Viral: ಅಣ್ಣನ ಮದುವೆ; ನಾಲ್ಕು ವರ್ಷಗಳ ಹಿಂದೆ ತನ್ನ ಹುಡುಗಿಯನ್ನು ನೋಡಿದಾಗ ತಂಗಿಗೆ ಕಳಿಸಿದ ಮೆಸೇಜ್ ಇಲ್ಲಿದೆ

Brother Sister Love: ಇದೀಗ ವೈರಲ್ ಆಗಿರುವ ಈ ಪೋಸ್ಟ್​ ಅಣ್ಣತಂಗಿಯದ ಬಾಂಧವ್ಯವನ್ನು ಸಾರುತ್ತದೆ. ಪರಸ್ಪರರು ಎಷ್ಟೊಂದು ಆಪ್ತವಾಗಿ ಮನಸ್ಸನ್ನು ಹಂಚಿಕೊಳ್ಳುತ್ತಾರೆ ಎನ್ನುವುದನ್ನು ತೋರಿಸುತ್ತದೆ ತಂಗಿ ಹಂಚಿಕೊಂಡ ಈ ಪೋಸ್ಟ್​. ಆಕೆಯ ಅಣ್ಣನ ಮದುವೆಗೆ ನೆಟ್ಟಿಗರು ಪ್ರೀತಿಯಿಂದ ಹಾರೈಸುತ್ತಿದ್ದಾರೆ. ಅಂಥ ವಿಶೇಷ ಈ ಪೋಸ್ಟ್​ನಲ್ಲಿ ಏನಿದೆ? ನೋಡಿ ನೀವೇ.

Viral: ಅಣ್ಣನ ಮದುವೆ; ನಾಲ್ಕು ವರ್ಷಗಳ ಹಿಂದೆ ತನ್ನ ಹುಡುಗಿಯನ್ನು ನೋಡಿದಾಗ ತಂಗಿಗೆ ಕಳಿಸಿದ ಮೆಸೇಜ್ ಇಲ್ಲಿದೆ
ನವದಂಪತಿ
Follow us
ಶ್ರೀದೇವಿ ಕಳಸದ
|

Updated on:Sep 08, 2023 | 5:56 PM

Brother Sister: ಅಣ್ಣ ತಂಗಿ, ಅಕ್ಕ ತಮ್ಮನ ನಡುವಿನ ಬಾಂಧವ್ಯ ಅನುಭವಕ್ಕೆ ನಿಲುಕುವಂಥದ್ದು. ಸಣ್ಣಪುಟ್ಟ ಜಗಳ, ಮುನಿಸು, ಪ್ರೀತಿಯೊಂದಿಗೆ ಸದಾ ಕಾಲ ಕಾಯುವಂಥ ಸಂಬಂಧವದು. ಪರಸ್ಪರರ ಗುಟ್ಟುಗಳನ್ನು ಹೊಟ್ಟೆಯಲ್ಲಿಟ್ಟುಕೊಳ್ಳುವ ಆಪ್ತ ಸಂಬಂಧವರು. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಅಣ್ಣ ತನ್ನ ಸ್ನೇಹಿತೆಯನ್ನು ಮದುವೆಯಾಗುತ್ತಿದ್ದಾನೆ. ನಾಲ್ಕು ವರ್ಷಗಳ ಹಿಂದೆ ಆಕೆಯನ್ನು ಭೇಟಿಯಾದ ರಾತ್ರಿ ತನ್ನ ತಂಗಿಗೆ ವಾಟ್ಸಪ್​ನಲ್ಲಿ ಕಳಿಸಿದ ಚಾಟ್​ನ ಸ್ಕ್ರೀನ್​ ಶಾಟ್​ ಅನ್ನು ತಂಗಿ ಅತ್ಯಂತ ಪ್ರೀತಿಯಿಂದ X ನಲ್ಲಿ ಹಂಚಿಕೊಂಡಿದ್ಧಾಳೆ. ಮೊದಲ ನೋಟದಲ್ಲಿಯೇ ನಮ್ಮಿಬ್ಬರಿಗೂ ಪ್ರೇಮವಾಯಿತು, ನಾವಿಬ್ಬರೂ ಮದುವೆಯನ್ನೂ (Marriage) ಆಗಲಿದ್ದೇವೆ ಎಂದು ಆತ ಅಂದು ತಂಗಿಗೆ ಕಳಿಸಿದ ಸಂದೇಶವನ್ನು ನೀವು ಇಲ್ಲಿ ನೋಡಬಹುದಾಗಿದೆ. ಜೊತೆಗೆ ಅಣ್ಣನ ಮದುವೆಯ ಫೋಟೋವನ್ನೂ.

ಇದನ್ನೂ ಓದಿ : Viral Video: ‘ಗುರು’ ಸಿನೆಮಾದ ಈ ಹಾಡನ್ನು ಭಾರ್ಗವಿ ವೆಂಕಟರಾಮ್ ಕರ್ನಾಟಕ ಸಂಗೀತಪಾಕದಲ್ಲಿ ಅದ್ದಿ ತೆಗೆದಾಗ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಸೆ. 6ರಂದು ಮಾಡಿದ ಈ ಪೋಸ್ಟ್​ ಅನ್ನು ಈತನಕ 4.5 ಮಿಲಿಯನ್​ ಜನರು ನೋಡಿದ್ಧಾರೆ. ಈತನಕ ಸುಮಾರು 89,000 ಜನರು ಲೈಕ್ ಮಾಡಿದ್ದಾರೆ. ಸುಮಾರು 5,000 ಜನರು ರೀಪೋಸ್ಟ್ ಮಾಡಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಸಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಅಣ್ಣ ಕಳಿಸಿದ ಸಂದೇಶ

ಇದು ತುಂಬಾ ಮುದ್ದಾದ ಪೋಸ್ಟ್​ ನನಗೂ ಇಂಥ ತಂಗಿ ಬೇಕಿತ್ತು ಎಂದು ಅನೇಕರು ಹೇಳಿದ್ಧಾರೆ. ನವದಂಪತಿ ಬಹಳ ಸುಂದರವಾಗಿದ್ದಾರೆ ಅವರಿಗೆ ಶುಭಾಶಯ ತಿಳಿಸಿ ಎಂದಿದ್ದಾರೆ ಕೆಲವರು. ಇದೇ ನಿಜವಾದ ಅಣ್ಣತಂಗಿಯ ಬಾಂಧವ್ಯ ಎಂದು ಒಬ್ಬರು ಹೇಳಿದ್ದಾರೆ. ನಾನು ಮತ್ತು ನನ್ನ ಅಕ್ಕ ಹೀಗೆಯೇ ಪರಸ್ಪರ ಮನಸ್ಸನ್ನು ಹಂಚಿಕೊಳ್ಳುತ್ತೇವೆ ಎಂದು ಇನ್ನೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ : Viral Video: ಹುಟ್ಟುಮಚ್ಚೆ; ಈ ‘ಸಂಜಯ’ನಿಂದಲೇ ಸಾಗರದ ‘ಮಂದಾರ’ ಅರಳಿದ ಕಥೆ ಇದು

ಇವರಿಬ್ಬರ ಸಂಬಂಧ ಹೀಗೆಯೇ ಮಧುರವಾಗಿರಲಿ, ಮಿಲಿಯನ್​ ಮಕ್ಕಳು ಹುಟ್ಟಲಿ! ಎಂದು ತಮಾಷೆ ಮಾಡಿದ್ದಾರೆ ಒಬ್ಬರು. ಆದರೆ ನಾಲ್ಕು ವರ್ಷಗಳ ಕಾಲ ಯಾಕೆ ಕಾಯ್ದರು ಎಂದು ಕೇಳಿದ್ದಾರೆ ಇನ್ನೊಬ್ಬರು. ನನ್ನ ಮದುವೆ ಯಾವಾಗ ಆಗುತ್ತದೆಯೋ? ಎಂದು ಕಾಲೆಳೆದುಕೊಂಡಿದ್ದಾರೆ ಮತ್ತೊಬ್ಬರು.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 5:56 pm, Fri, 8 September 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ