Viral Video: ಅಥ್ಲೀಟ್​ ಬಿಪಾಶಾ ಫುಟ್​ಬಾಲ್​ ಕೌಶಲ; ರೊನಾಲ್ಡೋ ಮೆಸ್ಸಿಗೂ ಅಸಾಧ್ಯ ಎನ್ನುತ್ತಿರುವ ನೆಟ್ಟಿಗರು

Athlete : ಟ್ರ್ಯಾಕ್​ ಮೇಲಷ್ಟೇ ನೋಡುತ್ತಿದ್ದ ಅಥ್ಲೀಟ್​ಗಳನ್ನು ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲೆಲ್ಲ ನೋಡುತ್ತಿದ್ದೀರಿ. ಅದರಲ್ಲೂ ಫುಟ್​ಬಾಲ್​ ಆಟಗಾರರು ತಮ್ಮ ಕೌಶಲಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದ್ದಾರೆ. ಆ ಪೈಕಿ ಬಿಪಾಶಾಳ ಈ ಫುಟ್​ಬಾಲ್ ಕೌಶಲ ಮತ್ತು ಸಾಹಸ ಮಾತ್ರ ಅತ್ಯದ್ಭುತ. ಫುಟ್​ಬಾಲ್ ಇಲ್ಲದೆ ನಾ ಬದುಕಲಾರೆ ಎನ್ನುತ್ತಾರೆ ಈಕೆ.

Viral Video: ಅಥ್ಲೀಟ್​ ಬಿಪಾಶಾ ಫುಟ್​ಬಾಲ್​ ಕೌಶಲ; ರೊನಾಲ್ಡೋ ಮೆಸ್ಸಿಗೂ ಅಸಾಧ್ಯ ಎನ್ನುತ್ತಿರುವ ನೆಟ್ಟಿಗರು
ಫುಟ್​ಬಾಲ್​ ಪ್ರಿಯೆ ಬಿಪಾಶಾ
Follow us
ಶ್ರೀದೇವಿ ಕಳಸದ
|

Updated on:Sep 14, 2023 | 4:50 PM

Football: ಈಕೆ ಫುಟ್​ಬಾಲ್​ ಪ್ರಿಯೆ ಬಿಪಾಶಾ (Bipasha). ನನ್ನ ಜೀವನವೇ ಫುಟ್​ಬಾಲ್​, ನನ್ನ ಪ್ಯಾಷನ್​ ಫುಟ್​ಬಾಲ್.​ ಫುಟ್​ಬಾಲ್​ ಇಲ್ಲದೆ ನಾ ಬದುಕಿರಲಾರೆ. ಫುಟ್​ಬಾಲ್​ ನನ್ನ ಪ್ರೀತಿ, ನಾನು ಹುಟ್ಟಿರುವುದೇ ಪುಟ್​ಬಾಲ್​​ಗಾಗಿ ಅಂತೆಲ್ಲ ತಮ್ಮ ಇನ್​ಸ್ಟಾಗ್ರಾಂ ಪುಟದಲ್ಲಿ ಪರಿಚಯಿಸಿಕೊಂಡಿದ್ದಾರೆ ಅಥ್ಲೀಟ್​ ಬಿಪಾಶಾ. ಇವರು ಫುಟ್​ಬಾಲ್​ಗಳ ಮೇಲೆ ನಡೆಯುತ್ತಾರೆ. ಒಂದೇ ಫುಟ್​ಬಾಲ್​ ಮೇಲೆ ಡ್ಯಾನ್ಸ್ ಮಾಡುತ್ತಾರೆ. ಒಂಟಿಗಾಲಿನಲ್ಲಿ ಫುಟ್​ಬಾಲ್​ ಮೇಲೆ ನಿಲ್ಲುತ್ತಾರೆ. ಒಂದೇ ಫುಟ್​ಬಾಲ್​ ಮೇಲೆ ನಿಂತು ಹಗ್ಗವನ್ನೂ ಆಡುತ್ತಾರೆ. ಹಣೆಯಿಂದ ಫುಟ್​ಬಾಲ್​ ಆಡುತ್ತಾರೆ. ಬೆರಳಿನಲ್ಲಿ ಫುಟ್​ಬಾಲ್ ತಿರುಗಿಸುತ್ತಾರೆ. ಫುಟ್ಬಾಲ್​ ಮೇಲೆ ನಿಂತು ಹೆಗಲಮೇಲೆ ಹತ್ತು ವರ್ಷದ ಮಗುವನ್ನೂ ಕೂರಿಸಿಕೊಂಡು ಹಗ್ಗವನ್ನು ಆಡುತ್ತಾರೆ. ಉದ್ದುದ್ದ ಇಟ್ಟಿಗೆಯನ್ನು ನಿಲ್ಲಿಸಿ ಅದರ ಮೇಲೆ ಫುಟ್​ಬಾಲ್​ ಇಟ್ಟು ಬ್ಯಾಲೆನ್ಸ್ ಮಾಡುತ್ತಾರೆ. ಇನ್ನೂ ಏನೇನೆಲ್ಲ!

ಇದನ್ನೂ ಓದಿ : Viral Video: ಅಲೋಪೇಸಿಯಾನೇ ಆಶೀರ್ವಾದ: ‘ಬಾಲ್ಡ್ ಈಸ್​ ಬ್ಯೂಟಿಫುಲ್​’ ನೀಹಾರ್​ ಸಚದೇವ್ ​

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಅಥ್ಲೀಟ್​ ಬಿಪಾಶಾ ಆಗಸ್ಟ್​ 25ರಂದು ಇನ್​ಸ್ಟಾಗ್ರಾಂನಲ್ಲಿ ಈ ಕೆಳಗಿನ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಇವರ ಈ ಬ್ಯಾಲೆನ್ಸಿಂಗ್​ ಟೆಕ್ನಿಕ್​ ಸಾಮಾನ್ಯರಿಗೆ ಸಾಧ್ಯವೇ ಆಗದು. ನಿಮ್ಮ ಕೌಶಲ ಮತ್ತು ಪ್ರತಿಭೆ ಅಗಾಧ ಎಂದು ನೆಟ್ಟಿಗರು ಬೆರಗಿನಿಂದ ಬೆನ್ನು ತಟ್ಟುತ್ತಿದ್ಧಾರೆ. ಈ ವಿಡಿಯೋ ಅನ್ನು ಈಗಾಗಲೇ ಸುಮಾರು 15 ಮಿಲಿಯನ್ ಜನರು ನೋಡಿದ್ದಾರೆ. 8.2 ಲಕ್ಷ ಜನರು ಲೈಕ್ ಮಾಡಿದ್ದಾರೆ.

ಫುಟ್​ಬಾಲ್​ ಪ್ರಿಯೆ ಬಿಪಾಷಾ ಕೌಶಲ

ಮಹಿಳೆಯನ್ನು ಗೌರವಿಸಿ. ಕೇರಳದಿಂದ ರೆಸ್ಪೆಕ್ಟ್ ಬಟನ್​. ನಿಮ್ಮ ಕೌಶಲ ಬೇರೆಯದೇ ಸ್ತರದಲ್ಲಿದೆ. ಮೆಸ್ಸಿ ರೋನಾಲ್ಡೋ ಕೂಡ ಇದನ್ನು ಮಾಡಲಾರರು. ನಿಮ್ಮ ಏಕಾಗ್ರತೆ ಅತ್ಯದ್ಭುತ. ನಿಮ್ಮ ಸ್ಥಿರತೆ ಮತ್ತು ಸಾಮರ್ಥ್ಯ  ಇತರರು ಅನುಕರಿಸಿ ಅಭ್ಯಾಸ ಮಾಡಿದರೂ ಬಾರದು. ದಿಗ್ಗಜರು ಯಾವತ್ತೂ ತಮ್ಮ ಗುರಿಯ ಕಡೆ ಗಮನವಿಟ್ಟಿರುತ್ತಾರೆ… ಅಂತೆಲ್ಲ ನೆಟ್ಟಿಗರು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ.

ಫುಟ್​ಬಾಲ್ ಮೇಲೆ ನಿಂತು ಹಗ್ಗಕ್ಕೆ ಬೆಂಕಿ ಹಚ್ಚಿಕೊಂಡು, ಮುಂದೆ?

ಇದೆಲ್ಲ ಹೇಗೆ ಸಾಧ್ಯ, ಕೌಶಲದೊಂದಿಗೆ ಸಾಹಸವೂ? ದೇವರು ನಿಮಗೆ ಒಳ್ಳೆಯದನ್ನು ಮಾಡಲಿ. ನಿಮ್ಮ ಈ ಸಾಧನೆಗೆ ತಕ್ಕ ಮಾನ್ಯತೆ ಸಿಗಲಿ ಎಂದು ಅನೇಕರು ಹಾರೈಸಿದ್ದಾರೆ. ಫುಟ್​ಬಾಲ್​ ಇಲ್ಲದೆ ಬದುಕಲಾರೆ ಎಂದು ಹೇಳಲು ಎಂಥ ಗಟ್ಟಿ ಎದೆ ಬೇಕು! ನೋಡಿದಿರಲ್ಲ…

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ 

Published On - 4:47 pm, Thu, 14 September 23