Viral Video: ಹೊಗೆ ಹೊಮ್ಮಿಸುವ ಶಿಲೀಂಧ್ರ? ನೆಟ್ಟಿಗರಲ್ಲಿ ಕುತೂಹಲ ಕೆರಳಿಸಿದ ಈ ವಿಡಿಯೋ

Western Ghats: ಪಶ್ಚಿಮ ಘಟ್ಟದಲ್ಲಿ ಶಿಲೀಂಧ್ರವೊಂದು ಹೊಗೆ ಹೊಮ್ಮಿಸುತ್ತಿದೆಯಂತೆ! ಶಿಲೀಂಧ್ರಗಳು ಹೊಗೆ ಹೊಮ್ಮಿಸುತ್ತಾವಾ? ಅದು ಹೇಗೆ ಮತ್ತು ಯಾಕೆ? ಹೊಗೆ ಹೊಮ್ಮಿಸುವ ಉದ್ದೇಶವಾದರೂ ಏನು? ಹೀಗೆಲ್ಲ ಪ್ರಶ್ನೆಗಳು ಶೀರ್ಷಿಕೆ ಓದಿದ ನಿಮ್ಮನ್ನು ಕಾಡುತ್ತಿರಬಹುದಲ್ಲವೆ? ಒಮ್ಮೆ ಈ ವಿಡಿಯೋ ನೋಡಿ, ಹೀಗೆ ಈ ಶಿಲೀಂಧ್ರಕ ಹೊಮ್ಮಿಸಿರುವ ಹೊಗೆಯ ಹಿಂದಿನ ರಹಸ್ಯವನ್ನೂ ತಿಳಿದುಕೊಳ್ಳಿ.

Viral Video: ಹೊಗೆ ಹೊಮ್ಮಿಸುವ ಶಿಲೀಂಧ್ರ? ನೆಟ್ಟಿಗರಲ್ಲಿ ಕುತೂಹಲ ಕೆರಳಿಸಿದ ಈ ವಿಡಿಯೋ
ಬೀಜಕಗಳನ್ನು ಬಿಡುಗಡೆಗೊಳಿಸುತ್ತಿರುವ ಬ್ರ್ಯಾಕೆಟ್ ಫಂಗಸ್​
Follow us
|

Updated on: Sep 15, 2023 | 4:30 PM

Fungus : ನಮ್ಮ ನಿಸರ್ಗವು ಹಲವಾರು ವೈಚಿತ್ರ್ಯಗಳನ್ನು ಹೊಂದಿದೆ. ಹಾಗೆಂದು ಅವೆಲ್ಲವೂ ನಮ್ಮ ಕಣ್ಣಿಗೆ ಬೀಳುತ್ತವೆ ಎಂದು ಹೇಳಲಾಗದು. ಆದರೆ, ಸಾಮಾಜಿಕ ಜಾಲತಾಣಗಳ ಮೂಲಕ ನಿಸರ್ಗದ ಅದ್ಭುತಗಳು ದಂಡಿಯಾಗಿ ನಮ್ಮ ಕಣ್ಣಿಗೆ ಬೀಳುತ್ತಿರುತ್ತವೆ. ಈ ಪೈಕಿ ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ, ಶಿಲೀಂಧ್ರವೊಂದು ಹೊಗೆ ಹೊಮ್ಮಿಸುತ್ತಿದೆ! ಅರೆ, ಅದು ಹೇಗೆ? ನೆಟ್ಟಿಗರನೇಕರು ಈ ವಿಡಿಯೋ ನೋಡಿ ಅಚ್ಚರಿಯಿಂದ ಪ್ರತಿಕ್ರಿಯಿಸುತ್ತಿದ್ದಾರೆ. ಇದನ್ನು ಬ್ರ್ಯಾಕೆಟ್ ಶಿಲೀಂಧ್ರ (Bracket Fungus) ಎನ್ನುತ್ತಾರೆ. ಇದು ಬೀಜಕಗಳನ್ನು ಬಿಡುಗಡೆ ಮಾಡುವ ರೀತಿ ಹೊಗೆ ಹೊಮ್ಮಿಸುವಂತೆ ಇರುತ್ತದೆ. ಅಂಕುರ್ ರಾಪ್ರಿಯಾ (IRS) ಈ ವಿಡಿಯೋ ಅನ್ನು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ : Viral Video: ಈ ಪಹಾಡೀ ಪತ್ರೊಡೆ ತಿನ್ನಲು ಹಿಮಾಚಲಕ್ಕೆ ಹೋಗೋಣ ಬನ್ನಿ!

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

‘ಇದು ಜೀವವೈವಿಧ್ಯಕ್ಕೆ ಹೆಸರುವಾಸಿಯಾದ ಪಶ್ಚಿಮ ಘಟ್ಟಗಳಲ್ಲಿ ಚಿತ್ರೀಕರಿಸಿದ ವಿಡಿಯೋ. ಇದು ಹೊಗೆಯಲ್ಲ, ಬ್ರ್ಯಾಕೆಟ್​ ಶಿಲೀಂಧ್ರಗಳು ಮಳೆಗಾಲದಲ್ಲಿ ತನ್ನ ಬೀಜಕಗಳನ್ನು ಹೇಗೆ ಬಿಡುಗಡೆ ಮಾಡುತ್ತವೆ ಎನ್ನುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಈ ಶಿಲೀಂಧ್ರಗಳು ಸಾಮಾನ್ಯವಾಗಿ ಕಾಡುಗಳಲ್ಲಿ ಕಾಣಸಿಗುತ್ತವೆ. ಮುಖ್ಯವಾಗಿ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವ ಮರಗಳ ಮೇಲೆ. ಈ ಶಿಲೀಂಧ್ರಗಳು ರಂಧ್ರವಿರುವ ಅಂಗಾಂಶದಲ್ಲಿ ಬೀಜಕಗಳನ್ನು ಉತ್ಪತ್ತಿ ಮಾಡುತ್ತವೆ. ಸಿಲಿಂಡರಿನ ಆಕಾರದ ರಂಧ್ರಗಳ ಮೂಲಕ ಬೀಜಕಗಳು ಹೊರಚೆಲ್ಲುತ್ತವೆ. ಎರಡು ವಿಭಿನ್ನ ಸಂಯೋಗದ ಮೂಲಕ ಹ್ಯಾಪ್ಲಾಯ್ಡ್ ಬೀಜಕಗಳು ಮರದ ಮೇಲೆ ಮೊಳಕೆಯೊಡೆಯುತ್ತವೆ.’ ಎಂದು ಅಂಕುರ್ ರಾಪ್ರಿಯಾ ಮಾಹಿತಿ ನೀಡಿದ್ಧಾರೆ.

ಬ್ರ್ಯಾಕೆಟ್​ ಶಿಲೀಂಧ್ರ ಬೀಜಕಗಳನ್ನು ಬಿಡುಗಡೆ ಮಾಡುತ್ತಿರುವ ದೃಶ್ಯ

ಇದು ಅದ್ಭುತವಾಗಿದೆ ಎಂದು ಅನೇಕರು ಪ್ರತಿಕ್ರಿಯಿಸಿದ್ಧಾರೆ. ಇಂಥ ಸೃಷ್ಟಿವೈಚಿತ್ರ್ಯವನ್ನು ನಿಮ್ಮಿಂದ ತಿಳಿದುದು ಬಹಳ ಖುಷಿಯಾಯಿತು ಎಂದಿದ್ದಾರೆ ಒಬ್ಬರು. ಮೊದಲಿಗೆ ನೋಡಿದಾಗ ಇದು ಶಿಲೀಂಧ್ರವೆಂದು ಅನ್ನಿಸಲೇ ಇಲ್ಲ,  ಮರೆಯಿಂದ ಊದುಬತ್ತಿಯ ಹೊಗೆ ಹೊಮ್ಮುತ್ತಿರಬಹುದು ಎಂದುಕೊಂಡೆ ಎಂದಿದ್ದಾರೆ ಮತ್ತೊಬ್ಬರು. ಇಂಥ ಸಮಯವನ್ನು ನೀವು ಕಾಯ್ದು ಚಿತ್ರೀಕರಿಸಿದ್ದಕ್ಕೆ ಧನ್ಯವಾದ ಎಂದಿದ್ದಾರೆ ಮಗದೊಬ್ಬರು. ನಿಮ್ಮೆಲ್ಲಾ ಫೋಟೋ ವಿಡಿಯೋಗಳನ್ನು ನೋಡುತ್ತಿರುತ್ತೇನೆ, ನಿಮ್ಮ ಈ ಪ್ರಕೃತಿಪ್ರೇಮ ಕಂಡು ಮೂಕವಿಸ್ಮಿತನಾಗುತ್ತಿರುತ್ತೇನೆ ಎಂದಿದ್ದಾರೆ ಅನೇಕರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

ತಾಜಾ ಸುದ್ದಿ