AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಬಾಗ್ಮತಿ ನದಿಯ ಪ್ರವಾಹದ ಸುದ್ದಿ ಓದುವಾಗ ನಕ್ಕ ನಿರೂಪಕಿಯ ವಿಡಿಯೋ ವೈರಲ್

News Anchor: ಲೈವ್​ ನ್ಯೂಸ್​ನಲ್ಲಿ ಸುದ್ದಿ ನಿರೂಪಕರು ಎಷ್ಟು ಎಚ್ಚರದಿಂದ ಇದ್ದರೂ ಸಾಲದು. ಧ್ವನಿಯೋ, ಮುಖಭಾವವೋ ಅಥವಾ ಎಡರುತೊಡರೋ ಆದರೆ ಇಡೀ ಜಗತ್ತೇ ನಕ್ಕುಬಿಡುತ್ತದೆ. ಅಂಥದ್ದರಿಂದ ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಸುದ್ದಿನಿರೂಪಕಿ ನಕ್ಕಿದ್ದಾರೆ. ಅದರಲ್ಲೂ ಬಾಗ್ಮತಿ ಪ್ರವಾಹದಂಥ ಗಂಭೀರ ಸುದ್ದಿಯನ್ನು ಓದುವಾಗ!

Viral Video: ಬಾಗ್ಮತಿ ನದಿಯ ಪ್ರವಾಹದ ಸುದ್ದಿ ಓದುವಾಗ ನಕ್ಕ ನಿರೂಪಕಿಯ ವಿಡಿಯೋ ವೈರಲ್
ಬಾಗ್ಮತಿ ನದಿ ಪ್ರವಾಹದ ಬಗ್ಗೆ ಓದುತ್ತಿರುವಾಗ ನಗುತ್ತಿರುವ ಆ್ಯಂಕರ್
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ|

Updated on: Sep 15, 2023 | 11:34 AM

Share

Bihar: ಸುದ್ದಿನಿರೂಪಕರು (News Anchor) ಲೈವ್​ನಲ್ಲಿದ್ದಾಗ ಇಡೀ ಜಗತ್ತೇ ಅವರನ್ನು ನೋಡುತ್ತಿರುತ್ತದೆ. ಚೂರು ಏರುಪೇರಾದರೂ ಶರವೇಗದಲ್ಲಿ ಫುಟೇಜ್​ ಜಗತ್ತಿಗೆ ತಲುಪಿಬಿಡುತ್ತವೆ. ಇದೀಗ ಈ ಸುದ್ದಿ ನಿರೂಪಕಿ ಬಾಗ್ಮತಿ ನದಿಯ (Bagmati Flood)) ಪ್ರವಾಹದ ಕುರಿತು ಸುದ್ದಿ ಓದುವಾಗ ನಕ್ಕುಬಿಟ್ಟಿದ್ದಾರೆ. ಬಿಹಾರ್ ಮತ್ತು ಜಾರ್ಖಂಡ ಮೂಲದ ಮಾಧ್ಯಮ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈ ನಿರೂಪಕಿ ಇಂಥ ಗಂಭೀರ ಸುದ್ದಿಯನ್ನು ಪ್ರಸ್ತುತಪಡಿಸುತ್ತಿರುವಾಗ ನಕ್ಕಿದ್ದು ಏಕೆ, ಕಾರಣವೇನು? ಎಂದು ನೆಟ್ಟಿಗರು ಚರ್ಚಿಸುತ್ತಿದ್ದಾರೆ. X ನಲ್ಲಿ ಈ ವಿಡಿಯೋ ಅನ್ನು ಸಂಜಯ ತ್ರಿಪಾಠಿ ಎನ್ನುವವರು ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ : Viral Video: ಚಿಲ್ಲಿ ರೋಲ್ ಐಸ್ಕ್ರೀಂ; ಇವನಿಗೆ ಯಾವ ಅವಾರ್ಡ್​ ಕೊಡಬೇಕು ಎನ್ನುತ್ತಿರುವ ನೆಟ್ಟಿಗರು

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಸೆ. 14ರಂದು ಈ ವಿಡಿಯೋ ಪೋಸ್ಟ್ ಮಾಡಲಾಗಿದ್ದು, ಈತನಕ 18,200 ಜನರು ನೋಡಿದ್ದಾರೆ. 200ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದು 50 ಕ್ಕೂ ಹೆಚ್ಚು ಜನರು ಪ್ರತಿಕ್ರಿಯಿಸಿದ್ದಾರೆ ಮತ್ತು ರೀಪೋಸ್ಟ್ ಮಾಡಿದ್ದಾರೆ. ಆಕೆಯ ನೌಕರಿ ಇದೆಯೇ ಇನ್ನೂ? ಎಂದು ಕೇಳಿದ್ದಾರೆ ಕೆಲವರು.

ಬಾಗ್ಮತಿ  ನದಿಯ ಪ್ರವಾಹದ ಬಗ್ಗೆ ಸುದ್ದಿ ಓದುತ್ತಿದ್ದಾಗ ನಕ್ಕ ನಿರೂಪಕಿ

ಇದು ನ್ಯೂಸ್​ ಚಾನೆಲ್​ನ​ ಮೇಲೆ ಕೆಟ್ಟ ಅಭಿಪ್ರಾಯ ಹೊಮ್ಮಿಸುತ್ತದೆ ಎಂದಿದ್ದಾರೆ ಒಬ್ಬರು. ಈ ಮೇಡಮ್​ಗೆ ಬಿಹಾರ್ ಪ್ರವಾಹದ ಬಗ್ಗೆ ರಿಪೋರ್ಟಿಂಗ್ ಮಾಡಲು ಕಳಿಸಬೇಕು, ಆಗ ಅವರಿಗೆ ಇನ್ನಷ್ಟು ಮಜಾ ಬರುತ್ತದೆ ಎಂದಿದ್ದಾರೆ ಇನ್ನೊಬ್ಬರು. ಈಗಾಗಲೇ ಈಕೆ ಕೆಲಸವನ್ನು ಕಳೆದುಕೊಂಡಿರಬಹುದು ಎಂದು ಕೆಲವರು ಹೇಳಿದ್ಧಾರೆ. ಕ್ಯಾಮೆರಾಮ್ಯಾನ್​ ಏನೋ ಸನ್ನೆ ಮಾಡಿರಬೇಕು ಅದಕ್ಕೇ ಆಕೆಗೆ ನಗು ಬಂದಿದೆ ಎಂದಿದ್ದಾರೆ ಒಂದಿಷ್ಟು ಜನ.

ಇದನ್ನೂ ಓದಿ : Viral Video: ಅಥ್ಲೀಟ್​ ಬಿಪಾಶಾ ಫುಟ್​ಬಾಲ್​ ಕೌಶಲ; ರೊನಾಲ್ಡೋ ಮೆಸ್ಸಿಗೂ ಅಸಾಧ್ಯ ಎನ್ನುತ್ತಿರುವ ನೆಟ್ಟಿಗರು

ಮೋದಿ ಹೈ ತೋ ಮುಮ್ಕಿನ್​ ಹೈ ಎಂದು ಹಿಂದೆಯಿಂದ ಯಾರೋ ಹೇಳಿದ್ದಿರಬಹುದು ಎಂದಿದ್ಧಾರೆ ಒಬ್ಬರು. ಈಕೆಯ ಮನೆಗೆಲಸದ ಸಹಾಯಕಿಯ ಹೆಸರು ಬಾಗ್ಮತಿ ಇರಬೇಕು. ಅದಕ್ಕೇ ಆಕೆಗೆ ನಗು ಬಂದಿದೆ ಎಂದಿದ್ದಾರೆ ಇನ್ನೊಬ್ಬರು. ಈ ಭಾಗವನ್ನು ಕಟ್ ಮಾಡದೇ ಪ್ರಸಾರ ಮಾಡಿದ್ದೇಕೆ? ಎಂದಿದ್ದಾರೆ ಮತ್ತೊಬ್ಬರು. ಲೈವ್​ ನ್ಯೂಸ್​ನಲ್ಲಿ ಯಾರಾದರೂ ನಗಲು ಸಾಧ್ಯವೆ? ಎಂದು ಕೇಳಿದ್ಧಾರೆ ಮಗದೊಬ್ಬರು.

ಈ ಸುದ್ದಿನಿರೂಪಕಿಗೆ ನಕ್ಕಿದ್ದು ಯಾಕೆ ಎಂದು ನಿಮಗೇನಾದರೂ ಹೊಳೆಯಬಹುದೆ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ