Viral Video: 41 ವರ್ಷಗಳ ನಂತರ ರಾಜಕುಮಾರ ಹಾಡು ವೈರಲ್; ಮೂಲಹಾಡಿಗಿಂತಲೂ ಮಧುರ ಎಂದ ನೆಟ್ಟಿಗರು

Kannada Film Song: ಎಸ್​ ಜಾನಕಿ ಮತ್ತು ರಾಜಕುಮಾರ ಅವರು 41 ವರ್ಷಗಳ ಹಿಂದೆ ಹಾಡಿದ ಈ ಹಾಡು ಇದೀಗ ವೈರಲ್ ಆಗಿದೆ. ದಿ ಸ್ಟೆಕ್ಯಾಟೋ ಕೆಫೆಯ ಕಲಾವಿದರಾದ ಸುನಿಧಿ ಗಣೇಶ, ಸುಪ್ರಭಾ ಬಿ ಆರ್, ಜೈಜೀವನ್​ ಈ ಹಾಡಿಗೆ ಜೀವತುಂಬಿರುವ ರೀತಿಗೆ ನೆಟ್ಟಿಗರು ಮನಸೋತಿದ್ದಾರೆ. ಮಿಲಿಯನ್​ಗಟ್ಟಲೆ ಜನರ ಮನಸ್ಸನ್ನು ಸೂರೆಗೊಂಡ ಈ ಹಾಡನ್ನು ನೀವೂ ಕೇಳಬೇಕೆ?

Viral Video: 41 ವರ್ಷಗಳ ನಂತರ ರಾಜಕುಮಾರ ಹಾಡು ವೈರಲ್; ಮೂಲಹಾಡಿಗಿಂತಲೂ ಮಧುರ ಎಂದ ನೆಟ್ಟಿಗರು
ಕಲಾವಿದರಾದ ಸುನಿಧಿ ಗಣೇಶ, ಸುಪ್ರಭಾ ಬಿಆರ್ ಮತ್ತು ಜೈಜೀವನ್
Follow us
ಶ್ರೀದೇವಿ ಕಳಸದ
|

Updated on:Sep 09, 2023 | 4:19 PM

Kannada Cinema: ರಾಜಕುಮಾರ ಮಂಜುಳಾ ಅಭಿನಯದ ‘ನೀ ನನ್ನ ಗೆಲ್ಲಲಾರೆ’ 1981ರಲ್ಲಿ ಬಿಡುಗಡೆಯಾಯಿತು. ಈ ಸಿನೆಮಾದ ಪ್ರಸಿದ್ಧ ಗೀತೆಯನ್ನು ರಾಜಕುಮಾರ ಮತ್ತು ಎಸ್​ ಜಾನಕಿ ಇಳಯರಾಜಾ (Ilaiyaraaja) ಅವರ ಸಂಗೀತ ನಿರ್ದೇಶನದಲ್ಲಿ ಹಾಡಿದ್ದರು. ಅಂದರೆ ಸುಮಾರು 41 ವರ್ಷಗಳ ಹಿಂದೆ ಹಾಡಿದ ಈ ಹಾಡನ್ನು ಇದೀಗ ಗಾಯಕಿ ಸುನಿಧಿ ಗಣೇಶ ಮತ್ತು  ಸುಪ್ರಭಾ ಬಿ ಆರ್ ಹಾಡಿದ್ದಾರೆ. ಇವರು ಹಾಡಿರುವ ರೀತಿಗೆ ನೆಟ್ಟಿಗರು, ಇದು ಮೂಲಹಾಡಿಗಿಂತಲೂ ಚೆನ್ನಾಗಿ ಮೂಡಿಬಂದಿದೆ ಎಂದು  ಪುಳಕಿತಗೊಂಡಿದ್ದಾರೆ. ದಿ ಸ್ಟೆಕ್ಯಾಟೋ ಕೆಫೆ (The Staccato Cafe) ಎಂಬ ಬ್ಯಾಂಡ್​ನ ಇನ್​ಸ್ಟಾಗ್ರಾಂ ಪುಟದಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ.

ಇದನ್ನೂ ಓದಿ : Viral Video: ದೈತ್ಯಹುಲಿಗೆ ಚುಂಬಿಸುತ್ತಿರುವ ವ್ಯಕ್ತಿ; ಈತ ಅದೃಷ್ಟವಂತ ಎನ್ನುತ್ತಿರುವ ಕೆಲಮಂದಿ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಜುಲೈ 18ಂದು ಹಂಚಿಕೊಂಡ ಈ ವಿಡಿಯೋ ಅನ್ನು ಈತನಕ 2.9 ಲಕ್ಷಕ್ಕಿಂತ ಹೆಚ್ಚು ಜನರು ನೋಡಿದ್ದಾರೆ ಸಾವಿರಾರು ಜನರು ಪ್ರತಿಕ್ರಿಯಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ಧಾರೆ. ನಿಮ್ಮಿಬ್ಬರ ಧ್ವನಿ ಅತ್ಯದ್ಭುತವಾಗಿದೆ, ಈ ಮೂಲಕ ಈ ಹಾಡಿಗೆ ಮತ್ತಷ್ಟು ಹೊಳಪನ್ನು ತಂದಿದ್ದೀರಿ ಎಂದಿದ್ದಾರೆ ಅನೇಕರು. ಹಾಗಿದ್ದರೆ ಆ ಹಾಡು ಯಾವುದು? ಎಷ್ಟು ಬೇಕಾದಷ್ಟು ಸಲವಾದರೂ ಕೇಳಬಹುದು ಸುನಿಧಿ ಮತ್ತು ಸುಪ್ರಭಾ ಕಂಠದಲ್ಲಿ.

ಜೀವ ಹೂವಾಗಿದೆ ಭಾವ ಜೇನಾಗಿದೆ

ಸಂಜೆ ತಂಗಾಳಿ, ತಂಪಾಗಿ ಬೀಸಿ, ಹೂವ ಕಂಪನ್ನು ಹಾದಿಗೆ ಹಾಸಿ/ತಂದಿದೆ ಹಿತವ ನಮಗಾಗಿ/ತಂದಿದೆ ಹಿತವ ನಮಗಾಗಿ/ಜೋಡಿ ಬಾನಾಡಿ, ಮೇಲೆ ಹಾರಾಡಿ ತೇಲಾಡಿ, ಹೋಲಾಡಿ ನಲಿವಂತೆ/ನಾವು ಆಡೋಣ ಇನ್ನೇಕೆ ಬಾ ಚಿಂತೆ/ಜೀವ ಹೂವಾಗಿದೇ… ಮತ್ತೆ ಮತ್ತೆ ಕೇಳುವಂತಿದೆಯಲ್ಲವೆ? ಈ ಹಾಡು ಶುರುವಾಗುತ್ತಿದ್ದಂತೆ ನನ್ನ ಮೈ ನವಿರೆದ್ದಿತು, ನಿಜಕ್ಕೂ ನಿಮ್ಮ ಟೀಮ್​ ತುಂಬಾ ಚೆನ್ನಾಗಿದೆ ಎಂದಿದ್ದಾರೆ ಕೆಲವರು.

ಇದನ್ನೂ ಓದಿ : Viral Video: ‘ಹುಟ್ಟಿದ್ದು ಒಂಟಿಗಾಲಲ್ಲಿ ಆದರೆ ಬದುಕಿನುದ್ದಕ್ಕೂ ನರ್ತಿಸುತ್ತೇನೆ’; ಫಾತೀಮಾ

ಇದು ನನ್ನ ಅಪ್ಪನ ಅಚ್ಚುಮೆಚ್ಚಿನ ಹಾಡು. ನಾನು ಚಿಕ್ಕವನಿದ್ದಾಗ ಅವರು ಗುನುಗುತ್ತಿದ್ದರು. ಆರು ವರ್ಷದ ಹಿಂದೆ ಅವರು ತೀರಿದರು. ಈ ಹಾಡು ಕೇಳಿ ಅನೇಕ ನೆನಪುಗಳು ಉಕ್ಕಿದವು ಜೊತೆಗೆ ಕಣ್ಣೀರು, ಧನ್ಯವಾದ ನಿಮಗೆ ಎಂದಿದ್ದಾರೆ ಒಬ್ಬರು. ಮತ್ತಷ್ಟು ಹಳೆಯ ಹಾಡುಗಳನ್ನು ನೀವು ಹಾಡುತ್ತಲೇ ಇರಬೇಕು ನಾವು ಕೇಳುತ್ತಲೇ ಇರಬೇಕು ಎಂದು ಅನೇಕರು ಈ ವಿಡಿಯೋದಡಿ ಪ್ರತಿಕ್ರಿಯಿಸಿದ್ಧಾರೆ.

ಹಾಗೆಯೇ ವೈರಲ್ ಆಗಿರುವ ಇನ್ನೊಂದು ರೀಲ್​ನಲ್ಲಿ ಜಸ್ಟ್​ ಮಾತ್ ಮಾತಲ್ಲಿ ಸಿನೆಮಾದ ಗೀತೆಯನ್ನು ನಯನಾ ನಾಗರಾಜ್​ ಹಾಡಿದ್ದಾರೆ. ಈ ಹಾಡನ್ನು ಈತನಕ 1.7 ಲಕ್ಷ ಜನರು ಲೈಕ್ ಮಾಡಿದ್ದಾರೆ. ನೀವೂ ಈ ಹಾಡನ್ನು ಕೇಳಬೇಕೆ?

ಶ್ರೇಯಾ ಘೋಷಾಲ್ ಹಾಡಿದ ಎಲ್ಲೋ ಜಿನುಗಿರುವ ಹಾಡು ನಯನಾ ಕಂಠದಲ್ಲಿ

ಈ ಇಡೀ ತಂಡಕ್ಕೆ ಉಜ್ವಲ ಭವಿಷ್ಯ ಕಾದಿದೆ ಎಂದು ಹಾರೈಸಿದ್ದಾರೆ ಸಾಕಷ್ಟು ಜನರು. ಎಂಥ ಅರ್ಥಪೂರ್ಣ ಮತ್ತು ಮಧುರವಾದ ಸಂಗೀತ ಸಾಹಿತ್ಯ ಅಲ್ಲವೆ? ಕಲೆ ಎಂದಿಗೂ ಶಾಶ್ವತ, ಈ ಮೂಲಕ ಕಲಾವಿದರೂ.

ಮತ್ತಷ್ಟು ವೈರಲ್ ನ್ಯೂಸ್​​​ಗಾಗಿ ಕ್ಲಿಕ್ ಮಾಡಿ

Published On - 4:13 pm, Sat, 9 September 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ