ಮುತ್ತು ಕೊಡಲು ಬಂದ ಯುವಕನ ತುಟಿ ಕಚ್ಚಿದ ನಾಗರಹಾವು!
ಯುವಕನೊಬ್ಬ ವಿಡಿಯೋಗಾಗಿ ನಾಗರ ಹಾವೊಂದಕ್ಕೆ ಮುತ್ತು ಕೊಡಲು ಹೋಗಿದ್ದಾನೆ. ಆಗ ಆ ಹಾವು ಆತನಿಗೆ ಸರ್ಪ್ರೈಸ್ ಗಿಫ್ಟ್ ಕೊಟ್ಟು ಕಳುಹಿಸಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪ್ರಾಣಿಗಳಿಗೆ ನಾವು ಯಾವುದೇ ತೊಂದರೆ ನೀಡದಿದ್ದರೆ ಅವು ಮನುಷ್ಯರಿಗೆ ಯಾವ ಅಪಾಯವನ್ನೂ ಮಾಡುವುದಿಲ್ಲ. ಆದರೆ, ಮನುಷ್ಯ ಆ ಪ್ರಾಣಿಗಳನ್ನು ಕೆಣಕಲು ಹೋದಾಗ ಅವು ತಿರುಗಿಬೀಳುವುದು ಸಾಮಾನ್ಯ. ಊರೊಳಗೆ ಬಂದ ಹಾವುಗಳನ್ನು ಹಿಡಿದು ಕಾಡಿಗೆ ಬಿಡುತ್ತಿದ್ದ ಯುವಕನೊಬ್ಬ ವಿಡಿಯೋಗಾಗಿ ನಾಗರ ಹಾವೊಂದಕ್ಕೆ ಮುತ್ತು ಕೊಡಲು ಹೋಗಿದ್ದಾನೆ. ಆಗ ಆ ಹಾವು ಆತನಿಗೆ ಸರ್ಪ್ರೈಸ್ ಗಿಫ್ಟ್ ಕೊಟ್ಟು ಕಳುಹಿಸಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಊರೊಳಗೆ ಹರಿದಾಡುತ್ತಿದ್ದ ನಾಗರಹಾವನ್ನು ಹಿಡಿಯಲು ಹೋದ ಯುವಕ ಆ ಹಾವಿನ ತಲೆಗೆ ಮುತ್ತು ಕೊಡಲು ಪ್ರಯತ್ನಿಸಿದ್ದಾನೆ. ಆಗ ರೊಚ್ಚಿಗೆದ್ದ ಹಾವು ತಕ್ಷಣ ಹಿಂದೆ ತಿರುಗಿ ಆ ಯುವಕನ ತುಟಿಗೆ ಕಚ್ಚಿದೆ. ಈ ವೀಡಿಯೋ ವೀಕ್ಷಕರನ್ನು ಬೆರಗುಗೊಳಿಸಿದೆ ಮತ್ತು ಕಳವಳವನ್ನುಂಟು ಮಾಡಿದೆ. ಈ ವಿಡಿಯೋ ವೈರಲ್ ಆಗಿದ್ದು, ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಇದನ್ನೂ ಓದಿ: ವಿಡಿಯೋ ವೈರಲ್: ಅಮೆರಿಕದ ಸಾರ್ವಜನಿಕ ಪ್ರದೇಶದಲ್ಲಿ ಮಹಿಳೆಗೆ ಚುಂಬಿಸಿದ ಪೊಲೀಸ್ ಅಧಿಕಾರಿ ಅಮಾನತು
ಈ ಘಟನೆ ಯಾವಾಗ ನಡೆದಿದೆ ಎಂಬುದು ಖಚಿತವಾಗಿ ತಿಳಿದಿಲ್ಲ. ಇದು ಎಲ್ಲಿ ಚಿತ್ರೀಕರಿಸಿದ್ದು ಎಂಬುದು ಕೂಡ ತಿಳಿದಿಲ್ಲ. ಆದರೆ, ನೆಟ್ಟಿಗರು ಆ ಯುವಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಿನ್ನ ಕೊನೆಯ ಲಿಪ್ ಕಿಸ್ ಅನ್ನು ಬಹಳ ಎಂಜಾಯ್ ಮಾಡಿದ್ದೀಯ ಎನಿಸುತ್ತಿದೆ ಎಂದು ಕೆಲವರು ಲೇವಡಿ ಮಾಡಿದ್ದಾರೆ.
View this post on Instagram
ವಿಶ್ವದ ಅತ್ಯಂತ ವಿಷಕಾರಿ ಹಾವಿನ ಜಾತಿಗಳಲ್ಲಿ ಒಂದೆಂದು ಹೆಸರುವಾಸಿಯಾಗಿರುವ ನಾಗರಹಾವಿನ ವಿಷ ಅತ್ಯಂತ ಭಯಾನಕವಾದುದು. ಈ ಹಾವುಗಳು ಸಾಮಾನ್ಯವಾಗಿ ಆಗ್ನೇಯ ಏಷ್ಯಾದ ಸೊಂಪಾದ ಮಳೆಕಾಡುಗಳಲ್ಲಿ ಕಂಡುಬರುತ್ತವೆ. ಈ ಹಾವು ಗರಿಷ್ಠ 5.85 ಮೀಟರ್ ಉದ್ದಕ್ಕೆ ಬೆಳೆಯುತ್ತವೆ. ಈ ಹಾವುಗಳು ಕಚ್ಚಿದ ಕೇವಲ 15 ನಿಮಿಷಗಳಲ್ಲಿ ಮನುಷ್ಯ ಸಾಯುವ ಸಾಧ್ಯತೆಯೂ ಇರುತ್ತದೆ. ಹಾವಿನಿಂದ ಕಚ್ಚಿಸಿಕೊಂಡ ಯುವಕನ ಸ್ಥಿತಿ ಹೇಗೆ ಇದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.