Viral Video: ಅಮೆರಿಕ; ವಿಟಮಿನ್ ಗುಳಿಗೆಯ ಬದಲಾಗಿ ಗಂಡನ ಆ್ಯಪಲ್ ಏರ್​ಪಾಡ್​ ನುಂಗಿದ ಮಹಿಳೆ

Apple Airpod : ಸ್ನೇಹಿತರೊಂದಿಗೆ ಬೆಳಗಿನ ವಿಹಾರಕ್ಕೆ ಹೋದ ಈ ಮಹಿಳೆ ವಿಟಮಿನ್ ಗುಳಿಗೆ ಬದಲಾಗಿ ತನ್ನ ಗಂಡನ ಏರ್​ಪಾಡ್ ನುಂಗಿದ್ದಾಳೆ. ನುಂಗುತ್ತಿರುವಾಗ ಆಕೆಗೆ ಅನುಮಾನವೂ ಬಂದಿದೆ, ಯಾಕೆ ಗುಳಿಗೆ ನಿಧಾನ ಒಳಹೋಗುತ್ತಿದೆ ಎಂದು ಅಂದುಕೊಳ್ಳುತ್ತ ತನ್ನ ಕೈಯ್ಯೊಳಗಿನದನ್ನು ನೋಡಿಕೊಂಡಿದ್ದಾಳೆ. ಕೈಯಲ್ಲಿರುವ ಗುಳಿಗೆ ಹಾಗೇ ಇದ್ದು, ಒಳಹೋಗಿರುವುದು ಏರ್​ಪಾಡ್ ಎಂಬುದು ಅರಿವಿಗೆ ಬಂದಿದೆ.

Viral Video: ಅಮೆರಿಕ; ವಿಟಮಿನ್ ಗುಳಿಗೆಯ ಬದಲಾಗಿ ಗಂಡನ ಆ್ಯಪಲ್ ಏರ್​ಪಾಡ್​ ನುಂಗಿದ ಮಹಿಳೆ
ಸಾಂದರ್ಭಿಕ ಚಿತ್ರ
Follow us
ಶ್ರೀದೇವಿ ಕಳಸದ
|

Updated on: Sep 13, 2023 | 5:45 PM

America: ಅಮೆರಿಕದ ಮಹಿಳೆಯೊಬ್ಬಳು ವಿಟಮಿನ್​ ಗುಳಿಗೆ ಎಂದು ಗಂಡನ ಆ್ಯಪಲ್​ ಏರ್​ಪಾಡ್​ (Apple Airpod) ಅನ್ನು ನುಂಗಿದ ಘಟನೆ ಇದೀಗ ವೈರಲ್ ಆಗುತ್ತಿದೆ. ತನ್ನ ಸ್ನೇಹಿತರೊಂದಿಗೆ ಬೆಳಗಿನ ವಿಹಾರಕ್ಕೆ ಹೋದಾಗ ಈ ಅಚಾತುರ್ಯ ಸಂಭವಿಸಿದೆ. ಅಮೆರಿಕದ 52 ವರ್ಷದ ಟಿಕ್​ಟಾಕರ್ ರಿಯಾಲ್ಟರ್ ತನ್ನಾ ಬಾರ್ಕರ್ ಎಂಬ ಮಹಿಳೆ ತನ್ನ ಸ್ನೇಹಿತರೊಂದಿಗೆ ಹರಟುತ್ತ ವಾಕ್ ಮಾಡುತ್ತಿದ್ದಾಗ ಗುಳಿಗೆ ತೆಗೆದುಕೊಳ್ಳುವುದು ನೆನಪಾಗಿದೆ. ನೀರು ಕುಡಿಯುತ್ತ ಗುಳಿಗೆಯ ಬದಲಾಗಿ ಏರ್​ಪಾಡ್​ ನುಂಗಿಬಿಟ್ಟಿದ್ದಾಳೆ. ತಾನು ಗುಳಿಗೆಯ ಬದಲಾಗಿ ಏನನ್ನೋ ನುಂಗಿದ್ದೇನೆ ಎನ್ನವುದು ಆಕೆಗೆ ಅರಿವಾಗಲು ಬಹಳ ಹೊತ್ತು ಬೇಕಾಗಲಿಲ್ಲ!

ಇದನ್ನೂ ಓದಿ : Viral Video: ಲಂಡನ್​; ಮಗಳ ಹೆಸರಿನಲ್ಲಿ 667 ಟ್ಯಾಟೂ ಹಾಕಿಸಿಕೊಂಡು ವಿಶ್ವದಾಖಲೆ ಮಾಡಿದ ಅಪ್ಪ

‘ವಾಕಿಂಗ್​ ಮಧ್ಯೆ ನಾನು ಸ್ನೇಹಿತೆಯೊಂದಿಗೆ ಮಾತನಾಡುತ್ತಾ ನೀರು ಕುಡಿಯುತ್ತಾ ಗುಳಿಗೆಯ ಬದಲಾಗಿ ಏರ್​ಪಾಡ್ ನುಂಗಿದೆ. ನಂತರ ಸ್ನೇಹಿತರನ್ನು ಬೀಳ್ಕೊಟ್ಟೆ. ನೋಡಿದರೆ ಕೈಯಲ್ಲಿ ಗುಳಿಗೆಗಳು ಹಾಗೇ ಇವೆ. ಆಗ ನಾನೇನು ನುಂಗಿದೆ ಎನ್ನುವುದು ಅರಿವಾಯಿತು. ಯಾಕೋ ಗುಳಿಗೆ ನಿಧಾನವಾಗಿ ಒಳಗಿಳಿಯುತ್ತಿದೆಯಲ್ಲ ಎನ್ನುವುದು ಅನುಭವಕ್ಕೆ ಬಂತು ಕೂಡ. ದೇವರೇ, ನನ್ನೊಳಗೆ ಇದೀಗ ಏರ್​ಪಾಡ್​ ಇದೆ. ಏನು ಮಾಡುವುದು?’ ಎಂದಿದ್ದಾರೆ ರಿಯಾಲ್ಟರ್.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : Viral Video: ಲಂಡನ್​; ಮಗಳ ಹೆಸರಿನಲ್ಲಿ 667 ಟ್ಯಾಟೂ ಹಾಕಿಸಿಕೊಂಡು ವಿಶ್ವದಾಖಲೆ ಮಾಡಿದ ಅಪ್ಪ

ಮನೆಗೆ ಬಂದು ಮುಜುಗರದಿಂದ ತನ್ನ ಪತಿಗೆ ಈ ಅಚಾತುರ್ಯದ ಬಗ್ಗೆ ಆಕೆ ವಿವರಿಸಿದಾಗ, ಇದನ್ನು ಯಾರಿಗೂ ಹೇಳಬೇಡ ಎಂದಿದ್ದಾನೆ. ಆದರೂ ಆಕೆ ತನ್ನ ಟಿಕ್​ಟಾಕ್​ ಫಾಲೋವರ್​​ಗಳೊಂದಿಗೆ ಈ ಬಗ್ಗೆ ಹಂಚಿಕೊಂಡಿದ್ದಾಳೆ. ಶರವೇಗದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಅಷ್ಟೇ ಅಲ್ಲ ಮಾಧ್ಯಮದವರು ಆಕೆಯನ್ನು ಸಂಪರ್ಕಿಸಲು ಶುರು ಮಾಡಿದ್ದಾರೆ.

ಇದನ್ನೂ ಓದಿ : Viral Video: ನಾನು ನಂದಿನಿ ಬೆಂಗಳೂರಿಗೆ ಬಂದೀನಿ; 5 ಮಿಲಿಯನ್​ ಜನರನ್ನು ತಲುಪಿದ ‘ವಿಕಿಪೀಡಿಯಾ’ ರೀಲ್

ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆಗಳ ಮಹಾಪೂರ ಹರಿದು ಬಂದು ಆಕೆಯನ್ನು ಆತಂಕಕ್ಕೆ ತಳ್ಳಿದೆ. ಇದು ನಿಮಗೆ ಮರಳಿ ಸಿಕ್ಕಾಗ ಐಪೂಡ್​ ಆಗಿರುತ್ತದೆ. ನೀವು ಈ ಏರ್​ಪಾಡ್​ ಅನ್ನು ನುಂಗುವುದನ್ನು ನಾನು ಕಲ್ಪಿಸಿಕೊಂಡೆ ಎಂದಿದ್ದಾರೆ ಒಬ್ಬರು. ಇಲ್ಲ ಅದು ಮಲವಿಸರ್ಜನೆಯಲ್ಲಿ ತಾನಾಗಿಯೇ ಹೊರಬರುತ್ತದೆ ಎಂದು ಅನೇಕರು ಹೇಳಿದ್ದಾರೆ ಅದು ಬ್ಯಾಟರಿಯನ್ನು ಹೊಂದಿದೆಯಾದ್ದರಿಂದ ಅಪಾಯ ಸಂಭವಿಸಬಹುದು ಎಂದಿದ್ದಾರೆ.

ಇದನ್ನೂ ಓದಿ : Viral Video: ‘ಮೂರು ವರ್ಷ ವ್ಯಾನ್​ ಡ್ರೈವರ್​ನಿಂದ ಲೈಂಗಿಕ ದೌರ್ಜನ್ಯ, ಹೇಳಿದ್ದಕ್ಕೆ ಪೋಷಕರು ನನ್ನನ್ನೇ ಬೈದರು’

ಕೊನೆಗೆ ವೈದ್ಯರ ಮಾರ್ಗದರ್ಶನಕ್ಕಾಗಿ ಗಂಡಹೆಂಡತಿ ತೆರಳಿದ್ದಾರೆ. ಏರ್​ಪಾಡ್ ಮಲವಿಸರ್ಜನೆಯಲ್ಲಿ ತಾನಾಗಿಯೇ ಹೊರಬರುವುದು ಎಂದು ವೈದ್ಯರು ಹೇಳಿದ್ದಾರೆ. ಆ ಪ್ರಕಾರ ಮಲವಿಸರ್ಜನೆಯ ಮೂಲಕ ಏರ್​ಪಾಡ್ ಹೊರಗೆ ಬಂದಿದೆ ಎಂದು ಈ ಪೋಸ್ಟ್ ಅನ್ನು ಸಂಪನ್ನಗೊಳಿಸಿದ್ದಾರೆ ಆಕೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ದೊಡ್ಮನೆಗೆ ಬರೋಕಿಂತ ಮುನ್ನ ಧರ್ಮ, ಅನುಷಾ ರೈ ನಡುವೆ ಬ್ರೇಕಪ್ ಆಗಿತ್ತಾ?
ದೊಡ್ಮನೆಗೆ ಬರೋಕಿಂತ ಮುನ್ನ ಧರ್ಮ, ಅನುಷಾ ರೈ ನಡುವೆ ಬ್ರೇಕಪ್ ಆಗಿತ್ತಾ?
ಯೋಗೇಶ್ವರ್ ಕೇವಲ ಅಭಿವೃದ್ಧಿ ಕೆಲಸಗಳನ್ನು ಉಲ್ಲೇಖಿಸಿ ಮತ ಕೇಳಿದರು: ಶಾಸಕ
ಯೋಗೇಶ್ವರ್ ಕೇವಲ ಅಭಿವೃದ್ಧಿ ಕೆಲಸಗಳನ್ನು ಉಲ್ಲೇಖಿಸಿ ಮತ ಕೇಳಿದರು: ಶಾಸಕ
ಸಿಎಂ ಇಬ್ರಾಹಿಂ ಮತ್ತು ಜಿಟಿ ದೇವೇಗೌಡ ನೊಂದಜೀವಿ ಮತ್ತು ಸಮಾನಮನಸ್ಕರು
ಸಿಎಂ ಇಬ್ರಾಹಿಂ ಮತ್ತು ಜಿಟಿ ದೇವೇಗೌಡ ನೊಂದಜೀವಿ ಮತ್ತು ಸಮಾನಮನಸ್ಕರು
‘ಯಾರೂ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಂಗಿಲ್ಲ’: ಉಗ್ರಂ ಮಂಜು ಆಜ್ಞೆ
‘ಯಾರೂ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಂಗಿಲ್ಲ’: ಉಗ್ರಂ ಮಂಜು ಆಜ್ಞೆ
ಕುಮಾರಸ್ವಾಮಿ ಹೇಳಿದ್ದರಲ್ಲಿ ತಪ್ಪಿಲ್ಲ, ಮುಸ್ಲಿಂ ಮತದಾರ ಕೈಬಿಟ್ಟ: ಅಶೋಕ
ಕುಮಾರಸ್ವಾಮಿ ಹೇಳಿದ್ದರಲ್ಲಿ ತಪ್ಪಿಲ್ಲ, ಮುಸ್ಲಿಂ ಮತದಾರ ಕೈಬಿಟ್ಟ: ಅಶೋಕ
ನಾನಿಲ್ಲದಿದ್ದರೂ ಕಾಂಗ್ರೆಸ್ ಅಸ್ತಿತ್ವಕ್ಕೆ ಯಾವುದೇ ತೊಂದರೆಯಿಲ್ಲ: ಡಿಕೆಶಿ
ನಾನಿಲ್ಲದಿದ್ದರೂ ಕಾಂಗ್ರೆಸ್ ಅಸ್ತಿತ್ವಕ್ಕೆ ಯಾವುದೇ ತೊಂದರೆಯಿಲ್ಲ: ಡಿಕೆಶಿ
ಕ್ಯಾಪ್ಟನ್​ ಆಗೋಕೆ ಬಿಗ್ ಬಾಸ್ ಬೆಡ್​ರೂಂನಲ್ಲಿ ದೊಡ್ಡ ಡೀಲಿಂಗ್
ಕ್ಯಾಪ್ಟನ್​ ಆಗೋಕೆ ಬಿಗ್ ಬಾಸ್ ಬೆಡ್​ರೂಂನಲ್ಲಿ ದೊಡ್ಡ ಡೀಲಿಂಗ್
ಸಾಯೋವರೆಗೂ ಕುಮಾರಣ್ಣ ಮತ್ತು ದೇವೇಗೌಡರ ಜೊತೆ ಇರ್ತೀವಿ :ಸಾರಾ ಮಹೇಶ್
ಸಾಯೋವರೆಗೂ ಕುಮಾರಣ್ಣ ಮತ್ತು ದೇವೇಗೌಡರ ಜೊತೆ ಇರ್ತೀವಿ :ಸಾರಾ ಮಹೇಶ್
ನೋಡ ನೋಡ್ತಿದ್ದಂತೆಯೇ ಹತ್ತಾರು ಲೀಟರ್ ಹಾಲು ರಸ್ತೆಗೆ ಸುರಿದರು!
ನೋಡ ನೋಡ್ತಿದ್ದಂತೆಯೇ ಹತ್ತಾರು ಲೀಟರ್ ಹಾಲು ರಸ್ತೆಗೆ ಸುರಿದರು!
ವಕ್ಫ್ ಬೋರ್ಡ್ ವಿರುದ್ಧ 5 ಜಿಲ್ಲೆಗಳಲ್ಲಿ ನಡೆಯಲಿದೆ ಯತ್ನಾಳ್ ತಂಡದ ಅಭಿಯಾನ
ವಕ್ಫ್ ಬೋರ್ಡ್ ವಿರುದ್ಧ 5 ಜಿಲ್ಲೆಗಳಲ್ಲಿ ನಡೆಯಲಿದೆ ಯತ್ನಾಳ್ ತಂಡದ ಅಭಿಯಾನ