Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಅಮೆರಿಕ; ಮುದ್ದುಗಳಿವೆ ಎಚ್ಚರಿಕೆ! ಅಳಿವಿನಂಚಿನಲ್ಲಿರುವ 6 ಕೊಮೊಡೊ ಡ್ರ್ಯಾಗನ್​ ಮರಿಗಳ ಜನನ

US: ಅಳಿವಿನಂಚಿನಲ್ಲಿರುವ ಕೊಮೊಡೋ ಡ್ರ್ಯಾಗನ್​ ಮರಿಗಳು ಹೀಗೆ ಭೂಮಿಗೆ ಬರಲು ಪ್ರಾಣಿಸಂಗ್ರಹಾಲಯದ ಹರ್ಪಿಟಾಲಜಿ ತಂಡದ ವರ್ಷದ ಶ್ರಮವಿದೆ. ಮೂರು ಗಂಡು ಮತ್ತು ಮೂರು ಹೆಣ್ಣುಮರಿಗಳಿವೆ. ಇವುಗಳನ್ನು ಸಾರ್ವಜನಿಕ ಪ್ರದರ್ಶನಕ್ಕೆ ಯಾವಾಗ ಅನುವು ಮಾಡಿಕೊಡುತ್ತೀರಿ ಎಂದು ನೆಟ್ಟಿಗಲು ದುಂಬಾಲು ಬಿದ್ದಿದ್ದಾರೆ. ಒಟ್ಟಿನಲ್ಲಿ ಈ ಮರಿಗಳು ಸಾಕಷ್ಟು ಕುತೂಹಲವನ್ನು ಹುಟ್ಟಿಸಿವೆ.

Viral: ಅಮೆರಿಕ; ಮುದ್ದುಗಳಿವೆ ಎಚ್ಚರಿಕೆ! ಅಳಿವಿನಂಚಿನಲ್ಲಿರುವ 6 ಕೊಮೊಡೊ ಡ್ರ್ಯಾಗನ್​ ಮರಿಗಳ ಜನನ
ಕೊಮೊಡೋ ಡ್ರ್ಯಾಗನ್ ಮರಿಗಳು
Follow us
ಶ್ರೀದೇವಿ ಕಳಸದ
|

Updated on:Sep 15, 2023 | 5:36 PM

Tampa: ಅಮೆರಿಕದಲ್ಲಿರುವ ಟಾಂಪಾದ ಲೌರಿ ಪಾರ್ಕ್​ನಲ್ಲಿ (Lowry Park, Tampa) ಅಳಿವಿನಂಚಿನಲ್ಲಿರುವ  ಮುದ್ದಾದ 6 ಕೊಮೊಡೊ ಡ್ರ್ಯಾಗನ್​​ಗಳು (Komodo Dragons) ಜನಿಸಿವೆ. ಮೃಗಾಲಯವು  ಸಾಮಾಜಿಕ ಜಾಲತಾಣಗಳಲ್ಲಿ ಸಂತೋಷದ ಈ ಸುದ್ದಿಯನ್ನು ಹಂಚಿಕೊಂಡಿದೆ; ವಿಶ್ವದ ಅತೀ ದೊಡ್ಡ ಹಲ್ಲಿಗಳ ಸಂಖ್ಯೆಯು ಈ  ಮರಿಗಳ ಮೂಲಕ ಹೆಚ್ಚಿದೆ. ಮೊಟ್ಟೆಯೊಡೆದು ಬಂದಾಗ ಈ ಜೀವಿಗಳು ತಲಾ 10 ಇಂಚು ಉದ್ದ ಇದ್ದವು. ಇವು ಕ್ರಮೇಣ 10 ಅಡಿ ಉದ್ದದವರೆಗೂ ಬೆಳೆಯುವ ಸಾಧ್ಯತೆ ಇರುತ್ತದೆ. ಇವುಗಳಲ್ಲಿ ಮೂರು ಗಂಡು ಮತ್ತು ಮೂರು ಹೆಣ್ಣುಮರಿಗಳಿವೆ. ಮೃಗಾಲಯದ ಹರ್ಪಿಟಾಲಜಿ ತಂಡವು ಈ ಯಶಸ್ವಿ ಸಂತಾನೋತ್ಪತ್ತಿಗಾಗಿ ವರ್ಷವಿಡೀ ಶ್ರಮಿಸಿದೆ. ಈ ಮರಿಗಳನ್ನು ನೆಟ್ಟಿಗರು ಬೆರಗಿನಿಂದ ನೋಡುತ್ತಿದ್ದಾರೆ ಮತ್ತು ಪ್ರತಿಕ್ರಿಯಿಸುತ್ತಿದ್ದಾರೆ.

ಇದನ್ನೂ ಓದಿ : Viral Video: ಹೊಗೆ ಹೊಮ್ಮಿಸುವ ಶಿಲೀಂಧ್ರ? ನೆಟ್ಟಿಗರಲ್ಲಿ ಕುತೂಹಲ ಕೆರಳಿಸಿದ ಈ ವಿಡಿಯೋ

ಈ ಪೋಸ್ಟ್ ಅನ್ನು ಸೆ. 13 ರಂದು ಹಂಚಿಕೊಳ್ಳಲಾಗಿದೆ. ಈತನಕ ಸುಮಾರು 1,800 ಜನರು ಲೈಕ್ ಮಾಡಿದ್ದಾರೆ. 520ಕ್ಕೂ ಹೆಚ್ಚು ಜನರು ಈ ಪೋಸ್ಟ್​ಅನ್ನು ಮರುಹಂಚಿಕೊಂಡಿದ್ದಾರೆ. 260ಕ್ಕೂ ಹೆಚ್ಚು ಜನರು ಪ್ರತಿಕ್ರಿಯಿಸಿದ್ದಾರೆ. ನಿಮ್ಮ ಈ ಪ್ರಯತ್ನ ಅದ್ಭುತ. ಇಡೀ ತಂಡದ ಪ್ರಯತ್ನಕ್ಕೆ ಅಭಿನಂದನೆ ಎಂದಿದ್ದಾರೆ ಅನೇಕರು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಕೊಮೊಡೊ ಡ್ರ್ಯಾಗನ್​​ ಮರಿಗಳು

ಈಗಾಗಲೇ ಈ ಆರು ಪುಟಾಣಿಗಳು ತಮ್ಮ ವಾಸ್ತವ್ಯವನ್ನು ಹುಡುಕಿಕೊಳ್ಳುವಲ್ಲಿ ಕುತೂಹಲಿಗಳಾದಂತೆ ತೋರುತ್ತಿದೆ ಎಂದಿದ್ದಾರೆ ಒಬ್ಬರು. ಈ ಹಳದಿ ಹಸಿರು ಕೇಸರಿ ಬಣ್ಣಗಳನ್ನು ಮೈತಳೆದು ಎಂಥ ಛಂದ ಕಾಣುತ್ತಿವೆ ಈ ಮುದ್ದುಗಳು ಎಂದಿದ್ದಾರೆ ಮತ್ತೊಬ್ಬರು. ಇವರನ್ನು ಸಾರ್ವಜನಿಕರು ಯಾವಾಗಿನಿಂದ ನೋಡಬಹುದು? ಎಂದು ಕೇಳಿದ್ದಾರೆ.

ಇದನ್ನೂ ಓದಿ : Viral Video: ಈ ಪಹಾಡೀ ಪತ್ರೊಡೆ ತಿನ್ನಲು ಹಿಮಾಚಲಕ್ಕೆ ಹೋಗೋಣ ಬನ್ನಿ!

ಸದ್ಯ ಪೋಷಣೆಯಲ್ಲಿವೆ. ಶರತ್ಕಾಲದ ನಂತರ ಸಾರ್ವಜನಿಕರ ವೀಕ್ಷಣೆಗೆ ಅನುವು ಮಾಡಿಕೊಡಲಾಗುವುದು ಎಂದು ಮೃಗಾಲಯ ಸಿಬ್ಬಂದಿ ತಿಳಿಸಿದೆ. ಬಹಳ ಅಮೂಲ್ಯ ಮತ್ತು ಸುಂದರವಾದ ಈ ಜೀವಿಗಳನ್ನು ನೋಡಲು ಕಾತರಳಾಗಿದ್ದೇನೆ ಎಂದಿದ್ದಾರೆ ಒಬ್ಬರು. ಇವುಗಳ ಪೋಷಣೆಯನ್ನು ಇವುಗಳ ತಾಯಿ ಮಾಡುತ್ತಾಳೆಯೋ ಹೇಗೆ? ಎಂದು ಕೇಳಿದ್ಧಾರೆ ಮತ್ತೊಬ್ಬರು. ಅವುಗಳನ್ನು ಹೊರಗೆ ಬಿಟ್ಟರೆ ಅವು ಮರ ಏರಬಲ್ಲವೆ? ಅಥವಾ ಅವುಗಳ ಅಪ್ಪ ಅವುಗಳನ್ನು ತಿನ್ನುವನೇ? ಎಂದು ನನ್ನ ಮಗ ಕೇಳುತ್ತಿದ್ಧಾರೆ ಎಂದಿದ್ದಾರೆ ಮಗದೊಬ್ಬರು.

ಈ ಸುದ್ದಿ ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 5:35 pm, Fri, 15 September 23