AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರಿ ನೌಕರರು ಷೇರು ವಹಿವಾಟು ನಡೆಸಬಹುದೇ? ನಿಯಮಗಳು ಏನು ಹೇಳುತ್ತವೆ?

Why Govt Employees Barred From Share Trading: ಕೇಂದ್ರ ಸರ್ಕಾರವು 2019 ರಲ್ಲಿ ಸರ್ಕಾರಿ ನೌಕರರು ಮಾಡಿದ ಷೇರು ಹೂಡಿಕೆ ಮತ್ತು ಮ್ಯೂಚುವಲ್ ಫಂಡ್ ಹೂಡಿಕೆಗಳ ಘೋಷಣೆಯ ಮಿತಿಯನ್ನು ಹೆಚ್ಚಿಸಿದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (HRD ಸಚಿವಾಲಯ) ಹೊರಡಿಸಿದ ಆದೇಶದ ಪ್ರಕಾರ, ಪರಿಷ್ಕೃತ ಮಿತಿಯು ಈಗ ಉದ್ಯೋಗಿಯ ಆರು ತಿಂಗಳ ಮೂಲ ವೇತನಕ್ಕೆ ಸಮನಾಗಿರುತ್ತದೆ. ಸರ್ಕಾರಿ ಉದ್ಯೋಗಿಗಳು ಷೇರು ಹೂಡಿಕೆ ಮಾಡಬಹುದೇ ಹೊರತು ಷೇರುಟ್ರೇಡಿಂಗ್ ನಡೆಸುವಂತಿಲ್ಲ. ಯಾಕೆ ಈ ನಿಯಮ ರೂಪಿಸಲಾಗಿದೆ ಎಂಬ ವಿವರ ಇಲ್ಲಿದೆ.

ಸರ್ಕಾರಿ ನೌಕರರು ಷೇರು ವಹಿವಾಟು ನಡೆಸಬಹುದೇ? ನಿಯಮಗಳು ಏನು ಹೇಳುತ್ತವೆ?
ಷೇರು ವಹಿವಾಟು
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ|

Updated on:Sep 06, 2023 | 5:26 PM

Share

Share Trading vs Share Investment: 35(1) ಕೇಂದ್ರ ನಾಗರಿಕ ಸೇವೆಗಳ (ನಡತೆ) ನಿಯಮಗಳು, 1964, ಈ ಕಾಯ್ದೆ ಪ್ರಕಾರ, ಸರ್ಕಾರಿ ನೌಕರನು ಷೇರು ಮಾರುಕಟ್ಟೆ ವ್ಯಾಪಾರ ಅಥವಾ ಯಾವುದೇ ರೀತಿಯ ಊಹಾತ್ಮಕ ವ್ಯವಹಾರದಲ್ಲಿ (Speculation) ತೊಡಗುವಂತಿಲ್ಲ. ಆದರೆ ಸ್ಟಾಕ್ ಬ್ರೋಕರ್‌ಗಳು, ನೋಂದಾಯಿತ ಏಜೆನ್ಸಿಗಳು, ಪರವಾನಗಿ ಅಥವಾ ಪ್ರಮಾಣಪತ್ರ ಹೊಂದಿರುವ ವ್ಯಕ್ತಿಗಳು/ಏಜೆನ್ಸಿಗಳ ಮೂಲಕ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬಹುದು . ಅಂದರೆ, ಸರ್ಕಾರಿ ನೌಕರರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾತ್ರ ಮಾಡಬಹುದೇ ಹೊರತು ವ್ಯಾಪಾರ ಮಾಡುವಂತಿಲ್ಲ.

ಇತ್ತೀಚಿನ ಸುತ್ತೋಲೆಯ ಪ್ರಕಾರ, ಯಾವುದೇ ಸರ್ಕಾರಿ ನೌಕರರು ತಮ್ಮ ಮೂಲ ವೇತನದ 6 ಪಟ್ಟು ಹೆಚ್ಚು ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ, ಅವರ ಇಲಾಖೆಗೆ ತಿಳಿಸುವುದು ಅವಶ್ಯಕ. ಈ ಕಾಯ್ದೆಯ ನಿಯಮ 35(1) ಅನ್ನು ತಿಳಿಯುವುದು ಮುಖ್ಯ. ನೀವು ಸರ್ಕಾರಿ ಉದ್ಯೋಗಿಯಾಗಿದ್ದರೆ, ನೀವು ಷೇರುಗಳು ಅಥವಾ ಸೆಕ್ಯೂರಿಟಿಗಳನ್ನು (ಅಥವಾ ಯಾವುದೇ ಇತರ ಹೂಡಿಕೆ) ಪದೇ ಪದೇ ಖರೀದಿಸಲು ಅಥವಾ ಮಾರಾಟ ಮಾಡಲು ಸಾಧ್ಯವಿಲ್ಲ, ಏಕೆಂದರೆ ಇದನ್ನು ಊಹಾತ್ಮಕ ವ್ಯಾಪಾರ (Speculative Trading) ಎಂದು ಪರಿಗಣಿಸಲಾಗುತ್ತದೆ.

ಸರ್ಕಾರಿ ಉದ್ಯೋಗಿ ಹೂಡಿಕೆ ಮಾಡುವುದನ್ನು ಎಲ್ಲಿ ತಪ್ಪಿಸಬೇಕು?

ಕೇಂದ್ರ ನಾಗರಿಕ ಸೇವೆಗಳ (ನಡತೆ) ನಿಯಮಗಳು, 1964 ರ ನಿಯಮ ಸಂಖ್ಯೆ 40 (2) ರ ಭಾಗ (i) ರ ಪ್ರಕಾರ, ಸರ್ಕಾರಿ ನೌಕರರು ಅವರಿಗೆ ಮುಜುಗರವನ್ನು ಉಂಟುಮಾಡುವ ಅಥವಾ ಸೇವೆಯಿಂದ ವಜಾಗೊಳಿಸುವಂತಹ ಯಾವುದೇ ಹೂಡಿಕೆಯನ್ನು ಮಾಡುವಂತಿಲ್ಲ. ಅದೇ ನಿಯಮಗಳು ಉದ್ಯೋಗಿಯ ಕುಟುಂಬದ ಸದಸ್ಯರಿಗೆ ಮತ್ತು ಅವನ ಪರವಾಗಿ ಕಾರ್ಯನಿರ್ವಹಿಸುವ ಯಾವುದೇ ವ್ಯಕ್ತಿಗೂ ಅನ್ವಯಿಸುತ್ತವೆ.

ಇದನ್ನೂ ಓದಿ: ಉದ್ಯೋಗಿ ಆಗದೇ ಬ್ಯಾಂಕ್​ನಿಂದ ಆದಾಯ ಪಡೆಯುವ ಮಾರ್ಗಗಳು ಹೇಗೆ? ಸ್ವಯಂ ಉದ್ಯೋಗದ ಅವಕಾಶ ಬಳಸಿ

ಟ್ರೇಡಿಂಗ್ ಮತ್ತು ಇನ್ವೆಸ್ಟಿಂಗ್ ಎರಡರ ಮಧ್ಯೆ ವ್ಯತ್ಯಾಸವೇನು?

ಇಲ್ಲಿ ಷೇರು ಹೂಡಿಕೆ ಅಥವಾ ಇನ್ವೆಸ್ಟ್​ಮೆಂಟ್ ಎಂಬುದು ನೀವು ದೀರ್ಘಕಾಲದ ಹೂಡಿಕೆ ಉದ್ದೇಶದಿಂದ ಷೇರುಗಳನ್ನು ಖರೀದಿಸಿ, ಕನಿಷ್ಠ ಒಂದು ವರ್ಷವಾದರೂ ಅದನ್ನು ಇಟ್ಟುಕೊಳ್ಳುವುದಾಗಿರುತ್ತದೆ. ಹೀಗೆ ಖರೀದಿಸಿ ಹಾಗೆ ಮಾರುವುದು ಟ್ರೇಡಿಂಗ್ ಆಗುತ್ತದೆ. ಒಂದು ಷೇರಿನ ಬೆಲೆ ಸದ್ಯೋಭವಿಷ್ಯದಲ್ಲಿ ಹೀಗೆ ಏರಿಳಿತ ಕಾಣಬಹುದು ಎಂದು ಅಂದಾಜಿಸಿ ಅದರಂತೆ ಮಾರಲು ಅಥವಾ ಖರೀದಿಸಲು ಮುಂದಾಗುವುದು ಟ್ರೇಡಿಂಗ್ ಎನಿಸುತ್ತದೆ. ಆಪ್ಷನ್ಸ್ ಟ್ರೇಡಿಂಗ್, ಫ್ಯೂಚರ್ಸ್ ಟ್ರೇಡಿಂಗ್, ಶಾರ್ಟ್ ಟರ್ಮ್ ಸೆಲ್ಲಿಂಗ್, ಇಂಟ್ರಾಡೇ ಟ್ರೇಡಿಂಗ್ ಇವೆಲ್ಲವೂ ಇದೇ ಷೇರುಟ್ರೇಡಿಂಗ್ ಎನಿಸುತ್ತವೆ.

ಸರ್ಕಾರಿ ನೌಕರರಿಗೆ ಯಾಕೆ ಟ್ರೇಡಿಂಗ್​ನಿಂದ ನಿರ್ಬಂಧ?

ಟ್ರೇಡಿಂಗ್ ಎಂಬುದು ಸ್ಪೆಕ್ಯುಲೇಟ್ ಮಾಡುವ ಕ್ರಿಯೆಯಾದ್ದರಿಂದ ಉದ್ಯೋಗಿಯ ಗಮನವೆಲ್ಲವೂ ಷೇರಿನ ಬೆಲೆಯ ಏರಿಳಿತದ ಮೇಲೆ ನೆಟ್ಟಿರುತ್ತದೆ. ಇದರಿಂದ ಅವರ ಮೂಲ ಕೆಲಸದ ಮೇಲೆ ಗಮನ ಕೊಡಲು ಆಗುವುದಿಲ್ಲ. ಈ ಕಾರಣಕ್ಕೆ ಸರ್ಕಾರ ತನ್ನ ಉದ್ಯೋಗಿಗಳಿಗೆ ಷೇರು ಟ್ರೇಡಿಂಗ್ ಮಾಡದಂತೆ ನಿರ್ಬಂಧಿಸಿದೆ.

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ನಿಯಮಗಳೇನು?

ಕೇಂದ್ರ ಸರ್ಕಾರವು 2019 ರಲ್ಲಿ ಸರ್ಕಾರಿ ನೌಕರರು ಮಾಡಿದ ಷೇರು ಹೂಡಿಕೆ ಮತ್ತು ಮ್ಯೂಚುವಲ್ ಫಂಡ್ ಹೂಡಿಕೆಗಳ ಘೋಷಣೆಯ ಮಿತಿಯನ್ನು ಹೆಚ್ಚಿಸಿದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (HRD ಸಚಿವಾಲಯ) ಹೊರಡಿಸಿದ ಆದೇಶದ ಪ್ರಕಾರ, ಪರಿಷ್ಕೃತ ಮಿತಿಯು ಈಗ ಉದ್ಯೋಗಿಯ ಆರು ತಿಂಗಳ ಮೂಲ ವೇತನಕ್ಕೆ ಸಮನಾಗಿರುತ್ತದೆ.

ಇದನ್ನೂ ಓದಿ: ದೀರ್ಘಾವಧಿ ಹೂಡಿಕೆಗೆ ಪಿಪಿಎಫ್ ಉತ್ತಮವೋ, ಮ್ಯುಚುವಲ್ ಫಂಡ್ ಓಕೆಯಾ? ಇಲ್ಲಿದೆ ಒಂದು ಹೋಲಿಕೆ

ಸರಳವಾಗಿ ಹೇಳುವುದಾದರೆ, ಸರ್ಕಾರಿ ಆದೇಶದ ಪ್ರಕಾರ, ಹಣಕಾಸು ವರ್ಷದಲ್ಲಿ ಉದ್ಯೋಗಿಯು ತನ್ನ 6 ತಿಂಗಳ ಮೂಲ ವೇತನಕ್ಕಿಂತ ಹೆಚ್ಚಿದ್ದರೆ, ಅಂತಹ ಷೇರುಗಳು, ಸೆಕ್ಯುರಿಟಿಗಳು, ಡಿಬೆಂಚರುಗಳು ಮತ್ತು ಮ್ಯೂಚುವಲ್ ಫಂಡ್ ಯೋಜನೆಗಳಲ್ಲಿ ಮಾಡಿದ ಒಟ್ಟು ಹೂಡಿಕೆಯ ಸಂಪೂರ್ಣ ಖಾತೆಯನ್ನು ನೀಡಬೇಕು.

ಸರ್ಕಾರಿ ನೌಕರರಿಗೆ ಹೂಡಿಕೆಯ ಆಯ್ಕೆಗಳು ಯಾವುವು?

ಸರ್ಕಾರಿ ನೌಕರರು ವೈಯಕ್ತಿಕ ಹಣಕಾಸಿನ ಗುರಿಗಳ ಆಧಾರದ ಮೇಲೆ ಈ ಕೆಳಗಿನ ಕೆಲವು (ಅಥವಾ ಎಲ್ಲಾ) ಆಯ್ಕೆಗಳಲ್ಲಿ ಹೂಡಿಕೆ ಮಾಡಬಹುದು.

  • ಮ್ಯೂಚುಯಲ್ ಫಂಡ್​ಗಳು
  • ಸಾರ್ವಜನಿಕ ಭವಿಷ್ಯ ನಿಧಿ (PPF)
  • ರಾಷ್ಟ್ರೀಯ ಪಿಂಚಣಿ ಯೋಜನೆ
  • ಷೇರುಗಳಲ್ಲಿ ದೀರ್ಘಾವಧಿ ಹೂಡಿಕೆ
  • ಬ್ಯಾಂಕ್ ಠೇವಣಿ

(ಮಾಹಿತಿ: TV9 Gujarati)

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:24 pm, Wed, 6 September 23

ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್
ಅಪ್ರಾಪ್ತೆಯ ಕೊರಳಿಗೆ ಚಾಕು ಹಿಡಿದ ಪಾಗಲ್ ಪ್ರೇಮಿ,
ಅಪ್ರಾಪ್ತೆಯ ಕೊರಳಿಗೆ ಚಾಕು ಹಿಡಿದ ಪಾಗಲ್ ಪ್ರೇಮಿ,
ಸಿಎಂ ಗಾದಿಗಾಗಿ ತಿಕ್ಕಾಟ ಜೋರಾಗಿರುವ ಸೂಚನೆಗಳು ಸ್ಪಷ್ಟ!
ಸಿಎಂ ಗಾದಿಗಾಗಿ ತಿಕ್ಕಾಟ ಜೋರಾಗಿರುವ ಸೂಚನೆಗಳು ಸ್ಪಷ್ಟ!
ಕಲಬುರಗಿ ಜಿಲ್ಲೆಯ ಹಲವಾರು ಕಡೆ ತುಂಬಿ ಹರಿಯುತ್ತಿರುವ ಹಳ್ಳಕೊಳ್ಳಗಳು
ಕಲಬುರಗಿ ಜಿಲ್ಲೆಯ ಹಲವಾರು ಕಡೆ ತುಂಬಿ ಹರಿಯುತ್ತಿರುವ ಹಳ್ಳಕೊಳ್ಳಗಳು
Video:ಕೇರಳದಲ್ಲಿ ಸಿಲುಕಿದ್ದ ಬ್ರಿಟಿಷ್ ಫೈಟರ್ ಜೆಟ್ ಯುಕೆಗೆ ವಾಪಸ್
Video:ಕೇರಳದಲ್ಲಿ ಸಿಲುಕಿದ್ದ ಬ್ರಿಟಿಷ್ ಫೈಟರ್ ಜೆಟ್ ಯುಕೆಗೆ ವಾಪಸ್
‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ಫಿನಾಲೆಗೆ ದಿನಾಂಕ ನಿಗದಿ; ಕಪ್ ಯಾರಿಗೆ?
‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ಫಿನಾಲೆಗೆ ದಿನಾಂಕ ನಿಗದಿ; ಕಪ್ ಯಾರಿಗೆ?
ಉತ್ತಮ ಮಳೆಯಿಂದಾಗಿ ತುಂಬಿ ತುಳುಕುತ್ತಿರುವ ಕರ್ನಾಟಕದ ಜಲಾಶಯಗಳು
ಉತ್ತಮ ಮಳೆಯಿಂದಾಗಿ ತುಂಬಿ ತುಳುಕುತ್ತಿರುವ ಕರ್ನಾಟಕದ ಜಲಾಶಯಗಳು