AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಆಕೆ ಪ್ರಕಾಶಮಾನವಾಗಿ ಕಂಗೊಳಿಸಬೇಕು; ವಧುವಿಗೆ ಎಲ್​ಇಡಿ ಲೆಹೆಂಗಾ ವಿನ್ಯಾಸ ಮಾಡಿದ ವರ

Marriage: ತನ್ನ ಹುಡುಗಿಯನ್ನು ಮೆಚ್ಚಿಸಲು ತಾನೇನೆಲ್ಲ ಮಾಡಬೇಕು ಎಂದು ಹುಡುಗ ಯೋಚಿಸುತ್ತಲೇ ಇರುತ್ತಾನೆ. ಆದರೆ ಈತನಕ ಇಂಥ ಆಲೋಚನೆ ನಿಮಗೆಂದಾದರೂ ಹೊಳೆದಿತ್ತೆ? ತನ್ನ ಹುಡುಗಿ ಪ್ರಕಾಶಮಾನವಾಗಿ ಹೊಳೆಯಬೇಕು ಎಂಬ ಆಶಯದಿಂದ ಸ್ವತಃ ತಾನೇ ಆಕೆಗೆ ಎಲ್​ಇಡಿ ಬಲ್ಬ್​ನಿಂದ ವಿನ್ಯಾಸಗೊಳಿಸಿದ್ದಾನೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

Viral Video: ಆಕೆ ಪ್ರಕಾಶಮಾನವಾಗಿ ಕಂಗೊಳಿಸಬೇಕು; ವಧುವಿಗೆ ಎಲ್​ಇಡಿ ಲೆಹೆಂಗಾ ವಿನ್ಯಾಸ ಮಾಡಿದ ವರ
ವಧುವಿಗಾಗಿ ಎಲ್​ಇಡಿ ಲೆಹೆಂಗಾ ವಿನ್ಯಾಸ ಮಾಡಿದ ವರ
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ|

Updated on: Sep 07, 2023 | 6:25 PM

Share

Wedding: ಮದುವೆಯೆಂದರೆ ವಧುವರರಿಗೆ (Bride and Groom) ನೂರಾರು ಕನಸುಗಳು. ಎಲ್ಲರಿಗಿಂತ ಭಿನ್ನವಾಗಿ ತಮ್ಮ ಮದುವೆ ನೆರವೇರಬೇಕು. ಬಂದವರ ಸ್ಮೃತಿಪಟಲದಲ್ಲಿ ಆ ಸಂಭ್ರಮ ಅಚ್ಚಳಿಯದೇ ಉಳಿಯಬೇಕು. ಎಲ್ಲಕ್ಕಿಂಥ ಮುಖ್ಯವಾಗಿ ತಾವು ವಿಶೇಷವಾಗಿ ಅಲಂಕರಿಸಿಕೊಳ್ಳಬೇಕು ಇತ್ಯಾದಿ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ, ವರನೊಬ್ಬ ವಧುವಿಗೆ ತಾನೇ ವಿಶೇಷವಾದ ಲೆಹೆಂಗಾ ವಿನ್ಯಾಸ ಮಾಡಿದ್ದಾನೆ. ಮದುವೆಯ ದಿನ ಆಕೆ ಪ್ರಕಾಶಮಾನವಾಗಿ ಹೊಳೆಯಬೇಕು ಎನ್ನುವ ಕಾರಣಕ್ಕಾಗಿ ಆಕೆಯ ಲೆಹೆಂಗಾತುಂಬಾ ಎಲ್​ಇಡಿ ಬಲ್ಬ್​ ಬೆಳಗುವಂತೆ ಮಾಡಿದ್ದಾನೆ.

ಇದನ್ನೂ ಓದಿ : Viral Video: ಲಂಡನ್; ಮಧ್ಯರಾತ್ರಿ ರಸ್ತೆಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದ 12 ಅಡಿಯ ದೈತ್ಯಹೆಬ್ಬಾವು 

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಒಂದುವಾರದ ಹಿಂದೆ ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್ ಮಾಡಿದ ಈ ವಿಡಿಯೋಗೆ ಸುಮಾರು 2,000ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. 2.5 ಲಕ್ಷ ಜನರು ನೋಡಿದ್ದಾರೆ. ನೂರಾರು ಜನರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ವಧು ರೆಹಬ್ ಡೇನಿಯಲ್​ ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದಾಳೆ.

ಎಲ್ಇಡಿ ಲೆಹಂಗಾ ಧರಿಸಿರುವ ವಧುವಿನ ವಿಡಿಯೋ

View this post on Instagram

A post shared by Rehab Danial (@rehabmaqsood)

‘ನನ್ನ ಗಂಡನೇ ಈ ಲೆಹೆಂಗಾ ವಿನ್ಯಾಸ ಮಾಡಿದ್ದಾರೆ. ಇದನ್ನು ಧರಿಸಿದಾಗ ಜನರು ಗೇಲಿ ಮಾಡಬಹುದು ಎಂದು ಕೆಲವರು ಹೇಳಿದರು. ಆದರೆ ನಾನಿದನ್ನು ಅತ್ಯಂತ ಹೆಮ್ಮೆಯಿಂದ ಧರಿಸಿದ್ದೇನೆ. ಏಕೆಂದರೆ ಈತನಕ ಯಾವ ಮದುವಣಗಿತ್ತಿಯೂ ಇಂಥ ಪ್ರಯತ್ನವನ್ನು ಮಾಡಿಲ್ಲ.’ ಎಂದಿದ್ದಾರೆ.

ಇದನ್ನೂ ಓದಿ : Viral Video: ಜಪಾನ್​; ಅಂಡರ್​​ಗ್ರೌಂಡ್​ ಸೈಕಲ್ ಪಾರ್ಕಿಂಗ್​​ ವಿಡಿಯೋ ವೈರಲ್

ಮೆಚ್ಚಿಸಲು ಅತಿಯಾಗಿ ಪ್ರಯತ್ನಿಸಬೇಡಿ ಎಂದು ನಿಮ್ಮ ಗಂಡನಿಗೆ ಹೇಳಿ ಎಂದಿದ್ದಾರೆ ಒಬ್ಬರು. ಸರಳತನವೇ ಜೀವನ, ಈ ಆಡಂಬರ ಎಂದೂ ಒಳ್ಳೆಯದಲ್ಲ, ಪರಸ್ಪರರ ಮನಸ್ಸನ್ನು ಅರ್ಥ ಮಾಡಿಕೊಂಡು ಹೋಗುವುದರ ಕಡೆ ಗಮನ ಕೊಡಿ ಎಂದಿದ್ದಾರೆ ಇನ್ನೊಬ್ಬರು. ಹಣ ಇದೆಯೆಂದು ವೈಭವವನ್ನು ಪ್ರದರ್ಶಿಸುವುದು ಸರಿಯಲ್ಲ, ಇದನ್ನೇ ಬಡಬಗ್ಗರಿಗೆ ದಾನ ಮಾಡಿದ್ದರೆ ಪುಣ್ಯ ಲಭಿಸುತ್ತಿತ್ತು ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ಲೋಕಲ್ ಟ್ರೇನ್​ನಲ್ಲಿ ಪಾನೀಪೂರಿ ಮಾರಾಟ; ಈ ಐಡಿಯಾ ಏನೋ ಚೆನ್ನಾಗಿದೆ ಆದರೆ…

ಏನೇ ಹೇಳಿ, ಇಂಥ ಐಡಿಯಾ ಬಹುಶಃ ನಿಮ್ಮ ಗಂಡನಿಗೆ ಮಾತ್ರ ಹೊಳೆಯಲು ಸಾಧ್ಯ! ನಿಮ್ಮಿಬ್ಬರಿಗೂ ಒಳ್ಳೆಯದಾಗಲಿ ಎಂದಿದ್ದಾರೆ ಒಬ್ಬರು. ಮನಸ್ಸು ಹೊಳೆದರೆ ಎಲ್ಲವೂ ಹೊಳೆಯುತ್ತದೆ ಎಂದು ಇನ್ನೊಬ್ಬರು ಹೇಳಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Follow Us
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ

ಶ್ರೀದೇವಿ ಕಳಸದ : ಮುಖ್ಯ ಉಪಸಂಪಾದಕಿ. ವಿಜಯ ಕರ್ನಾಟಕ, ಸುವರ್ಣ ನ್ಯೂಸ್, ಪ್ರಜಾವಾಣಿ ಮತ್ತು ವಿವಿಧ ಮಾಧ್ಯಮ ಸಂಸ್ಥೆಗಳು ಸೇರಿದಂತೆ ಒಟ್ಟು 16 ವರ್ಷಗಳ ಅನುಭವ. ಸಂಗೀತ, ಸಾಹಿತ್ಯ ಮತ್ತು ಲಲಿತ ಕಲೆಗಳಲ್ಲಿ ವಿಶೇಷ ಆಸಕ್ತಿ.

ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ