Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಈ ಪಹಾಡೀ ಪತ್ರೊಡೆ ತಿನ್ನಲು ಹಿಮಾಚಲಕ್ಕೆ ಹೋಗೋಣ ಬನ್ನಿ!

Patrode : ವಾರಾಂತ್ಯ ತುದಿಗಾಲಲ್ಲಿದೆ, ಹದಬಿಸಿಲು ನೆತ್ತಿಮೇಲೆ ಹರಿದಾಡುತ್ತಿದೆ. ಬೇಗನೇ ಯಾವಾಗ ಸಂಜೆಯಾಗುತ್ತದೆಯೋ ಎಂದು ನೀವೆಲ್ಲ ಕಾಯುತ್ತಿರಬಹುದು. ನಿಮ್ಮ ಪ್ರೀತಿಪಾತ್ರರೊಂದಿಗೆ ನಿಮಗಿಷ್ಟವಾದ ತಿಂಡಿತಿನಿಸನ್ನು ಮೆಲ್ಲುವ ಕನಸು ಕಾಣುತ್ತ ಕೆಲಸ ಮಾಡುತ್ತಿರಬಹುದು. ಈ ಕನಸಿಗೆ ಕಿಚ್ಚು ಹಚ್ಚುವಂಥ ವಿಡಿಯೋ ಇಲ್ಲಿದೆ! ತಡವೇಕೆ, ಕೆಸುವಿನ ಎಲೆಗಳಿಗೆ ದಾಂಗುಡಿ ಇಟ್ಟು, ಪತ್ರೊಡೆ ಮಾಡಿ ತಿನ್ನಿ!

Viral Video: ಈ ಪಹಾಡೀ ಪತ್ರೊಡೆ ತಿನ್ನಲು ಹಿಮಾಚಲಕ್ಕೆ ಹೋಗೋಣ ಬನ್ನಿ!
ಹಿಮಾಚಲ ಪ್ರದೇಶದ ತೊರೆಯ ಬಳಿ ಪಹಾಡಿ ಪತ್ರೊಡೆ ಮಾಡುತ್ತಿರುವ ವ್ಲಾಗರ್
Follow us
ಶ್ರೀದೇವಿ ಕಳಸದ
|

Updated on:Sep 15, 2023 | 3:42 PM

Himachal Pradesh : ಹಿಂದೆ ಊರಿಂದೂರಿಗೆ ಹೋಗಬೇಕಾದರೆ ಚಕ್ಕಡಿ ಬಂಡಿಯಲ್ಲಿ ಅಡುಗೆ ಸಾಮಾನುಗಳನ್ನು ಕಟ್ಟಿಕೊಂಡು ಪ್ರಯಾಣಿಸುತ್ತಿದ್ದುದು ನೆನಪಿದೆಯೇ? ಹೊಳೆಬದಿ ಬಂಡಿ ನಿಲ್ಲಿಸಿ, ಒಲೆಹೂಡಿ ಅಡುಗೆ ಮಾಡಿ ವಿಶ್ರಾಂತಿ ತೆಗೆದುಕೊಂಡು ಹೊಸ ಉಲ್ಲಾಸದಿಂದ ಪ್ರಯಾಣವನ್ನು ಮುಂದುವರಿಸುತ್ತಿದ್ದರು. ಈ ಆಧುನಿಕ ಯುಗದಲ್ಲಿ ಅದೆಲ್ಲವೂ ಮಾಯವಾಯಿತು ಎಂದುಕೊಳ್ಳಬೇಡಿ. ನಮ್ಮ ಫುಡ್​​ ವ್ಲಾಗರ್​​ಗಳು ಆ ನೆನಪುಗಳಿಗೆ ಮರುಜೀವ ನೀಡುತ್ತಲೇ ಇದ್ದಾರೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ, ಇದು ಪಹಾಡೀ ಪತ್ರೊಡೆ (Pahadi Patrode). ತೊರೆಯ ಬಳಿ ಈ ವ್ಯಕ್ತಿ ಛಂದಛಂದ ಅಡುಗೆ ಸಾಮಾನುಗಳನ್ನು ಜೋಡಿಸಿಕೊಂಡು, ತೊರೆಯ ನೀರನ್ನು ಉಪಯೋಗಿಸಿಕೊಂಡು ರುಚಿರುಚಿಯಾದ ಪತ್ರೊಡೆ ಮಾಡಿದ್ದಾನೆ!

ಇದನ್ನೂ ಓದಿ : Viral Video: ಸಲಿಂಗವಿವಾಹ: ‘ಲೋಣಾವಳದ ಕಲ್ಯಾಣಮಂಟಪದಲ್ಲಿ ಸಪ್ತಪದಿ ತುಳಿದೆವು’ ಅವಿನಾಶ ವರುಣ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

5 ದಿನಗಳ ಹಿಂದೆ ಮಸಾಲಾ ಬಾಕ್ಸ್​​ ಎಂಬ ಇನ್​ಸ್ಟಾಗ್ರಾಂ ಪುಟದಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಈತನಕ ಸುಮಾರು 10,000 ಜನರು ಲೈಕ್ ಮಾಡಿದ್ದು ನೂರಾರು ಜನರು ಈ ಸುಂದರವಾದ ಬೆಟ್ಟಗಳು, ನೀಲಾಕಾಶ, ಹದವಾದ ವಾತಾವರಣ, ಹರಿವ ತೊರೆ ಮತ್ತು ಸಾಮಗ್ರಿಗಳನ್ನು ಅಚ್ಚುಕಟ್ಟಾಗಿ ಜೋಡಿಸಿಕೊಂಡು, ಒಲೆಹೂಡಿ ಪತ್ರೊಡೆ ತಯಾರಿಸಿದ್ದನ್ನು ಶ್ಲಾಘಿಸಿದ್ದಾರೆ.

ಪಹಾಡಿ ಪತ್ರೊಡೆ ಮಾಡುವ ವಿಧಾನ ನೋಡಿ

ಬೇಕಾಗುವ ಪದಾರ್ಥಗಳು: ಕೆಸುವಿನ ಎಲೆಗಳು, ಒಂದು ಕತ್ತರಿಸಿದ ಈರುಳ್ಳಿ, ಎರಡು ಬಟ್ಟಲು ಕಡಲೆಹಿಟ್ಟು, ಒಂದಿಷ್ಟು ಕೆಂಪು ಮತ್ತು ಹಸಿರು ಮೆಣಸಿನಕಾಯಿ, ಎರಡು ಚಮಚ ಕೊತ್ತಂಬರಿ ಪುಡಿ, ಎರಡು ಚಮಚ ಜೀರಿಗೆ, ಕೊತ್ತಂಬರಿ ಸೊಪ್ಪು, ಎರಡು ಚಮಚ ಅರಿಶಿಣ, ಚಿಟಿಕೆ ಇಂಗು, ರುಚಿಗೆ ಬೇಕಾದಷ್ಟು ಉಪ್ಪು, ಎಲೆಗಳನ್ನು ಹಬೆಯಲ್ಲಿ ಬೇಯಿಸಲು ಮತ್ತು ಕಡಲೆಹಿಟ್ಟನ್ನು ಕಲಿಸಲು ನೀರು. ಪತ್ರೊಡೆ ಹುರಿಯಲು ಸ್ವಲ್ಪ ಎಣ್ಣೆ. ಹಿಮಾಚಲಿ/ಪಹಾಡಿ ಪತ್ರೊಡೆ ಮಾಡುವ ವಿಧಾನವನ್ನು ಮೇಲಿನ ವಿಡಿಯೋದಲ್ಲಿ ನೋಡಿದ್ದೀರಿ.

ಇದನ್ನೂ ಓದಿ : Viral Video: ನ್ಯೂಯಾರ್ಕ್​; ಮಣ್ಣಿನೊಳಗೆ ಗುದ್ದಾಟಕ್ಕೆ ಬಿದ್ದ ಮಾಡೆಲ್​​​ಗಳು, ನೆಟ್ಟಿಗರ ತಮಾಷೆ ಪ್ರತಿಕ್ರಿಯೆಗಳ ಹೊಳೆ

ಹಳೆಯ ಕಾಲದ ಆ ಹಿತ್ತಾಳೆಯ ಪಾತ್ರೆಗಳನ್ನು ಎಷ್ಟು ಛಂದ! ಎಂದಿದ್ದಾರೆ ಒಬ್ಬರು. ಈ ವಿಡಿಯೋಗೆ ಯಾವುದೇ ಸಿನೆಮಾ ಹಾಡನ್ನು ಹಾಕದೇ ಇರುವುದಕ್ಕೆ ಧನ್ಯವಾದ, ಆ ನೀರಿನ ಹರಿವಿನ ಶಬ್ದ ನಿಜಕ್ಕೂ ಉನ್ಮಾದವನ್ನು ತರುತ್ತಿದೆ ಎಂದಿದ್ದಾರೆ ಇನ್ನೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 3:35 pm, Fri, 15 September 23