AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉದ್ಯೋಗಿ ಆಗದೇ ಬ್ಯಾಂಕ್​ನಿಂದ ಆದಾಯ ಪಡೆಯುವ ಮಾರ್ಗಗಳು ಹೇಗೆ? ಸ್ವಯಂ ಉದ್ಯೋಗದ ಅವಕಾಶ ಬಳಸಿ

Earning Money From Bank: ಬ್ಯಾಂಕ್​ನಲ್ಲಿ ಉದ್ಯೋಗಿ ಆಗದೆಯೇ ಅದರಿಂದ ಹಣ ಗಳಿಸುವ ಹಲವು ಮಾರ್ಗಗಳುಂಟು. ಏಜೆಂಟ್ ಆಗಿ ಗ್ರಾಹಕರಿಗೆ ಸಾಲ, ಇನ್ಷೂರೆನ್ಸ್ ಇತ್ಯಾದಿ ಕೊಡಿಸಿದರೆ ಒಳ್ಳೆಯ ಕಮಿಷನ್ ಪಡೆಯಬಹುದು. ಆರ್​ಡಿ, ಎಫ್​ಡಿ ಇತ್ಯಾದಿ ಹೂಡಿಕೆಗಳನ್ನು ಗ್ರಾಹಕರಿಂದ ಮಾಡಿಸದರೂ ಕಮಿಷನ್ ಸಿಗುತ್ತದೆ. ನೀವು ಬ್ಯಾಂಕ್ ಉದ್ಯೋಗಿ ಆಗದೆಯೇ ಈ ರೀತಿ ಹಣ ಸಂಪಾದಿಸಬಹುದು.

ಉದ್ಯೋಗಿ ಆಗದೇ ಬ್ಯಾಂಕ್​ನಿಂದ ಆದಾಯ ಪಡೆಯುವ ಮಾರ್ಗಗಳು ಹೇಗೆ? ಸ್ವಯಂ ಉದ್ಯೋಗದ ಅವಕಾಶ ಬಳಸಿ
ಬ್ಯಾಂಕ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Sep 06, 2023 | 2:21 PM

Share

ಬ್ಯಾಂಕ್​ನಿಂದ ನೀವು ನಾನಾ ರೀತಿಯಲ್ಲಿ ಹಣ ಗಳಿಸಬಹುದು. ಬ್ಯಾಂಕುಗಳು ಹಲವು ರೀತಿಯ ಸೇವೆಗಳನ್ನು ಗ್ರಾಹಕರಿಗೆ ಆಫರ್ ಮಾಡುತ್ತವೆ. ಭಾರತದಲ್ಲಿ ಈಗಲೂ ಕೂಡ ಹೆಚ್ಚಿನ ಜನರಿಗೆ ಎಲ್ಲಾ ಬ್ಯಾಂಕಿಂಗ್ ಸೇವೆಗಳು (Banking services) ಲಭ್ಯ ಇಲ್ಲ. ಬ್ಯಾಂಕ್ ಖಾತೆ ಹೊಂದಿದ್ದರೂ ಅದರ ಅನೇಕ ಸೇವೆಗಳ ಬಗ್ಗೆ ಬಹಳ ಮಂದಿಗೆ ಮಾಹಿತಿ ಇಲ್ಲ. ಬ್ಯಾಂಕುಗಳು ತಮ್ಮ ಸೇವೆಗಳನ್ನು ಪ್ರಚುರಪಡಿಸಲು ಮತ್ತು ಗ್ರಾಹಕರಿಗೆ ಮುಟ್ಟಿಸಲು ಸಿಬ್ಬಂದಿ ಹೊಂದಿರುತ್ತದೆ, ಅಥವಾ ಅಂಥ ಕೆಲಸಗಳಿಗೆ ಕಮಿಷನ್ ಆಧಾರದ ಮೇಲೆ ಮಧ್ಯವರ್ತಿಗಳನ್ನು (Middlemen) ಬಳಸಿಕೊಳ್ಳುತ್ತದೆ. ಈ ರೀತಿ ನೀವು ಬ್ಯಾಂಕ್ ಪರವಾಗಿ ಏಜೆಂಟ್ ಆಗಿ ಕೆಲಸ ಮಾಡುತ್ತಾ ಹಣ ಸಂಪಾದನೆ ಮಾಡಬಹುದು.

ಬ್ಯಾಂಕ್ ಏಜೆಂಟ್ ಆಗಿ ಏನೇನು ಮಾಡಬಹುದು?

ಬ್ಯಾಂಕಿಗೆ ಹೊಸ ಗ್ರಾಹಕರನ್ನು ತಂದು ಸೇವಿಂಗ್ಸ್ ಅಕೌಂಟ್ ತೆರೆಸಿದರೆ ಕಮಿಷನ್ ಸಿಗುತ್ತದೆ. ಬ್ಯಾಂಕಿನಲ್ಲಿ ಆರ್​ಡಿ, ಎಫ್​ಡಿ, ಕಿಸಾನ್ ಕ್ರೆಡಿಟ್ ಇತ್ಯಾದಿಯನ್ನು ಗ್ರಾಹಕರಿಂದ ತೆರೆಸಿದರೆ ಕಮಿಷನ್ ಸಿಗುತ್ತದೆ.

ಬ್ಯಾಂಕ್​ನ ಕಸ್ಟಮರ್ ಸರ್ವಿಸ್ ಸೆಂಟರ್​ಗಳಲ್ಲಿ ಅಥವಾ ಮಿನಿ ಬ್ಯಾಂಕುಗಳಲ್ಲಿ ಬ್ಯಾಂಕ್ ಪರವಾಗಿ ಗ್ರಾಹಕರಿಗೆ ಇನ್ಷೂರೆನ್ಸ್ ಪಾಲಿಸಿಗಳನ್ನು ಮಾರಿ ಕಮಿಷನ್ ಪಡೆಯಬಹುದು. ಮ್ಯೂಚುವಲ್ ಫಂಡ್​ಗಳಲ್ಲಿ ಹೂಡಿಕೆ ಮಾಡಿಸಿ ಹಣ ಪಡೆಯಬಹುದು.

ಇದನ್ನೂ ಓದಿ: ದೀರ್ಘಾವಧಿ ಹೂಡಿಕೆಗೆ ಪಿಪಿಎಫ್ ಉತ್ತಮವೋ, ಮ್ಯುಚುವಲ್ ಫಂಡ್ ಓಕೆಯಾ? ಇಲ್ಲಿದೆ ಒಂದು ಹೋಲಿಕೆ

ಬ್ಯಾಂಕ್​ನ ಯಾವುದೇ ಇನ್ಷೂರೆನ್ಸ್ ಪಾಲಿಸಿ ಮಾಡಿಸಿದರೆ ಒಬ್ಬ ಏಜೆಂಟ್​ಗೆ ಶೇ. 20ರಷ್ಟು ಕಮಿಷನ್ ಸಿಗುತ್ತದೆ. ಒಂದು ಲಕ್ಷ ರೂ ಮೊತ್ತದ ಇನ್ಷೂರೆನ್ಸ್ ಪಾಲಿಸಿ ಪ್ರೀಮಿಯಮ್​ಗಳ ಪಾವತಿಯಾದರೆ ನಿಮಗೆ 20,000 ರೂ ಕಮಿಷನ್ ಸಿಗುತ್ತದೆ. ಅಂದರೆ, ನಿಮ್ಮ ವತಿಯಿಂದ ಇನ್ಷೂರೆನ್ಸ್ ಪಾಲಿಸಿ ಪಡೆಯುವ ಗ್ರಾಹಕ ಪಾವತಿಸುವ ಪ್ರೀಮಿಯಮ್​ನಿಂದ ನಿಮಗೆ ಕಮಿಷನ್ ಬರುತ್ತದೆ.

ಬ್ಯಾಂಕ್​ನ ಲೋನ್ ಏಜೆಂಟ್

ಇನ್ನು, ಲೋನ್ ಏಜೆಂಟ್ ಆಗಿಯೂ ಕೆಲಸ ಮಾಡಬಹುದು. ಅನೇಕ ಮಂದಿಗೆ ಈಗಲೂ ಬ್ಯಾಂಕುಗಳಲ್ಲಿ ಸಾಲ ಪಡೆಯುವ ಪ್ರಕ್ರಿಯೆ ಸರಿಯಾಗಿ ಗೊತ್ತಿರುವುದಿಲ್ಲ. ಖಾಸಗಿ ಫೈನಾನ್ಷಿಯರ್​ಗಳಿಂದ ಸಿಕ್ಕಾಪಟ್ಟೆ ಬಡ್ಡಿಗೆ ಸಾಲ ಪಡೆದು ಕಷ್ಟ ಅನುಭವಿಸುತ್ತಾರೆ. ಇಂಥ ವ್ಯಕ್ತಿಗಳನ್ನು ಗುರುತಿಸಿ, ಅವರಿಗೆ ಬ್ಯಾಂಕ್​ನಿಂದ ಸಾಲ ಸಿಗುವಂತೆ ಮಾಡಬಹುದು. ಅದಕ್ಕೂ ಕೂಡ ಉತ್ತಮ ಕಮಿಷನ್ ಸಿಗುತ್ತದೆ.

ಕ್ರೆಡಿಟ್ ಕಾರ್ಡ್ ಮಾರಿದರೆ ಕಮಿಷನ್

ಬ್ಯಾಂಕ್ ಪರವಾಗಿ ನೀವು ಕ್ರೆಡಿಟ್ ಕಾರ್ಡ್​ಗಳನ್ನೂ ಮಾರಬಹುದು. ಇದರಲ್ಲೂ ನಿಮಗೆ ಕಮಿಷನ್, ಇನ್ಸೆಂಟಿವ್ ಇತ್ಯಾದಿ ಸಿಗುತ್ತದೆ.

ಇದನ್ನೂ ಓದಿ: ಫುಯೆಲ್ ಕ್ರೆಡಿಟ್ ಕಾರ್ಡ್​ನಿಂದ ಏನು ಪ್ರಯೋಜನ? ಸೂಕ್ತ ಎನಿಸುವ ಕಾರ್ಡ್​ಗಳನ್ನು ಆಯ್ಕೆ ಮಾಡಿಕೊಳ್ಳುವುದು ಹೇಗೆ?

ಷೇರುಮಾರುಕಟ್ಟೆ, ಹೂಡಿಕೆ ಸ್ಕೀಮ್​ಗಳಿಂದ ಹಣ

ಮೇಲೆ ಹೇಳಿದ್ದು ನೀವು ಬ್ಯಾಂಕ್ ಪರವಾಗಿ ಏಜೆಂಟ್ ಆಗಿ ಕೆಲಸ ಮಾಡುತ್ತಾ ಗಳಿಸಬಹುದಾದ ಕಮಿಷನ್ ಹಣದ್ದಾಗಿತ್ತು. ಇದರ ಜೊತೆಗೆ ನೀವು ಷೇರುಪೇಟೆಯಲ್ಲಿ ಲಿಸ್ಟ್ ಆಗಿರುವ ಬ್ಯಾಂಕ್​ನ ಷೇರಿನ ಮೇಲೆ ಹಣ ಹೂಡಿಕೆ ಮಾಡಬಹುದು. ಈಗ ಬ್ಯಾಂಕ್ ಷೇರುಗಳು ಸಾಕಷ್ಟು ಮೌಲ್ಯವೃದ್ಧಿಸಿಕೊಳ್ಳುತ್ತಿದ್ದು, ದೀರ್ಘಾವಧಿಯಲ್ಲಿ ಇವು ಒಳ್ಳೆಯ ಲಾಭ ತರಬಹುದು.

ಇದರ ಜೊತೆ, ನಿಮ್ಮ ಉಳಿತಾಯ ಹಣವನ್ನು ಬ್ಯಾಂಕ್​ನಲ್ಲಿ ಆರ್​ಡಿ, ಎಫ್​ಡಿ ಇತ್ಯಾದಿಯಲ್ಲಿ ಹೂಡಿಕೆ ಮಾಡಬಹುದು. ಹೆಚ್ಚು ರಿಸ್ಕ್ ತೆಗೆದುಕೊಳ್ಳುವುದಾದರೆ ಮ್ಯುಚುವಲ್ ಫಂಡ್​ಗಳಲ್ಲೂ ಹೂಡಿಕೆ ಮಾಡಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:19 pm, Wed, 6 September 23

Follow Us
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!