ಮಣಿಪುರ ಪರಿಸ್ಥಿತಿ ಸೇರಿದಂತೆ 9 ವಿಷಯಗಳನ್ನು ಪ್ರಸ್ತಾಪಿಸಿ ಪ್ರಧಾನಿಗೆ ಪತ್ರ ಬರೆದ ಸೋನಿಯಾ ಗಾಂಧಿ

ಮಣಿಪುರದಲ್ಲಿ ಚಾಲ್ತಿಯಲ್ಲಿರುವ ಪರಿಸ್ಥಿತಿ, ದೇಶದ ಒಕ್ಕೂಟ ರಚನೆಯ ಮೇಲೆ ಆಪಾದಿತ ದಾಳಿ, ಹಲವು ರಾಜ್ಯಗಳಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹದ ಹಿನ್ನೆಲೆಯಲ್ಲಿ ನೈಸರ್ಗಿಕ ವಿಕೋಪಗಳು, ಭಾರತ-ಚೀನಾ ಗಡಿಯಲ್ಲಿನ ಪರಿಸ್ಥಿತಿ, ದೇಶದ ವಿವಿಧ ಭಾಗಗಳಲ್ಲಿ ಕೋಮು ಉದ್ವಿಗ್ನತೆಯ ಘಟನೆಗಳ ಬಗ್ಗೆ ಚರ್ಚೆ ನಡೆಸಬೇಕೆಂದು ಸೋನಿಯಾ ಗಾಂಧಿ ತಮ್ಮ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಮಣಿಪುರ ಪರಿಸ್ಥಿತಿ ಸೇರಿದಂತೆ 9 ವಿಷಯಗಳನ್ನು ಪ್ರಸ್ತಾಪಿಸಿ ಪ್ರಧಾನಿಗೆ ಪತ್ರ ಬರೆದ ಸೋನಿಯಾ ಗಾಂಧಿ
ಸೋನಿಯಾ ಗಾಂಧಿ
Follow us
ರಶ್ಮಿ ಕಲ್ಲಕಟ್ಟ
|

Updated on:Sep 06, 2023 | 7:36 PM

ದೆಹಲಿ ಸೆಪ್ಟೆಂಬರ್ 06: ಈ ತಿಂಗಳಾಂತ್ಯದಲ್ಲಿ ನಡೆಯಲಿರುವ ವಿಶೇಷ ಸಂಸತ್ ಅಧಿವೇಶನದಲ್ಲಿ ಬೆಲೆ ಏರಿಕೆ ಮತ್ತು ನಿರುದ್ಯೋಗ, ಸದ್ಯದ ಆರ್ಥಿಕ ಪರಿಸ್ಥಿತಿ, ಅದಾನಿ ಗುಂಪಿನ ಇತ್ತೀಚಿನ ಬಹಿರಂಗಪಡಿಸುವಿಕೆ ಮತ್ತು ಜೆಪಿಸಿ ತನಿಖೆ ಬೇಡಿಕೆ, ಜಾತಿ ಗಣತಿ  ಸೇರಿದಂತೆ ಒಂಬತ್ತು ವಿಷಯಗಳ ಕುರಿತು ಚರ್ಚಿಸಲು ಕಾಂಗ್ರೆಸ್ ಸಂಸದೀಯ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ (Sonia Gandhi) ಬುಧವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಪತ್ರ ಬರೆದಿದ್ದಾರೆ ಎಂದು ಪಕ್ಷದ ನಾಯಕ ಜೈರಾಮ್ ರಮೇಶ್ (Jairam Ramesh ) ಹೇಳಿದ್ದಾರೆ.

ಮಣಿಪುರದಲ್ಲಿ ಚಾಲ್ತಿಯಲ್ಲಿರುವ ಪರಿಸ್ಥಿತಿ, ದೇಶದ ಒಕ್ಕೂಟ ರಚನೆಯ ಮೇಲೆ ಆಪಾದಿತ ದಾಳಿ, ಹಲವು ರಾಜ್ಯಗಳಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹದ ಹಿನ್ನೆಲೆಯಲ್ಲಿ ನೈಸರ್ಗಿಕ ವಿಕೋಪಗಳು, ಭಾರತ-ಚೀನಾ ಗಡಿಯಲ್ಲಿನ ಪರಿಸ್ಥಿತಿ, ದೇಶದ ವಿವಿಧ ಭಾಗಗಳಲ್ಲಿ ಕೋಮು ಉದ್ವಿಗ್ನತೆಯ ಘಟನೆಗಳ ಬಗ್ಗೆ ಚರ್ಚೆ ನಡೆಸಬೇಕೆಂದು ಸೋನಿಯಾ ಗಾಂಧಿ ತಮ್ಮ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಸೆಪ್ಟೆಂಬರ್ 18 ರಿಂದ 22 ರವರೆಗೆ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ವಿರೋಧ ಪಕ್ಷಗಳು ತಾವು ಪ್ರಸ್ತಾಪಿಸಲು ಬಯಸುವ ವಿಷಯಗಳ ಬಗ್ಗೆ ಚರ್ಚೆ ನಡೆಸಿದ ನಂತರ ಸೋನಿಯಾ ಗಾಂಧಿ ಇಂದು ಬೆಳಿಗ್ಗೆ ಪತ್ರ ಬರೆದಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ. ಆಗಸ್ಟ್ 31 ರಂದು ಘೋಷಿಸಲಾದ ಅಧಿವೇಶನದ ಸರ್ಕಾರದ ಕಾರ್ಯಸೂಚಿಯಲ್ಲಿ ಪಾರದರ್ಶಕತೆಯ ಕೊರತೆಯನ್ನು ಕೂಡಾ ಸೋನಿಯಾ ಗಾಂಧಿ ಎತ್ತಿ ತೋರಿಸಿದ್ದಾರೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

“ಯಾವುದೇ ಸಮಾಲೋಚನೆಯಿಲ್ಲದೆ ಈ ಅಧಿವೇಶನವನ್ನು ಕರೆಯಲಾಗಿದೆ. ವಿಶೇಷ ಅಧಿವೇಶನ ಕರೆದಾಗಲೆಲ್ಲಾ ಸರ್ಕಾರವು ಅಧಿವೇಶನದ ಕಾರ್ಯಸೂಚಿಯಲ್ಲಿ ವಿಶಾಲವಾದ ಒಮ್ಮತವನ್ನು ಮಾಡಲು ಪ್ರಯತ್ನಿಸುತ್ತದೆ. ಆದರೆ ಅಜೆಂಡಾ ಹಂಚಿಕೊಳ್ಳದೇ ಇರುವುದು ಇದೇ ಮೊದಲು. ಸದನದ ಬುಲೆಟಿನ್‌ನಲ್ಲಿ ವಿಶೇಷ ಅಧಿವೇಶನದ ಎಲ್ಲಾ ಐದು ದಿನಗಳಲ್ಲಿ ಸರ್ಕಾರಿ ವ್ಯವಹಾರ ಇರುತ್ತದೆ ಎಂದು ಅವರು ಬರೆದಿದ್ದಾರೆ. ಕಳೆದ ಅಧಿವೇಶನದಲ್ಲಿ ಪ್ರಸ್ತಾಪಿಸಲು ಸಾಧ್ಯವಾಗದ ಕೆಲವು ವಿಷಯಗಳನ್ನು ಪ್ರಸ್ತಾಪಿಸಲು ನಾವು ಪ್ರಯತ್ನಿಸುತ್ತೇವೆ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ

ಯಾವುದೇ ನಿಯಮದ ಅಡಿಯಲ್ಲಿ ಈ ವಿಷಯಗಳ ಬಗ್ಗೆ ಚರ್ಚಿಸಲು ನಾವು ಸಿದ್ಧರಿದ್ದೇವೆ ಮತ್ತು ಚೀನಾ ವಿಷಯದ ಬಗ್ಗೆ ಸದನದಲ್ಲಿ ನಿರ್ಣಯವನ್ನು ಅಂಗೀಕರಿಸಬೇಕು ಎಂದು ಕಾಂಗ್ರೆಸ್ ಹೇಳಿದೆ. ಸೋನಿಯಾ ಜಿ ಅವರು ಈ ಅಧಿವೇಶನಕ್ಕಾಗಿ ಒಂಬತ್ತು ಪ್ರಮುಖ ವಿಷಯಗಳನ್ನು ಹೈಲೈಟ್ ಮಾಡಿದ್ದಾರೆ. ಮೊದಲ ಸಮಸ್ಯೆ ಬೆಲೆ ಏರಿಕೆ, ನಿರುದ್ಯೋಗ ಮತ್ತು MSME (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು) ವಲಯದ ಸಮಸ್ಯೆಗಳು ಸೇರಿದಂತೆ ಪ್ರಸ್ತುತ ಆರ್ಥಿಕ ಪರಿಸ್ಥಿತಿ. ಎರಡನೇ ವಿಚಾರ ರೈತರಿಗೆ ಸಂಬಂಧಿಸಿದ್ದು. ರೈತ ಸಂಘಟನೆಗಳ ಜತೆ ಸರ್ಕಾರ ಹಲವು ಸುತ್ತಿನ ಚರ್ಚೆ ನಡೆಸಿದ್ದು, ಸರ್ಕಾರ ಕೆಲವು ಭರವಸೆಗಳನ್ನು ನೀಡಿತ್ತು. ಆ ಭರವಸೆಗಳ ಪ್ರಸ್ತುತ ಸ್ಥಿತಿ ಏನು ಮತ್ತು ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ) ಖಾತರಿ ಕಾನೂನಿನ ಬಗ್ಗೆ ಸರ್ಕಾರದ ನಿಲುವು ಏನು ಎಂದು ರಮೇಶ್ ಕೇಳಿದ್ದಾರೆ.

ಇದನ್ನೂ ಓದಿ: ಇಂಡಿಯಾ- ಭಾರತ್ ಚರ್ಚೆ; ಸೋನಿಯಾ ಗಾಂಧಿಯವರ ಮನೆಯಲ್ಲಿ ಸಭೆ ಸೇರಿದ ಕಾಂಗ್ರೆಸ್

ಸೋನಿಯಾ ಗಾಂಧಿ ಅವರ ಪತ್ರವು ಜಾತಿ ಜನಗಣತಿಯ ಬಗ್ಗೆ ಚರ್ಚೆಗೆ ಒತ್ತಾಯಿಸಿದೆ ಮತ್ತು ಜನಗಣತಿಯ ಕೊರತೆಯಿಂದಾಗಿ 14 ಕೋಟಿ ಜನರು ಆಹಾರ ಭದ್ರತಾ ಕಾಯ್ದೆಯಿಂದ ಹೊರಗುಳಿದಿದ್ದಾರೆ ಎಂದು ಹೇಳಿದೆ.

ಕೇಂದ್ರ, ರಾಜ್ಯ ಸಂಬಂಧಗಳ ಬಗ್ಗೆ ವಿವರವಾದ ಚರ್ಚೆಗೆ ಕಾಂಗ್ರೆಸ್ ಒತ್ತಾಯಿಸಿದೆ ಎಂದ ಜೈರಾಮ್ ರಮೇಶ್, ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ರಾಜ್ಯಪಾಲರು ಅಡೆತಡೆಗಳನ್ನು ಸೃಷ್ಟಿಸುತ್ತಿದ್ದಾರೆ. ಸರ್ಕಾರದ ಧೋರಣೆಯ ಬಗ್ಗೆ ಹಲವು ವಿರೋಧ ಪಕ್ಷದ ಸಿಎಂಗಳು ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:58 pm, Wed, 6 September 23