AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೆಡೆ ಸಾಲ ಇದೆ, ಈಕ್ವಿಟಿ ಮೇಲೆ ಎಸ್​ಐಪಿ ಇದೆ; ಇನ್ನೊಂದೆಡೆ ಪಿಎಫ್ ಹಣ ಇದೆ; ಮುಂದೇನು ಮಾಡಬಹುದು?

Financial Management Tips: ನಿಮ್ಮ ಇಪಿಎಫ್ ನಿಧಿಯಲ್ಲಿ ಸಾಕಷ್ಟು ಹಣ ಇದ್ದರೆ, ಅಥವಾ ಬೇರಾವುದಾದರೂ ಸೇವಿಂಗ್ ಸ್ಕೀಮ್​ಗಳಲ್ಲಿ ನಿಮ್ಮ ಹಣ ಇದ್ದರೂ ಕೂಡ ಅದನ್ನು ಹೊರತೆಗೆದು ಸಾಲ ತೀರಿಸಲು ಉಪಯೋಗಿಸುವುದು ಉತ್ತಮ ನಿರ್ಧಾರ. ಕೆಲ ಹಣಕಾಸು ತಜ್ಞರು, ಕಡಿಮೆ ರಿಟರ್ನ್ ಕೊಡುವ ಸ್ಕೀಮ್​ಗಳಿಂದ ಹಣವನ್ನು ಸಾಲಕ್ಕೆ ಕಟ್ಟುವ ಬದಲು ದೀರ್ಘಾವಧಿಯ ಎಸ್​ಐಪಿ ಮೇಲೆ ಹೂಡಿಕೆ ಮಾಡುವುದು ಉತ್ತಮ ಎನ್ನುತ್ತಾರೆ.

ಒಂದೆಡೆ ಸಾಲ ಇದೆ, ಈಕ್ವಿಟಿ ಮೇಲೆ ಎಸ್​ಐಪಿ ಇದೆ; ಇನ್ನೊಂದೆಡೆ ಪಿಎಫ್ ಹಣ ಇದೆ; ಮುಂದೇನು ಮಾಡಬಹುದು?
ಹಣಕಾಸು ನಿರ್ವಹಣೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Sep 04, 2023 | 12:24 PM

Share

ಸರಿಯಾದ ಸಮಯದಲ್ಲಿ ಸರಿಯಾದ ಹಣಕಾಸು ನಿರ್ಧಾರ (Financial Decision) ತೆಗೆದುಕೊಳ್ಳುವುದು ಬಹಳ ಮುಖ್ಯ. ಕೆಲ ಸಂದರ್ಭಗಳು ಖಚಿತ ನಿರ್ಧಾರವನ್ನು ಕಷ್ಟಸಾಧ್ಯವಾಗಿಸುತ್ತವೆ. ಉದಾಹರಣೆಗೆ, ಸಾಲ, ಹೂಡಿಕೆ ಮತ್ತು ಉಳಿತಾಯ ಹಣ ಇವು ಮೂರೂ ಕೂಡ ನಿಮ್ಮಲ್ಲಿ ಇದ್ದಾಗ ಯಾವುದಕ್ಕೆ ಆದ್ಯತೆ ಕೊಡಬೇಕು ಎಂಬ ಗೊಂದಲ ಉಂಟಾಗಬಹುದು. ಉದಾಹರಣೆಗೆ, ನಿಮ್ಮಲ್ಲಿ 5 ಲಕ್ಷ ರೂ ಸಾಲ ಕಟ್ಟುವುದು ಬಾಕಿ ಇದೆ. ಇದರ ಜೊತೆಗೆ ನೀವು ಈಕ್ವಿಟಿಯ ಎಸ್​ಐಪಿಯಲ್ಲಿ (Equity SIP) ತಿಂಗಳಿಗೆ 10,000 ರೂ ಹೂಡಿಕೆ ಮಾಡುತ್ತಿರುತ್ತೀರಿ. ಇದರ ಜೊತೆಗೆ ನಿಮ್ಮ ಇಪಿಎಫ್ ಖಾತೆಯಲ್ಲಿ 5 ಲಕ್ಷ ರೂ ಸೇರಿರುತ್ತದೆ. ಈಗ ನೀವು ಇಪಿಎಫ್ ಹಣವನ್ನು ತೆಗೆಯಬೇಕಾ? ಅದನ್ನು ತೆಗೆದರೆ ಆ ಹಣವನ್ನು ಸಾಲ ತೀರಿಸಲು ಉಪಯೋಗಿಸಬೇಕಾ? ಅಥವಾ ಎಸ್​ಐಪಿ ಹೆಚ್ಚಿಸಬೇಕಾ? ಎಂಬ ಪ್ರಶ್ನೆ ಉದ್ಭವಿಸಬಹುದು.

ಸಾಲ ತೀರಿಸುವುದು ಮೊದಲ ಆದ್ಯತೆಯಾಗಬೇಕಾ?

ನೀವು ತೆಗೆದುಕೊಂಡಿರುವ ಸಾಲಕ್ಕೆ ಎಷ್ಟು ಬಡ್ಡಿ ಎಂಬುದರ ಮೇಲೆ ನಿಮ್ಮ ನಿರ್ಧಾರ ಅವಲಂಬಿತವಾಗಬೇಕು. ಉದಾಹರಣೆಗೆ ನಿಮ್ಮದು ವೈಯಕ್ತಿಕ ಸಾಲವಾಗಿದ್ದರೆ ಅದಕ್ಕೆ ಬಡ್ಡಿ ಶೇ. 14ರಿಂದ ಶೇ. 18ರವರೆಗೂ ಇರುತ್ತದೆ. ನಿಮ್ಮ ಇಪಿಎಫ್ ಖಾತೆಗೆ ಸಿಗುವ ಬಡ್ಡಿ ಶೇ. 8ರ ಅಸುಪಾಸು ಮಾತ್ರವೇ. ಇನ್ನು, ಎಸ್​ಐಪಿಯಿಂದ ಸಿಗುವ ರಿಟರ್ನ್ ವರ್ಷಕ್ಕೆ ಶೇ. 12ರಿಂದ 14 ಎಂದು ಭಾವಿಸಬಹುದು. ಇಂಥ ಸಂದರ್ಭದಲ್ಲಿ ನಿಮ್ಮ ಇಪಿಎಫ್ ಖಾತೆಯಿಂದ ಹಣ ಹಿಂಪಡೆದು, ಅದನ್ನು ಸಾಲ ತೀರಿಸಲು ಉಪಯೋಗಿಸುವುದು ಹೆಚ್ಚು ಸೂಕ್ತ.

ಇದನ್ನೂ ಓದಿ: ನಿಮಗೆ ಸಂಪಾದನೆ ಎಷ್ಟೇ ಇರಲಿ, ಹಣ ನಿರ್ವಹಣೆಗೆ ನೆನಪಿರಲಿ 3 ಬಕೆಟ್ ಫಾರ್ಮುಲಾ

ಕೆಲ ಹಣಕಾಸು ತಜ್ಞರು ನೀಡುವ ಸಲಹೆ ಪ್ರಕಾರ, ಇಪಿಎಫ್​ನಂತಹ ನಿಧಿಯಲ್ಲಿರುವ ಹಣವನ್ನು ಸಾಲ ತೀರಿಸುವುದಕ್ಕೆ ಉಪಯೋಗಿಸುವುದಕ್ಕಿಂತ ಎಸ್​ಐಪಿಯಂತಹ ಸ್ಕೀಮ್​ನಲ್ಲಿ ತೊಡಗಿಸಿಕೊಳ್ಳುವುದು ದೀರ್ಘಾವಧಿಗೆ ಬಹಳ ಅನುಕೂಲವಾಗುತ್ತದಂತೆ. ನಿಮ್ಮ ಸಾಲದ ಮೇಲಿನ ಬಡ್ಡಿಗಿಂತ ಶೇ. 4ಕ್ಕಿಂತ ಹೆಚ್ಚು ಮಟ್ಟದಲ್ಲಿ ಎಸ್​​ಐಪಿಯಿಂದ ರಿಟರ್ನ್ ನಿರೀಕ್ಷಿಸುತ್ತಿದ್ದರೆ ಎಸ್​ಐಪಿಗೆ ಹಣ ಹಾಕುವುದು ಒಳ್ಳೆಯ ಐಡಿಯಾ.

ಇಪಿಎಫ್​ನಿಂದಲೇ ಹಣ ಹಿಂಪಡೆಯಬೇಕೆಂದೇನೂ ಅಲ್ಲ. ಶೇ. 8ರಷ್ಟು ಬಡ್ಡಿ ಸಿಗುವಂತಹ ಯಾವುದಾದರೂ ಸೇವಿಂಗ್ ಸ್ಕೀಮ್​ನಲ್ಲಿ ನಿಮ್ಮ ಹಣ ಇದ್ದರೆ ಅದನ್ನು ಸಾಲ ತೀರಿಸಲು ಉಪಯೋಗಿಸುವುದು ಸಮಂಜಸ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:11 pm, Mon, 4 September 23

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ