Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಚಿಲ್ಲಿ ರೋಲ್ ಐಸ್ಕ್ರೀಂ; ಇವನಿಗೆ ಯಾವ ಅವಾರ್ಡ್​ ಕೊಡಬೇಕು ಎನ್ನುತ್ತಿರುವ ನೆಟ್ಟಿಗರು

Ice Cream Lover: ಐಸ್ಕ್ರೀಮ್ ತಿನ್ನುವುದು ಹೊಟ್ಟೆ ತಂಪಾಗಿರಲೆಂದು. ಆದರೆ ಹೊಟ್ಟೆ ಉರಿಯಲು ಯಾರಾದರೂ ಐಸ್ಕ್ರೀಮ್​ ತಿನ್ನುವುದುಂಟೆ? ಮತ್ತೆ ಯಾಕೆ ಈ ವ್ಯಕ್ತಿ ಇಂಥ ಪ್ರಯೋಗಕ್ಕೆ ಬಿದ್ದಿದ್ದಾನೆ? ನೆಟ್ಟಿಗರಂತೂ ಕೆಂಡಾಮಂಡಲವಾಗಿದ್ದಾರೆ. ಅವನು ಮಾಡಿದ್ದನ್ನು ಅವನೇ ತಿನ್ನಲಿ, ನಮಗಂತೂ ಬೇಡ ಎನ್ನುತ್ತಿದ್ದಾರೆ. ಮೆಣಸಿನಕಾಯಿ ಹಾಕಿದ ಐಸ್ಕ್ರೀಮ್ ಎಂದರೆ ಸಹಜವೇ?

Viral Video: ಚಿಲ್ಲಿ ರೋಲ್ ಐಸ್ಕ್ರೀಂ; ಇವನಿಗೆ ಯಾವ ಅವಾರ್ಡ್​ ಕೊಡಬೇಕು ಎನ್ನುತ್ತಿರುವ ನೆಟ್ಟಿಗರು
ಚಿಲ್ಲಿ ರೋಲ್ ಐಸ್ಕ್ರೀಮ್
Follow us
ಶ್ರೀದೇವಿ ಕಳಸದ
|

Updated on: Sep 15, 2023 | 10:21 AM

Ice Cream: ಐಸ್ಕ್ರೀಮ್​ ಎಂದಾಗ ಅದು ಸಿಹಿಯೇ ಆಗಿರಬೇಕಲ್ಲ. ಆದರೆ ಖಾರವಾದರೆ ಹೇಗಿರುತ್ತೆ? ಅಂದರೆ ಖಾರವಾಗಿರಬೇಕೆಂದರೆ ಮೆಣಸಿನಕಾಯಿ ಹಾಕಬೇಕು. ಅದು ಹೇಗೆ ಮೆಣಸಿನಕಾಯಿ ಹಾಕಿ ಐಸ್ಕ್ರೀಮ್ ಮಾಡುವುದು? ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿದರೆ ನಿಮಗೆ ಅರ್ಥವಾಗುತ್ತದೆ. ಹಸಿಮೆಣಸಿನಕಾಯಿ ಹಾಕಿ ಐಸ್ಕ್ರೀಮ್​ ಹೇಗೆ ತಯಾರಿಸುತ್ತಾರೆ ಎನ್ನುವುದು ಈ ವಿಡಿಯೋದಲ್ಲಿದೆ. ಇದಕ್ಕೆ ಚಿಲ್ಲಿ ರೋಲ್​ ಐಸ್​​ಕ್ರೀಮ್​ ಎಂಬ ಹೆಸರು ಬೇರೆ! ನೆಟ್ಟಿಗರು ಇದನ್ನು ನೋಡಿ ಅಬ್ಬಬ್ಬಾ ಖಾರ! ಎಂದು ಉಸುಗುಡುತ್ತಿದ್ದಾರೆ.

ಇದನ್ನೂ ಓದಿ : Viral Video: ಅಲೋಪೇಸಿಯಾನೇ ಆಶೀರ್ವಾದ: ‘ಬಾಲ್ಡ್ ಈಸ್​ ಬ್ಯೂಟಿಫುಲ್​’; ನೀಹಾರ್​ ಸಚದೇವ್ ​

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇನ್‌ಸ್ಟಾಗ್ರಾಮ್ ‘ಸೂರತ್ ಫುಡ್ ಬ್ಲಾಗರ್’ ಎಂಬ ಪುಟದಲ್ಲಿ ಇದನ್ನು ಪೋಸ್ಟ್ ಮಾಡಲಾಗಿದೆ. ಸೂರತ್‌ನ ಅಹಮದಾಬಾದ್‌ನಲ್ಲಿರುವ ಅಂಗಡಿಯೊಂದರಲ್ಲಿ ‘ಚಿಲ್ಲಿ ರೋಲ್ ಐಸ್‌ಕ್ರೀಂ’ ತಯಾರಿಸುತ್ತಿರುವ ವಿಡಿಯೋ ಇದಾಗಿದೆ. ಮೆಣಸಿನಕಾಯಿ ತುಂಡುಗಳ ಮೇಲೆ ಕ್ರೀಮ್​ ಸುರಿದು ನಂತರ ಐಸ್ಕ್ರೀಮ್​ ರೋಲ್​​ಗಳನ್ನಾಗಿ ತಯಾರಿಸಲಾಗುತ್ತದೆ.

ಚಿಲ್ಲಿ ರೋಲ್​ ಐಸ್ಕ್ರೀಮ್​

ಆಗಸ್ಟ್ 11 ರಂದು ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಈತನ 1.8 ಮಿಲಿಯನ್ ಜನರು ನೋಡಿದ್ದಾರೆ. ಇನ್​ಸ್ಟಾಗ್ರಾಂ ಅನ್​ಲೈಕ್​ ಬಟನ್​ ಅನ್ನು ಕೂಡ ಕೊಡಬೇಕು ಎಂದಿದ್ದಾರೆ ಹಲವಾರು ಜನ. ಐಸ್ಕ್ರೀಮ್​ ತಿನ್ನುವುದು ಥಣ್ಣಗಾಗಲು ಆದರೆ ಈ ಐಸ್ಕ್ರೀಮ್ ತಿಂದರೆ ಏನಾಗಬೇಡ? ಎಂದಿದ್ದಾರೆ ಒಬ್ಬರು. ಹಣ ವ್ಯರ್ಥ ಎಂದಿದ್ದಾರೆ ಇನ್ನೊಬ್ಬರು. ನಾನಂತೂ ಈ ವಿಡಿಯೋ ಮತ್ತೆ ನೋಡುವುದಿಲ್ಲ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ಶೀಲಾ ಕೀ ಜವಾನೀ; ಕತ್ರೀನಾಳಂತೆ ಉಡುಗೆ ಧರಿಸಿ ಡ್ಯಾನ್ಸ್ ಮಾಡಿದ ಕನಿಷ್ಕಾ ಶರ್ಮಾ

ಐಸ್ಕ್ರೀಮ್​ ಚಟಕ್ಕೆ ಬಿದ್ದವರಿಗೆ ಇದನ್ನು ಒಮ್ಮೆ ತಿನ್ನಿಸಿದರೆ ಸಾಕು! ಎಂದಿದ್ದಾರೆ ಒಬ್ಬರು. ಈ ಫುಡ್​ ವ್ಲಾಗರ್​ಗಳಿಗೆ ಬುದ್ಧಿ ಇಲ್ಲ ಎಂದಿದ್ದಾರೆ ಮತ್ತೊಬ್ಬರು. ಇದನ್ನು ವ್ಲಾಗ್ ಮಾಡಲಷ್ಟೇ ಮಾಡಿರಬೇಕು, ಯಾರಾದರೂ ತಿನ್ನುತ್ತಾರೆಯೇ? ಎಂದು ಕೇಳಿದ್ಧಾರೆ ಮಗದೊಬ್ಬರು. ಮಕ್ಕಳೇನಾದರೂ ಪಿಸ್ತಾ ಐಸ್ಕ್ರೀಮ್​ ಎಂದು ತಿಂದರೆ ಅಷ್ಟೇ, ಜನ್ಮದಲ್ಲಿ ಅವು ಐಸ್ಕ್ರೀಮ್ ಮುಟ್ಟಲ್ಲ ಎಂದಿದ್ದಾರೆ ಇನ್ನೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

ಜನಿವಾರ ತೆಗೆಸಿದ ವಿವಾದ: ಸಚಿವರು, ಶಾಸಕರಿಗೆ ಮಂತ್ರಾಲಯ ಶ್ರೀ ಎಚ್ಚರಿಕೆ
ಜನಿವಾರ ತೆಗೆಸಿದ ವಿವಾದ: ಸಚಿವರು, ಶಾಸಕರಿಗೆ ಮಂತ್ರಾಲಯ ಶ್ರೀ ಎಚ್ಚರಿಕೆ
ಮಾರಿಗುಡಿ ದೇವಾಲಯದಲ್ಲಿ ಆದ ವಿಶಿಷ್ಟ ಅನುಭವದ ಬಗ್ಗೆ ಸುನಿಲ್ ಶೆಟ್ಟಿ ಮಾತು
ಮಾರಿಗುಡಿ ದೇವಾಲಯದಲ್ಲಿ ಆದ ವಿಶಿಷ್ಟ ಅನುಭವದ ಬಗ್ಗೆ ಸುನಿಲ್ ಶೆಟ್ಟಿ ಮಾತು
ಜನಿವಾರ ವಿವಾದ: ಬೀದರ್ ವಿದ್ಯಾರ್ಥಿಗೆ ಫ್ರೀ ಇಂಜಿನಿಯರಿಂಗ್ ಸೀಟ್ ಭಾಗ್ಯ
ಜನಿವಾರ ವಿವಾದ: ಬೀದರ್ ವಿದ್ಯಾರ್ಥಿಗೆ ಫ್ರೀ ಇಂಜಿನಿಯರಿಂಗ್ ಸೀಟ್ ಭಾಗ್ಯ
ಧರ್ಮಸ್ಥಳ ಮಂಜುನಾಥ, ವೀರೇಂದ್ರ ಹೆಗ್ಗಡೆಯವರ ಆಶಿರ್ವಾದ ಪಡೆದ ಡಿಕೆಶಿ
ಧರ್ಮಸ್ಥಳ ಮಂಜುನಾಥ, ವೀರೇಂದ್ರ ಹೆಗ್ಗಡೆಯವರ ಆಶಿರ್ವಾದ ಪಡೆದ ಡಿಕೆಶಿ
ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ಬಗ್ಗೆ ಗೃಹ ಸಚಿವ ಹೇಳಿದ್ದಿಷ್ಟು
ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ಬಗ್ಗೆ ಗೃಹ ಸಚಿವ ಹೇಳಿದ್ದಿಷ್ಟು
Babar Azam: 0, 1, 2... ಬಂದ ಬಾಬರ್, ಹೋದ ಬಾಬರ್
Babar Azam: 0, 1, 2... ಬಂದ ಬಾಬರ್, ಹೋದ ಬಾಬರ್
ಕುಟುಂಬದ ಜೊತೆ ಉಡುಪಿಗೆ ಬಂದ ಸುನೀಲ್ ಶೆಟ್ಟಿ; ಮಾರಿಗುಡಿಗೆ ಭೇಟಿ
ಕುಟುಂಬದ ಜೊತೆ ಉಡುಪಿಗೆ ಬಂದ ಸುನೀಲ್ ಶೆಟ್ಟಿ; ಮಾರಿಗುಡಿಗೆ ಭೇಟಿ
ಜೀಪ್​ ಅಡ್ಡಗಟ್ಟಿದ ಹುಲಿರಾಯ: ಆತಂಕದಿಂದ ಚಿರಾಡಿದ ಪ್ರವಾಸಿಗರು!
ಜೀಪ್​ ಅಡ್ಡಗಟ್ಟಿದ ಹುಲಿರಾಯ: ಆತಂಕದಿಂದ ಚಿರಾಡಿದ ಪ್ರವಾಸಿಗರು!
ಕಾರಿನ ಮೇಲೆ ಕಾಡಾನೆ ದಾಳಿ ಯತ್ನ, ಎದೆ ಝಲ್​ ಎನ್ನಿಸುವ ವಿಡಿಯೋ ವೈರಲ್
ಕಾರಿನ ಮೇಲೆ ಕಾಡಾನೆ ದಾಳಿ ಯತ್ನ, ಎದೆ ಝಲ್​ ಎನ್ನಿಸುವ ವಿಡಿಯೋ ವೈರಲ್
ಮದುವೆ ಯಾಕಾಗಬೇಕು? ರವಿಚಂದ್ರನ್ ಮಾತಿಗೆ ಚಪ್ಪಾಳೆಯ ಸುರಿಮಳೆ
ಮದುವೆ ಯಾಕಾಗಬೇಕು? ರವಿಚಂದ್ರನ್ ಮಾತಿಗೆ ಚಪ್ಪಾಳೆಯ ಸುರಿಮಳೆ