Viral: ‘ಜಗತ್ತಿನ ನನ್ನ ನೆಚ್ಚಿನ ವ್ಯಕ್ತಿಗೆ ಹುಟ್ಟುಹಬ್ಬದ ಶುಭಾಶಯ’ ಮಲಾಲಾ ಯುಸೂಫ್​

Birthday Wishes : 'ನೀನು ಕೆಂಟ್​ಗಿಂತ ನನಗೆ ಹೆಚ್ಚು ಪ್ರಿಯ. ಪ್ರೋತ್ಸಾಹಿಸುವ, ಕಾಳಜಿ ವಹಿಸುವ ಮತ್ತು ಕರುಣೆಯಿಂದ ನೋಡುವ ಇಂಥ ಸಂಗಾತಿಯನ್ನು ಪಡೆಯಲು ಅದೃಷ್ಟವಂತರಾಗಿರಬೇಕು. ನಾವು ಒಟ್ಟಿಗೆ ಪ್ರತೀ ದಿನವೂ ಒಂದು ಸಾಹಸವನ್ನು ಮಾಡುತ್ತಲೇ ಇರುತ್ತೇವೆ. ಭವಿಷ್ಯದಲ್ಲಿ ಇನ್ನೇನೆಲ್ಲ ಅನ್ವೇಷಿಸಲಿದ್ದೇವೆ ಎಂಬುದರ ಬಗ್ಗೆ ನಾನು ಉತ್ಸುಕಳಾಗಿದ್ದೇನೆ.'

Viral: 'ಜಗತ್ತಿನ ನನ್ನ ನೆಚ್ಚಿನ ವ್ಯಕ್ತಿಗೆ ಹುಟ್ಟುಹಬ್ಬದ ಶುಭಾಶಯ' ಮಲಾಲಾ ಯುಸೂಫ್​
ಮಲಾಲಾ ಯುಸೂಫ್ ಮತ್ತು ಅಸ್ಸರಿ ಮಲೀಕ್ ದಂಪತಿ
Follow us
|

Updated on: Sep 16, 2023 | 12:51 PM

Malala Yousafzai: ನೊಬೆಲ್ ಪ್ರಶಸ್ತಿ ವಿಜೇತೆ ಮಲಾಲಾ ಇನ್​ಸ್ಟಾಗ್ರಾಂನ ಖಾತೆಯಲ್ಲಿ ತಮ್ಮ ವೈಯಕ್ತಿಕ ಫೋಟೋಗಳನ್ನೂ ಪೋಸ್ಟ್ ಮಾಡುತ್ತಿರುತ್ತಾರೆ. ಕಳೆದ ಬಾರಿ ಗಂಡ ಅಸ್ಸರ್ ಮಲಿಕ್​ರೊಂದಿಗೆ ಬಾರ್ಬಿ ಸಿನೆಮಾ ನೋಡಲು ಹೋದ ಫೋಟೋ ಪೋಸ್ಟ್ ಮಾಡಿದ್ದರು. ಇದೀಗ ಅಸ್ಸರ್​ ಹುಟ್ಟುಹಬ್ಬಕ್ಕೆ ವಿಶೇಷ ಪೋಸ್ಟ್ ಮಾಡಿದ್ದಾರೆ; ‘ಜಗತ್ತಿನ ನನ್ನ ನೆಚ್ಚಿನ ವ್ಯಕ್ತಿ ಅಸ್ಸರ್ (Asser Malik)​ ಮಲಿಕ್​​​ಗೆ ಪ್ರೀತಿಯ ಹುಟ್ಟುಹಬ್ಬದ ಶುಭಾಶಯಗಳು. ನೀನು ಕೆಂಟ್​ಗಿಂತ ನನಗೆ ಹೆಚ್ಚು ಪ್ರಿಯ. ನಿಜಕ್ಕೂ ಒಳ್ಳೆಯ ಸಂಗಾತಿ. ಪ್ರೋತ್ಸಾಹಿಸುವ, ಕಾಳಜಿ ವಹಿಸುವ ಮತ್ತು ಕರುಣೆಯಿಂದ ನೋಡುವ ಇಂಥ ಸಂಗಾತಿಯನ್ನು ಪಡೆಯಲು ಅದೃಷ್ಟವಂತರಾಗಿರಬೇಕು. ನಾವು ಒಟ್ಟಿಗೆ ಪ್ರತೀ ದಿನವೂ ಒಂದು ಸಾಹಸವನ್ನು ಮಾಡುತ್ತಲೇ ಇರುತ್ತೇವೆ. ಭವಿಷ್ಯದಲ್ಲಿ ಇನ್ನೇನೆಲ್ಲ ಅನ್ವೇಷಿಸಲಿದ್ದೇವೆ ಎಂಬುದರ ಬಗ್ಗೆ ನಾನು ಉತ್ಸುಕಳಾಗಿದ್ದೇನೆ. ನಿಮ್ಮ ಜನ್ಮದಿನದಂದು ಗಾಲ್ಫ್​ನಲ್ಲಿ ಗೆಲ್ಲಲು ಅವಕಾಶ ಕೊಡುತ್ತೇನೆ’

ಇದನ್ನೂ ಓದಿ : Viral Optical Illusion: ನೀವು ನಿಜಕ್ಕೂ ಬೆಕ್ಕುಪ್ರೇಮಿಯಾ? ಹಾಗಿದ್ದರೆ 5 ಸೆಕೆಂಡಿನಲ್ಲಿ ಬೆಕ್ಕಿನಮರಿ ಹುಡುಕಬಹುದೆ?

ಇದನ್ನೂ ಓದಿ

17 ಗಂಟೆಗಳ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್​ ಅನ್ನು ಈತನಕ ಸುಮಾರು 1.4 ಲಕ್ಷ ಜನರು ಲೈಕ್ ಮಾಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿ ಅಸ್ಸರ್​ಗೆ ಶುಭಹಾರೈಸಿದ್ದಾರೆ. ತುಂಬಾ ಮುದ್ದಾದ ಜೋಡಿ, ನಿಮ್ಮ ದಾಂಪತ್ಯ ಸುಖಮಯವಾಗಿರಲಿ, ನೀವು ಮಲಾಲಾಗೆ ಹೀಗೇ ಪ್ರೋತ್ಸಾಹಿಸಿ… ಅಂತೆಲ್ಲ ಶುಭ ಹಾರೈಸಿದ್ದಾರೆ ಅನೇಕರು.

ಮಲಾಲಾ ತನ್ನ ಗಂಡನಿಗೆ ಶುಭ ಹಾರೈಸಿದ ಪೋಸ್ಟ್​

View this post on Instagram

A post shared by Malala Yousafzai (@malala)

ಹುಟ್ಟುಹಬ್ಬದ ನಿಮಿತ್ತ ಮಲಾಲಾ ಮತ್ತು ಅಸ್ಸರ್​ ಪ್ರವಾಸದಲ್ಲಿದ್ದಾರೆ ಎನ್ನುವುದನ್ನು ಫೋಟೋಗಳ ಮೂಲಕ ತಿಳಿಯಬಹುದು. ನದಿ ತೀರ, ಸರೋವರದ ತಟ, ಗಾಲ್ಫ್​ ಮೈದಾನ ಮತ್ತು ನೀಲಾಕಾಶದ ಹಿನ್ನೆಲೆಯಲ್ಲಿ ಇಬ್ಬರ ಫೋಟೋಗಳು ಆಕರ್ಷಕವಾಗಿ ಬಂದಿವೆ. ನೆಟ್ಟಿಗರನೇಕರು ಈ ಜೋಡಿ ಮತ್ತಷ್ಟು ಸಮಾಜೋಪಯೋಗಿ ಕಾರ್ಯಗಳನ್ನು ಮಾಡಲಿಲ ಎಂದು ಹಾರೈಸಿದ್ದಾರೆ.

ಇದನ್ನೂ ಓದಿ : Viral Video: ಹೊಗೆ ಹೊಮ್ಮಿಸುವ ಶಿಲೀಂಧ್ರ? ನೆಟ್ಟಿಗರಲ್ಲಿ ಕುತೂಹಲ ಕೆರಳಿಸಿದ ಈ ವಿಡಿಯೋ

ನಿಮ್ಮಿಬ್ಬರ ಜೋಡಿ ಅನುರೂಪವಾಗಿದೆ. ಪರಸ್ಪರ ಗೌರವ ಪ್ರೀತಿಯಿಂದ ನೀವು ಅಂದುಕೊಂಡ ಗುರಿಗಳನ್ನು ತಲುಪುತ್ತೀರಿ ಎಂಬ ಭರವಸೆ ಇದೆ ಎಂದಿದ್ದಾರೆ ನೆಟ್ಟಿಗರು. ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಕುಡಿದ ಮತ್ತಿನಲ್ಲಿ ಶಿವಾಜಿ ಮೂರ್ತಿಗೆ ಹಾನಿ ಮಾಡಿದ ವ್ಯಕ್ತಿ: ಬಂಧನ
ಕುಡಿದ ಮತ್ತಿನಲ್ಲಿ ಶಿವಾಜಿ ಮೂರ್ತಿಗೆ ಹಾನಿ ಮಾಡಿದ ವ್ಯಕ್ತಿ: ಬಂಧನ
ಕಾವೇರಿ ನದಿ ನೀರಿವ ಸಮಸ್ಯೆ ಚರ್ಚಿಸಲು ಕುಮಾರಸ್ವಾಮಿ ದೆಹಲಿಗೆ ಹೋಗಿದ್ದರೇ?
ಕಾವೇರಿ ನದಿ ನೀರಿವ ಸಮಸ್ಯೆ ಚರ್ಚಿಸಲು ಕುಮಾರಸ್ವಾಮಿ ದೆಹಲಿಗೆ ಹೋಗಿದ್ದರೇ?
ಶಿವಕುಮಾರ್ ಲೋಕಸಭಾ ಚುನಾವಣೆಗೆ ಹಣ ಹೊಂಚುವುದರಲ್ಲಿ ಮಗ್ನ: ಕುಮಾರಸ್ವಾಮಿ
ಶಿವಕುಮಾರ್ ಲೋಕಸಭಾ ಚುನಾವಣೆಗೆ ಹಣ ಹೊಂಚುವುದರಲ್ಲಿ ಮಗ್ನ: ಕುಮಾರಸ್ವಾಮಿ
ದಶಕಗಳಿಂದ ಹೋರಾಡುತ್ತಾ ಪಕ್ಷವನ್ನು ಅಧಿಕಾರದಲ್ಲಿ ಕೂರಿಸಿದ್ದೇನೆ: ಡಿಕೆಶಿ
ದಶಕಗಳಿಂದ ಹೋರಾಡುತ್ತಾ ಪಕ್ಷವನ್ನು ಅಧಿಕಾರದಲ್ಲಿ ಕೂರಿಸಿದ್ದೇನೆ: ಡಿಕೆಶಿ
ವಕೀಲರು ಅದ್ಭುತವಾಗಿ ಕಾವೇರಿ ನೀರಿಗಾಗಿ ವಾದಿಸುತ್ತಿದ್ದಾರೆ:ಡಿಕೆ ಶಿವಕುಮಾರ್
ವಕೀಲರು ಅದ್ಭುತವಾಗಿ ಕಾವೇರಿ ನೀರಿಗಾಗಿ ವಾದಿಸುತ್ತಿದ್ದಾರೆ:ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್ ಪುನಃ ಜೈಲಿಗೆ ಹೋಗೋದು ನಿಶ್ಚಿತ: ಕೆ ಎಸ್ ಈಶ್ವರಪ್ಪ
ಡಿಕೆ ಶಿವಕುಮಾರ್ ಪುನಃ ಜೈಲಿಗೆ ಹೋಗೋದು ನಿಶ್ಚಿತ: ಕೆ ಎಸ್ ಈಶ್ವರಪ್ಪ
‘ಯಾವ ಕೆಲಸ ಮಾಡೋಕೂ ನಾನು ರೆಡಿ’: ನಟಿ ಪ್ರಮೀಳಾ ಜೋಶಾಯ್​ ಸುದ್ದಿಗೋಷ್ಠಿ
‘ಯಾವ ಕೆಲಸ ಮಾಡೋಕೂ ನಾನು ರೆಡಿ’: ನಟಿ ಪ್ರಮೀಳಾ ಜೋಶಾಯ್​ ಸುದ್ದಿಗೋಷ್ಠಿ
ಹರಾಜಿನಲ್ಲಿ ಗಣೇಶನ ಲಡ್ಡು ರೇಟ್‌ ಕೇಳಿದ್ರೆ ನೀವು ದಂಗಾಗೋದು ಗ್ಯಾರೆಂಟಿ
ಹರಾಜಿನಲ್ಲಿ ಗಣೇಶನ ಲಡ್ಡು ರೇಟ್‌ ಕೇಳಿದ್ರೆ ನೀವು ದಂಗಾಗೋದು ಗ್ಯಾರೆಂಟಿ
ಕನಸು ಸಾಕಾರಗೊಳಿಸಿದ ಪ್ರಧಾನಿ  ಮೋದಿಯವರನ್ನು ಸತ್ಕರಿಸಿದ ಮಹಿಳೆಯರು!
ಕನಸು ಸಾಕಾರಗೊಳಿಸಿದ ಪ್ರಧಾನಿ  ಮೋದಿಯವರನ್ನು ಸತ್ಕರಿಸಿದ ಮಹಿಳೆಯರು!
ಬಿಜೆಪಿ-ಜೆಡಿಎಸ್ ಮೈತ್ರಿ ವಿಷಯ ಮಾತಾಡಲಾರೆ : ಹೆಚ್ ಡಿ ದೇವೇಗೌಡ
ಬಿಜೆಪಿ-ಜೆಡಿಎಸ್ ಮೈತ್ರಿ ವಿಷಯ ಮಾತಾಡಲಾರೆ : ಹೆಚ್ ಡಿ ದೇವೇಗೌಡ