AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಜಾರ ಟೆಕ್ನಾಲಜೀಸ್ ಮೇಲೆ ನಿಖಿಲ್ ಕಾಮತ್ 100 ಕೋಟಿ ರೂ ಹೂಡಿಕೆ; ಗೇಮಿಂಗ್ ಕಂಪನಿ ಬಗ್ಗೆ ಕಾಮತ್​ಗೆ ಯಾಕೆ ಒಲವು?

Nikhil Kamath Invests On Nazara Technologies: ಭಾರತದ ಉದ್ಯಮಿ ಮತ್ತು ಹೂಡಿಕೆದಾರ ನಿಖಿಲ್ ಕಾಮತ್ ಅವರು ವೈಯಕ್ತಿಕವಾಗಿ ನಜಾರ ಟೆಕ್ನಾಲಜೀಸ್​ನ 14 ಲಕ್ಷ ಷೇರುಗಳನ್ನು ಖರೀದಿಸುವ ಮೂಲಕ ಗೇಮಿಂಗ್ ಕಂಪನಿಯ ಮೇಲೆ 100 ರೂ ಹೂಡಿಕೆ ಮಾಡಿದ್ದಾರೆ. ನಜಾರ ಟೆಕ್ನಾಲಜೀಸ್ ಮುಂದೊಂದು ದಿನ ಅಂತಾರಾಷ್ಟ್ರೀಯ ಗೇಮಿಂಗ್ ಕಂಪನಿಗಳೊಂದಿಗೆ ಸ್ಪರ್ಧಿಸಬಲ್ಲುದು ಎಂಬುದು ನಿಖಿಲ್ ಕಾಮತ್ ಅನಿಸಿಕೆ.

ನಜಾರ ಟೆಕ್ನಾಲಜೀಸ್ ಮೇಲೆ ನಿಖಿಲ್ ಕಾಮತ್ 100 ಕೋಟಿ ರೂ ಹೂಡಿಕೆ; ಗೇಮಿಂಗ್ ಕಂಪನಿ ಬಗ್ಗೆ ಕಾಮತ್​ಗೆ ಯಾಕೆ ಒಲವು?
ನಿಖಿಲ್ ಕಾಮತ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Sep 05, 2023 | 11:11 AM

Share

ಭಾರತದ ಗೇಮಿಂಗ್ ಕಂಪನಿ ನಜಾರ ಟೆಕ್ನಾಲಜೀಸ್​ಗೆ ನಿಖಿಲ್ ಕಾಮತ್ ಮತ್ತು ನಿತಿನ್ ಕಾಮತ್ ಒಡೆತನ ಕಂಪನಿಗಳಿಂದ 100 ಕೋಟಿ ರೂ ಹೂಡಿಕೆ ಆಗಿದೆ. ಕಾಮತ್ ಸಹೋದರರ ಒಡೆತನದ ಕಾಮತ್ ಅಸೋಸಿಯೇಟ್ಸ್ (Kamath Associates) ಮತ್ತು ಎನ್​ಕೆಸ್ಕ್ವಯರ್ಡ್ (NKSquared) ಕಂಪನಿಗಳಿಗೆ 100 ಕೋಟಿ ರೂ ಮೌಲ್ಯದ ಷೇರುಗಳನ್ನು ಮಾರಿರುವುದಾಗಿ ಸೆಬಿಗೆ ಸಲ್ಲಿಸಿದ ಫೈಲಿಂಗ್​ನಲ್ಲಿ ನಜಾರ ಟೆಕ್ನಾಲಜೀಸ್ ತಿಳಿಸಿದೆ. ಅದು ನೀಡಿದ ಮಾಹಿತಿ ಪ್ರಕಾರ, ನಜಾರ ಟೆಕ್ನಾಲಜೀಸ್ ಕಂಪನಿಯ 14,00,560 ಷೇರುಗಳನ್ನು 714 ರೂನಂತೆ 99,99,99,840 ರುಪಾಯಿಗೆ ನೀಡಲು ಕಂಪನಿಯ ಮಂಡಳಿ ಅನುಮೋದನೆ ನೀಡಿದೆ.

ಈ 100 ಕೋಟಿ ರೂ ಹೂಡಿಕೆಯೊಂದಿಗೆ ನಜಾರ ಟೆಕ್ನಾಲಜೀಸ್​ನಲ್ಲಿ ನಿಖಿಲ್ ಕಾಮತ್ ಅವರ ವೈಯಕ್ತಿ ಹೂಡಿಕೆ ಪ್ರಮಾಣ ಶೇ. 1ರಿಂದ ಶೇ. 3.50ಗೆ ಹೆಚ್ಚಾಗಿದೆ. ಝೀರೋಧ ಕಂಪನಿಯ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಅವರು ಮುಂದಿನ ದಿನಗಳಲ್ಲಿ ನಜಾರ ಟೆಕ್ನಾಲಜೀಸ್ ಮೇಲಿನ ಹೂಡಿಕೆಯನ್ನು ಇನ್ನಷ್ಟು ಹೆಚ್ಚಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ನಿಖಿಲ್ ಕಾಮತ್ ಅವರಿಗೆ ನೀಡಲಾಗಿರುವ ನಜಾರ ಟೆಕ್ನಾಲಜೀಸ್​ನ ಷೇರುಗಳಿಗೆ ಆರು ತಿಂಗಳ ಲಾಕ್ ಇನ್ ಪೀರಿಯಡ್ ಇರುತ್ತದೆ. ಅಂದರೆ, ಈ ಷೇರುಗಳನ್ನು 6 ತಿಂಗಳ ಕಾಲ ಮಾರಾಟ ಮಾಡುವಂತಿರುವುದಿಲ್ಲ.

ಇದನ್ನೂ ಓದಿ: ಫುಯೆಲ್ ಕ್ರೆಡಿಟ್ ಕಾರ್ಡ್​ನಿಂದ ಏನು ಪ್ರಯೋಜನ? ಸೂಕ್ತ ಎನಿಸುವ ಕಾರ್ಡ್​ಗಳನ್ನು ಆಯ್ಕೆ ಮಾಡಿಕೊಳ್ಳುವುದು ಹೇಗೆ?

ಇನ್ನತ್ತು ವರ್ಷದಲ್ಲಿ ಭಾರತದಲ್ಲಿ ಗೇಮಿಂಗ್ ಉದ್ಯಮ ಅಗಾಧವಾಗಿ ಬೆಳೆಯುತ್ತದೆ: ನಿಖಿಲ್ ಕಾಮತ್

ಭಾರತದ ಪ್ರಬಲ ಮೊಬೈಲ್ ಕಂಪನಿಗಳಲ್ಲಿ ಒಂದಾದ ನಜಾರ ಟೆಕ್ನಾಲಜೀಸ್ ಹಲವು ಗೇಮ್​ಗಳನ್ನು ಬಿಡುಗಡೆ ಮಾಡಿದೆ. ಮಕ್ಕಳಿಗಾಗಿ ಖ್ಯಾತ ಕಾರ್ಟೂನ್ ಸೀರಿಯಲ್​ಗಳ ಹೆಸರಿನಲ್ಲಿ ವಿವಿಧ ರೇಸಿಂಗ್, ಅಡ್ವೆಂಚರ್ ಗೇಮ್​ಗಳನ್ನು ತಯಾರಿಸಿದೆ. ವಿವಿಧ ಕ್ರಿಕೆಟ್, ಕೇರಂ, ಟೇಬಲ್ ಟೆನಿಸ್ ಇತ್ಯಾದಿ ಕ್ರೀಡೆಗಳ ಆಧರಿತ ಮೊಬೈಲ್ ಗೇಮ್​ಗಳನ್ನು ನಜಾರ ಟೆಕ್ನಾಲಜೀಸ್ ತಯಾರಿಸಿದೆ.

ನಿಖಿಲ್ ಕಾಮತ್ ಪ್ರಕಾರ ವಿಶ್ವಾದ್ಯಂತದಂತೆ ಭಾರತದಲ್ಲೂ ಗೇಮಿಂಗ್ ಕ್ಷೇತ್ರ ಅಮೋಘವಾಗಿ ಬೆಳೆಯುತ್ತದೆ. ನಜಾರ ಟೆಕ್ನಾಲಜೀಸ್ ಇ-ಸ್ಪೋರ್ಟ್ಸ್ ಮತ್ತು ಗೇಮಿಂಗ್​ನಲ್ಲಿ ವಿನೂತನ ಎನಿಸುವ ಗೇಮ್​ಗಳನ್ನು ರೂಪಿಸಿದ್ದು, ಮುಂದೊಂದು ದಿನ ಬೇರೆ ಅಂತಾರಾಷ್ಟ್ರೀಯ ಗೇಮಿಂಗ್ ಕಂಪನಿಗಳ ಜೊತೆ ಅದು ಸ್ಪರ್ಧೆ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ನಿಖಿಲ್ ಕಾಮತ್ ಹೇಳುತ್ತಾರೆ.

ಇದನ್ನೂ ಓದಿ: ಸಿನಿಮೀಯ ಘಟನೆ; ಉದ್ಯೋಗಿಯಾಗಿ ಸೇರಿಕೊಂಡು ಪ್ರಾಜೆಕ್ಟ್ ಲಪಟಾಯಿಸುತ್ತಿದ್ದ ಬೆಂಗಳೂರಿನ ಬಿಸಿನೆಸ್​ಮ್ಯಾನ್

ಭಾರತದಲ್ಲಿ ಗೇಮಿಂಗ್ ಉದ್ಯಮ ಎಷ್ಟು ದೊಡ್ಡದು?

2020-21ರ ಹಣಕಾಸು ವರ್ಷದಲ್ಲಿ ಭಾರತದ ಆನ್​ಲೈನ್ ಗೇಮಿಂಗ್ ಉದ್ಯಮದ ಆದಾಯ 2 ಬಿಲಿಯನ್ ಡಾಲರ್ ಇತ್ತು. 2021-22ರಲ್ಲಿ ಅದು 2.6 ಬಿಲಿಯನ್ ಡಾಲರ್​ಗೆ ಏರಿತು. ತದನಂತರದಿಂದ ಈ ಉದ್ಯಮ ವಾರ್ಷಿಕವಾಗಿ ಶೇ. 27ರ ದರದಲ್ಲಿ ಬೆಳೆಯುತ್ತಾ ಹೋಗಬಹುದು. 2026-27ರಲ್ಲಿ ಭಾರತದಲ್ಲಿ ಗೇಮಿಂಗ್ ಉದ್ಯಮ 8.6 ಬಿಲಿಯನ್ ಡಾಲರ್ ಮಟ್ಟಕ್ಕೆ ಹೋಗಬಹುದು ಎಂದು ಅಂದಾಜಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:31 pm, Mon, 4 September 23

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ