Viral Video: ಜವಾನ್; ಐಫೆಲ್ ಟವರ್​ ಮುಂದೆ ‘ಚಲೇಯಾ’ಗೆ ಭರ್ಜರಿಯಾಗಿ ಡ್ಯಾನ್ಸ್​ ಮಾಡಿದ ಜೋಡಿ

Shahrukh Khan: ಶಾಹರುಖ್ ಖಾನ್ ಅಭಿನಯದ ಜವಾನ್ ಸಿನೆಮಾದ ಚಲೇಯಾ ಹಾಡಿಗೆ ಈ ಜೋಡಿ ಹೆಜ್ಜೆ ಹಾಕಿದೆ. ನಿಮ್ಮ ಹಿಂದಿರುವ ಐಫೆಲ್ ಟವರನ್ನೇ ಮರೆತಿದ್ದೆವು, ಅಷ್ಟು ಆಕರ್ಷಕವಾಗಿ ನರ್ತಿಸಿದ್ದೀರಿ ಎಂದು ಹೇಳಿದ್ಧಾರೆ ಕೆಲ ನೆಟ್ಟಿಗರು. ಇನ್ನೂ ಕೆಲವರು ಈಕೆ ಪ್ರಿಯಾಮಣಿ ಇದ್ದ ಹಾಗಿಲ್ಲವೆ ಎಂದು. ಉಳಿದವರು, ರಷ್ಮಿಕಾ ಮಂದಣ್ಣನ ಹಾಗೆ? ಎಂದು. ನೀವೇನು ಹೆಳುತ್ತೀರಿ?

Viral Video: ಜವಾನ್; ಐಫೆಲ್ ಟವರ್​ ಮುಂದೆ 'ಚಲೇಯಾ'ಗೆ ಭರ್ಜರಿಯಾಗಿ ಡ್ಯಾನ್ಸ್​ ಮಾಡಿದ ಜೋಡಿ
ಪ್ಯಾರೀಸಿನ ಐಫೆಲ್ ಟವರಿನೆದರುರು ಚಲೇಯಾ ಹಾಡಿಗೆ ಹೆಜ್ಜೆ ಹಾಕುತ್ತಿರುವ ಜೋಡಿ
Follow us
ಶ್ರೀದೇವಿ ಕಳಸದ
|

Updated on:Sep 11, 2023 | 6:24 PM

Jawan: ಶಾರುಖ್​ ಖಾನ್ ಹೊಸ ಸಿನೆಮಾ ಜವಾನ್​ನ ಚಲೇಯಾ ಹಾಡು ಇದೀಗ ಟ್ರೆಂಡಿಂಗ್​ನಲ್ಲಿದೆ (Trending). ಜೋಡಿಯೊಂದು ಐಫೆಲ್ ಟವರಿನ ಮುಂದೆ ಈ ಹಾಡಿಗೆ ಅದ್ಭುತವಾಗಿ ನರ್ತಿಸಿದ್ದು, ನೆಟ್ಟಿಗರು ಇವರಿಬ್ಬರನ್ನೂ ಶ್ಲಾಘಿಸುತ್ತಿದ್ದಾರೆ. ಇನ್​ಸ್ಟಾಗ್ರಾಂನ ಅನೂಷಾ ಮತ್ತು ಸೌರಭ್ ಜೋಡಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಪ್ಯಾರೀಸ್​ನಲ್ಲಿ ನಾವು ಕೆಲದಿನಗಳನ್ನು ಕಳೆದೆವು. ಆಗ ಕೆಲ ಪ್ರವಾಸಿ ತಾಣಗಳನ್ನು ನೋಡಿದೆವು. ಪ್ರಕೃತಿಪ್ರಿಯರಾದ ನಾವು ಪ್ಯಾರೀಸ್​ನಲ್ಲಿ ಹೀಗೆ ಸಂತೋಷದಿಂದ ಸುತ್ತಾಡುತ್ತೇವೆ ಎಂದು ಅಂದುಕೊಂಡಿರಲಿಲ್ಲ. ನಿಜಕ್ಕೂ ಈ ನಗರಕ್ಕೆ ಮೋಡಿ ಮಾಡುವ ಗುಣವಿದೆ. ಹಾಗೆಯೇ ಐಫೆಲ್ ಗೋಪುರದ ಮುಂದೆ ನಮಗಿಷ್ಟವಾದ ಈ ಹಾಡಿಗೆ ಹೆಜ್ಜೆಯನ್ನೂ ಹಾಕಿದೆವು ಎಂದು ಈ ವಿಡಿಯೋಗೆ ಒಕ್ಕಣೆ ಬರೆಯಲಾಗಿದೆ.

ಇದನ್ನೂ ಓದಿ : Viral Video: ದೆಹಲಿ ಮೆಟ್ರೋದಲ್ಲಿ ಸೀಟಿಗಾಗಿ ಪುರುಷ ಮತ್ತು ಮಹಿಳೆಯರ ನಡುವೆ ಜಗಳ 

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಸೆ. 9ರಂದು ಮಾಡಿದ ಈ ಪೋಸ್ಟ್​ ಅನ್ನು ಈತನಕ ಸುಮಾರು 6 ಮಿಲಿಯನ್​ ಜನರು ನೋಡಿದ್ದಾರೆ. 8.9 ಲಕ್ಷಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಲಕ್ಷಾಂತರ ಮಂದಿ ಪ್ರತಿಕ್ರಿಯೆ ನೀಡುತ್ತಲೇ ಇದ್ಧಾರೆ. ನೀವಿಬ್ಬರೂ ಪ್ರತಿಭಾವಂತರು. ನಿಮ್ಮ ನೃತ್ಯ ನಮ್ಮ ಮನಸ್ಸನ್ನು ಉಲ್ಲಾಸಗೊಳಿಸಿತು ಎಂದಿದ್ದಾರೆ ಅನೇಕರು.

ಐಫೆಲ್ ಟವರಿನ ಮುಂದೆ ಜವಾನ ಸಿನೆಮಾದ ನೃತ್ಯ

ಈತ ಅರ್ಜುನ್​ ದಾಸ್​ನಂತೆ ಯಾಕೆ ಕಾಣುತ್ತಿದ್ದಾನೆ ಎಂದು ಕೇಳಿದ್ಧಾರೆ ಒಬ್ಬರು. ಈಕೆ ಪ್ರಿಯಾಮಣಿಯಂತೆ ಕಾಣುತ್ತಿದ್ದಾಳೆ ಎಂದು ಇನ್ನೊಬ್ಬರು. ಇಲ್ಲಾ ಆಕೆ ರಷ್ಮಿಕಾ ಮಂದಣ್ಣನಂತೆ ಕಾಣುತ್ತಿದ್ದಾಳೆ. ತಮಿಳ್​ ವರ್ಷನ್​ನಲ್ಲಿ ಇದನ್ನು ರೀಪೋಸ್ಟ್​ ಮಾಡಿ ಎಂದು ಮತ್ತೊಬ್ಬರು ಹೇಳಿದ್ಧಾರೆ. ನಿಮ್ಮ ಹಿಂದೆ ಐಫೆಲ್ ಟವರ್​ ಇದೆ ಎನ್ನುವುದನ್ನೇ ಮರೆತಿದ್ದೆ, ಅಷ್ಟು ಚೆನ್ನಾಗಿ ನರ್ತಿಸಿದ್ದೀರಿ ಎಂದು ಮಗದೊಬ್ಬರು ಹೇಳಿದ್ಧಾರೆ.

ಇದನ್ನೂ ಓದಿ : Viral Video: ಶ್​! ಇದೀಗ ನಿದ್ದೆಯ ಸಮಯ; ಹುಲಿಕುಟುಂಬದ ವಿಡಿಯೋ ವೈರಲ್

ಅನವಶ್ಯಕವಾಗಿ ಐಫೆಲ್ ಟವರ್ ಅನ್ನು ಹೈಪ್ ಮಾಡಲಾಗುತ್ತಿದೆ ಎಂದಿದ್ದಾರೆ ಕೆಲವರು. ಸ್ಟ್ಯಾಂಡಪ್ ಕಾಮೆಡಿಯನ್​ ನಿರೂಪ್ ಮೋಹನ ಅವರನ್ನು ಟ್ಯಾಗ್ ಮಾಡಿದ ಸ್ಟ್ಯಾಂಡಪ್​ ಕಾಮೆಡಿಯನ್ ಸೋನು ವೇಣುಗೋಪಾಲ, ಏನು ನೀವು ಇಲ್ಲಿ? ಎಂದು ಕಾಲೆಳೆದಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 6:23 pm, Mon, 11 September 23

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ