Viral Video: ಶ್​! ಇದೀಗ ನಿದ್ದೆಯ ಸಮಯ; ಹುಲಿಕುಟುಂಬದ ವಿಡಿಯೋ ವೈರಲ್

Wildlife: ತಮ್ಮಷ್ಟಕ್ಕೆ ತಾವು ಹದವಾದ ಬಿಸಿಲಿನೊಳಗೆ ಈ ಹುಲಿಯ ಕುಟುಂಬ ಮಲಗಿದೆ. ಮಕ್ಕಳನ್ನು ಆಡಿಸಿ ಮಲಗಿಸಿ ತಾನೂ ಮಲಗಿದ್ದಾಳೆ ಹುಲಿಯಮ್ಮ. ಮಕ್ಕಳೇನೋ ಹಾಯಾಗಿ ಮಲಗಿವೆ. ಆದರೆ ತಾನು? ಅಮ್ಮ ಎಷ್ಟೇ ಆದರೂ ಅಮ್ಮನೇ. ಅವಳಿಗೆಲ್ಲಿಯ ವಿಶ್ರಾಂತಿ? ಎಂದು ನೆಟ್ಟಿಗರು ಮರುಗಿದ್ದಾರೆ. ಆದರೂ ಇದು ತುಂಬಾ ಛಂದದ ವಿಡಿಯೋ ಎಂದು ಕೊಂಡಾಡಿದ್ದಾರೆ.

Viral Video: ಶ್​! ಇದೀಗ ನಿದ್ದೆಯ ಸಮಯ; ಹುಲಿಕುಟುಂಬದ ವಿಡಿಯೋ ವೈರಲ್
ಕಾಡಿನೊಳಗೆ ಮಲಗಿರುವ ಹುಲಿಕುಟುಂಬ
Follow us
ಶ್ರೀದೇವಿ ಕಳಸದ
|

Updated on: Sep 11, 2023 | 1:41 PM

Tigers: ನಿದ್ರೆ ಎನ್ನುವುದು ಸಕಲ ಜೀವಿಗಳಿಗೂ ಒಳ್ಳೆಯ ಔಷಧಿ ಮತ್ತು ಪರಿಹಾರ ಕೂಡ. ಇದೀಗ ವೈರಲ್ (Viral) ಆಗಿರುವ ಈ ವಿಡಿಯೋ ನೊಡಿ, ಹುಲಿಯ ಕುಟುಂಬವೊಂದು ಕಾಡಿನಲ್ಲಿ ಹಾಯಾಗಿ ನಿದ್ರೆ ಹೋಗಿದೆ. ಅದೆಷ್ಟು ದಣಿದಿದ್ದವೋ ಆಟವಾಡಿ ಬೇಟೆಯಾಡಿ ಅಂತೂ ಆರಾಮಾಗಿ ನಿದ್ರೆಯಲ್ಲಿ ಕಳೆದುಹೋಗಿವೆ. ಈ ವಿಡಿಯೋ ಅನ್ನು ಐಎಫ್​ಎಸ್​ ಅಧಿಕಾರಿ ರಮೇಶ ಪಾಂಡೆ Xನಲ್ಲಿ ಹಂಚಿಕೊಂಡಿದ್ದಾರೆ. ಒಟ್ಟಿಗೆ ಈ ಹುಲಿಗಳು ನಿಶ್ಚಿಂತೆಯಿಂದ ನಿದ್ರೆ ಹೋಗಿರುವ ದೃಶ್ಯ ನೋಡಿದ ನೆಟ್ಟಿಗರು ಇದೊಂದು ದೃಶ್ಯಕಾವ್ಯ. ಸೆರೆಹಿಡಿದವರಿಗೆ ಧನ್ಯವಾದ ಎಂದಿದ್ದಾರೆ. ಅಚ್ಚರಿಯಂದ ಬಗೆಬಗೆಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.

ಇದನ್ನೂ ಓದಿ : Viral Video: ಕಾವಾಲಾ ಕಾವು; 53 ವರ್ಷದ ಮಹಿಳೆ ‘ಜೈಲರ್’ಗೆ ಹೆಜ್ಜೆ ಹಾಕಿದಾಗ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಸೆ.9 ರಂದು ಹಂಚಿಕೊಂಡ ಈ ವಿಡಿಯೋ ಅನ್ನು ಇದೀಗ 15,000 ಕ್ಕೂ ಹೆಚ್ಚು ಜನರು ನೋಡಿದ್ದಾರೆ.  ಹುಲಿಯಮ್ಮನಿಗೆ ಮಕ್ಕಳನ್ನು ನೋಡಿಕೊಂಡು ಬಹಳ ಸುಸ್ತಾಗಿರಬೇಕು, ಮಕ್ಕಳೊಂದಿಗೆ ನಿದ್ರೆಗೆ ಹೋಗಿದ್ದಾಳೆ. ಆದರೂ ಸಂಪೂರ್ಣವಾಗಿ ಆಕೆ ನಿದ್ರೆಗೆ ಹೋಗಲಾರಳು, ಮಕ್ಕಳನ್ನು ಕಾಯಬೇಕಲ್ಲ ಎಂದಿದ್ದಾರೆ ಕೆಲವರು.

ಹುಲಿಕುಟುಂಬದ ನಿದ್ರಾಸಮಯ 

ಇವರೆಲ್ಲರನ್ನೂ ನೋಡಲು ಬಹಳ ಸಂತೋಷವೆನ್ನಿಸುತ್ತಿದೆ ಎಂದು ಒಬ್ಬರು. ಇದು ನಿಜಕ್ಕೂ ಬಹಳ ಸುಂದರವಾದ ದೃಶ್ಯ ಎಂದು ಇನ್ನೊಬ್ಬರು. ಅದ್ಭುತ, ಇಂತ ವಿಡಿಯೋ ನೋಡಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಎಂದು ಮತ್ತೊಬ್ಬರು. ಈ ವಿಡಿಯೋ ಹಂಚಿಕೊಂಡಿದ್ದಕ್ಕಾಗಿ ಧನ್ಯವಾದ ಎಂದು ಅನೇಕರು ಹೇಳಿದ್ದಾರೆ.

ಇದನ್ನೂ ಓದಿ : Viral Optical Illusion: ಉದುರಿದ ಎಲೆಗಳ ನಡುವೆ ಅಡಗಿರುವ 4 ಸೇಬುಗಳನ್ನು ಗುರುತಿಸುವಿರಾ?

ಸುಮಾರು 500 ಜನರು ಈ ವಿಡಿಯೋ ಲೈಕ್ ಮಾಡಿದ್ದಾರೆ. ಸುಮಾರು 70 ಜನರು ರೀಪೋಸ್ಟ್ ಮಾಡಿದ್ದಾರೆ. ಇದು ನನ್ನ ಭಾನುವಾರವನ್ನು ಸುಂದರಗೊಳಿಸಿತು. ಇದನ್ನು ಸೆರೆಹಿಡಿದವರಿಗೆ ಧನ್ಯವಾದ. ಇದೊಂದು ದೃಶ್ಯಕಾವ್ಯ ಎಂದಿದ್ದಾರೆ ಅನೇಕರು. ಅಮ್ಮ ನಿರುಮ್ಮಳವಾಗಿ ನಿದ್ರೆ ಮಾಡಲು ಆಗುವುದೇ ಇಲ್ಲವಲ್ಲ ಯಾವತ್ತೂ? ಎಂದಿದ್ದಾರೆ ಒಬ್ಬರು. ಆ ಪುಟಾಣಿ ಹುಲಿಮರಿಗಳನ್ನು ಎತ್ತಿಕೊಂಡು ಬರಬೇಕು ಎನ್ನಿಸುತ್ತಿದೆ ಎಂದಿದ್ದಾರೆ ಇನ್ನೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್