ಸಾವರಿನ್ ಗೋಲ್ಡ್ ಬಾಂಡ್; ಅವಧಿಗೆ ಮುನ್ನ ಹೂಡಿಕೆ ಹಿಂಪಡೆಯಲು ಆರ್​ಬಿಐನಿಂದ ವೇಳಾಪಟ್ಟಿ ಬಿಡುಗಡೆ

Sovereign Gold Bond Scheme: ಬಹಳ ಜನಪ್ರಿಯವಾಗಿರುವ ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್​ನಲ್ಲಿ ನಿಮ್ಮ ಹೂಡಿಕೆ 8 ವರ್ಷದ ಬಳಿಕ ಮೆಚ್ಯೂರ್ ಆಗುತ್ತದೆ. ಆದರೆ, ಒಂದೆರಡು ವರ್ಷ ಮುನ್ನವೇ ಹೂಡಿಕೆ ಹಿಂಪಡೆಯಲು ಆರ್​ಬಿಐ ಅವಕಾಶ ಕೊಟ್ಟಿದೆ. ಅದರಂತೆ 2017ರ ಅಕ್ಟೋಬರ್​ನಲ್ಲಿ ವಿತರಿಸಿದ ಎಸ್​ಜಿಬಿಗಳ ಮೇಲಿನ ಹೂಡಿಕೆಯನ್ನು ಹಿಂಪಡೆಯಲು 2023ರ ಅಕ್ಟೋಬರ್​ನಿಂದ 2024ರ ಮಾರ್ಚ್​ವರೆಗೆ ಕಾಲಾವಕಾಶ ಕೊಡಲಾಗಿದೆ.

ಸಾವರಿನ್ ಗೋಲ್ಡ್ ಬಾಂಡ್; ಅವಧಿಗೆ ಮುನ್ನ ಹೂಡಿಕೆ ಹಿಂಪಡೆಯಲು ಆರ್​ಬಿಐನಿಂದ ವೇಳಾಪಟ್ಟಿ ಬಿಡುಗಡೆ
ಚಿನ್ನ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Sep 05, 2023 | 1:47 PM

ಸಾವರೀನ್ ಗೋಲ್ಡ್ ಬಾಂಡ್ ಯೋಜನೆಯಲ್ಲಿ (Sovereign Gold Bond Scheme) ತೊಡಗಿಸಿರುವ ಹೂಡಿಕೆಯನ್ನು ಅವಧಿಗೆ ಮುನ್ನ ಹಿಂಪಡೆಯಲು ಆರ್​ಬಿಐ ಅವಕಾಶ ನೀಡಿದೆ. ಎಸ್​ಜಿಬಿ ಸ್ಕೀಮ್​ಗಳು 8 ವರ್ಷಕ್ಕೆ ಮೆಚ್ಯೂರ್ ಆಗುತ್ತವೆ. ಆದರೆ, 8 ವರ್ಷ ಮುಗಿಯುವ ಮುನ್ನವೇ ಹೂಡಿಕೆ ಹಿಂಪಡೆಯಬಯಸುವ ಹೂಡಿಕೆದಾರರು ಈ ಅವಕಾಶ ಸದುಪಯೋಗಪಡಿಸಿಕೊಳ್ಳಬಹುದು. 2017ರ ಅಕ್ಟೋಬರ್​ನಲ್ಲಿ ನೀಡಲಾದ 3 ಸರಣಿಯ ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್​ಗಳಲ್ಲಿನ ಹೂಡಿಕೆಯನ್ನು ಅವಧಿಗೆ ಮುನ್ನ (Premature Redemption) ಹಿಂಪಡೆಯಲು ಆರ್​ಬಿಐ ವೇಳಾಪಟ್ಟಿ ಪ್ರಕಟಿಸಿದೆ. 2023ರ ಅಕ್ಟೋಬರ್ 1ರಿಂದ 2024ರ ಮಾರ್ಚ್ 31ರವರೆಗೆ ಈ ಅವಕಾಶ ಇರುತ್ತದೆ. ಅವಧಿಗೆ ಮುನ್ನ ಹೂಡಿಕೆ ಹಿಂಪಡೆಯಲು ಇದೇ ಅವಧಿಯಲ್ಲಿ ಮನವಿ ಸಲ್ಲಿಸಬೇಕು. ಆದರೆ, ಅನಿರೀಕ್ಷಿತ ರಜೆ ಇತ್ಯಾದಿ ಸಂದರ್ಭಗಳಿಂದಾಗಿ ಈ ವೇಳಾಪಟ್ಟಿಯಲ್ಲಿ ಬದಲಾವಣೆ ಆದರೂ ಆಗಬಹುದು ಎಂದೂ ಆರ್​ಬಿಐ ಸ್ಪಷ್ಟಪಡಿಸಿದೆ.

ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್: ಹೂಡಿಕೆ ಹಿಂಪಡೆಯುವ ಮನವಿಗೆ ವಿವಿಧ ಗಡುವು

  1. 2017ರ ಅಕ್ಟೋಬರ್ 16ರಂದು ನೀಡಿದ ಸೀರೀಸ್3 ಎಸ್​ಜಿಬಿ: ಮನವಿ ಸಲ್ಲಿಸಲು 2023ರ ಸೆಪ್ಟೆಂಬರ್ 16ರಿಂದ ಅಕ್ಟೋಬರ್ 6ರವರೆಗೆ ಕಾಲಾವಕಾಶ
  2. 2017ರ ಅಕ್ಟೋಬರ್ 23ರಂದು ನೀಡಿದ ಸೀರೀಸ್4 ಎಸ್​ಜಿಬಿ: ಮನವಿ ಸಲ್ಲಿಸಲು ಸೆಪ್ಟೆಂಬರ್ 23ರಿಂದ ಅಕ್ಟೋಬರ್ 13ರವರೆಗೆ ಕಾಲಾವಕಾಶ
  3. 2017ರ ಅಕ್ಟೋಬರ್ 30ರಂದು ನೀಡಿದ ಸೀರೀಸ್5 ಎಸ್​ಜಿಬಿ: ಮನವಿ ಸಲ್ಲಿಸಲು ಸೆಪ್ಟೆಂಬರ್ 30ರಿಂದ ಅಕ್ಟೋಬರ್ 20ರವರೆಗೆ ಕಾಲಾವಕಾಶ

ಇದನ್ನೂ ಓದಿ: ಸಾಲಕ್ಕೆ ಬದಲಾಗಿ ಷೇರುಗಳನ್ನು ಕೊಟ್ಟು ಸ್ಪೈಸ್​ಜೆಟ್; ವಿಮಾನ ಗುತ್ತಿಗೆ ನೀಡಿದವರಿಗೆ ಸಿಕ್ಕಲಿದೆ 4.8 ಕೋಟಿ ಷೇರು

ಈ ಮೇಲಿನವು ಮನವಿ ಸಲ್ಲಿಸಲು ಇರುವ ವೇಳಾಪಟ್ಟಿಯಾಗಿದೆ. ಈ ಮೂರೂ ಸರಣಿಯ ಎಸ್​ಜಿಬಿ ಹೂಡಿಕೆಯನ್ನು ಹಿಂಪಡೆಯಲು 2023ರ ಅಕ್ಟೋಬರ್​ನಿಂದ 2024ರ ಮಾರ್ಚ್​ವರೆಗೂ ಕಾಲಾವಕಾಶ ಇರುತ್ತದೆ. ಒಂದು ವೇಳೆ ನೀವು ಅವಧಿಗೆ ಮುನ್ನ ಎಸ್​ಜಿಬಿ ಹೂಡಿಕೆಯನ್ನು ಹಿಂಪಡೆಯದಿದ್ದರೆ 2025-26ಕ್ಕೆ ಅವು ಮೆಚ್ಯೂರ್ ಆದ ಬಳಿಕ ನೀವು ಪಡೆಯಬಹುದು.

ಏನಿದು ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್?

ಚಿನ್ನದ ಮೇಲೆ ಹೂಡಿಕೆ ಮಾಡಬಯಸುವವರಿಗೆ ಇದು ಒಳ್ಳೆಯ ಯೋಜನೆ ಎನಿಸಿದೆ. ಭೌತಿಕ ಚಿನ್ನದ ಬದಲು ಬಾಂಡ್ ರೂಪದಲ್ಲಿ ಹೂಡಿಕೆ ಮಾಡಬಹುದು. ಇವತ್ತಿನ ಚಿನ್ನದ ದರದಲ್ಲಿ ನೀವು ಒಂದು ವರ್ಷದಲ್ಲಿ 4 ಕಿಲೋ ಚಿನ್ನದ ಮೇಲೆ ಹೂಡಿಕೆ ಮಾಡಬಹುದು. ಎಂಟು ವರ್ಷದ ಬಳಿಕ ಅಂದಿನ ಮಾರುಕಟ್ಟೆ ದರದ ಪ್ರಕಾರ ನಿಮಗೆ ಚಿನ್ನದ ಬದಲಾಗಿ ಹಣ ಸಿಗುತ್ತದೆ.

ಉದಾಹರಣೆಗೆ ಇವತ್ತು ಚಿನ್ನದ ಬೆಲೆ 10 ಗ್ರಾಂಗೆ 61,000 ರೂ ಇದೆ ಎಂದಿಟ್ಟುಕೊಳ್ಳಿ. ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್​ನಲ್ಲಿ ನೀವು 100 ಗ್ರಾಂ ಚಿನ್ನದ ಮೇಲೆ 6.1 ಲಕ್ಷ ರೂ ಹೂಡಿಕೆ ಮಾಡುತ್ತೀರಿ. ಎಂಟು ವರ್ಷದ ಬಳಿಕ ಚಿನ್ನದ ಬೆಲೆ 90,000 ರೂ ಆಗಿರುತ್ತದೆ ಎಂದು ಭಾವಿಸೋಣ. ಆಗ ನಿಮ್ಮ ಹೂಡಿಕೆ ಮೌಲ್ಯ 90 ಲಕ್ಷ ರೂ ಆಗುತ್ತದೆ. ಎಂಟು ವರ್ಷದಲ್ಲಿ ನಿಮಗೆ ಹೆಚ್ಚೂಕಡಿಮೆ 30 ಲಕ್ಷ ರೂ ಲಾಭ ಬರುತ್ತದೆ. ನಿಮಗೆ ಭೌತಿಕ ಚಿನ್ನದ ಬದಲು 90 ಲಕ್ಷ ರೂ ಹಣವನ್ನು ನಿಮಗೆ ಸಂದಾಯ ಮಾಡಲಾಗುತ್ತದೆ.

ಇದನ್ನೂ ಓದಿ: ಸೆ. 30ರೊಳಗೆ ಈ ಕೆಲಸ ಮಾಡದಿದ್ದರೆ ಪಿಪಿಎಫ್, ಸೇವಿಂಗ್ಸ್ ಸ್ಕೀಮ್ ಇತ್ಯಾದಿ ನಿಮ್ಮ ಹೂಡಿಕೆ ಸ್ಥಗಿತಗೊಳ್ಳಲಿದೆ

ಇದರ ಜೊತೆಗೆ ನಿಮ್ಮ ಹೂಡಿಕೆಯ ಮೇಲೆ ವಾರ್ಷಿಕವಾಗಿ ಶೇ. 2.50ರಷ್ಟು ಬಡ್ಡಿಯೂ ಸಿಗುತ್ತದೆ. ಪ್ರತೀ 6 ತಿಂಗಳಿಗೆ ನಿಮ್ಮ ಬ್ಯಾಂಕ್ ಖಾತೆಗೆ ಬಡ್ಡಿ ಹಣ ಜಮೆ ಆಗುತ್ತಿರುತ್ತದೆ. ಆದರೆ, ಈ ಬಡ್ಡಿಹಣಕ್ಕೆ ತೆರಿಗೆ ಅನ್ವಯ ಆಗುತ್ತದೆ. ಆದರೆ, ಹೂಡಿಕೆಯಿಂದ ಸಿಗುವ ಬಡ್ಡಿಹೊರತಾದ ಲಾಭದ ಮೇಲೆ ಯಾವ ತೆರಿಗೆಯೂ ಇರುವುದಿಲ್ಲ.

ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್ ಅನ್ನು ಯಾವಾಗಲೂ ಪಡೆಯಲಾಗುವುದಿಲ್ಲ. ಆರ್​ಬಿಐ ಆಗಾಗ್ಗೆ ಈ ಬಾಂಡ್ ಅನ್ನು ವಿತರಿಸುತ್ತದೆ. ಆ ಸಂದರ್ಭದಲ್ಲಿ ಮಾತ್ರ ಇದನ್ನು ಪಡೆಯಬಹುದು. ಕನಿಷ್ಠ ಚಿನ್ನದ ಹೂಡಿಕೆ 1 ಗ್ರಾಮ್ ಆಗಿರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:45 pm, Tue, 5 September 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್