Viral Video: ನ್ಯೂಯಾರ್ಕ್​; ಮಣ್ಣಿನೊಳಗೆ ಗುದ್ದಾಟಕ್ಕೆ ಬಿದ್ದ ಮಾಡೆಲ್​​​ಗಳು, ನೆಟ್ಟಿಗರ ತಮಾಷೆ ಪ್ರತಿಕ್ರಿಯೆಗಳ ಹೊಳೆ

New York Fashion Week: ಒಬ್ಬರಿಗೊಬ್ಬರು ಎಳೆದಾಡಿಕೊಳ್ಳುತ್ತಿದ್ದಾರೆ ಇವರೆಲ್ಲ. ಇವರೇನು ಯಾವುದೋ ಬೀದಿಜಗಳಕ್ಕೆ ನಿಂತಿಲ್ಲ ಮತ್ತೆ. ಇವರೆಲ್ಲರೂ ಮಾಡೆಲ್​​​ಗಳು. ನ್ಯೂಯಾರ್ಕ್​​ ಫ್ಯಾಷನ್​ ವೀಕ್​​ನಲ್ಲಿ ನಡೆದ ಮಡ್​ ಫೈಟ್​ನ ದೃಶ್ಯವಿದು. ಇಲ್ಲಿ ಝಾರಾ ಸೇಲ್ ನಡೆಯುತ್ತಿದೆ. ಸರೋಜಿನಿ ಮಾರ್ಕೆಟ್​​​ನಲ್ಲಿರುವ ಹುಡುಗಿಯರು ಇವರು... ಅಂತೆಲ್ಲ ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ.

Viral Video: ನ್ಯೂಯಾರ್ಕ್​; ಮಣ್ಣಿನೊಳಗೆ ಗುದ್ದಾಟಕ್ಕೆ ಬಿದ್ದ ಮಾಡೆಲ್​​​ಗಳು, ನೆಟ್ಟಿಗರ ತಮಾಷೆ ಪ್ರತಿಕ್ರಿಯೆಗಳ ಹೊಳೆ
ನ್ಯೂಯಾರ್ಕ್​ ಫ್ಯಾಷನ್​ ವೀಕ್​ನಲ್ಲಿ ಮಾಡೆಲ್​​ಗಳ ಮಡ್ ಫೈಟ್
Follow us
ಶ್ರೀದೇವಿ ಕಳಸದ
|

Updated on: Sep 15, 2023 | 12:40 PM

New York: ಮಾಡೆಲ್​ಗಳೆಂದರೆ ಸಾಮಾನ್ಯವಾಗಿ ರ್ಯಾಂಪ್​ ಮೇಲಿರುತ್ತಾರೆ. ಆದರೆ ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಅವರು ಮಣ್ಣಿನೊಳಗಿದ್ದಾರೆ! ಹೌದು, ನ್ಯೂಯಾರ್ಕ್ ಫ್ಯಾಷನ್  ವೀಕ್​ನಲ್ಲಿ ((New York Fashio Week) ಮಾಡೆಲ್​​​ಗಳು ಮಡ್​ ಫೈಟ್​ ನಡೆಸಿದ್ದಾರೆ. ಈ ವಿಡಿಯೋ ಫ್ಯಾಷನ್​ಪ್ರಿಯರ ಹುಬ್ಬೇರಿಸುವಂತೆ ಮಾಡಿದೆ. ಎಲೆನಾ ವೆಲೆಝ್​ನ 2024ರ ಸ್ಪ್ರಿಂಗ್​/ಸಮ್ಮರ್​ ನ್ಯೂ ಕಲೆಕ್ಷನ್​ ಪ್ರಸ್ತುತಿಗಾಗಿ ಮಾಡೆಲ್​​ಗಳು ಅಕ್ಷರಶಃ ಮಣ್ಣಿನಗುಂಡಿಗೆ ಇಳಿದಿದ್ದ ವಿಡಿಯೋ ಇದಾಗಿದೆ. ಈ ಫ್ಯಾಷನ್​ ಷೋ ವಿಡಿಯೋ ಅನ್ನು ಇನ್​ಸ್ಟಾಗ್ರಾಂನ @DietSabya ನಲ್ಲಿ ಹಂಚಿಕೊಳ್ಳಲಾಗಿದ್ದು ಮಾಡೆಲ್​ಗಳು ಕೆಸರಿನಲ್ಲಿ ಬಿದ್ದೇಳುತ್ತಿರುವ ದೃಶ್ಯಗಳನ್ನು ನೆಟ್ಟಿಗರು ಅವಾಕ್ಕಾಗಿ ನೋಡುತ್ತಿದ್ದಾರೆ.

ಇದನ್ನೂ ಓದಿ : Viral Video: ಬಾಗ್ಮತಿ ನದಿಯ ಪ್ರವಾಹದ ಸುದ್ದಿ ಓದುವಾಗ ನಕ್ಕ ನಿರೂಪಕಿಯ ವಿಡಿಯೋ ವೈರಲ್

18 ಗಂಟೆಗಳ ಹಿಂದೆ ಪೋಸ್ಟ್ ಮಾಡಿದ ಈ ವಿಡಿಯೋ ಅನ್ನು ಈತನಕ 7,000ಕ್ಕೂ ಹೆಚ್ಚು ಜನರು ನೋಡಿದ್ಧಾರೆ. ಸಾವಿರಾರು ಜನರು ಅನೇಕ ರೀತಿಯಲ್ಲಿ ಪ್ರತಿಕ್ರಿಯಿಸಿದ್ಧಾರೆ. ರೆಸ್ಟೋರೆಂಟ್​ ಬಿಲ್​ ಯಾರು ಕೊಡುತ್ತಾರೆ ಎಂಬುದರ ಬಗ್ಗೆ ಇಡೀ ಫ್ಯಾಮಿಲಿಯೇ ಜಗಳಕ್ಕೆ ಬಿದ್ದಿದೆ ಎಂದು ಒಬ್ಬರು ತಮಾಷೆ ಮಾಡಿದ್ಧಾರೆ. ಇದರ ಔಚಿತ್ಯವೇನಿತ್ತು ಎಂದು ಮತ್ತೊಬ್ಬರು ಕೇಳಿದ್ದಾರೆ.

ನೀವೂ ನೋಡಿ ಮಾಡೆಲ್​ಗಳ ಮಡ್ ಫೈಟ್​

View this post on Instagram

A post shared by DietSabya® (@dietsabya)

ತಾಯಿ ಆಚೆ ಹೋಗಿರುವಾಗ ಹಳ್ಳಿಮಕ್ಕಳು ಜಗಳಾಡುತ್ತಿವೆ ಎಂದಿದ್ದಾರೆ ಒಬ್ಬರು. ಝಾರಾನಲ್ಲಿ ಮೊದಲ ದಿನದ ಸೇಲ್​ ಎಂದಿದ್ದಾರೆ ಇನ್ನೊಬ್ಬರು. ಇದು ಬಿಗ್​ ಬಾಸ್​ ಟ್ರೇಲರ್ ಎಂದು ನಾ ಅನ್ಕೊಂಡೆ ಎಂದಿದ್ದಾರೆ ಮತ್ತೊಬ್ಬರು. ನಾನು ಜುಹೂ ಬೀಚಿನಲ್ಲಿ ನಮ್ಮ ಹುಡುಗರೊಂದಿಗೆ ಮರಳಿನ ಗೋಪುರ ಕಟ್ಟುತ್ತಿದ್ದೇನೆ ಎಂದು ಮಗದೊಬ್ಬರು. ಸರೋಜಿನಿ ಲೂಟ್​, ಬನ್ನಿ ಬನ್ನಿ ಎಲ್ಲಾ ನೂರು ರೂಪಾಯಿಗೆ ಎಂದು ತಮಾಷೆ ಮಾಡಿದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : Viral Video: ಅಲೋಪೇಸಿಯಾನೇ ಆಶೀರ್ವಾದ: ‘ಬಾಲ್ಡ್ ಈಸ್​ ಬ್ಯೂಟಿಫುಲ್​’ ನೀಹಾರ್​ ಸಚದೇವ್ ​

ಭಾನುವಾರದಂದು ಸರೋಜಿನಿಯಲ್ಲಿರುವ ಹುಡುಗಿಯರು ಎಂದಿದ್ದಾರೆ ಒಬ್ಬರು.  ಬ್ರೌನ್​ ಫ್ಯಾಮಿಲಿ ತುಂಡು ಭೂಮಿಗಾಗಿ ಫೈಟ್ ಮಾಡುತ್ತಿದೆ ಎಂದಿದ್ದಾರೆ ಇನ್ನೊಬ್ಬರು. ಇದು ನಾನೇ ಲಂಚ್​​ ಬ್ರೇಕ್​ನಲ್ಲಿ ಎಂದಿದ್ದಾರೆ ಮತ್ತೊಬ್ಬರು. ಸ್ಲೀಪ್ಲೆಂಬರ್​ ಲಾಸ್ಟ್​ ಸೇಲ್​ನ ಕೊನೆಯ ದಿನ ಇದು! ಎಂದಿದ್ದಾರೆ ಮಗದೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ