AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಅಮ್ಮನ ಮದುವೆಯಲ್ಲಿ ಮಗನ ಭಾವನಾತ್ಮಕ ಭಾಷಣ; ಕಣ್ಣೀರಾದ ನೆರೆದವರು

Remarriage : ಗಂಡ ಅಥವಾ ಹೆಂಡತಿ ಯಾವುದೋ ಕಾರಣದಿಂದ ಬೇರೆಯಾದರೆ ಮಕ್ಕಳು ಕಷ್ಟಕ್ಕೆ ಬೀಳುತ್ತವೆ. ಒಗ್ಗಾಲಿಯಾದ ಬಂಡಿಯನ್ನು ಎಳೆಯುವುದು ಯಾರಿಗೇ ಆಗಲಿ ಭಾರವೇ. ಆದರೆ ಮರುಮದುವೆ ಎನ್ನುವುದು ಬದುಕಿನ ಬಗ್ಗೆ ಮತ್ತಷ್ಟು ಭರವಸೆಯನ್ನು ಹುಟ್ಟಿಸುತ್ತದೆ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಮಗನೊಬ್ಬ ಎಷ್ಟೊಂದು ತಿಳಿವಳಿಕೆಯಿಂದ ತನ್ನ ತಾಯಿಯ ಮದುವೆಯಲ್ಲಿ ಮಾತನಾಡಿದ್ದಾನೆ ನೋಡಿ.

Viral Video: ಅಮ್ಮನ ಮದುವೆಯಲ್ಲಿ ಮಗನ ಭಾವನಾತ್ಮಕ ಭಾಷಣ; ಕಣ್ಣೀರಾದ ನೆರೆದವರು
ತಾಯಿಯ ಮದುವೆಯಲ್ಲಿ ಮಗನ ಭಾಷಣ
ಶ್ರೀದೇವಿ ಕಳಸದ
|

Updated on: Sep 12, 2023 | 5:53 PM

Share

Marriage : ತನ್ನ ತಾಯಿಯ ಮದುವೆಯಲ್ಲಿ ಮಗ ಭಾಷಣ ಮಾಡಿದ ವಿಡಿಯೋ ಇದಾಗಿದೆ. ಎಲ್ಲರಿಗೂ ಶುಭಸಂಜೆ. ನಾನು ಜೋರ್ಡಾನ್​. ವಧುವಿನ ಮಗ. ವರನು ತುಂಬಾ ಒಳ್ಳೆಯ ವ್ಯಕ್ತಿ. ನಾನೀಗ ಅಧಿಕೃತವಾಗಿ ಅವರ ಮಲಮಗ (Stepson). ನಾನು ವಿನ್ನೀ ವಿಷಯವಾಗಿ ತುಂಬಾ ಅದೃಷ್ಟ ಮಾಡಿದ್ದೇನೆ. ಏಕೆಂದರೆ ನನ್ನ ಜೀವನದ ಮೊದಲ ಪ್ರೇಮದೊಂದಿಗೆ ಅವರ ಮದುವೆ ನಡೆಯುತ್ತಿದೆ.’ ಹೀಗೆ ಆರಂಭವಾಗುತ್ತದೆ ಭಾಷಣ. ನೆರೆದವರೆಲ್ಲರೂ ಈ ಭಾವುಕ ಘಳಿಗೆಗೆ ಸಾಕ್ಷಿಯಾಗುತ್ತಾರೆ. ಈ ಹುಡುಗನ ಆಳವಾದ ಭಾವ ಮತ್ತು ತಿಳಿವಳಿಕೆಯ ಮಾತುಗಳಿಗೆ ಕಣ್ಣೀರಾಗುತ್ತಾರೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದ್ದು, ನೆಟ್ಟಿಗರು ಈ ವಿಡಿಯೋದಿಂದ ಪ್ರೇರೇಪಣೆಯೊಂದು ಪ್ರತಿಕ್ರಿಯಿಸಿದ್ದಾರೆ ಮತ್ತು ತಮ್ಮ ನೆನಪುಗಳನ್ನು ಕೆದಕಿದ್ದಾರೆ.

ಇದನ್ನೂ ಓದಿ : Viral: ಇಸ್ರೋ ಅಧ್ಯಕ್ಷ ಸೋಮನಾಥರಿಗಿರುವ ಈ ಸಂಬಳ ನ್ಯಾಯಸಮ್ಮತವೆ? ಹರ್ಷ ಗೋಯೆಂಕಾ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಗುಡ್​ನ್ಯೂಸ್​ ​ಮೂವ್​ಮೆಂಟ್ ಎಂಬ ಇನ್​ಸ್ಟಾಗ್ರಾಂ ಪುಟದಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಈತನಕ ಸುಮಾರು 7 ಲಕ್ಷ ಜನರು ಇದನ್ನು ನೋಡಿದ್ದಾರೆ. ಸುಮಾರು 61,000 ಜನರು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿದ್ದಾರೆ. ನಾನಾಗಿದ್ದರೆ ಖಂಡಿತ ಇಂಥ ಸಂದರ್ಭವನ್ನು ನಿಭಾಯಿಸುವಲ್ಲಿ ಅಸಮರ್ಥನಾಗುತ್ತಿದ್ದೆ ಎಂದಿದ್ದಾರೆ ಒಬ್ಬರು. ನಾನು ತಾಯಿಯಲ್ಲ, ಆದರೂ ಅಳುತ್ತಿದ್ದೇನೆ ಎಂದಿದ್ದಾರೆ ಇನ್ನೊಬ್ಬರು.

ಅಮ್ಮನ ಮದುವೆಯಲ್ಲಿ ಭಾಷಣ ಮಾಡಿದ ವಿಡಿಯೋ ನೋಡಿ

ನಮ್ಮನ್ನು ಇಷ್ಟು ಚೆನ್ನಾಗಿ ಬೆಳೆಸಿದ ಎಲ್ಲಾ ಮಲತಂದೆಗಳಿಗೂ ಜಯವಾಗಲಿ ಎಂದಿದ್ದಾರೆ ಒಬ್ಬರು. ಜಗತ್ತಿನಲ್ಲಿ ಇಂಥ ಜೋರ್ಡಾನ್​ಗಳು ಹೆಚ್ಚೆಚ್ಚು ಬೇಕು. ಅಷ್ಟೇ ಅಲ್ಲ ಇಂಥ ವಿನ್ನಿಗಳೂ ಬೇಕು. ಆದರೆ ತಾಯೇ ನಮಗೆ ನಿಮ್ಮಂಥವರು ಬೇಕು. ನಿಮ್ಮೆಲ್ಲರನ್ನೂ ದೇವರು ಆಶೀರ್ವದಿಸಲಿ ಎಂದಿದ್ದಾರೆ ಇನ್ನೊಬ್ಬರು. ಈ ಮಗುವಿಗೆ ಅತ್ಯಂತ ಸುಂದರವಾದ ಹೃದಯವಿದೆ. ಈ ವಿಷಯವಾಗಿ ಅವನ ತಾಯಿಯ ಪಾತ್ರ ತುಂಬಾ ದೊಡ್ಡದು ಎನ್ನುವುದು ನನಗೆ ಖಾತ್ರಿ ಇದೆ. ಈ ಹೊಸ ಕುಟುಂಬವನ್ನು ದೇವರು ಆಶೀರ್ವದಿಸಲಿ ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : Viral Video: ತನ್ನ ನಾಲಗೆಯಿಂದ ವಿರಾಟ ಕೊಹ್ಲಿಯನ್ನು ಚಿತ್ರಿಸಿದ ಅಭಿಮಾನಿಯ ವಿಡಿಯೋ ವೈರಲ್

ಈ ತಾಯಿ ಬಹಳ ಅತ್ಯುತ್ತಮವಾದ ಕೆಲಸವನ್ನು ಮಾಡಿದ್ದಾರೆ ಎಂದಿದ್ದಾರೆ ಇನ್ನೊಬ್ಬರು. ಎಲ್ಲರಿಗೂ ಅವರ ಬದುಕಿನ ಗುರಿಗಳಿರುತ್ತವೆ ಮತ್ತು ಬೇಕಾದಂತೆ ಜೀವಿಸಲು ಹಕ್ಕುಗಳಿರುತ್ತವೆ. ಒಂದು ಮದುವೆ ಮುರಿದರೇನಂತೆ ಮತ್ತೊಂದು ಮದುವೆಯಾಗಿ ಎಂದಿದ್ದಾರೆ ಹಲವಾರು ಜನರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಕಾರ್ಮಿಕರ ಮೇಲೆ ಹಲ್ಲೆ ಮಾಡಿ ಚಹಾ ಅಂಗಡಿ ಧ್ವಂಸಗೊಳಿಸಿದ ಪೊಲೀಸಪ್ಪ!
ಕಾರ್ಮಿಕರ ಮೇಲೆ ಹಲ್ಲೆ ಮಾಡಿ ಚಹಾ ಅಂಗಡಿ ಧ್ವಂಸಗೊಳಿಸಿದ ಪೊಲೀಸಪ್ಪ!
ದೊಡ್ಡ ಗಣಪತಿ ದೇವಸ್ಥಾನದಲ್ಲಿ ಮೋದಿ ಹೆಸರಿನಲ್ಲಿ ವಿಶೇಷ ಪೂಜೆ, ಅಭಿಷೇಕ
ದೊಡ್ಡ ಗಣಪತಿ ದೇವಸ್ಥಾನದಲ್ಲಿ ಮೋದಿ ಹೆಸರಿನಲ್ಲಿ ವಿಶೇಷ ಪೂಜೆ, ಅಭಿಷೇಕ
ಬಾಯಿ ಮುಚ್ಕೊಂಡು ಕೂತ್ಗೊ; ಕಾವ್ಯಾಗೆ ಅವಾಜ್ ಹಾಕಿದ ಧ್ರುವಂತ್
ಬಾಯಿ ಮುಚ್ಕೊಂಡು ಕೂತ್ಗೊ; ಕಾವ್ಯಾಗೆ ಅವಾಜ್ ಹಾಕಿದ ಧ್ರುವಂತ್
ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ
ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ
ಸಂಜಯ್ ರಾವತ್ ಮನೆ ಮುಂದೆ ಬಾಂಬ್ ಬೆದರಿಕೆ ಸಂದೇಶವಿರುವ ಕಾರು ಪತ್ತೆ
ಸಂಜಯ್ ರಾವತ್ ಮನೆ ಮುಂದೆ ಬಾಂಬ್ ಬೆದರಿಕೆ ಸಂದೇಶವಿರುವ ಕಾರು ಪತ್ತೆ
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?
ಹೊಸ ವರ್ಷದ ಮೊದಲ ದಿನದಂದು ಈ ರಾಶಿಯವರಿಗೆ ಶುಭ ಫಲ
ಹೊಸ ವರ್ಷದ ಮೊದಲ ದಿನದಂದು ಈ ರಾಶಿಯವರಿಗೆ ಶುಭ ಫಲ
ನ್ಯೂ ಇಯರ್​​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​
ನ್ಯೂ ಇಯರ್​​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​
ಬೆಳಗಾವಿಯಲ್ಲಿ ನ್ಯೂಇಯರ್​​ ಕಿಕ್​​; ಭರ್ಜರಿ ಸ್ಟೆಪ್​ ಹಾಕಿದ ಜನರು
ಬೆಳಗಾವಿಯಲ್ಲಿ ನ್ಯೂಇಯರ್​​ ಕಿಕ್​​; ಭರ್ಜರಿ ಸ್ಟೆಪ್​ ಹಾಕಿದ ಜನರು
New Year 2026: ಹೊಸವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಜನರು
New Year 2026: ಹೊಸವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಜನರು