AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ವೃದ್ಧನನ್ನು ಪ್ರಾಣಾಪಾಯದಿಂದ ಕಾಪಾಡಿದ 16ರ ಹುಡುಗ; ಸೋಶಿಯಲ್ ಮೀಡಿಯಾದಿಂದ ಕಲಿತ ತಂತ್ರ

Social Media: ಸಾಮಾಜಿಕ ಜಾಲತಾಣ ಎಂಬ ಸಮುದ್ರದಲ್ಲಿ ಎಲ್ಲ ಥರದ ಮಾಹಿತಿಯ ಸರಕೂ ತೇಲಿಬರುತ್ತಿರುತ್ತದೆ. ಆದರೆ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೇವೆ ಮತ್ತು ಏಕೆ? ಎನ್ನುವುದು ನಮ್ಮ ವಿವೇಚನೆಗೆ ಬಿಟ್ಟಿದ್ದು. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ 16 ವರ್ಷದ ಹುಡುಗನೊಬ್ಬ ಹೈಮ್ಲಿಚ್​ ತಂತ್ರವನ್ನು ಉಪಯೋಗಿಸಿ ವೃದ್ಧನೊಬ್ಬನನ್ನು ಪ್ರಾಣಾಪಾಯದಿಂದ ಕಾಪಾಡಿದ್ದಾನೆ.

Viral Video: ವೃದ್ಧನನ್ನು ಪ್ರಾಣಾಪಾಯದಿಂದ ಕಾಪಾಡಿದ 16ರ ಹುಡುಗ; ಸೋಶಿಯಲ್ ಮೀಡಿಯಾದಿಂದ ಕಲಿತ ತಂತ್ರ
ಹೋಟೆಲ್​ನಲ್ಲಿ ಉಸಿರುಗಟ್ಟುತ್ತಿದ್ದ ವೃದ್ಧನನ್ನು ಪ್ರಾಣಾಪಾಯದಿಂದ ಕಾಪಾಡುತ್ತಿರುವ ತರುಣ
ಶ್ರೀದೇವಿ ಕಳಸದ
|

Updated on:Sep 06, 2023 | 5:40 PM

Share

Breathing Problem : ಹೋಟೆಲ್​ವೊಂದಕ್ಕೆ ಊಟ ಮಾಡಲು ಬಂದಿದ್ದಾನೆ ವೃದ್ಧನೊಬ್ಬ. ಸ್ವಲ್ಪ ಹೊತ್ತಿನ ನಂತರ ವೃದ್ಧನಿಗೆ ಇದ್ದಕ್ಕಿದ್ದಂತೆ ಉಸಿರು ಸಿಕ್ಕಿಹಾಕಿಕೊಂಡಿದೆ. ಸಂಕಟದಿಂದ ಒದ್ದಾಡುತ್ತಿರುವಾಗ ಅಲ್ಲಿ ಕೆಲಸ ಮಾಡುತ್ತಿದ್ದ ಹದಿಹರೆಯದ ಹುಡುಗನೊಬ್ಬ ಸಮಯೋಚಿತವಾಗಿ ವರ್ತಿಸಿ ಅವನನ್ನು ಪ್ರಾಣಾಪಾಯದಿಂದ ಕಾಪಾಡಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ Heimlich Maneuver ಎಂಬ ತಂತ್ರವನ್ನು ವೃದ್ಧನ ಮೇಲೆ ಪ್ರಯೋಗಿಸಿದ ತರುಣ ಆತನ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾನೆ. 16 ವರ್ಷದ ಈ ಹುಡುಗ ಈ ಹೋಟೆಲ್​ನಲ್ಲಿ ಇಂಟರ್ನ್‌ಶಿಪ್ ಮಾಡುತ್ತಿರುವ ವಿದ್ಯಾರ್ಥಿಯಾಗಿದ್ದಾನೆ. ನೆಟ್ಟಿಗರು ಇವನ ಸಮಯಪ್ರಜ್ಞೆಯನ್ನು ಕೊಂಡಾಡುತ್ತಿದ್ದಾರೆ.

ಇದನ್ನೂ ಓದಿ : Viral Video: ‘ಮೇಕೆಗೂ ಟಿಕೆಟ್ ಖರೀದಿಸಿದ್ದೇನೆ’; ನಮ್ಮ ದೇಶಕ್ಕೆ ಇಂಥ ಪ್ರಾಮಾಣಿಕ ನಾಯಕಿ ಬೇಕು ಎನ್ನುತ್ತಿರುವ ನೆಟ್ಟಿಗರು

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ದೃಶ್ಯವು ಹೋಟೆಲ್​​ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಅನ್ನು ಗುಡ್​ನ್ಯೂಸ್​​ ಮೂವ್‌ಮೆಂಟ್ ಎಂಬ ಇನ್​ಸ್ಟಾಗ್ರಾಂ ಪುಟವು ಹಂಚಿಕೊಂಡಿದೆ. ಇದನ್ನು ಮೂರು ದಿನಗಳ ಹಿಂದೆ ಅಪ್​ಲೋಡ್ ಮಾಡಲಾಗಿದ್ದು ಈತನಕ ಸುಮಾರು 2 ಮಿಲಿಯನ್​ ಜನರು ನೋಡಿದ್ದಾರೆ. 93,000 ಜನರು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿದ್ದಾರೆ.

ವೃದ್ಧನ ಜೀವವನ್ನು ಕಾಪಾಡಲು ಬಳಸಿದ ತಂತ್ರ ಇಲ್ಲಿದೆ

ಆಹಾರ ಸೇವಿಸುವಾಗ ಅಥವಾ ಇನ್ನ್ಯಾವುದೋ ಕಾರಣದಿಂದ ವ್ಯಕ್ತಿಗೆ ಉಸಿರುಗಟ್ಟಿದಾಗ ಹೈಮ್ಲಿಚ್ ತಂತ್ರವನ್ನು ಪ್ರಯೋಗಿಸಬಹುದಾಗಿದೆ. ವ್ಯಕ್ತಿಯ ಹೊಟ್ಟೆಯ ಮೇಲೆ ಒತ್ತಡವನ್ನು ಹೇರುವುದರ ಮೂಲಕ ಉಸಿರಾಟದಲ್ಲಿ ಉಂಟಾದ ಅಡೆತಡೆಯನ್ನು ಸರಿಪಡಿಸಬಹುದಾಗಿದೆ. ಈ ವಿಡಿಯೋ ನೋಡಿದ ಅನೇಕರು ಈ ತರುಣನಿಗೆ ಹಾರೈಸಿದ್ದಾರೆ. ನನಗೀಗ 57 ವರ್ಷ, ಅನೇಕ ಸಲ ನಾನೂ ಉಸಿರಾಟದ ತೊಂದರೆ ಅನುಭವಿಸಿದ್ದೇನೆ. ಆಗ ಈ ತಂತ್ರದ ಪ್ರಯೋಗವೂ ನನ್ನ ಮೇಲೆ ನಡೆದಿದೆ. ಹಾಗಾಗಿಯೇ ನಾನಿನ್ನೂ ಬದುಕಿದ್ದೇನೆ ಎಂದಿದ್ದಾರೆ ಒಬ್ಬರು.

ಹೈಮ್ಲಿಚ್ ತಂತ್ರದ ಪ್ರಾತ್ಯಕ್ಷಿಕೆಯನ್ನು ಗಮನಿಸಿ

ಇದೆಲ್ಲವನ್ನೂ ಹೊರಗಿನಿಂದ ನೋಡುತ್ತ ನಿಂತಿರುವ ಆ ಮಹಿಳೆಯ ಬಗ್ಗೆ ಕೋಪ ಬರುತ್ತಿದೆ. ಆಕೆ ತನ್ನ ಕಿವಿಯಂದ ಇಯರ್​ಫೋನ್​ ತೆಗೆದು ಆ್ಯಂಬುಲೆನ್ಸ್​ಗೆ ಕರೆ ಮಾಡಬಾರದೆ? ಎಂದಿದ್ದಾರೆ ಒಬ್ಬರು. ದೇವರೇ ಧನ್ಯವಾದ! ಇತರರಂತೆ ಆತ ಸುಮ್ಮನೇ ನಿಂತು ನೋಡಲಿಲ್ಲ, ಸಮಯಪ್ರಜ್ಞೆಯಿಂದ ಮತ್ತು ತಿಳಿವಳಿಕೆಯಿಂದ ಆ ವೃದ್ಧನ ಪ್ರಾಣ ಕಾಪಾಡಿದ್ದಾನೆ, ಒಳ್ಳೆಯದಾಗಲಿ ಅವನಿಗೆ ಎಂದು ಅನೇಕರು ಹಾರೈಸಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 5:39 pm, Wed, 6 September 23

ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ