ಫುಯೆಲ್ ಕ್ರೆಡಿಟ್ ಕಾರ್ಡ್​ನಿಂದ ಏನು ಪ್ರಯೋಜನ? ಸೂಕ್ತ ಎನಿಸುವ ಕಾರ್ಡ್​ಗಳನ್ನು ಆಯ್ಕೆ ಮಾಡಿಕೊಳ್ಳುವುದು ಹೇಗೆ?

Fuel Credit Card: ಪೆಟ್ರೋಲ್, ಡೀಸೆಲ್ ವೆಚ್ಚಕ್ಕಾಗೆಂದೇ ಬ್ಯಾಂಕುಗಳು ಕ್ರೆಡಿಟ್ ಕಾರ್ಡ್​ಗಳನ್ನು ನೀಡುತ್ತವೆ. ಇದರಲ್ಲಿ ಕ್ಯಾಷ್​ಬ್ಯಾಕ್, ಡಿಸ್ಕೌಂಟ್, ರಿವಾರ್ಡ್ಸ್ ಇತ್ಯಾದಿ ನಾನಾ ರೀತಿಯ ಆಫರ್​ಗಳನ್ನು ಕೊಡಲಾಗುತ್ತದೆ. ಈ ಫುಯೆಲ್ ಕ್ರೆಡಿಟ್ ಕಾರ್ಡ್​ಗಳನ್ನು ಪೆಟ್ರೋಲ್ ಪಂಪ್​ನಲ್ಲಿ ಮಾತ್ರವಲ್ಲ, ಬೇರೆಲ್ಲ ಕ್ರೆಡಿಟ್ ಕಾರ್ಡ್ ರೀತಿ ಎಲ್ಲೆಡೆಯೂ ಬಳಸಬಹುದು. ಪೆಟ್ರೋಲ್, ಡೀಸೆಲ್ ವೆಚ್ಚಕ್ಕೆ ಹೆಚ್ಚು ರಿವಾರ್ಡ್​ಗಳು ಸಿಗುತ್ತವೆ.

ಫುಯೆಲ್ ಕ್ರೆಡಿಟ್ ಕಾರ್ಡ್​ನಿಂದ ಏನು ಪ್ರಯೋಜನ? ಸೂಕ್ತ ಎನಿಸುವ ಕಾರ್ಡ್​ಗಳನ್ನು ಆಯ್ಕೆ ಮಾಡಿಕೊಳ್ಳುವುದು ಹೇಗೆ?
ಸಾಂದರ್ಭಿಕ ಚಿತ್ರ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 04, 2023 | 4:17 PM

ಓಡಾಟಕ್ಕೆ ಸ್ವಂತ ವಾಹನ ಬಳಸುವವರ ಪ್ರಮುಖ ಮಾಸಿಕ ವೆಚ್ಚಗಳಲ್ಲಿ ಇಂಧನವೂ ಇರುತ್ತದೆ. ನಿತ್ಯ ಸಂಚಾರಕ್ಕೆ ಪೆಟ್ರೋಲ್ ಅಥವಾ ಡೀಸೆಲ್ ಕಾರನ್ನು ಬಳಸುವವರಿಗೆ ಇಂಧನ ವೆಚ್ಚ (Fuel expense) ಬಹಳ ಹೆಚ್ಚೇ. ಇಂಥ ಸಂದರ್ಭಕ್ಕೆ ಫುಯಲ್ ಕ್ರೆಡಿಟ್ ಕಾರ್ಡ್ (Fuel Credit Card) ಉಪಯೋಗಕ್ಕೆ ಬರುತ್ತದೆ. ಪೆಟ್ರೋಲ್​ಗೆ ಹಣ ಪಾವತಿಸಲು ನೀವು ಫುಯೆಲ್ ಕ್ರೆಡಿಟ್ ಕಾರ್ಡ್ ಉಪಯೋಗಿಸುವುದರಿಂದ ಡಿಸ್ಕೌಂಟ್, ರಿವಾರ್ಡ್ಸ್ ಇತ್ಯಾದಿ ಆಫರ್ ಇರುತ್ತದೆ. ಹಾಗೆಯೇ, ಸರ್​ಚಾರ್ಜ್ ವಿನಾಯಿತಿಯನ್ನೂ ಪಡೆಯಬಹುದು. ಪೆಟ್ರೋಲಿಯಂ ಕಂಪನಿಗಳ ಜೊತೆ ಈ ಕಾರ್ಡ್​ಗಳು ಸಹಯೋಗ ಹೊಂದಿರುತ್ತವೆ. ಭಾರತದಲ್ಲಿ ಬಿಪಿಸಿಎಲ್, ಇಂಡಿಯನ್ ಆಯಿಲ್ ಕಂಪನಿಗಳ ಜೊತೆ ಸಹಭಾಗಿತ್ವದಲ್ಲಿ ಬ್ಯಾಂಕುಗಳು ಫುಯೆಲ್ ಕ್ರೆಡಿಟ್ ಕಾರ್ಡನ್ನು ಕೊಡುತ್ತವೆ.

ನೀವು ಹೆಚ್ಚು ಇಂಧನ ಬಳಸುವವರಾಗಿದ್ದರೆ ಫುಯೆಲ್ ಕಾರ್ಡ್ ಬೇಕಾಗುತ್ತದೆ. ಬ್ಯಾಂಕ್​ನ ಕಚೇರಿಗೆ ಹೋಗಿ ನೀವು ಫುಯಲ್ ಕ್ರೆಡಿಟ್ ಕಾರ್ಡ್ ಪಡೆಯಬಹುದು. ಅಥವಾ ಬ್ಯಾಂಕ್​ನ ವೆಬ್​ಸೈಟ್​ಗೆ ಹೋಗಿಯೂ ಕಾರ್ಡ್ ಪಡೆಯಬಹುದು.

ಇದನ್ನೂ ಓದಿ: ಒಂದೆಡೆ ಸಾಲ ಇದೆ, ಈಕ್ವಿಟಿ ಮೇಲೆ ಎಸ್​ಐಪಿ ಇದೆ; ಇನ್ನೊಂದೆಡೆ ಪಿಎಫ್ ಹಣ ಇದೆ; ಮುಂದೇನು ಮಾಡಬಹುದು?

ಕೆಲ ಫುಯೆಲ್ ಕ್ರೆಡಿಟ್ ಕಾರ್ಡ್​ಗಳು ಕ್ಯಾಷ್​ಬ್ಯಾಕ್ ಕೊಡಬಹುದು. ಅಥವಾ ರಿವಾರ್ಡ್ ಪಾಯಿಂಟ್​ಗಳನ್ನು ಕೊಡಬಹುದು. ಹೆಚ್ಚಿನ ಕಾರ್ಡ್​ಗಳು ಗಿಫ್ಟ್ ವೋಚರ್, ಟ್ರಾವಲ್ ರಿವಾರ್ಡ್ ಇತ್ಯಾದಿ ಆಫರ್ ಮಾಡುತ್ತವೆ. ಇವೆಲ್ಲವನ್ನೂ ನೀವು ಬಳಸಿಕೊಳ್ಳುತ್ತೀರಿ ಎನ್ನುವುದಾದರೆ ಫುಯೆಲ್ ಕ್ರೆಡಿಟ್ ಕಾರ್ಡ್ ನಿಮಗೆ ಸೂಕ್ತ ಎನಿಸಬಹುದು.

ಎಚ್​ಡಿಎಫ್​ಸಿ, ಐಸಿಐಸಿಐನ ಕಾರ್ಡ್​ಗಳಿಂದ ಆಫರ್

ಎಚ್​ಡಿಎಫ್​ಸಿ ಮತ್ತು ಇಂಡಿಯನ್ ಆಯಿಲ್ ಸಹಯೋಗದಲ್ಲಿ ಬಿಡುಗಡೆ ಆಗಿರುವ ಕ್ರೆಡಿಟ್ ಕಾರ್ಡ್​ನಲ್ಲಿ ಬಡ್ಡಿರಹಿತ ಅವಧಿ 50 ದಿನದವರೆಗೂ ಇದೆ. ದೇಶದ ಯಾವುದೇ ಪೆಟ್ರೋಲ್ ಪಂಪ್​ಗೆ ಹೋದರೂ ಫುಯಲ್ ಸರ್ಚಾರ್ಜ್​ನ ವಿನಾಯಿತಿ ಪಡೆಯಬಹುದು. ನೀವು ಕಾರ್ಡ್ ಖರೀದಿಸಿದ ಮೊದಲ ವರ್ಷ 50,000 ರೂಗಿಂತ ಹೆಚ್ಚು ಹಣವನ್ನು ಈ ಕಾರ್ಡ್​ನಲ್ಲಿ ವ್ಯಯಿಸಿದರೆ 500 ರೂ ವಾರ್ಷಿಕ ಮೆಂಬರ್​ಶಿಪ್ ರಿನಿವಲ್ ಶುಲ್ಕದಿಂದ ವಿನಾಯಿತಿ ಪಡೆಯಬಹುದು.

ಇದನ್ನೂ ಓದಿ: ಎಸ್​ಬಿಐ ವೀಕೇರ್ ಸ್ಕೀಮ್; ಗರಿಷ್ಠ ಬಡ್ಡಿ ಕೊಡುವ ಈ ಯೋಜನೆ ಈ ತಿಂಗಳೇ ಕೊನೆ

ಇನ್ನು, ಐಸಿಐಸಿಐ ಬ್ಯಾಂಕ್ ಎಚ್​ಪಿಸಿಎಲ್ ಕೋರಲ್ ಅಮೆರಿಕನ್ ಎಕ್ಸ್​ಪ್ರೆಸ್ ಕ್ರೆಡಿಟ್ ಕಾರ್ಡ್​ನಲ್ಲೂ ಹಲವು ಲಾಭಗಳನ್ನು ಆಫರ್ ಮಾಡಲಾಗುತ್ತದೆ. ಎಚ್​ಪಿ ಪೆಟ್ರೋಲ್ ಪಂಪ್​ಗಳಲ್ಲಿ ವೆಚ್ಚ ಮಾಡಲಾಗುವ ಪ್ರತೀ 100 ರೂಗೆ ನಿರ್ದಿಷ್ಟ ರಿವಾರ್ಡ್ ಅಂಕಗಳನ್ನು ಕೊಡಲಾಗುತ್ತದೆ. 2000 ರಿವಾರ್ಡ್ ಅಂಕಗಳಿದ್ದರೆ ಅದರನ್ನು ಬಳಸಿ 500 ರೂ ಮೌಲ್ಯದ ಇಂಧನ ಹಾಕಿಸಿಕೊಳ್ಳಬಹುದು. ಹಾಗೆಯೇ, ಶೇ. 2.5ರಷ್ಟು ಕ್ಯಾಷ್​ಬ್ಯಾಕ್, ಶೇ. 1ರಷ್ಟು ಫುಯಲ್ ಸರ್ಚಾರ್ಜ್ ವಿನಾಯಿತಿ ಪಡೆಯಬಹುದು. ಸಿನಿಮಾ ಟಿಕೆಟ್, ಡೈನಿಂಗ್ ಇತ್ಯಾದಿಗಳಲ್ಲಿ ಡಿಸ್ಕೌಂಟ್ ಪಡೆಯಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್