಗಳ ಕಾನೂನು ಸಮರ ಸುಖಾಂತ್ಯ

Vedanta Resources Ltd Gets Konkola Copper Mines: ನಾಲ್ಕು ವರ್ಷದ ಕಾನೂನು ಹೋರಾಟದ ಬಳಿಕ ಜಾಂಬಿಯಾದ ಕೊಂಕೋಲ ಕಾಪರ್ ಮೈನಿಂಗ್ ಕಂಪನಿಯ ಅಧಿಕಾರವು ವೇದಾಂತ ರಿಸೋರ್ಸಸ್ ಲಿ ಸಂಸ್ಥೆಯ ತೆಕ್ಕೆಗೆ ಬಂದಿದೆ. ಈಗಿನ ಜಾಂಬಿಯಾ ಅಧ್ಯಕ್ಷರ ನೇತೃತ್ವದ ಸರ್ಕಾರ ವೇದಾಂತ ಮತ್ತು ಸರ್ಕಾರಿ ಸ್ವಾಮ್ಯದ ಝಸಿಸಿಎಂ ನಡುವಿನ ವಿವಾದವನ್ನು ಶಮನಗೊಳಿಸಿ ವ್ಯಾಜ್ಯಕ್ಕೆ ಅಂತ್ಯವಾಡಿದ್ದಾರೆ.

ಜಾಂಬಿಯಾ ದೇಶದ ತಾಮ್ರ ಗಣಿಗಾರಿಕೆ ಅಧಿಕಾರ ಮತ್ತೆ ಭಾರತದ ವೇದಾಂತ ಸಂಸ್ಥೆಯ ತೆಕ್ಕೆಗೆ; 4 ವರ್ಷಗಳ ಕಾನೂನು ಸಮರ ಸುಖಾಂತ್ಯ
ಕೊಂಕೋಲ ಕಾಪರ್ ಮೈನ್ಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 06, 2023 | 10:52 AM

ನವದೆಹಲಿ, ಸೆಪ್ಟೆಂಬರ್ 6: ಜಾಂಬಿಯಾ ದೇಶದ ಕೊಂಕೋಲ ಕಾಪರ್ ಮೈನ್ಸ್​ನ ವಿವಾದ (Konkola copper mines dispute) ನಾಲ್ಕು ವರ್ಷಗಳ ಕಾನೂನು ಹೋರಾಟದ ಬಳಿಕ ಬಗೆಹರಿದಿದೆ. ವೇದಾಂತ ರಿಸೋರ್ಸಸ್ ಮತ್ತು ಜಾಂಬಿಯಾದ ಸರ್ಕಾರ ಸ್ವಾಮ್ಯದ ಝಡ್​ಸಿಸಿಎಂ ಇನ್ವೆಸ್ಟ್​ಮೆಂಟ್ಸ್ ಹೋಲ್ಡಿಂಗ್ಸ್ ಸಂಸ್ಥೆ ನಡುವಿನ ತಿಕ್ಕಾಟ ಶಮನಗೊಂಡಿದೆ. 2019ರ ಬಳಿಕ ಈ ತಾಮ್ರದ ಗಣಿ ವೇದಾಂತ ಸಂಸ್ಥೆಯ ತೆಕ್ಕೆಗೆ ಹೋಗುತ್ತಿದೆ. ಜಾಂಬಿಯಾ ದೇಶ ಮತ್ತು ಅನಿಲ್ ಅಗರ್ವಾಲ್ ಮಾಲಕತ್ವದ ವೇದಾಂತ ರಿಸೋರ್ಸಸ್ ಸಂಸ್ಥೆ ಇಬ್ಬರಿಗೂ ಈ ಬೆಳವಣಿಗೆ ದೀರ್ಘಾವಧಿಗೆ ಲಾಭ ತರಲಿದೆ.

‘ಎರಡೂ ಪಕ್ಷಗಳ ನಡುವಿನ ಎಲ್ಲಾ ವಿವಾದಗಳನ್ನು ಬಗೆಹರಿಸಲಾಗಿದೆ. ವ್ಯಾಜ್ಯಕ್ಕೆ ಸಂಬಂಧಿಸಿದ ಎಲ್ಲಾ ಪ್ರಕರಣಗಳನ್ನು ಹಿಂಪಡೆಯಲಾಗುವುದು. ಅದರ ಎಲ್ಲಾ ಖರ್ಚುವೆಚ್ಚಗಳನ್ನು ಅವರವರೇ ಭರಿಸಬೇಕು’ ಎಂದು ಝಡ್​ಸಿಸಿಎಂ-ಐಎಚ್ ಸಂಸ್ಥೆ ಸೆಪ್ಟೆಂಬರ್ 5ರಂದು ಹೇಳಿಕೆ ನೀಡಿದೆ.

ಇದೀಗ ಕೊಂಕೋಲ ಕಾಪರ್ ಮೈನ್ಸ್ ಸಂಸ್ಥೆಯ ಮಂಡಳಿಯನ್ನು ಪುನರ್​ಸ್ಥಾಪನೆಯಾಗುತ್ತದೆ. ವೇದಾಂತ ರಿಸೋರ್ಸಸ್ ಲಿ ಸಂಸ್ಥೆ 2019ಕ್ಕೆ ಮುಂಚೆ ಇದ್ದಂತೆ ಈ ತಾಮ್ರ ಗಣಿ ಕಂಪನಿಯ ಬಹುಪಾಲು ಷೇರುಗಳ ಮಾಲಕತ್ವ (Majority shareholder) ಹೊಂದಿರಲಿದೆ.

ಇದನ್ನೂ ಓದಿ: ಸಾಲಕ್ಕೆ ಬದಲಾಗಿ ಷೇರುಗಳನ್ನು ಕೊಟ್ಟ ಸ್ಪೈಸ್​ಜೆಟ್; ವಿಮಾನ ಗುತ್ತಿಗೆ ನೀಡಿದವರಿಗೆ ಸಿಕ್ಕಲಿದೆ 4.8 ಕೋಟಿ ಷೇರು

ಕೊಂಕೋಲ ಕಾಪರ್ ಮೈನ್ಸ್ ವಿವಾದವೇನು?

ವೇದಾಂತ ರಿಸೋರ್ಸಸ್ ಲಿ ಸಂಸ್ಥೆ ತೀರಾ ಕಡಿಮೆ ತೆರಿಗೆ ಪಾವತಿಸುತ್ತಿದೆ. ತನ್ನ ವಿಸ್ತರಣಾ ಯೋಜನೆಗಳ ಬಗ್ಗೆ ಸುಳ್ಳು ಹೇಳಿದೆ ಎಂಬ ಆರೋಪಗಳು ಕೇಳಿಬಂದಿದ್ದವು. 2019ರಲ್ಲಿ ಅಂದಿನ ಜಾಂಬಿಯಾ ಅಧ್ಯಕ್ಷ ಎಡ್ಗರ್ ಲುಂಗು (Edgar Lungu) ನೇತೃತದ ಸರ್ಕಾರ ಕೊಂಕೋಲ ಕಾಪರ್ ಮೈನ್ಸ್ ಅನ್ನು ಮುಟ್ಟುಗೋಲು ಹಾಕಿಕೊಂಡಿತು. ಕೆಸಿಎಂನ ಮೈನಾರಿಟಿ ಷೇರ್​ಹೋಲ್ಡರ್ ಎನಿಸಿದ ಸರ್ಕಾರಿ ಸ್ವಾಮ್ಯದ ಝಡ್​ಸಿಸಿಎಂ ಮತ್ತು ವೇದಾಂತ ಮಧ್ಯೆ 4 ವರ್ಷದ ಕಾನೂನು ಸಮರ ನಡೆಯಲು ಎಡೆ ಮಾಡಿಕೊಟ್ಟಿತು. ಈಗಿನ ಜಾಂಬಿಯಾ ಅಧ್ಯಕ್ಷ ಹಕೇಂಡೆ ಹಿಚಿಲೆಮಾ (Hakainde Hichilema) ಅವರು ಈ ಸಮಸ್ಯೆಯನ್ನು ಬಗೆಹರಿಸಿ, ಸುಖಾಂತ್ಯಗೊಳಿಸುವಲ್ಲಿ ಸಫಲರಾಗಿದ್ದಾರೆ.

ವೇದಾಂತ ಕೊಟ್ಟ ಭರವಸೆಗಳಿಂದ ಜಾಂಬಿಯಾ ಸರ್ಕಾರಕ್ಕೆ ಸಮಾಧಾನ

ವೇದಾಂತ ರಿಸೋರ್ಸಸ್ ಸಂಸ್ಥೆ ಮುಂದಿನ 5 ವರ್ಷದಲ್ಲಿ 1 ಬಿಲಿಯನ್ ಡಾಲರ್ (ಸುಮಾರು 8,200 ಕೋಟಿ ರೂ) ಹಣವನ್ನು ಹೂಡಿಕೆ ಮಾಡುವುದಾಗಿ ಭರವಸೆ ಕೊಟ್ಟಿದೆ. ಹಾಗೆಯೇ, ಕೊಂಕೋಲಾದ ಸ್ಥಳೀಯ ಸಾಲಗಾರರಿಗೆ 250 ಮಿಲಿಯನ್ ಡಾಲರ್ ಹಣ ಕೊಡುತ್ತೇವೆ; ಟ್ರಸ್ಟ್ ಮೂಲಕ ಸ್ಥಳೀಯ ಸಮುದಾಯಗಳಿಗೆ ಪ್ರತೀ ವರ್ಷ 20 ಮಿಲಿಯನ್ ಡಾಲರ್ ಹಣವನ್ನು ವ್ಯಯಿಸುತ್ತೇವೆ; ಕೆಸಿಎಂನ ಕಾರ್ಮಿಕರಿಗೆ ಶೇ. 20ರಷ್ಟು ವೇತನ ಹೆಚ್ಚಳ ಮಾಡುತ್ತೇವೆ; ಎಲ್ಲಾ ಉದ್ಯೋಗಿಗಳಿಗೆ 121 ಡಾಲರ್ ಹಣವನ್ನು ಬೋನಸ್ ರೀತಿ ಕೊಡಲಾಗುವುದು ಎಂಬಿತ್ಯಾದಿ ಭರವಸೆಗಳನ್ನು ವೇದಾಂತ ರಿಸೋರ್ಸಸ್ ನೀಡಿದೆ.

ಇದನ್ನೂ ಓದಿ: ಏರ್ ಇಂಡಿಯಾ ಪ್ರಯಾಣಿಕರೇ ನಿಮ್ಮ ಗಮನಕ್ಕೆ, ಜಿ20 ಶೃಂಗಸಭೆ ಸಮಯದಲ್ಲಿ ದೆಹಲಿಗೆ ಟಿಕೆಟ್ ಬುಕ್ ಮಾಡಿದ್ದೀರಾ? ಈ ಸುದ್ದಿ ಓದಿ

ಕಾಪರ್ ಮೈನಿಂಗ್ ಯಾಕೆ ಮಹತ್ವದ್ದು?

ಎಲೆಕ್ಟ್ರಿಕಲ್ ವಾಹನಗಳು ಮತ್ತು ಮರುಬಳಕೆ ಇಂಧನ ತಯಾರಿಕೆ ವ್ಯವಸ್ಥೆಯಲ್ಲಿ ಕಾಪರ್ ಉತ್ಪನ್ನಗಳ ಬಳಕೆ ಹೆಚ್ಚಾಗುತ್ತಿದೆ. ಭವಿಷ್ಯದಲ್ಲಿ ಇದಕ್ಕೆ ಬಹಳ ಬೇಡಿಕೆ ಬರಲಿದೆ. ಈ ಹಿನ್ನೆಲೆಯಲ್ಲಿ ವೇದಾಂತ ರಿಸೋರ್ಸಸ್ ಸಂಸ್ಥೆಗೆ ಕೊಂಕೋಲ ಕಾಪರ್ ಮೈನ್ಸ್ ಬಹಳ ಮುಖ್ಯ ಎನಿಸಿದೆ.

ಜಾಂಬಿಯಾ ಸರ್ಕಾರ ಕೂಡ ಕಾಪರ್ ಉತ್ಪಾದನೆಗೆ ಒತ್ತುಕೊಡುತ್ತಿದೆ. ಕೊಂಕೋಲ ಕಾಪರ್ ಮೈನ್ಸ್ 4 ವರ್ಷದಿಂದ ಸ್ಥಗಿತಗೊಂಡಿದ್ದರ ಪರಿಣಾಮವಾಗಿ 2023ರಲ್ಲಿ ಜಾಂಬಿಯಾದ ಕಾಪರ್ ಉತ್ಪಾದನೆ 14 ವರ್ಷದಲ್ಲೇ ಅತಿಕಡಿಮೆ ಆಗುತ್ತಿದೆ. ಆದರೆ, ಈಗಿನ ಸರ್ಕಾರ 2031ರಷ್ಟರಲ್ಲಿ ವರ್ಷಕ್ಕೆ 30 ಲಕ್ಷ ಟನ್​ಗಳಷ್ಟು ಕಾಪರ್ ಉತ್ಪಾದನೆ ಮಾಡುವ ಗುರಿ ಹೊಂದಿದೆ. ಈಗ ಕೆಸಿಎಂ ಪುನರ್​ಸ್ಥಾಪನೆಯಾಗುವುದು ಸರ್ಕಾರದ ಗುರಿ ಈಡೇರಿಕೆಯನ್ನು ಸಾಧ್ಯವಾಗಿಸಬಹುದು.

ಇದನ್ನೂ ಓದಿ: ದೀರ್ಘಾವಧಿ ಹೂಡಿಕೆಗೆ ಪಿಪಿಎಫ್ ಉತ್ತಮವೋ, ಮ್ಯುಚುವಲ್ ಫಂಡ್ ಓಕೆಯಾ? ಇಲ್ಲಿದೆ ಒಂದು ಹೋಲಿಕೆ

ವಿಶ್ವದಲ್ಲೇ ಅತಿಹೆಚ್ಚು ತಾಮ್ರ ಉತ್ಪಾದನೆ ಮಾಡುವ ದೇಶಗಳಲ್ಲಿ ಜಾಂಬಿಯಾ 9ನೇ ಸ್ಥಾನದಲ್ಲಿದೆ. ವಿಶ್ವದ ಬಹುಪಾಲು ತಾಮ್ರ ಉತ್ಪಾದನೆ ಚಿಲಿ ದೇಶದಲ್ಲಿ ಆಗುತ್ತದೆ. ವಿಶ್ವದ ಒಟ್ಟು ಕಾಪರ್ ಉತ್ಪಾದನೆಯಲ್ಲಿ ಭಾರತದ ಪಾಲು ಶೇ. 2 ಮಾತ್ರ ಇದೆ. ಮಧ್ಯಪ್ರದೇಶ, ಜಾರ್ಖಂಡ್ ರಾಜ್ಯಗಳಲ್ಲಿ ಹೆಚ್ಚಿನ ಕಾಪರ್ ಮೈನಿಂಗ್ ನಡೆಯುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?