Viral Optical Illusion: ನೀವು ನಿಜಕ್ಕೂ ಬೆಕ್ಕುಪ್ರೇಮಿಯಾ? ಹಾಗಿದ್ದರೆ 5 ಸೆಕೆಂಡಿನಲ್ಲಿ ಬೆಕ್ಕಿನಮರಿ ಹುಡುಕಬಹುದೆ?

Brain Teaser: ಕಣ್ಣಮುಂದೆ ಇರುವ ವಸ್ತು ಮೊದಲ ನೋಟಕ್ಕೆ ಕಾಣದಂತೆ ಚಿತ್ರಿಸುವ ಕೈಚಳಕ ಈ ಭ್ರಮಾತ್ಮಕ ಚಿತ್ರಗಳದ್ದು. ಈ ಬಾರಿ ಚಿತ್ರವಲ್ಲ ಫೋಟೋ ನಿಮ್ಮೆದುರಿಗೆ ಇದೆ. ದೊಡ್ಡ ರ್ಯಾಕ್​ನ ತುಂಬಾ ಪುಸ್ತಕಗಳು ತುಂಬಿವೆ. ನಡುವೆ ಟಿವಿ ಬೇರೆ ಇದೆ. ಪುಟ್ಟ ಬೆಕ್ಕಿನಮರಿಯೊಂದು ಇಲ್ಲೆಲ್ಲೋ ಬಚ್ಚಿಟ್ಟುಕೊಂಡಿದೆ. ಬೆಕ್ಕುಪ್ರೇಮಿಗಳಾದ ನಿಮಗೆ ಆ ಬೆಕ್ಕು ಅದೆಷ್ಟು ಬೇಗ ಸಿಗಬಲ್ಲುದು?

Viral Optical Illusion: ನೀವು ನಿಜಕ್ಕೂ ಬೆಕ್ಕುಪ್ರೇಮಿಯಾ? ಹಾಗಿದ್ದರೆ 5 ಸೆಕೆಂಡಿನಲ್ಲಿ ಬೆಕ್ಕಿನಮರಿ ಹುಡುಕಬಹುದೆ?
ಈ ರ್ಯಾಕ್​ನಲ್ಲಿ ಅಡಗಿರುವ ಬೆಕ್ಕಿನಮರಿಯನ್ನು ಹುಡುಕಿ
Follow us
|

Updated on: Sep 16, 2023 | 11:55 AM

Cat Lover: ಬೆಕ್ಕುಗಳೆಂದರೆ ಜೀವಕ್ಕೆ ಜೀವ ಎಂದು ಪ್ರೀತಿಸುವ ಅನೇಕರು ಇದನ್ನು ಓದುತ್ತಿದ್ದೀರಿ. ನೀವದೆಷ್ಟೇ ತೊಡೆಯ ಮೇಲಿಟ್ಟುಕೊಂಡು ಮುದ್ದಿಸಿದರೂ ಅಡಗಿಕೊಳ್ಳುವುದರಲ್ಲಿ ಬಲು ಜಾಣ ಈ ಬೆಕ್ಕುಗಳು. ಇದೀಗ ಈ ಚಿತ್ರದಲ್ಲಿ ಮನೆಯೊಂದರ ಬುಕ್​ ರ್ಯಾಕ್ (Book Rack)​ ಮತ್ತು ಟಿವಿ ನಿಮಗೆ ಕಾಣುತ್ತಿದೆಯಲ್ಲವೇ? ಈ ಜಾಗದಲ್ಲೇ ಬೆಕ್ಕಿನ ಮರಿಯೊಂದು ಅಡಗಿ ಕುಳಿತಿದೆ. ಬೆಕ್ಕುಪ್ರಿಯರಾದ ನಿಮಗೆ ಎಲ್ಲಿದ್ದರೂ ಬೆಕ್ಕು ಕಂಡೇ ಕಾಣುತ್ತದೆ ಎಂಬ ನಂಬಿಕೆ ನಮ್ಮದು. ಐದು ಸೆಕೆಂಡುಗಳಲ್ಲಿ ನಿಮ್ಮ ಪ್ರೀತಿಪಾತ್ರ ಜೀವವನ್ನು ಹುಡುಕಿ ಕೊಡಬಹುದೆ? ನೆಟ್ಟಿಗರಂತೂ ಸಾಕಷ್ಟು ಕಸರತ್ತು ಮಾಡಿ ಸೋತಿದ್ದಾರೆ. ನೀವು?

ಇದನ್ನೂ ಓದಿ : Viral Video: ನೆರಳು ಬೆಳಕಿನಲ್ಲಿ ಅರಳಿದ ಅರಿಜೀತ್​ ಸಿಂಗ್​​; 30 ಮಿಲಿಯನ್​ ಜನರು ನೋಡಿದ ಈ ಕಲಾಕೃತಿ 

9 ತಿಂಗಳ ಹಿಂದೆ ರೆಡ್ಡಿಟ್​ನಲ್ಲಿ ಹಂಚಿಕೊಳ್ಳಲಾದ ಈ ಫೋಟೋ ಇದೀಗ ವೈರಲ್ ಆಗಿದೆ. 750ಕ್ಕಿಂತಲೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಸುಮಾರು 55 ಜನರು ಉತ್ತರಿಸಲು ಪ್ರಯತ್ನಿಸಿದ್ದಾರೆ. ನಾನು ಒಂದು ನಿಮಿಷ ತೆಗೆದುಕೊಂಡೆ ಎಂದು ಒಬ್ಬರು. ಐದೇ ಸೆಕೆಂಡಿನಲ್ಲಿ ಸಿಕ್ಕಿತು ಎಂದು ಇನ್ನೊಬ್ಬರು. ಝುಮ್​ ಇನ್ ಮಾಡಿ ಬೆಕ್ಕಿನಮರಿಯನ್ನು ಹುಡುಕಿದೆ ಎಂದು ಮತ್ತೊಬ್ಬರು. ಹಾಂ ತುಂಬಾ ಮುದ್ದಾಗಿದೆ ಹಕ್ಕಿಯ ಪಕ್ಕ ಅಲ್ಲವೆ? ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ

ಬುಕ್​ ರ್ಯಾಕ್​ನಲ್ಲಿ ಬೆಕ್ಕಿನ ಮರಿ ಹುಡುಕಿ

Can you spot the cat? byu/TopTech33 incat

ನಾನಂತೂ ನೋಡಿದೆ, ಆದರೆ ಎಲ್ಲಿದೆ ಎಂದು ಯಾರಿಗೂ ಹೇಳುವುದಿಲ್ಲ ಎಂದಿದ್ದಾರೆ ಒಬ್ಬರು. ಆ ಟಿವಿಯ ಹಿಂದೆ ಅಡಗಿ ಕುಳಿತಿದೆ ಎಂದಿದ್ದಾರೆ ಮತ್ತೊಬ್ಬರು. ಟಿವಿ ಎಂದರೆ ಬೆಕ್ಕುಗಳಿಗೆ ತುಂಬಾ ಇಷ್ಟ. ಅದರಲ್ಲೂ ಟಾಮ್ ಅಂಡ್ ಜೆರ್ರಿ ನೋಡುವುದು. ಅದಕ್ಕೇ ಬಹುಶಃ ಜೆರ್ರಿ ಹುಡುಕಲು ಟಿವಿಯ ಹಿಂದೆ ಹೋಗಿ ಕುಳಿತಿರಬಹುದು ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : Viral Video: ಅಲೋಪೇಸಿಯಾನೇ ಆಶೀರ್ವಾದ: ‘ಬಾಲ್ಡ್ ಈಸ್​ ಬ್ಯೂಟಿಫುಲ್​’ ನೀಹಾರ್​ ಸಚದೇವ್ ​

ಅದರ ಹೆಜ್ಜೆಗಳು ಟಿವಿ ಸ್ಕ್ರೀನ್ ಮೇಲೆ ಮೂಡಿವೆ. ಹಾಗಾಗಿ ಅದು ಟಿವಿಯ ಹಿಂದೆ ಅಡಗಿದೆ ಎಂದಿದ್ದಾರೆ ಒಬ್ಬರು. ಎಲ್ಲಿಯೂ ಬೆಕ್ಕು ಇಲ್ಲವೇ ಇಲ್ಲ ಇಲ್ಲಿ ಎಂದು ಕೆಲವರು ಜನ ಹೇಳಿದ್ದಾರೆ. ಸುಮ್ಮನೇ ಮೂರ್ಖರನ್ನಾಗಿಸಿದ್ದೀರಿ ಎಂದಿದ್ದಾರೆ ಇನ್ನೂ ಕೆಲವರು.

ನಿಮಗೆ ಬೆಕ್ಕು ಸಿಕ್ಕಿತೆ, ಈ ಪುಸ್ತಕಗಳ ರಾಶಿಯ ಮಧ್ಯೆ?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಡ್ಯೂಪ್ ಇಲ್ಲದೆ ಫೈಟ್ ಮಾಡಿದ ನಟಿ ಅದಿತಿ: ಮಾಲಾಶ್ರೀಯೇ ಸ್ಪೂರ್ತಿ
ಡ್ಯೂಪ್ ಇಲ್ಲದೆ ಫೈಟ್ ಮಾಡಿದ ನಟಿ ಅದಿತಿ: ಮಾಲಾಶ್ರೀಯೇ ಸ್ಪೂರ್ತಿ
ಕುಡಿದ ಮತ್ತಿನಲ್ಲಿ ಶಿವಾಜಿ ಮೂರ್ತಿಗೆ ಹಾನಿ ಮಾಡಿದ ವ್ಯಕ್ತಿ: ಬಂಧನ
ಕುಡಿದ ಮತ್ತಿನಲ್ಲಿ ಶಿವಾಜಿ ಮೂರ್ತಿಗೆ ಹಾನಿ ಮಾಡಿದ ವ್ಯಕ್ತಿ: ಬಂಧನ
ಕಾವೇರಿ ನದಿ ನೀರಿವ ಸಮಸ್ಯೆ ಚರ್ಚಿಸಲು ಕುಮಾರಸ್ವಾಮಿ ದೆಹಲಿಗೆ ಹೋಗಿದ್ದರೇ?
ಕಾವೇರಿ ನದಿ ನೀರಿವ ಸಮಸ್ಯೆ ಚರ್ಚಿಸಲು ಕುಮಾರಸ್ವಾಮಿ ದೆಹಲಿಗೆ ಹೋಗಿದ್ದರೇ?
ಶಿವಕುಮಾರ್ ಲೋಕಸಭಾ ಚುನಾವಣೆಗೆ ಹಣ ಹೊಂಚುವುದರಲ್ಲಿ ಮಗ್ನ: ಕುಮಾರಸ್ವಾಮಿ
ಶಿವಕುಮಾರ್ ಲೋಕಸಭಾ ಚುನಾವಣೆಗೆ ಹಣ ಹೊಂಚುವುದರಲ್ಲಿ ಮಗ್ನ: ಕುಮಾರಸ್ವಾಮಿ
ದಶಕಗಳಿಂದ ಹೋರಾಡುತ್ತಾ ಪಕ್ಷವನ್ನು ಅಧಿಕಾರದಲ್ಲಿ ಕೂರಿಸಿದ್ದೇನೆ: ಡಿಕೆಶಿ
ದಶಕಗಳಿಂದ ಹೋರಾಡುತ್ತಾ ಪಕ್ಷವನ್ನು ಅಧಿಕಾರದಲ್ಲಿ ಕೂರಿಸಿದ್ದೇನೆ: ಡಿಕೆಶಿ
ವಕೀಲರು ಅದ್ಭುತವಾಗಿ ಕಾವೇರಿ ನೀರಿಗಾಗಿ ವಾದಿಸುತ್ತಿದ್ದಾರೆ:ಡಿಕೆ ಶಿವಕುಮಾರ್
ವಕೀಲರು ಅದ್ಭುತವಾಗಿ ಕಾವೇರಿ ನೀರಿಗಾಗಿ ವಾದಿಸುತ್ತಿದ್ದಾರೆ:ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್ ಪುನಃ ಜೈಲಿಗೆ ಹೋಗೋದು ನಿಶ್ಚಿತ: ಕೆ ಎಸ್ ಈಶ್ವರಪ್ಪ
ಡಿಕೆ ಶಿವಕುಮಾರ್ ಪುನಃ ಜೈಲಿಗೆ ಹೋಗೋದು ನಿಶ್ಚಿತ: ಕೆ ಎಸ್ ಈಶ್ವರಪ್ಪ
‘ಯಾವ ಕೆಲಸ ಮಾಡೋಕೂ ನಾನು ರೆಡಿ’: ನಟಿ ಪ್ರಮೀಳಾ ಜೋಶಾಯ್​ ಸುದ್ದಿಗೋಷ್ಠಿ
‘ಯಾವ ಕೆಲಸ ಮಾಡೋಕೂ ನಾನು ರೆಡಿ’: ನಟಿ ಪ್ರಮೀಳಾ ಜೋಶಾಯ್​ ಸುದ್ದಿಗೋಷ್ಠಿ
ಹರಾಜಿನಲ್ಲಿ ಗಣೇಶನ ಲಡ್ಡು ರೇಟ್‌ ಕೇಳಿದ್ರೆ ನೀವು ದಂಗಾಗೋದು ಗ್ಯಾರೆಂಟಿ
ಹರಾಜಿನಲ್ಲಿ ಗಣೇಶನ ಲಡ್ಡು ರೇಟ್‌ ಕೇಳಿದ್ರೆ ನೀವು ದಂಗಾಗೋದು ಗ್ಯಾರೆಂಟಿ
ಕನಸು ಸಾಕಾರಗೊಳಿಸಿದ ಪ್ರಧಾನಿ  ಮೋದಿಯವರನ್ನು ಸತ್ಕರಿಸಿದ ಮಹಿಳೆಯರು!
ಕನಸು ಸಾಕಾರಗೊಳಿಸಿದ ಪ್ರಧಾನಿ  ಮೋದಿಯವರನ್ನು ಸತ್ಕರಿಸಿದ ಮಹಿಳೆಯರು!