AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಲಕ್ಕೆ ಬದಲಾಗಿ ಷೇರುಗಳನ್ನು ಕೊಟ್ಟ ಸ್ಪೈಸ್​ಜೆಟ್; ವಿಮಾನ ಗುತ್ತಿಗೆ ನೀಡಿದವರಿಗೆ ಸಿಕ್ಕಲಿದೆ 4.8 ಕೋಟಿ ಷೇರು

Spicejet Updates: ಅರ್ಧದಷ್ಟು ವಿಮಾನಗಳ ಹಾರಾಟ ನಿಲ್ಲಿಸಿ ಬಿಕ್ಕಟ್ಟಿಗೆ ಸಿಲುಕಿರುವ ಸ್ಪೈಸ್​ಜೆಟ್ ಸಂಸ್ಥೆ ಚೇತರಿಸಿಕೊಳ್ಳುವ ಹಾದಿಯಲ್ಲಿದೆ. 2,500 ಕೋಟಿ ರೂ ಮೊತ್ತದಷ್ಟು ಬಂಡವಾಳ ಸಂಗ್ರಹಿಸುವ ಪ್ರಸ್ತಾಪಕ್ಕೆ ಕಳೆದ ವಾರ ಸ್ಪೈಸ್​ಜೆಟ್ ಷೇರುದಾರರು ಅನುಮೋದನೆ ನೀಡಿದ್ದರು. ಇದೀಗ 9 ವಿಮಾನ ಗುತ್ತಿಗೆ ಕಂಪನಿಗಳ ಬಾಕಿ ಸಾಲ ತೀರಿಸಲು 231 ಕೋಟಿ ರೂ ಮೊತ್ತದ 4.8 ಕೋಟಿ ಈಕ್ವಿಟಿ ಷೇರುಗಳನ್ನು ಹಂಚಿಕೆ ಮಾಡಲಾಗಿದೆ.

ಸಾಲಕ್ಕೆ ಬದಲಾಗಿ ಷೇರುಗಳನ್ನು ಕೊಟ್ಟ ಸ್ಪೈಸ್​ಜೆಟ್; ವಿಮಾನ ಗುತ್ತಿಗೆ ನೀಡಿದವರಿಗೆ ಸಿಕ್ಕಲಿದೆ 4.8 ಕೋಟಿ ಷೇರು
ಸ್ಪೈಸ್​ಜೆಟ್ ವಿಮಾನ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Sep 05, 2023 | 12:43 PM

Share

ನವದೆಹಲಿ, ಸೆಪ್ಟೆಂಬರ್ 5: ಬಿಕ್ಕಟ್ಟಿಗೆ ಸಿಲುಕಿರುವ ಸ್ಪೈಸ್​ಜೆಟ್ ಸಂಸ್ಥೆ (Spicejet Airlines) ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹರಸಾಹಸ ನಡೆಸುತ್ತಿದೆ. ದಿವಾಳಿಯಾಗುವುದನ್ನು (Bankruptcy) ತಪ್ಪಿಸಿಕೊಳ್ಳಲು ಹೆಣಗುತ್ತಿರುವ ಸ್ಪೈಸ್​ಜೆಟ್ ಇದೀಗ ಸಾಲಗಾರರ ಕಾಟ ತಪ್ಪಿಸಿಕೊಳ್ಳಲು ಷೇರುಗಳನ್ನು ಆಫರ್ ಮಾಡಿದೆ. ತನಗೆ ವಿಮಾನಗಳನ್ನು ಗುತ್ತಿಗೆ ಕೊಟ್ಟಿರುವವರ ಪೈಕಿ 9 ಸಂಸ್ಥೆಗಳಿಗೆ (Aircraft Lessors) 4.81 ಕೋಟಿ ಈಕ್ವಿಟಿ ಷೇರುಗಳನ್ನು ಆದ್ಯತಾ ಆಧಾರದಲ್ಲಿ ಸ್ಪೈಸ್ ಜೆಟ್ ಅಲಾಟ್ ಮಾಡಿದೆ. ಇದರೊಂದಿಗೆ ಈ 9 ಸಂಸ್ಥೆಗಳ 231 ಕೋಟಿ ರೂ ಮೊತ್ತದ ಸಾಲ ಈಗ ಷೇರಾಗಿ ಬದಲಾಗುತ್ತದೆ. ಸ್ಪೈಸ್​ಜೆಟ್​ನ ಷೇರುದಾರರು (Spicejet shareholders) ಕಳೆದ ವಾರ ಹಲವು ನಿರ್ಣಯಗಳಿಗೆ ಅನುಮೋದನೆ ನೀಡಿದ್ದರು. ಅದರಲ್ಲಿ ವಿಮಾನ ಗುತ್ತಿಗೆ ಸಂಸ್ಥೆಗಳಿಗೆ ಪಾವತಿಸಬೇಕಿದ್ದ ಬಾಕಿ ಹಣವನ್ನು ನೀಡುವುದೂ ಸೇರಿದೆ. ಹಾಗೆಯೇ, 2,500 ಕೋಟಿ ರೂ ಮೊತ್ತದ ಬಂಡವಾಳ ಸಂಗ್ರಹಿಸುವ ಕಾರ್ಯಗಳಿಗೂ ಷೇರುದಾರರ ಅನುಮೋದನೆ ಸಿಕ್ಕಿದೆ.

ಫೆಬ್ರುವರಿ ತಿಂಗಳಲ್ಲಿ ವಿಮಾನ ಗುತ್ತಿಗೆ ಸಂಸ್ಥೆ ಕಾರ್ಲೈಲ್ ಏವಿಯೇಶನ್ ಸಂಸ್ಥೆಗೆ ನೀಡಬೇಕಿದ್ದ 100 ಮಿಲಿಯನ್ ಡಾಲರ್ ಬಾಕಿ ಹಣವನ್ನು ಸ್ಪೈಸ್​ಜೆಟ್ ಈಕ್ವಿಟಿ ಮತ್ತು ಡಿಬಂಚರ್​ಗಳಾಗಿ ಪರಿವರ್ತಿಸಿ ಸಮಾಧಾನಗೊಲಿಸಿದೆ. ಈಗ ಬೇರೆ 9 ಸಂಸ್ಥೆಗಳ ಬಾಕಿ ಹಣವನ್ನೂ ಇದೇ ರೀತಿ ಈಕ್ವಿಟಿಯಾಗಿ ಪರಿವರ್ತಿಸಿದೆ.

ಇದನ್ನೂ ಓದಿ: ನಜಾರ ಟೆಕ್ನಾಲಜೀಸ್ ಮೇಲೆ ನಿಖಿಲ್ ಕಾಮತ್ 100 ಕೋಟಿ ರೂ ಹೂಡಿಕೆ; ಗೇಮಿಂಗ್ ಕಂಪನಿ ಬಗ್ಗೆ ಕಾಮತ್​ಗೆ ಯಾಕೆ ಒಲವು?

ಒಂಬತ್ತು ಸಂಸ್ಥೆಗಳಿಗೆ 4.81 ಕೋಟಿ ಈಕ್ವಿಟಿ ಷೇರುಗಳನ್ನು ನೀಡಿರುವುದು ಮಾತ್ರವಲ್ಲ, ಸ್ಪೈಸ್ ಹೆಲ್ತ್ ಕೇರ್ ಪ್ರೈ ಲಿ ಸಂಸ್ಥೆಗೂ 3.41 ಕೋಟಿ ಈಕ್ವಿಟಿ ಷೇರುಗಳನ್ನು ವಿತರಿಸಿದೆ. 29.84 ರೂ ಇಷ್ಯೂ ಪ್ರೈಸ್​ಲ್ಲಿ 13.15 ಕೋಟಿ ವಾರಂಟ್​​ಗಳನ್ನೂ ಕೊಟ್ಟಿದೆ.

ಸ್ಪೈಸ್​ಜೆಟ್ ಸಂಸ್ಥೆ ನಾನಾ ಕಾರಣಗಳಿಂದ ತನ್ನ ಹಲವು ವಿಮಾನ ಹಾರಾಟ ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು. ಒಂದು ಸಮಯದಲ್ಲಿ 67 ವಿಮಾನಗಳನ್ನು ಹೊಂದಿದ್ದ ಅದು ಈಗ 40ಕ್ಕಿಂತ ಕಡಿಮೆ ವಿಮಾನಗಳನ್ನು ಮಾತ್ರ ಕಾರ್ಯಾಚರಿಸುತ್ತಿದೆ. ಇನ್ನುಳಿದ ವಿಮಾನಗಳನ್ನು ಮತ್ತೆ ಕಾರ್ಯಾಚರಿಸುವ ಪ್ರಯತ್ನದಲ್ಲಿದೆ.

ಇದನ್ನೂ ಓದಿ: ಮೂರೇ ವರ್ಷದಲ್ಲಿ 1 ಲಕ್ಷಕ್ಕೆ 12 ಲಕ್ಷ ಲಾಭ; ಇದು ಬಿಸಿಎಲ್ ಇಂಡಸ್ಟ್ರೀಸ್ ಷೇರು ಚಮತ್ಕಾರ

ಸ್ಪೈಸ್​ಜೆಟ್ ತೀವ್ರ ಬಿಕ್ಕಟ್ಟಿಗೆ ಸಿಲುಕಿದ ಬಳಿಕ ಅದರ ಮಾರುಕಟ್ಟೆಮೌಲ್ಯ ಗಣನೀಯವಾಗಿ ಕುಸಿದಿತ್ತು. ಹೊಸ ವೈಮಾನಿಕ ಸಂಸ್ಥೆ ಆಕಾಶ ಏರ್​ಲೈನ್ಸ್​ನ ಮಾರುಕಟ್ಟೆಮೊತ್ತಕ್ಕಿಂತಲೂ ಸ್ಪೈಸ್​ಜೆಟ್​ನದ್ದು ಕಡಿಮೆ ಆಗಿಹೋಗಿತ್ತು. ಇದೀಗ ಒಂದು ವಿಮಾನ ಗುತ್ತಿಗೆ ಕಂಪನಿಗಳಿಗೆ ಷೇರುಹಂಚಿಕೆ ಮಾಡಿ ಸಾಲ ತೀರಿಸಲು ಕ್ರಮ ಕೈಗೊಂಡ ಬಳಿಕ ಸ್ಪೈಸ್​ಜೆಟ್​ನ ಷೇರುಬೆಲೆ ಇಂದು (ಸೆ. 5) ಶೇ. 7ಕ್ಕಿಂತಲೂ ಹೆಚ್ಚಾಗಿರುವುದು ಗಮನಾರ್ಹ. ಮಂಗಳವಾರ ಬೆಳಗ್ಗೆ 10ಕ್ಕೆ ಅದರ ಷೇರುಬೆಲೆ 33 ರೂಗಿಂತ ಹೆಚ್ಚಾಗಿದೆ. ಅದರ ಒಟ್ಟು ಮಾರುಕಟ್ಟೆ ಬಂಡವಾಳ 1.98 ಲಕ್ಷಕೋಟಿ ರೂ ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:29 am, Tue, 5 September 23

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?