AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಬೆಂಗಳೂರು; ‘ಬೆಳಗ್ಗೆಯಿಂದ ಗೂಂಡಾಗಿರಿ ನಡೆಯುತ್ತಿದೆ, ಏನು ಮಾಡುತ್ತಿದ್ದೀರಿ ಪೊಲೀಸರೇ?’

Hooliganism: ದಾರಿ ಅಡ್ಡಗಟ್ಟಿ ದ್ವಿಚಕ್ರವಾಹನ ಸವಾರನ ತಲೆಯ ಮೇಲೆ ಮೊಟ್ಟೆಯೊಡೆಯುವ ಮೂಲಕ ಈ ವಿಡಿಯೋ ಆರಂಭವಾಗುತ್ತದೆ. ಬೆಂಗಳೂರು ಸಿಟಿ ಪೊಲೀಸ್​, ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ ಅವರಿಗೆ ಇದನ್ನು ಟ್ಯಾಗ್ ಮಾಡಿ ಇಂಥವರ ವಿರುದ್ಧ ಕ್ರಮ ಕೈಗೊಳ್ಳಿ ಇಲ್ಲವಾದಲ್ಲಿ ನಗರದಲ್ಲಿ ಗೂಂಡಾಗಿರಿ ಹೆಚ್ಚುತ್ತದೆ ಎಂದು ಈ ಪೋಸ್ಟ್​ನಲ್ಲಿ ಹೇಳಲಾಗಿದೆ. ಮುಂದೇನಾಗುತ್ತದೆ? ಓದಿ.

Viral Video: ಬೆಂಗಳೂರು; 'ಬೆಳಗ್ಗೆಯಿಂದ ಗೂಂಡಾಗಿರಿ ನಡೆಯುತ್ತಿದೆ, ಏನು ಮಾಡುತ್ತಿದ್ದೀರಿ ಪೊಲೀಸರೇ?'
ದ್ವಿಚಕ್ರವಾಹನದ ಮೇಲೆ ಬಂದ ವ್ಯಕ್ತಿಯ ತಲೆಗೆ ಮೊಟ್ಟೆ ಒಡೆದು ಬೆದರಿಸುತ್ತಿರುವ ದುಷ್ಕರ್ಮಿ
Follow us
ಶ್ರೀದೇವಿ ಕಳಸದ
|

Updated on:Sep 13, 2023 | 10:39 AM

Bengaluru : ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ದ್ವಿಚಕ್ರವಾಹನದಲ್ಲಿ ಬಂದ ವ್ಯಕ್ತಿಯನ್ನು ಈ ಮೂರು ನಾಲ್ಕು ವ್ಯಕ್ತಿಗಳು ತಡೆಯುತ್ತಾರೆ. ಅವನ ಹೆಲ್ಮೆಟ್​ ತೆಗೆಸಿ ತಲೆಯ ಮೇಲೆ ಮೊಟ್ಟೆ ಒಡೆಯುತ್ತಾರೆ. ಅವನೊಂದಿಗೆ ಮಾತಿಗಳಿಯುತ್ತಲೇ ಅವನ ದ್ವಿಚಕ್ರವಾಹನಕ್ಕೆ ಮೊಟ್ಟೆಗಳನ್ನು ಎಸೆಯುತ್ತಾರೆ. ಅವನು ಮೊಬೈಲ್​ ಕೈಗೆ ಎತ್ತಿಕೊಂಡಾಗ ಅವ ಹ್ಯಾಂಡ್ಸ್​ಫ್ರೀ ಕಿತ್ತುಕೊಳ್ಳುತ್ತಾರೆ. ‘ಇಂದು ಬೆಳಗ್ಗೆಯಿಂದ ನಗರದೊಳಗೆ ಒಂದೇಸಮ ಗೂಂಡಾಗಿರಿ ನಡೆಯುತ್ತಿದೆ. ಪೊಲೀಸರೇ ಏನು ಮಾಡುತ್ತಿದ್ದೀರಿ ನೀವು? ‘ ಎಂಬ ಒಕ್ಕಣೆಯೊಂದಿಗೆ ಈ ವಿಡಿಯೋ ಅನ್ನು X ನ @freedomlore1 ಎನ್ನುವ ಖಾತೆಯಲ್ಲಿ ಸೆ. 11ರಂದು ಪೋಸ್ಟ್ ಮಾಡಲಾಗಿದೆ.

ಈ ವ್ಯಕ್ತಿಯ ಮೊಬೈಲ್​ ಸಂಖ್ಯೆ ಮತ್ತು ಈ ಘಟನೆ ನಡೆದ ನಿಖರವಾದ ಸ್ಥಳ ಮತ್ತಿತರೇ ವಿವರಗಳನ್ನು ಮೆಸೇಜ್ ಮಾಡಿ ಎಂದು ಈ ಪೋಸ್ಟ್​ನಡಿ ಪ್ರತಿಕ್ರಿಯಿಸಿದ್ದಾರೆ ಬೆಂಗಳೂರು ಸಿಟಿ ಪೊಲೀಸರು. ಅದಕ್ಕೆ ಪ್ರತಿಯಾಗಿ @freedomlore1, ‘ಸರ್, ನೀವು ನನ್ನ ಬಳಿ ಸ್ಥಳ, ವಿಳಾಸ ಮತ್ತು ಸಂಪರ್ಕ ವಿವರಗಳನ್ನು ಕೇಳುತ್ತಿರುವುದು ವಿಚಿತ್ರವೆನ್ನಿಸುತ್ತಿದೆ. ಈ ವಿಡಿಯೋದ ಮೂಲವನ್ನು ಇಲಾಖೆಯ ಮೂಲಕ ಕಂಡುಹಿಡಿಯಲಾಗುತ್ತಿಲ್ಲವೆ? ನಾನೊಬ್ಬ ಸಾಮಾನ್ಯ ಪ್ರಜೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ನನ್ನ ಬಳಿ ಇದೆ ಅಷ್ಟೇ. ಈ ವಿಡಿಯೋದ ಸ್ಥಳವನ್ನು ಎರಡೇ ನಿಮಿಷಗಳಲ್ಲಿ ನಾನು ಕಂಡುಹಿಡಿಯಬಲ್ಲೆ. ಹಾಗಾದರೆ ನೀವು ಏನು ಮಾಡುತ್ತೀರಿ? ಇಂಥ ಪೊಲೀಸ್​ ವ್ಯವಸ್ಥೆಯಿಂದ ಏನು ಪ್ರಯೋಜನ ಎಂದು ಕೇಳಿದ್ದಾರೆ.’

ಇದನ್ನೂ ಓದಿ : Viral Video: ತನ್ನ ನಾಲಗೆಯಿಂದ ವಿರಾಟ ಕೊಹ್ಲಿಯನ್ನು ಚಿತ್ರಿಸಿದ ಅಭಿಮಾನಿಯ ವಿಡಿಯೋ ವೈರಲ್ 

ಈ ವಿಡಿಯೋ ಬಾಗಲಕುಂಟೆ ಮಂಜುನಾಥ ಲೇಔಟ್​ನದ್ದು. ಇಂಥವರು ನಗರದಲ್ಲಿರುವ ಸೌಹಾರ್ದತೆಗೆ ಭಂಗ ತರುತ್ತಿರುವುದು ನಾಚಿಕೆಗೇಡಿನ ಸಂಗತಿ. ದಯವಿಟ್ಟು ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಿ ಎಂದು @freedomlore1 ಹೇಳಿದ್ದಾರೆ. ವಿಐಪಿಗಳನ್ನು ಹೊರತುಪಡಿಸಿ ಉಳಿದ ನಾಗರಿಕರೆಲ್ಲ ಪೊಲೀಸರ ಸೇವಕರು ಎಂದಿದ್ದಾರೆ ಒಬ್ಬರು. ಈ ವ್ಯಕ್ತಿಯ ವಿರುದ್ಧ ಬೆಂಗಳೂರು ಪೊಲೀಸರು ಕ್ರಮ ಕೈಗೊಂಡಿದ್ದು, ಎಫ್​ಐಆರ್ ದಾಖಲಿಸಿ ಬಂಧಿಸಲಾಗಿದೆ ಎಂದು @freedomlore1 ಹೇಳಿದ್ದಾರೆ. ಹಾಗಿದ್ದರೆ ಆ ವ್ಯಕ್ತಿ ಯಾರು ಅವನ ವಿವರಗಳನ್ನು ನೀಡಿ ಎಂದು ಮತ್ತೊಬ್ಬರು ಕೇಳಿದ್ದಾರೆ.

ಇದನ್ನೂ ಓದಿ : Viral Video: ‘ನಾನು ದೂರದ ಕಡಲತೀರದಲ್ಲಿ ಬದುಕುತ್ತಿರುವುದು ಈ ಕಾರಣಕ್ಕೆ’ ಸಮೃದ್ಧಿ ಮಲ್ಹೋತ್ರಾ

ಮಾರತ್ತಹಳ್ಳಿಯ ಕಡೆ ಇತರೇ ರಾಜ್ಯದ ಜನರು ಕುಡಿದು, ಗಾಂಜಾ, ಮಾದಕ ದ್ರವ್ಯ ಸೇವಿಸಿದಾಗ ಸ್ಥಳೀಯ ರೌಡಿಗಳು  ದಾಳಿ ಮಾಡುತ್ತಾರೆ. ಆದರೆ ಈ ಬಗ್ಗೆ ಸ್ಥಳೀಯ ಪೊಲೀಸರು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ ಮತ್ತೊಬ್ಬರು. ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ನಗರ ಪೊಲೀಸ್ ಆಯುಕ್ತರು ವಿಫಲರಾಗಿದ್ದಾರೆ, ಅವರು ರಾಜೀನಾಮೆ ನೀಡಬೇಕು ಎಂದಿದ್ದಾರೆ ಇನ್ನೊಬ್ಬರು. ಕರ್ನಾಟಕದಲ್ಲಿರುವ ಗೂಂಡಾರಾಜ್​ ತೊಲಿಗಿಸಲು ಯೋಗಿ ಬೇಕು! ಎಂದಿದ್ದಾರೆ ಮತ್ತೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 10:37 am, Wed, 13 September 23

ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ರಾಕೇಶ್ ಒಬ್ಬ ಒಳ್ಳೆಯ ಮಗ, ಸಹೋದರ ಮತ್ತು ವ್ಯಕ್ತಿ ಕೂಡ ಆಗಿದ್ದರು
ರಾಕೇಶ್ ಒಬ್ಬ ಒಳ್ಳೆಯ ಮಗ, ಸಹೋದರ ಮತ್ತು ವ್ಯಕ್ತಿ ಕೂಡ ಆಗಿದ್ದರು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ