Viral Video: ಸಲಿಂಗವಿವಾಹ: ‘ಲೋಣಾವಳದ ಕಲ್ಯಾಣಮಂಟಪದಲ್ಲಿ ಸಪ್ತಪದಿ ತುಳಿದೆವು’ ಅವಿನಾಶ ವರುಣ

Gay Marriage: 'ಪ್ರೀತಿಗೆ ಲಿಂಗವಿಲ್ಲ. ಅದು ಪ್ರೀತಿಯೆಂದರೆ ಪ್ರೀತಿ ಅಷ್ಟೇ. ನೀವು ಪ್ರೀತಿಸುವವರ ಬಗ್ಗೆ ಹೆಮ್ಮೆ ಪಡಿ. ಪ್ರೀತಿಗೆ ಲಿಂಗ, ವಯಸ್ಸು ಅಥವಾ ಬಣ್ಣ ಇದ್ಯಾವುದೂ ಗೊತ್ತಿಲ್ಲ. ನಿಮ್ಮನ್ನು ಪ್ರೀತಿಸುವವರಿಗೆ ಹೃದಯ ಇದ್ದರೆ ಅವರು ನಿಮ್ಮನ್ನು  ಸದಾ ಪ್ರೀತಿಸುತ್ತಿರುತ್ತಾರೆ. ಇಷ್ಟಪಟ್ಟವರೊಂದಿಗೆ ಬದುಕು ಕಟ್ಟಿಕೊಳ್ಳುವುದು ಮುಖ್ಯ' ಅವಿನಾಶ ಮತ್ತು ವರುಣ. ಸಲಿಂಗದಂಪತಿ, ಮಹಾರಾಷ್ಟ್ರ

Viral Video: ಸಲಿಂಗವಿವಾಹ: 'ಲೋಣಾವಳದ ಕಲ್ಯಾಣಮಂಟಪದಲ್ಲಿ ಸಪ್ತಪದಿ ತುಳಿದೆವು' ಅವಿನಾಶ ವರುಣ
ಸಲಿಂಗದಂಪತಿ ಅವಿನಾಶ ಮತ್ತು ವರುಣ
Follow us
ಶ್ರೀದೇವಿ ಕಳಸದ
|

Updated on:Sep 15, 2023 | 1:54 PM

LGBTQIA+ : ‘6 ವರ್ಷಗಳ ದೀರ್ಘ ಪ್ರೇಮಸಂಬಂಧ (Relationship) ಮುಗ್ಗರಿಸಿದ್ದರಿಂದ ನಾನು ತೀವ್ರ ಬೇಸರದಲ್ಲಿದ್ದೆ. 2021ರಲ್ಲಿ ಪೋಷಕರನ್ನು ನೋಡಲು ಆಗಷ್ಟೇ ಭಾರತಕ್ಕೆ ಬಂದಿದ್ದ ಅವಿನಾಶ ಭೇಟಿಯಾಯಿತು. ನಾನು ಗಂಭೀರವಾಗಿ ಸಂಗಾತಿಯ ಹುಡುಕಾಟದಲ್ಲಿದ್ದೆ. ನಾನು ಮತ್ತು 37 ವರ್ಷದ ಅವಿನಾಶ ಪರಸ್ಪರ ಪ್ರೀತಿಯಲ್ಲಿ ಬಿದ್ದೆವು. ಆದರೆ ನಮ್ಮ ಸಂಬಂಧವನ್ನು ಮೊದಮೊದಲು ಎರಡೂ ಕಡೆಯ ಪೋಷಕರು ಒಪ್ಪಲಿಲ್ಲ. ಕೊನೆಗೆ ಒಪ್ಪಿಕೊಂಡರು. ಸಾಕಷ್ಟು ಕಲ್ಯಾಣಮಂಟಪಗಳು ಬಾಡಿಗೆ ಕೊಡಲು ನಿರಾಕರಿಸಿದವು. ಕೊನೆಗೆ ಲೋನಾವಳದಲ್ಲಿ (Lonavala) ಸಪ್ತಪದಿಯನ್ನು ತುಳಿದೆವು. 150 ಜನರು ಅತಿಥಿಗಳು ನಮ್ಮ ಮದುವೆಗೆ ಬಂದು ಹಾರೈಸಿದರು. ಪೋಷಕರು ಮನದುಂಬಿ ಹಾರೈಸಿದರು. ಸಿಯಾರಾ (ನಾಯಿ)ಳೊಂದಿಗೆ ನಮ್ಮ ಪುಟ್ಟ ಸಂಸಾರ ನೌಕೆ ಸಾಗುತ್ತಿದೆ’ ವರುಣ, ಮಹಾರಾಷ್ಟ್ರ

ಇದನ್ನೂ ಓದಿ : Viral Video: ನ್ಯೂಯಾರ್ಕ್​; ಮಣ್ಣಿನೊಳಗೆ ಗುದ್ದಾಟಕ್ಕೆ ಬಿದ್ದ ಮಾಡೆಲ್​​​ಗಳು, ನೆಟ್ಟಿಗರ ತಮಾಷೆ ಪ್ರತಿಕ್ರಿಯೆಗಳ ಹೊಳೆ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ವಿಡಿಯೋ ಅನ್ನು officialpeopleofindia ಜು. 15ರಂದು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದೆ. ಈತನಕ 1.2 ಲಕ್ಷ ಜನರು ಲೈಕ್ ಮಾಡಿದ್ದು ಸುಮಾರು ಮೂರು ಮಿಲಿಯನ್​ ಜನರು ನೋಡಿದ್ದಾರೆ. ಸಾವಿರಾರು ಜನರು ಈ ಜೋಡಿಗೆ ಶುಭಹಾರೈಸಿ ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಅವಿನಾಶ ವರುಣರ ಅಪೂರ್ವ ಕ್ಷಣಗಳು

ಸಲಿಂಗ ವಿವಾಹವನ್ನು ಸಮಾಜವು ಸಹಜವಾಗಿ ಸ್ವೀಕರಿಸುತ್ತಿರುವ ಬಗ್ಗೆ ಖುಷಿ ಇದೆ ಎಂದು ಒಬ್ಬರು ಹೇಳಿದ್ಧಾರೆ.  ಇಷ್ಟವಿಲ್ಲದ ಸಂಬಂಧದಲ್ಲಿದ್ದು ಗೋಳಾಡುವುದಕ್ಕಿಂತ ಇದು ಬಹಳ ಒಳ್ಳೆಯದು, ನಿಮ್ಮಿಬ್ಬರನ್ನು ನೋಡಲು ಬಹಳ ಖುಷಿಯಾಗುತ್ತಿದೆ ಎಂದಿದ್ದಾರೆ ಇನ್ನೊಬ್ಬರು. ಈ ವಿಷಯದಲ್ಲಿ ತಮ್ಮ ಮಕ್ಕಳ ಇಂಗಿತವನ್ನು ಕುಟುಂಬವು ಒಪ್ಪಿ ನೆರವೇರಿಸಿಕೊಡುವುದು ಮುಖ್ಯ, ಇದಕ್ಕಿಂತ ಹೆಚ್ಚಿನ ಖುಷಿ ಏನಿದೆ? ಎಂದಿದ್ದಾರೆ ಮತ್ತೊಬ್ಬರು. ಪ್ರೀತಿಯ ಮುಂದೆ ಸಮಾಜವು ಸೋಲುತ್ತದೆ ಎಂದಿದ್ದಾರೆ ಮಗದೊಬ್ಬರು.

ಸಿಯಾರಾಳೊಂದಿಗೆ ವರುಣ ಅವಿನಾಶ

View this post on Instagram

A post shared by AviGotVar (@avigotvar)

ದೇವರು ನಿಮ್ಮನ್ನು ಪರಸ್ಪರಿಗಾಗಿ ರೂಪಿಸಿದ್ದಾನೆ, ನಿಮ್ಮ ಮೇಲೆ ಯಾರದೇ ಕೆಟ್ಟ ದೃಷ್ಟಿ ಬೀಳದಿರಲಿ ಎಂದು ನೆಟ್ಟಿಗರು ಹಾರೈಸಿದ್ದಾರೆ. ನಾನು ನನ್ನ ಸಂಗಾತಿಯನ್ನು ಹುಡುಕುತ್ತಿದ್ದೇನೆ, ಎಲ್ಲಿದ್ದಾನೋ ಏನೋ ಆದಷ್ಟು ಬೇಗ ಸಿಗಲಿ ಎಂದು ಕೇಳಿಕೊಂಡಿದ್ಧಾರೆ ಕೆಲವರು.

ಈ ವಿಡಿಯೋಗಳನ್ನು ನೋಡಿದ ನಿಮ್ಮ ಅಭಿಪ್ರಾವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 1:54 pm, Fri, 15 September 23

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್