Viral Video: ಅಲೋಪೇಸಿಯಾನೇ ಆಶೀರ್ವಾದ: ‘ಬಾಲ್ಡ್ ಈಸ್​ ಬ್ಯೂಟಿಫುಲ್​’ ನೀಹಾರ್​ ಸಚದೇವ್ ​

Inspirational Story : ನಿನ್ನನ್ನು ಯಾರು ಮದುವೆಯಾಗುತ್ತಾರೆ? ಎಂದು ನನ್ನ ತಂದೆಯೇ ಕೇಳಿದರು. ಆಗ ಕೋಪದಿಂದ, 'ನನ್ನ ಹೆಗಲ ಮೇಲೆ ಒಳ್ಳೆಯ ತಲೆ ಇದೆ ಎಂದು ಅಂದುಕೊಳ್ಳುವ ಯಾರಾದರೂ!' ಎಂದು ಉತ್ತರಿಸಿ ತಲೆಯನ್ನು ಸಂಪೂರ್ಣ ಬೋಳಿಸಿಕೊಳ್ಳಲು ನಿರ್ಧರಿಸಿದೆ. ಬೋಳುತಲೆಯಲ್ಲಿ ತುಂಬಾ ಸುಂದರವಾಗಿ ಕಂಡೆ. ಸಂಪೂರ್ಣ ಸ್ವತಂತ್ರಳು ಎನ್ನಿಸತೊಡಗಿತು.

Viral Video: ಅಲೋಪೇಸಿಯಾನೇ ಆಶೀರ್ವಾದ: 'ಬಾಲ್ಡ್ ಈಸ್​ ಬ್ಯೂಟಿಫುಲ್​' ನೀಹಾರ್​ ಸಚದೇವ್ ​
ನೀಹಾರ್ ಸಚದೇವ ಮತ್ತು ಅರುಣ ದಂಪತಿ
Follow us
ಶ್ರೀದೇವಿ ಕಳಸದ
|

Updated on:Sep 14, 2023 | 4:53 PM

Alopecia: ‘ಆರು ತಿಂಗಳ ಮಗುವಾಗಿದ್ದಾಗಲೇ ಅಲೋಪೇಸಿಯಾದಿಂದ ನನ್ನ ತಲೆಗೂದಲು ಉದುರಲಾರಂಭಿಸಿದವು. ನನ್ನ ಪೋಷಕರು ಆಯುರ್ವೇದ ಚಿಕಿತ್ಸೆ ಕೊಡಿಸಿದರು. ಆರು ವರ್ಷದವಳಾಗುತ್ತಿದ್ದಂತೆ ಹುಬ್ಬುಗಳೂ ಉದುರಿದವು. ಕೂದಲುಗಳಿಲ್ಲದೆಯೂ ನಾನು ಸುಂದರವಾಗಿ ಕಾಣುತ್ತೇನೆ ಎಂದು ನನ್ನ ತಾಯಿ ಹೇಳುತ್ತಿದ್ದರಿಂದ ನನ್ನಲ್ಲಿ ಆತ್ಮಪ್ರಜ್ಞೆ ಬೆಳೆಯುತ್ತ ಹೋಯಿತು. ಒಂಬತ್ತು ವರ್ಷದವಳಿದ್ದಾಗ ಟೋಪಿ ಧರಿಸಿ ಶಾಲೆಗೆ ಹೋಗತೊಡಗಿದೆ. ಆಗ ನನ್ನ ಹೆತ್ತವರು ವಿಗ್​ ಕೊಡಿಸಿದರು. ಎಲ್ಲರಂತೆ ಸಾಮಾನ್ಯವಾಗಿ ಕಾಣುತ್ತಿದ್ದೇನೆ ಎಂಬ ಭ್ರಮೆಯಲ್ಲಿ ಶಾಲೆಗೆ ಹೋಗತೊಡಗಿದೆ. ಆದರೆ ಶಾಲೆಯಲ್ಲಿ ಒಂದು ಹುಡುಗಿ, ಓಹ್ ದೇವರೇ ಅದು ವಿಗ್ (Wig)​? ಎಂದು ಕೂಗಿದಳು. ಆಗ ನಾನು ಗಾಸಿಗೊಂಡೆ. ಆತ್ಮೀಯ ಸ್ನೇಹಿತ ಕೂಡ ಅವಮಾನಗೊಳಿಸಿದ.’

ಇದನ್ನೂ ಓದಿ : Viral Video: ಆಗ್ರಾ; ಸರ್ಕಾರಿ ಮಕ್ಕಳ ಆಶ್ರಮದಲ್ಲಿ ಅಪ್ರಾಪ್ತ ಬಾಲಕಿಗೆ ಚಪ್ಪಲಿಯಿಂದ ಥಳಿಸಿದ ಮಹಿಳಾ ಅಧಿಕಾರಿ; ತನಿಖೆಗೆ ಆದೇಶ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

‘ಮಾಧ್ಯಮಿಕ ಶಾಲೆಯ ಅನುಭವವಂತೂ ನರಕದಿಂದ ಕೂಡಿತ್ತು. ಸ್ವಿಮ್ಮಿಂಗ್​ ಕ್ಲಾಸ್​ ಇದ್ದಾಗ ನಾನು ಹೆದರುತ್ತಿದ್ದೆ. ಆಗ ಆಚೆ ಕುಳಿತುಕೊಳ್ಳುತ್ತಿದ್ದೆ. ಸ್ನೇಹಿತೆಯರು ಚುಡಾಯಿಸತೊಡಗಿದರು, ಆಗೆಲ್ಲಾ ಮನೆಗೆ ಬಂದು ಅಪ್ಪ ಅಮ್ಮನ ಬಳಿ ಬಂದು ಜಗಳ ತೆಗೆಯುತ್ತಿದ್ದೆ. ಆದರೂ ನನ್ನ ವಿದ್ಯಾಭ್ಯಾಸದೆಡೆ ಗಮನಕೊಟ್ಟೆ. ಮುಂದೆ ನನ್ನದೇ ಆದ ಸ್ನೇಹಿತರ ಗುಂಪಾಯಿತು. ನನಗೊಬ್ಬ ಆಪ್ತ ಗೆಳೆಯನೂ ಆದ. ನಾನು ನನ್ನ ಕೂದಲಿನ ಸಮಸ್ಯೆಯ ಬಗ್ಗೆ ಹೇಳಿದೆ. ನಮ್ಮಿಬ್ಬರಿಗೂ ಸಾಕಾಗುವಷ್ಟು ನನ್ನ ತಲೆಗೂದಲಿದೆ ಎಂದ. ಕ್ರಮೇಣ ನನ್ನ ತಲೆಯಲ್ಲಿ ಕೂದಲು ಮತ್ತೆ ಬೆಳೆಯಲಾರಂಭಿಸಿತು. ನಾನು ವಿಗ್​ ಧರಿಸುವುದನ್ನು ಬಿಟ್ಟೆ.’

ಅಲೋಪೇಸಿಯಾ ಎಂಬ ಆಶೀರ್ವಾದ

‘ಆದರೆ ಮತ್ತೆ ನನ್ನ ಕೂದಲು ಉದುರಲಾರಂಭಿಸಿದವು. ಸ್ಟಿರಾಯ್ಡ್ ಟ್ರೀಟ್​ಮೆಂಟ್​ ಕೂಡ ಫಲಿಸಲಿಲ್ಲ. ಆಗ ನಿನ್ನನ್ನು ಯಾರು ಮದುವೆಯಾಗುತ್ತಾರೆ? ಎಂದು ನನ್ನ ತಂದೆಯೇ ಕೇಳಿದರು. ಆಗ ಕೋಪದಿಂದ, ‘ನನ್ನ ಹೆಗಲ ಮೇಲೆ ಒಳ್ಳೆಯ ತಲೆ ಇದೆ ಎಂದು ಅಂದುಕೊಳ್ಳುವ ಯಾರಾದರೂ!’ ಎಂದು ಉತ್ತರಿಸಿ ನನ್ನ ತಲೆಯನ್ನು ಸಂಪೂರ್ಣ ಬೋಳಿಸಿಕೊಳ್ಳಲು ನಿರ್ಧರಿಸಿದೆ. ನನ್ನ ಸ್ನೇಹಿತರು ‘ನೀಹಾರ್​ ಬಾಲ್ಡ್​ ಬಾಷ್​’ ಎಂಬ ಪಾರ್ಟಿ ಆಯೋಜಿಸಿದರು. ನನ್ನ ತಂದೆಗೆ ನನ್ನ ತಲೆಯನ್ನು ಕ್ಷೌರ ಮಾಡುವಂತೆ ವಿನಂತಿಸಿಕೊಂಡೆ. ನಂತರ ಕನ್ನಡಿಯಲ್ಲಿ ನೋಡಿಕೊಂಡೆ, ನಿಜಕ್ಕೂ ನಾನು ಸುಂದರವಾಗಿ ಕಾಣುತ್ತಿದ್ದೆ! ನಂತರ ನಾನು ಶಾಲೆಗೆ ಮರಳಿದೆ.  ನನ್ನನ್ನು ಹೀಗಳೆದವರೆಲ್ಲ ಮತ್ತೆ ಗೆಳೆತನ ಬಯಸಿದರು. ನೀನು ಅದ್ಭುತವಾಗಿದ್ದೀ, ನಾನೇ ನೀಚ, ಕ್ಷಮಿಸು, ಬಹುಶಃ ಕ್ಷಮಿಸುತ್ತೀ ಎಂದು ಭಾವಿಸುತ್ತೇನೆ ಎಂದು ಒಬ್ಬ ಹೇಳಿದ.’

ನೀಹಾರ್ ಮತ್ತು ಅರುಣ ಮಧುರ ಕ್ಷಣಗಳು

‘ತಲೆ ಬೋಳಿಸಿಯಾದ ಮೇಲೆ ನಾನು ಸಂಪೂರ್ಣ ಸ್ವತಂತ್ರಳು ಎಂಬ ಭಾವ ಮೂಡಿತು. ಸಮಾಜದ ಬಗ್ಗೆ ಯೋಚಿಸಬೇಡ ಎಂದು ನನ್ನ ಪೋಷಕರೂ ಹೇಳಿದರು. ನನ್ನನ್ನು ನಾನು ಸ್ವೀಕರಿಸಿದೆ. ಮುಂದೆ ನನ್ನ ಅಕ್ಕನ ಮದುವೆಯಲ್ಲಿ ನಾನು ಚೆಂದವಾಗಿ ಅಲಂಕರಿಸಿಕೊಂಡು ಧೈರ್ಯದಿಂದ ವೇದಿಕೆಯ ಮೇಲೆ ಹೋಗಿ ನನ್ನ ಅಲೋಪೇಸಿಯಾದ ಬಗ್ಗೆ ಹೇಳಿಕೊಂಡೆ. ನನ್ನ ದುಃಸ್ವಪ್ನವೇ ನನಗೆ ದೊಡ್ಡ ಆಶೀರ್ವಾದ. ಮುಂದೆ ಸಂಗಾತಿ ಅರುಣ ಸಿಕ್ಕರು. ಈಗ ನಾನು ಯಾವ ಆತಂಕವೂ ಇಲ್ಲದೇ ನನ್ನಿಚ್ಛೆಯಂತೆ ಬದುಕುತ್ತಿದ್ದೇನೆ, ಖುಷಿಯಿಂದ!

ಈ ವಿಡಿಯೋಗಳನ್ನು ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 3:27 pm, Thu, 14 September 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ