Viral Video: 3 ವಾರಗಳ ನಂತರ ಅಟ್ಲಾಂಟಾ ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ನಾಯಿ
Dog Lovers: ಕಳೆದುಹೋದ ಸಾಕುಪ್ರಾಣಿಗಳು ವಾಪಾಸು ಸಿಕ್ಕರೆ ಆಗುವ ಸಂತೋಷ ನೆಮ್ಮದಿ ವರ್ಣಿಸಲಸಾಧ್ಯ. ಅಟ್ಲಾಂಟಾ ವಿಮಾನ ನಿಲ್ದಾಣದಲ್ಲಿ ಕಳೆದುಹೋಗಿದ್ದ ನಾಯಿಯೊಂದು ಮೂರು ತಿಂಗಳ ನಂತರ ತನ್ನ ಪೋಷಕರನ್ನು ಸೇರಿದೆ. ವೈರಲ್ ಆಗುತ್ತಿರುವ ಈ ನಾಯಿಯ ಫೋಟೋ ಅನ್ನು ನೆಟ್ಟಿಗರು ಅತ್ಯಂತ ಸಂತೋಷದಿಂದ ನೋಡುತ್ತಿದ್ದಾರೆ ಮತ್ತು ಹಾರೈಸುತ್ತಿದ್ಧಾರೆ.
Dog: ಹನ್ನೆರಡು ವರ್ಷಗಳ ನಂತರ ತನ್ನ ಪೋಷಕರನ್ನು ಸೇರಿದ ನಾಯಿಯ ಬಗ್ಗೆ ಇತ್ತೀಚೆಗಷ್ಟೇ ಓದಿದಿರಿ. ಇದೀಗ ಅಟ್ಲಾಂಟಾ ವಿಮಾನ ನಿಲ್ದಾಣದಲ್ಲಿ ಮೂರು ವಾರಗಳ ತನಕ ಕಳೆದುಹೋಗಿದ್ದ ನಾಯಿ ವಾಪಾಸು ತನ್ನ ಪೋಷಕರ ಮಡಿಲನ್ನು ಸೇರಿದೆ. ಈ ನಾಯಿಯ ಫೋಟೋ ಇದೀಗ ವೈರಲ್ ಆಗುತ್ತಿದ್ದು ಹೃದಯಸ್ಪರ್ಶಿಯಾದ ಈ ಸನ್ನಿವೇಶಕ್ಕೆ ನೆಟ್ಟಿಗರು ತುಂಬುಮನಸಿನಿಂದ ಪ್ರತಿಕ್ರಿಯಿಸುತ್ತಿದ್ದಾರೆ. ಅಟ್ಲಾಂಟಾದ (Atlanta) ಹಾರ್ಟ್ಸ್ಫೀಲ್ಡ್ ಜಾಕ್ಸನ್ ವಿಮಾನ ನಿಲ್ದಾಣವು ಜಗತ್ತಿನ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣ. ಮೂರು ತಿಂಗಳ ಹಿಂದೆ ಡೆಲ್ಟಾ ಏರ್ಲೈನ್ಸ್ ಪ್ರಯಾಣಿಕ ಪೌಲಾ ರೋಡ್ರಿಗಸ್ ಅವರ ಈ ನಾಯಿ ಇಲ್ಲಿ ಕಳೆದುಹೋಗಿತ್ತು.
ಇದನ್ನೂ ಓದಿ : Viral Video: ಅಮ್ಮನ ಮದುವೆಯಲ್ಲಿ ಮಗನ ಭಾವನಾತ್ಮಕ ಭಾಷಣ; ಕಣ್ಣೀರಾದ ನೆರೆದವರು
ರೋಡ್ರಿಗಸ್ ಮತ್ತು ಅವರ ನಾಯಿ ಚಿಹೋವಾ ಮಾಯಾ ಡೊಮಿನಿಕನ್ ರಿಪಬ್ಲಿಕ್ ನಿವಾಸಿಗಳು. ಅವರು ಆಗ. 18ರಂದು ಎರಡು ವಾರಗಳ ವಿಹಾರಕ್ಕಾಗಿ ಕ್ಯಾಲಿಫೋರ್ನಿಯಾಗೆ ಪ್ರಯಾಣಿಸಿದರು. ಅಟ್ಲಾಂಟಾದಲ್ಲಿ ಇಳಿದಾಗ ಪ್ರವಾಸಿ ವೀಸಾದಲ್ಲಿ ಸಮಸ್ಯೆ ಉಂಟಾಯಿತು. ಅಷ್ಟರಲ್ಲಿ ಚಿಹೋವಾ ಅನ್ನು ರನ್ವೇಯಿಂದ ತಪ್ಪಿಸಿಕೊಂಡ ಸುದ್ದಿ ತಲುಪಿತು.
ಬಂಧನದಲ್ಲಿರುವ ಚಿಹೋವಾ
Maia, the dog who escaped onto the airfield at the world’s busiest airport, was recovered on September 9. ATL’s Operations team found her hiding near the North Cargo facilities. Tired but in apparent good health, she was transported to a vet and is expected to return home soon. pic.twitter.com/eNbM6us1BW
— Atlanta Airport (@ATLairport) September 10, 2023
ಅಟ್ಲಾಂಟಾ ಏರ್ಪೋರ್ಟ್ ತನ್ನ ಅಧಿಕೃತ X ಖಾತೆಯಲ್ಲಿ ಈ ವಿಷಯವನ್ನು ಪೋಸ್ಟ್ ಮಾಡಿದೆ. ಈತನಕ ಇದನ್ನು ಸುಮಾರು 67,000 ಜನರು ನೋಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ನಾಯಿಯು ತನ್ನ ಪೋಷಕರನ್ನು ಮತ್ತೆ ಸೇರಿರುವುದು ಅತ್ಯಂತ ಖುಷಿಯ ವಿಚಾರ ಎಂದಿದ್ದಾರೆ. ಆಕೆ ತನ್ನ ತಾಯಿಯ ಮನೆಗೆ ಹೋಗುತ್ತಿರುವುದು ಅತ್ಯಂತ ಸಂತೋಷದ ಸಂಗತಿ ಎಂದಿದ್ದಾರೆ ಇನ್ನೊಬ್ಬರು.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 6:52 pm, Tue, 12 September 23