Viral Video: 9 ತಿಂಗಳ ನಂತರ ಮಗಳು ವಿದೇಶದಿಂದ ಮನೆಗೆ ಬಂದಾಗ ಅಪ್ಪನ ಸಂತಸ

Children: ಏನೇ ಮಾಡಿದರೂ ಮಕ್ಕಳಿಗೇ. ಅವರು ಏನು ಓದುತ್ತಾರೋ ಓದಿಸಬೇಕು, ಏನು ಕೇಳುತ್ತಾರೋ ಕೊಡಿಸಬೇಕು. ಒಟ್ಟಿನಲ್ಲಿ ಅವರು ಸಮಾಧಾನದಿಂದ ಇರಬೇಕು. ಮುಂದೆ? ಮಕ್ಕಳು ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ವಿದ್ಯಾಭ್ಯಾಸಕ್ಕಾಗಿ ವರ್ಷಗಟ್ಟಲೆ ವಿದೇಶಕ್ಕೆ ಹೋಗಿಬಿಡುತ್ತಾರೆ. ಅವರು ಒಂದು ದಿನ ವಾಪಾಸು ಬಂದು ಪೋಷಕರಿಗೆ ಅಚ್ಚರಿ ಕೊಟ್ಟ ಕ್ಷಣಗಳು ಹೇಗಿರುತ್ತವೆ? ನೋಡಿ.

Viral Video: 9 ತಿಂಗಳ ನಂತರ ಮಗಳು ವಿದೇಶದಿಂದ ಮನೆಗೆ ಬಂದಾಗ ಅಪ್ಪನ ಸಂತಸ
9 ತಿಂಗಳ ನಂತರ ಮಗಳನ್ನು ನೋಡಿದ ಅಪ್ಪ, ಅಮ್ಮ
Follow us
ಶ್ರೀದೇವಿ ಕಳಸದ
|

Updated on:Sep 09, 2023 | 10:59 AM

Father and Daughter: ಹುಟ್ಟಿದಾಗಿನಿಂದ ಜೊತೆಗಿರುವ ಮಕ್ಕಳು ಇದ್ದಕ್ಕಿದ್ದ ಹಾಗೆ ವರ್ಷಗಟ್ಟಲೆ ವಿದ್ಯಾಭ್ಯಾಸಕ್ಕೆಂದೋ, ಕೆಲಸಕ್ಕೆಂದೋ ಬೇರೆ ಊರು ದೇಶಗಳಿಗೆ (Foreign) ಹೋದರೆ ಪೋಷಕರಿಗೆ ಅರಗಿಸಿಕೊಳ್ಳಲು ತುಸು ಕಷ್ಟವೇ. ಮಕ್ಕಳು ಕನಸುಕಂಗಳಿಂದ ಜಗತ್ತನ್ನು ನೋಡಲು ಹಾತೊರೆಯುತ್ತಿರುತ್ತವೆ. ಆದರೆ ವಯಸ್ಸಾದ ಪೋಷಕರಿಗೆ ಹಾಗಾಗುವುದಿಲ್ಲ. ಆದರೂ ಎಲ್ಲ ಆತಂಕಗಳ ಮಧ್ಯೆಯೇ ಮಕ್ಕಳ ಏಳ್ಗೆಯ ಬಗ್ಗೆ ಯೋಚಿಸುತ್ತಿರುತ್ತಾರೆ, ಬೆಂಬಲಿಸುತ್ತಿರುತ್ತಾರೆ. ಏಕೆಂದರೆ ಮಕ್ಕಳೇ ಬದುಕಿನ ಭರವಸೆ ಎಂಬಂತೆ ಅವರು ಬದುಕಿರುತ್ತಾರೆ. ಇದೀಗ ವಿದೇಶದಲ್ಲಿ ಓದು ಮುಗಿಸಿ ಮೊದಲ ಬಾರಿಗೆ ಬಂದ ಮಗಳು ತನ್ನ ಅಪ್ಪ ಅಮ್ಮನನ್ನು ಭೇಟಿಯಾದ ಕ್ಷಣಗಳು ಈ ವಿಡಿಯೋದಲ್ಲಿವೆ.

ಇದನ್ನೂ ಓದಿ : Viral: ಅಣ್ಣನ ಮದುವೆ; ನಾಲ್ಕು ವರ್ಷಗಳ ಹಿಂದೆ ತನ್ನ ಹುಡುಗಿಯನ್ನು ನೋಡಿದಾಗ ತಂಗಿಗೆ ಕಳಿಸಿದ ಮೆಸೇಜ್ ಇಲ್ಲಿದೆ

ಮಗಳು ಮನೆಗೆ ಬರುತ್ತಿದ್ದಂತೆ ಅಪ್ಪನ ಅಚ್ಚರಿ, ಭಾವುಕತೆ, ಸಂಭ್ರಮದ ನೋಟ, ಅಪ್ಪುಗೆಯ ಕ್ಷಣಗಳು ವರ್ಣಿಸಲಸಾಧ್ಯ. ನೆಟ್ಟಿಗರು ಈ ವಿಡಿಯೋ ನೋಡಿ ಭಾವುಕರಾಗುತ್ತಿದ್ದಾರೆ. ತಮ್ಮ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಕುಟುಂಬಕ್ಕೆ ಒಳ್ಳೆಯದಾಗಲಿ ಎಂದು ಹಾರೈಸುತ್ತಿದ್ದಾರೆ. ಎರಡು ದಿನಗಳ ಹಿಂದೆ ರೆಡ್ಡಿಟ್​ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋವನ್ನು 37,000 ಜನರು ಲೈಕ್ ಮಾಡಿದ್ದಾರೆ. 1.3 ಜನರು ಪ್ರತಿಕ್ರಿಯಸಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

Woman surprises her parents after 9 months studying abroad byu/Soloflow786 inMadeMeSmile

ಅಚ್ಚರಿಗೆ ಒಳಗಾದ ತಂದೆ ಮತ್ತವನ ಪ್ರತಿಕ್ರಿಯೆ ನೋಡಿ ಮಾತೇ ಹೊರಡುತ್ತಿಲ್ಲ ಎಂದು ಒಬ್ಬರು. ತಾನು ಮಗಳನ್ನು ಅಪ್ಪಿ ಮುದ್ದಾಡಿದ ನಂತರ ತನ್ನ ಹೆಂಡತಿಯೆಡೇ ಮಗಳನ್ನು ಕಳಿಸುವ ಆ ಆಪ್ತತೆ, ರೀತಿಯನ್ನು ಪದಗಳಲ್ಲಿ ವಿವರಿಸಲಾಗದು ಎಂದು ಇನ್ನೊಬ್ಬರು. ಮಕ್ಕಳೇ ಪೋಷಕರ ದೊಡ್ಡ ಆಸ್ತಿ, ಇಂಥ ಅನುಭವಗಳು ಅನುಭವಿಸಿದವರಿಗೇ ಗೊತ್ತು ಎಂದಿದ್ದಾರೆ ಮತ್ತೊಬ್ಬರು. ಕಣ್ಣಲ್ಲಿ ಕಣ್ಣಿಟ್ಟು, ಜೀವವನ್ನು ತೇಯ್ದು ಮಕ್ಕಳನ್ನು ಪೋಷಿಸಿರುತ್ತಾರೆ, ವರ್ಷಗಟ್ಟಲೆ ದೂರ ಇರುವುದು ಸಣ್ಣ ಮಾತೇನಲ್ಲ ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : Viral Video: ‘ಗುರು’ ಸಿನೆಮಾದ ಈ ಹಾಡನ್ನು ಭಾರ್ಗವಿ ವೆಂಕಟರಾಮ್ ಕರ್ನಾಟಕ ಸಂಗೀತಪಾಕದಲ್ಲಿ ಅದ್ದಿ ತೆಗೆದಾಗ

ಹೆಂಡತಿ ಮತ್ತು ಮಗುವನ್ನು ಅಪ್ಪಿಕೊಂಡಿರುವ ಆ ಅಪ್ಪನನ್ನು ನೋಡಿ ನಿಜಕ್ಕೂ ಖುಷಿಯಾಗುತ್ತಿದೆ ಎಂದು ಒಬ್ಬರು ಹೇಳಿದ್ದಾರೆ. ನನ್ನ ಮಕ್ಕಳು ವಿದೇಶದಿಂದ ಬಂದಾಗ ನನಗೆ ಹೀಗೆಯೇ ಮಾಡುತ್ತಾರೆ ಎಂದು ಮತ್ತೊಬ್ಬರು ಹೇಳಿದ್ಧಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 10:57 am, Sat, 9 September 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ