Viral Video: ಅಲಸ್ಕನ್ ಸಮುದ್ರದಾಳದಲ್ಲಿ ಪತ್ತೆಯಾದ ಬಂಗಾರದ ಮೊಟ್ಟೆ; ಗೊಂದಲಕ್ಕೆ ಬಿದ್ದ ಸಂಶೋಧಕರು

Golden Egg: ಅಲಸ್ಕನ್​ ಸಮುದ್ರದಾಳದಲ್ಲಿ ಪತ್ತೆಯಾದ ಈ ಬಂಗಾರದ ಮೊಟ್ಟೆಯ ಬಗ್ಗೆ ಸಾಕಷ್ಟು ಕುತೂಹಲ ವ್ಯಕ್ತಿವಾಗುತ್ತಿದೆ. ಈ ಮೊಟ್ಟೆ ಯಾವ ಜೀವಿಯದ್ದು ಎಂದು ಪತ್ತೆ ಹಚ್ಚುವ ಸವಾಲು ಸಂಶೋಧಕರ ಬೆನ್ನಿಗಿದೆ. ಪರಿಣತ ವಿಜ್ಞಾನಿಗಳೊಂದಿಗೆ ಸಂಶೋಧನೆ ನಡೆಸಿ ಈ ಬಗ್ಗೆ ಹೆಚ್ಚಿನ ಮಾಹಿತಿ ಕೊಡಲಾಗುವುದು ಎಂದು ಈ ಮೊಟ್ಟೆಯನ್ನು ಪತ್ತೆ ಹಚ್ಚಿದ ಸಂಶೋಧಕರು ಹೇಳಿದ್ದಾರೆ.

Viral Video: ಅಲಸ್ಕನ್ ಸಮುದ್ರದಾಳದಲ್ಲಿ ಪತ್ತೆಯಾದ ಬಂಗಾರದ ಮೊಟ್ಟೆ; ಗೊಂದಲಕ್ಕೆ ಬಿದ್ದ ಸಂಶೋಧಕರು
ಅಲಸ್ಕನ್​ ಸಮುದ್ರದಾಳದಲ್ಲಿ ಪತ್ತೆಯಾದ ಬಂಗಾರದ ಮೊಟ್ಟೆ
Follow us
ಶ್ರೀದೇವಿ ಕಳಸದ
|

Updated on: Sep 09, 2023 | 11:58 AM

Sea: ಅಲಸ್ಕನ್ (Alaskan) ಸಮುದ್ರದಾಳದಲ್ಲಿ ಈ ಬಂಗಾರದ ಮೊಟ್ಟೆ (Golden Egg) ಪತ್ತೆಯಾಗಿದೆ. ಗುಮ್ಮಟದ ಆಕಾರದಲ್ಲಿರುವ ಈ ಚಿನ್ನದ ಮೊಟ್ಟೆಯು 4 ಇಂಚು ವ್ಯಾಸವನ್ನುಹೊಂದಿದೆ. ಈ ನಿಗೂಢ ವಸ್ತು ಪತ್ತೆಯಾದ ಹಿನ್ನೆಲೆಯಲ್ಲಿ NOAA ಸಂಶೋಧಕರು ಗೊಂದಲಕ್ಕೆ ಈಡಾಗಿದ್ದಾರೆ. ಇವರು ಅಲಸ್ಕನ್ ಸಮುದ್ರ ಕೊಲ್ಲಿಯ ಬಳಿ ಡೈವಿಂಗ್ ಮಾಡುತ್ತಿರುವ ಹಳದಿ ವಸ್ತುವೊಂದು ಇವರ ಕಣ್ಣಿಗೆ ಬಿದ್ದಿತು. ಆರಂಭದಲ್ಲಿ ಇದನ್ನು ಹಳದಿ ಟೋಪಿ ಎಂದು ಕರೆದರು. ನಂತರ ಬಂಗಾರದ ಮೊಟ್ಟೆ ಎಂದು ಕರೆದರು. ಸಮುದ್ರದಾಳದಲ್ಲಿ ಸಿಕ್ಕ ಈ ನಿಗೂಢ ವಸ್ತುವಿನ ಬಗ್ಗೆ NOAA ತನ್ನ ಬ್ಲಾಗ್​ನಲ್ಲಿ ಫೋಟೋ ಮತ್ತು ವಿವರವನ್ನು ಹಂಚಿಕೊಂಡಿದೆ.

ಇದನ್ನೂ ಓದಿ : Viral Video: 9 ತಿಂಗಳ ನಂತರ ಮಗಳು ವಿದೇಶದಿಂದ ಮನೆಗೆ ಬಂದಾಗ ಅಪ್ಪನ ಸಂತಸ

ಸಮುದ್ರದಾಳದೊಳಗೆ ಪತ್ತೆಯಾದ ಈ ಚಿನ್ನದ ಮೊಟ್ಟೆಯು ಬಿಳಿ ಸ್ಪಂಜುಗಳ ನಡುವೆ ನಯವಾದ ಚಿನ್ನದ ಗುಮ್ಮಟದ ಆಕಾರದಲ್ಲಿ ಇತ್ತು. 10 ಸೆಂ. ಮೀ (4 ಇಂಚುಗಳು) ವ್ಯಾಸ ಹೊಂದಿರುವ ಇದು ಬಂಡೆಯೊಂದಕ್ಕೆ ಬಿಗಿಯಾಗಿ ಅಂಟಿಕೊಂಡಿತ್ತು. ಎಂದು ಬ್ಲಾಗ್​ನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಸಮುದ್ರದಾಳದಲ್ಲಿ ಅಂಟಿಕೊಂಡಿರುವ ಬಂಗಾರದ ಮೊಟ್ಟೆ

Viral Image of Golden Egg found in Alaskan Sea

ಬಂಗಾರದ ಮೊಟ್ಟೆ

ಸಂಶೋಧಕ ಸ್ಯಾಮ್ ಕ್ಯಾಂಡಿಯೋ, ‘ಸಾಗರ ನಿಜಕ್ಕೂ ಎಷ್ಟೊಂದು ಕೌತುಕಗಳನ್ನು ಹುದುಗಿಸಿಕೊಂಡಿದೆ. ಈ ಬಂಗಾರದ ಮೊಟ್ಟೆಯನ್ನು ನಾವು ಹಡಗಿನೊಳಗೆ ತಂದೆವು. ಈಗಲೂ ಇದು ಜೈವಿಕ ಮೊಟ್ಟೆ ಹೌದೋ ಅಲ್ಲವೋ ಎಂದು ಗುರುತಿಸಲು ಸಾಧ್ಯವಾಗಿಲ್ಲ. ಮತ್ತಷ್ಟು ಪರಿಣತ ವಿಜ್ಞಾನಿಗಳ ಸಮೂಹದೊಂದಿಗೆ ಮತ್ತು ಅವಶ್ಯಕ ಸಾಧನೋಪಕರಣಗಳ ಸಹಾಯದಿಂದ ಸಂಶೋಧನೆ ನಡೆಸಬೇಕಿದೆ’ ಎಂದಿದ್ದಾರೆ.

ಬಂಗಾರದ ಮೊಟ್ಟೆಯನ್ನು ಯಂತ್ರಗಳ ಸಹಾಯದಿಂದ ತೆಗೆಯುತ್ತಿರುವುದು

Viral Image of Golden Egg found in Alaskan Sea

ಬಂಗಾರದ ಮೊಟ್ಟೆಯನ್ನು ತೆಗೆಯುತ್ತಿರುವುದು

ಈ ಮೊಟ್ಟೆಯ ಚಿತ್ರವನ್ನು ನೋಡಿದ ನೆಟ್ಟಿಗರು, ಇದು ತುಂಬಾ ಆಸಕ್ತಿದಾಯಕವಾಗಿದೆ, ಇದು ಹೇಗೆ ತಯಾರಾಗಿದೆ? ಇದು ಜೈವಿಕವೇ, ಯಾವ ಪ್ರಾಣಿಯದು? ಎಂದು ಕೇಳಿದ್ದಾರೆ ಅನೇಕರು. ಸಂಶೋಧಕರಿಂದ ಮಾಹಿತಿಯನ್ನು ಪಡೆಯಲು ಉತ್ಸುಕರಾಗಿದ್ದಾರೆ ಕೆಲವರು.

ಇದನ್ನೂ ಓದಿ : Viral Video: ಹುಟ್ಟುಮಚ್ಚೆ; ಈ ‘ಸಂಜಯ’ನಿಂದಲೇ ಸಾಗರದ ‘ಮಂದಾರ’ ಅರಳಿದ ಕಥೆ ಇದು

ಈ ಮೊಟ್ಟೆ ತಯಾರಾಗಲು ಯಾವ ರೀತಿ ರಾಸಾಯನಿಕ ಪ್ರಕ್ರಿಯೆ ನಡೆದಿದೆ? ಎಂದು ಕೇಳಿದ್ದಾರೆ ಒಂದಿಷ್ಟು ಜನ. ಇದು ಯಾವ ಜೀವಿಯ ಮೊಟ್ಟೆ? ಎಂದಿದ್ದಾರೆ ಮತ್ತಷ್ಟು ಜನ. ಇದು ಯಾವುದಾದರೂ ಯಂತ್ರದ ಅವಶೇಷವೇ? ಎಂದಿದ್ದಾರೆ ಇನ್ನೂ ಕೆಲವರು.

ಈ ಫೋಟೋಗಳನ್ನು ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು