AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಇಸ್ರೋ ಅಧ್ಯಕ್ಷ ಸೋಮನಾಥರಿಗಿರುವ ಈ ಸಂಬಳ ನ್ಯಾಯಸಮ್ಮತವೆ? ಹರ್ಷ ಗೋಯೆಂಕಾ

Salary: ಇಸ್ರೋ ಮುಖ್ಯಸ್ಥ ಸೋಮನಾಥ ಅವರಿಗೆ ಈಗಿರುವ ಸಂಬಳ ರೂ. 2.5 ಲಕ್ಷ. ಇಂಥವರು ಪ್ರೀತಿ ಮತ್ತು ಶ್ರದ್ಧೆಯಿಂದ ದೇಶಕ್ಕಾಗಿ ಕೆಲಸ ಮಾಡುತ್ತಾರೆ. ಅವರಿಗೆ ಶಿರಬಾಗುವೆ ಎಂದಿದ್ದಾರೆ ಉದ್ಯಮಿ ಹರ್ಷ ಗೋಯೆಂಕಾ. ಕೆಲ ನೆಟ್ಟಿಗರು ಇವರಿಗೆ ಸಂಬಳ ಹೆಚ್ಚಿಸಬೇಕು ಎಂದು. ಇನ್ನೂ ಕೆಲವರು ಇತರೇ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವ ಉದ್ಯೋಗಿಯಂತೆ ಅವರೂ ಕೂಡ ಎಂದು. ನೀವೇನಂತೀರಿ?

Viral: ಇಸ್ರೋ ಅಧ್ಯಕ್ಷ ಸೋಮನಾಥರಿಗಿರುವ ಈ ಸಂಬಳ ನ್ಯಾಯಸಮ್ಮತವೆ? ಹರ್ಷ ಗೋಯೆಂಕಾ
ಇಸ್ರೋ ಮುಖ್ಯಸ್ಥ ಸೋಮನಾಥ ಮತ್ತು ಉದ್ಯಮಿ ಹರ್ಷ ಗೋಯೆಂಕಾ
ಶ್ರೀದೇವಿ ಕಳಸದ
|

Updated on:Sep 12, 2023 | 5:09 PM

Share

ISRO : ‘ಇಸ್ರೋ ಅಧ್ಯಕ್ಷ ಸೋಮನಾಥ್ (Somanath) ಅವರ ತಿಂಗಳ ವೇತನ ರೂ. 2.5 ಲಕ್ಷ, ಇದು ನ್ಯಾಯಸಮ್ಮತವೇ? ಇಂಥ ಜನರುಗಳನ್ನು ಸಂಬಳ ಮತ್ತು ಹಣಕ್ಕೂ ಮೀರಿದ ಅಂಶಗಳು ಪ್ರೇರೇಪಿಸುತ್ತಿರುತ್ತವೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಅವರು ಅತ್ಯಂತ ಆಸ್ಥೆ ಮತ್ತು ಪ್ರೀತಿಯಿಂದ ವಿಜ್ಞಾನ ಮತ್ತು ಸಂಶೋಧನೆಗಳಲ್ಲಿ ತೊಡಗಿಕೊಂಡು ದೇಶಕ್ಕೆ ಕೊಡುಗೆ ಕೊಡಲು ಮತ್ತು ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಲು ತಮ್ಮನ್ನು ತಾವೇ ಸಮರ್ಪಿಸಿಕೊಳ್ಳುತ್ತಾರೆ. ಇಂಥವರಿಗೆ ನಾನು ಶಿರಬಾಗುವೆ.’ ಎಂದು X ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ ಉದ್ಯಮಿ ಹರ್ಷ ಗೋಯೆಂಕಾ. ನೆಟ್ಟಿಗರು ಈ ಪೋಸ್ಟ್​ಗೆ ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : Viral Video: ತನ್ನ ನಾಲಗೆಯಿಂದ ವಿರಾಟ ಕೊಹ್ಲಿಯನ್ನು ಚಿತ್ರಿಸಿದ ಅಭಿಮಾನಿಯ ವಿಡಿಯೋ ವೈರಲ್ 

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ಪೋಸ್ಟ್ ಅನ್ನು ಸೆಪ್ಟೆಂಬರ್ 12 ರಂದು ಹಂಚಿಕೊಳ್ಳಲಾಗಿದೆ. 7.2 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ. 8,500ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದು, ಸುಮಾರು 1,000 ಜನರು ರೀಪೋಸ್ಟ್ ಮಾಡಿದ್ದಾರೆ. 600ಕ್ಕೂ ಹೆಚ್ಚು ಜನರು ಪ್ರತಿಕ್ರಿಯಿಸಿದ್ದಾರೆ. ನೀವು ಹೇಳಿದಂತೆ ಅವರಿಗೆ ಯಶಸ್ಸು ಮತ್ತು ದೇಶದ ಹೆಮ್ಮೆಯೇ ಅವರಿಗೆ ದೊಡ್ಡದು ಎಂದಿದ್ದಾರೆ ಒಬ್ಬರು.

ಹರ್ಷ ಗೋಯೆಂಕಾ ಟ್ವೀಟ್​

ಅವರಿಗೆ ಸಂಬಳವನ್ನು ಪರಿಷ್ಕರಿಸುವ ಅಗತ್ಯವಿಲ್ಲ.  ಪ್ರತಿ ಯಶಸ್ವಿ ಕಾರ್ಯಾಚರಣೆಯ ನಂತರ ಅವರಿಗೆ ಉತ್ತಮ ಮಟ್ಟದಲ್ಲಿ ಪ್ರೋತ್ಸಾಹ ನೀಡಿ ಎಂದಿದ್ದಾರೆ ಒಬ್ಬರು. ಪ್ರತೀ ತಿಂಗಳು ರೂ. 5 ಲಕ್ಷ ಕೊಡಬೇಕು ಎಂದಿದ್ದಾರೆ ಇನ್ನೊಬ್ಬರು. ನೀವು ಹೇಳಿದ್ದು ಸರಿ ಇದೆ, ಅವರಿಗೆ ಭಾರೀ ಮೊತ್ತದ ಸಂಬಳವನ್ನು ನೀಡಬೇಕು ಎಂದಿದ್ದಾರೆ ಮತ್ತೊಬ್ಬರು. ನೀವು ಅವರಿಗೆ ಏನಾದರೂ ಉಡುಗೊರೆ ಕೊಡಲು ಯೋಚಿಸಿದ್ದೀರಾ? ಎಂದು ಕೇಳಿದ್ದಾರೆ ಮಗದೊಬ್ಬರು.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 5:05 pm, Tue, 12 September 23

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ