Viral Video: ಲಂಡನ್​; ಗ್ರಾಹಕಿಯ ಕುತ್ತಿಗೆ ಹಿಡಿದು ಜಗಳಕ್ಕಿಳಿದ ಅಂಗಡಿಯವ, ಆಗಿದ್ದೇನು?

Shopping: ಇದು ಲಂಡನ್​ ಅಂಗಡಿಯೊಂದರ ದೃಶ್ಯ. ಅಂಗಡಿಯವ ಈ ಮಹಿಳೆಯ ಕತ್ತನ್ನು ಹಿಡಿದು ಆಕೆಯನ್ನು ಹೊರತಳ್ಳುತ್ತಿದ್ದಾನೆ. ಪ್ರತಿಭಟನಾಕಾರರು ಅಂಗಡಿಯ ಹೊರಗೆ ಸೇರಿದ್ದನ್ನು ಗಮನಿಸಿದ ಲಂಡನ್​ ಮೆಟ್ರೋಪಾಲಿಟನ್​ ಪೊಲೀಸರು ಅವರನ್ನು ಶಾಂತವಾಗಿರಲು ಮನವಿ ಮಾಡಿಕೊಂಡು ಈ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. 

Viral Video: ಲಂಡನ್​; ಗ್ರಾಹಕಿಯ ಕುತ್ತಿಗೆ ಹಿಡಿದು ಜಗಳಕ್ಕಿಳಿದ ಅಂಗಡಿಯವ, ಆಗಿದ್ದೇನು?
ಅಂಗಡಿಯ ಮಾಲಿಕ ಕಪ್ಪುಮಹಿಳೆಯ ಕುತ್ತಿಗೆ ಹಿಡಿದು ಎಳೆದಾಡುತ್ತಿರುವ ದೃಶ್ಯ
Follow us
ಶ್ರೀದೇವಿ ಕಳಸದ
|

Updated on: Sep 14, 2023 | 11:40 AM

London: ಲಂಡನ್‌ನ ಪೆಕ್‌ಹ್ಯಾಮ್‌ನಲ್ಲಿರುವ ಅಂಗಡಿಯೊಂದರಲ್ಲಿ ಈ ಅಹಿತಕರ ನಡೆದಿದೆ. ಈ ಘಟನೆಯು ಅಂಗಡಿಯ ಸಿಸಿ ಕ್ಯಾಮೆರಾದಲ್ಲಿ (CC Camera) ದಾಖಲಾಗಿದೆ. ಸೋಮವಾರ ಈ ಘಟನೆ ನಡೆದಿದ್ದು, ಕಪ್ಪು ಮಹಿಳೆಯೊಬ್ಬರು ಶಾಪಿಂಗ್​ ಬ್ಯಾಸ್ಕೆಟ್​ನಿಂದ ಅಂಗಡಿಯವನನ್ನು ಥಳಿಸಿದ್ದಾರೆ. ಆಗ ಅವನು ಆಕೆಯ ಕತ್ತು ಹಿಚುಕಿ ಉಸಿರುಗಟ್ಟಿಸಲು ಪ್ರಯತ್ನಿಸಿದ್ದಾನೆ. ಈ ವಿಡಿಯೋ ಇದೀಗ ವೈರಲ್ ಆಗಿದೆ. ಈ ದೃಶ್ಯವು ಸ್ಥಳೀಯರನ್ನು ಕೆರಳಿಸಿದೆ. ಇವನ ಈ ನಡೆಯನ್ನು ಅವರು ವಿರೋಧಿಸಿದ್ದಾರೆ.  45 ವರ್ಷದ ಅಂಗಡಿ ಮಾಲಿಕನನ್ನು ಬಂಧಿಸದೇ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಹಾಗೆಯೇ ಆ ಮಹಿಳೆಯನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ : Viral Video: ಜವಾನ ಜಮಾನಾ; ಕೀರ್ತಿ ಸುರೇಶ್, ಪ್ರಿಯಾ ಅಟ್ಲೀ ‘ಚಲೇಯಾ’ಗೆ ಡ್ಯಾನ್ಸ್​; 5 ಮಿಲಿಯನ್ ವೀಕ್ಷಣೆ 

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಬಿಬಿಸಿ ವಯದಿಯ ಪ್ರಕಾರ, ಈ ಘಟನೆ ನಡೆದ ಮರುದಿನ ಅಂದರೆ, ಮಂಗಳವಾರದಂದು ರೈ ಲೇನ್‌ನಲ್ಲಿ ಪೆಕ್‌ಹ್ಯಾಮ್ ಹೇರ್ ಅಂಡ್ ಕಾಸ್ಮೆಟಿಕ್ಸ್‌ ಅಂಗಡಿಯ ಹೊರಗೆ ನೂರಾರು ಜನರು ಪ್ರತಿಭಟಿಸಲು ಜಮಾಯಿಸಿದ್ದರು. ಕಪ್ಪು ಮಹಿಳೆಯ ಮೇಲೆ ಕಳ್ಳತನದ ಆರೋಪ ಹೊರಿಸಿದ್ದನ್ನು ಅವರು ಖಂಡಿಸುತ್ತಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಎಡಿಟ್ ಮಾಡಿದ ವಿಡಿಯೋಗಳನ್ನು ಅಪ್​ಲೋಡ್ ಮಾಡಲಾಗಿದೆ ಎಂದು ಅಂಗಡಿಯವ ಹೇಳಿದ್ದಾನೆ.

ಅಂಗಡಿಯ ಸಿಸಿ ಕ್ಯಾಮೆರಾದಲ್ಲಿ ದಾಖಲಾದ ದೃಶ್ಯಗಳು

ಸದ್ಯಕ್ಕೆ ಈ ಅಂಗಡಿಯನ್ನು ಮುಚ್ಚಲಾಗಿದೆ. ಅಂಗಡಿಯಲ್ಲಿ ಖರೀದಿಸಿದ ಉತ್ಪನ್ನಗಳನ್ನು ಮರುಪಾವತಿ ಮಾಡಲು ಆಕೆ ಕೇಳಿಕೊಂಡಾಗ ಅಂಗಡಿಯವ ನಿರಾಕರಿಸಿದ್ಧಾನೆ. ಆಗ ಆಕೆ ಆಕ್ರಮಣಕಾರಿಯಾಗಿ ವರ್ತಿಸಿದ್ದಾಳೆ ಎಂದು ಅಂಗಡಿಯ ಮಾಲಿಕ ಹೇಳಿದ್ದಾನೆ. ತಮ್ಮ ಅಂಗಡಿಯಲ್ಲಿ ಮರುಪಾವತಿ ಮಾಲಡಾಗುವುದಿಲ್ಲ. ಆದರೆ ವಸ್ತುಗಳನ್ನು ವಿನಿಯಮ ಮಾಡಿಕೊಳ್ಳಲಾಗುತ್ತದೆ ಅಥವಾ ಕ್ರೆಡಿಟ್ ನೋಟ್ ನೀಡಲಾಗುತ್ತದೆ. ಆಗ ಆಕೆ ಮೂರು ಹೇರ್​ ಎಕ್ಸ್ಟೆನ್ಷನ್​ ಪ್ಯಾಕ್​ ಹಿಡಿದು ಹೊರಡಲು ಪ್ರಯತ್ನಿಸಿದಳು. ಆಗ ನಾನು ತಡೆಯಬೇಕಾಯಿತು.

ಅಂಗಡಿಯ ಹೊರಗೆ ಜಮಾಯಿಸಿದ್ದ ಪ್ರತಿಭಟನಾಕಾರರು

ಆಗ ಆಕೆ ನನ್ನ ಮುಖಕ್ಕೆ ತಲೆಗೆ ಶಾಪಿಂಗ್​ ಬ್ಯಾಸ್ಕೆಟ್​ನಿಂದ ನನ್ನನ್ನು ಹೊಡೆಯತೊಡಗಿದಳು. ನನಗರಿವಿಲ್ಲದೆಯೇ ಅವಳ ಕುತ್ತಿಗೆಯನ್ನು ನನ್ನ ಕೈಗಳು ಹಿಡಿದುಕೊಂಡವು. ಆಕೆಯನ್ನು ಸುಮ್ಮನಿರಿಸುವುದು ನನ್ನ ಉದ್ದೇಶವಾಗಿತ್ತೇ ಹೊರತು ಹೊಡೆಯುವುದು ಖಂಡಿತ ಅಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಇರುವ ಎಡಿಟೆಡ್​ ವಿಡಿಯೋಗಳನ್ನು ನೋಡಿ ಜನರು ತೋಚಿದಂತೆ ಪ್ರತಿಕ್ರಿಯಿಸುತ್ತಿದ್ದಾರೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ