Viral Video: ಶೀಲಾ ಕೀ ಜವಾನೀ; ಕತ್ರೀನಾಳಂತೆ ಉಡುಗೆ ಧರಿಸಿ ಡ್ಯಾನ್ಸ್ ಮಾಡಿದ ಕನಿಷ್ಕಾ ಶರ್ಮಾ

Katrina Kaif: 12 ವರ್ಷಗಳ ಹಿಂದೆ ಎಳೆಯರಿಂದ ಮುದುಕರವರೆಗೂ ಸಂಚಲನ ಮೂಡಿಸಿದ್ದ 'ಶೀಲಾ ಕೀ ಜವಾನೀ' ಹಾಡಿಗೆ ಇದೀಗ ಕನಿಷ್ಕಾ ಶರ್ಮಾ ಕತ್ರೀನಾಳಂತೆಯೇ ಅಲಂಕರಿಸಿಕೊಂಡು ಉಡುಪು ಧರಿಸಿ ಆಕರ್ಷಕವಾಗಿ ಹೆಜ್ಜೆ ಹಾಕಿದ್ಧಾರೆ. ನೆಟ್ಟಿಗರು ಈಕೆಯ ಕಲಾ ನೈಪುಣ್ಯಕ್ಕೆ ಬೆರಗಾಗುತ್ತಿದ್ದಾರೆ. ಈತನಕ ನೀವು ಮಾಡಿದ ವಿಡಿಯೋಗಳಲ್ಲಿ ಇದು ಅತ್ಯುತ್ತಮ ಎನ್ನುತ್ತಿದ್ದಾರೆ.

Viral Video: ಶೀಲಾ ಕೀ ಜವಾನೀ; ಕತ್ರೀನಾಳಂತೆ ಉಡುಗೆ ಧರಿಸಿ ಡ್ಯಾನ್ಸ್ ಮಾಡಿದ ಕನಿಷ್ಕಾ ಶರ್ಮಾ
ಕನಿಷ್ಕಾ ಶರ್ಮಾ
Follow us
ಶ್ರೀದೇವಿ ಕಳಸದ
|

Updated on:Sep 14, 2023 | 6:21 PM

Bollywood : ತೀಸ್ ಮಾರ್​ ಖಾನ್​ 2010ರಲ್ಲಿ ಬಿಡುಗಡೆಯಾದ ಸಿನೆಮಾ. ಸುನಿಧಿ ಚೌಹಾನ್​, ವಿಶಾಲ್​ ದದ್ಲಾನಿ ಹಾಡಿರುವ ಐಟಂ ಸಾಂಗ್​ ‘ಶೀಲಾ ಕೀ ಜವಾನೀ’ ಎಲ್ಲ ವಯಸ್ಸಿನರನ್ನೂ ಗುಂಗಿಗೆ ಬೀಳಿಸಿತ್ತು. ಇದೀಗ ನಟಿ ಕನಿಷ್ಕಾ ಶರ್ಮಾ ಥೇಟ್​ ಕತ್ರೀನಾ ಕೈಫ್​ಳಂತೆ (Katrina Kaif) ಅಲಂಕರಿಸಿಕೊಂಡು ಹೆಜ್ಜೆ ಹಾಕಿದ್ದು ನೆಟ್ಟಿಗರ ಮನಸೂರೆಗೊಂಡಿದೆ. ಜು. 31ರಂದು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋ ಈತನಕ 6.3 ಮಿಲಿಯನ್​  ಜನರನ್ನು ತಲುಪಿದೆ. 2.3 ಲಕ್ಷ ಜನರು ಲೈಕ್ ಮಾಡಿದ್ಧಾರೆ. ಬಂಗಾರವರ್ಣದ ಉಡುಗೆಯಲ್ಲಿ ಕನಿಷ್ಕಾ ಅದ್ಭುತವಾಗಿ ಕಾಣುತ್ತಿದ್ದಾರೆ ಮತ್ತು ಆಕರ್ಷಕವಾಗಿ ನರ್ತಿಸಿದ್ದಾರೆ ಎಂದು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ.

ಇದನ್ನೂ ಓದಿ : Viral Video: ಅಥ್ಲೀಟ್​ ಬಿಪಾಶಾ ಫುಟ್​ಬಾಲ್​ ಕೌಶಲ; ರೊನಾಲ್ಡೋ ಮೆಸ್ಸಿಗೂ ಅಸಾಧ್ಯ ಎನ್ನುತ್ತಿರುವ ನೆಟ್ಟಿಗರು

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ನಿಮ್ಮ ನೃತ್ಯಕೌಶಲ ನಿಜಕ್ಕೂ ಅದ್ಭುತವಾಗಿದೆ ಎಂದು ಒಬ್ಬರು ಹೇಳಿದ್ದಾರೆ. ಈ ಉಡುಪಿನಲ್ಲಿ ನೀವು ಥೇಟ್​ ಕತ್ರೀನಾರಂತೆ ಕಾಣುತ್ತಿದ್ದೀರಿ ಎಂದು ಮತ್ತೊಬ್ಬರು ಹೇಳಿದ್ದಾರೆ. ಕನಿಷ್ಕಾ ಈತನಕದ ವಿಡಿಯೋಗಳಲ್ಲಿ ಇದು ಅತ್ಯುತ್ತಮವಾದ ವಿಡಿಯೋ ಎಂದು ಇನ್ನೊಬ್ಬರು ಹೇಳಿದ್ದಾರೆ.

ಕನಿಷ್ಕಾಳ ‘ಶೀಲಾ ಕೀ ಜವಾನೀ’

ನಿಮ್ಮ ಈ ನೃತ್ಯ ನೋಡಿ ಮೂಕವಿಸ್ಮಿತನಾದೆ ಎಂದಿದ್ಧಾರೆ ಒಬ್ಬರು. ನಿಮ್ಮ ಬೆನ್ನು ಬಹಳ ಆಕರ್ಷಕವಾಗಿದೆ ಎಂದಿದ್ದಾರೆ ಇನ್ನೊಬ್ಬರು. ಡೇರಿಮಿಲ್ಕ್​ ಚಾಕೊಲೇಟ್​ನ ರ್ಯಾಪರ್​ನಂತೆ ಕಾಣುತ್ತಿದ್ದೀರಿ ಎಂದು ಮತ್ತೊಬ್ಬರು. ನಿಮ್ಮ ಪ್ರತಿಭೆಗೆ ಒಳ್ಳೆಯ ಅವಕಾಶಗಳು ಸಿಗಲಿ ಎಂದು ಮಗದೊಬ್ಬರು.

ಇದನ್ನೂ ಓದಿ : Viral Video: ಅಲೋಪೇಸಿಯಾನೇ ಆಶೀರ್ವಾದ: ‘ಬಾಲ್ಡ್ ಈಸ್​ ಬ್ಯೂಟಿಫುಲ್​’ ನೀಹಾರ್​ ಸಚದೇವ್ ​

ನಿಮ್ಮನ್ನು ದೊಡ್ಡತೆರೆಯ ಮೇಲೆ ನಾಯಕಿಯಾಗಿ ನೋಡಬೇಕು ಎನ್ನುವ ಆಸೆ ಎಂದು ಒಬ್ಬರು ಹೇಳಿದ್ದಾರೆ. ಕತ್ರೀನಾಗಿಂತಲೂ ನೀವು ಒಂದು ಕೈ ಮೇಲೆಯೇ ಎಂದಿದ್ಧಾರೆ ಮತ್ತೊಬ್ಬರು. ನಿಮ್ಮ ಮೈಮಾಟ, ಮೇಕಪ್​, ಕಾಸ್ಟ್ಯೂಮ್ ಡಿಸೈನ್, ನಿಮ್ಮ ಭಾವಾಭಿವ್ಯಕ್ತಿ ನಿಜಕ್ಕೂ ಅತ್ಯುತ್ತಮವಾಗಿದೆ ಎಂದು ಮಗದೊಬ್ಬರು ಹೇಳಿದ್ದಾರೆ. ಇಷ್ಟು ವರ್ಷಗಳ ಮೇಲೆ ನೀವು ಈ ಹಾಡನ್ನು ನೆನಪಿಸಿ ನನ್ನ ಮೂಡ್​ ಫ್ರೆಷ್ ಮಾಡಿದಿರಿ ಎಂದಿದ್ದಾರೆ ಮತ್ತೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 6:19 pm, Thu, 14 September 23