Viral Brain Teaser: ಎರಡು ಮರಗಳು ಮತ್ತು ಒಂದು ಕಿತ್ತಳೆಯ ಮೊತ್ತವನ್ನು ಕಂಡುಹಿಡಿಬಹುದಾ?
Magic Math: ನೀವು ಅದೆಷ್ಟು ಶೀಘ್ರವಾಗಿ ಈ ಸಮಸ್ಯೆಗೆ ಉತ್ತರ ಕಂಡುಕೊಳ್ಳುತ್ತೀರಿ ಎನ್ನುವುದಕ್ಕಿಂತ ಸರಿಯಾಗಿ ಉತ್ತರ ಕಂಡುಕೊಳ್ಳುತ್ತೀರಿ ಎನ್ನುವುದು ಮುಖ್ಯ. ಏಕೆಂದರೆ ಇದು ಲೆಕ್ಕಕ್ಕೆ ಸಂಬಂಧಿಸಿದ್ದು, ಆಲೋಚನೆ ಮಾಡಿ ಉತ್ತರಿಸಬೇಕಾಗುತ್ತದೆ. ಸಾಕಷ್ಟು ನೆಟ್ಟಿಗರು, ಇದು ತುಂಬಾ ಆಸಕ್ತಿದಾಯಕ ಬ್ರೇನ್ ಟೀಸರ್ ಎಂದು ಹೇಳುತ್ತಾ ಉತ್ತರಿಸಲು ಪ್ರಯತ್ನಿಸಿದ್ದಾರೆ.
Brain Teaser: ಸಮಸ್ಯೆಗಳನ್ನು ಬಿಡಿಸುವುದೆಂದರೆ ಕೆಲವರಿಗೆ ಭಾರೀ ಉತ್ಸಾಹ. ಅಂಥ ಕೆಲವರಲ್ಲಿ ನೀವೂ ಒಬ್ಬರು, ಅದಕ್ಕಾಗಿಯೇ ಇದನ್ನು ಓದುತ್ತಿದ್ದೀರಿ. ಹಾಗಿದ್ದರೆ ಇಲ್ಲಿದೆ ಮತ್ತೊಂದು ಹೊಸ ಬ್ರೇನ್ ಟೀಸರ್. ಇದು ಲೆಕ್ಕದಾಟ. ಮರಗಳು ಮತ್ತು ಕಿತ್ತಳೆ (Trees and Oranges) ಹಣ್ಣುಗಳನ್ನಿಟ್ಟುಕೊಂಡು ಆಡುವ ಆಟ. ಆದರೆ ಈ ಆಟವಾಡಲು ಒಂದು ಷರತ್ತು ಇದೆ. ನೀವು ಕ್ಯಾಲ್ಕ್ಯುಲೇಟರ್ ಬಳಸದೆಯೇ ಈ ಸಮಸ್ಯೆಗೆ ಉತ್ತರವನ್ನು ಕಂಡುಕೊಳ್ಳಬೇಕು. ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡ ಈ ಬ್ರೇನ್ ಟೀಸರ್ ಅನ್ನು ಅನೇಕರು ಉತ್ತರ ಕಂಡುಹಿಡಿಯಲು ಪ್ರಯತ್ನಿಸಿದ್ದಾರೆ. ನೀವೂ ಪ್ರಯತ್ನಿಸಿ. ನಿಮ್ಮ ಉತ್ತರ ಏನೆಂಬುದನ್ನು ತಿಳಿಸಿ.
ಇದನ್ನೂ ಓದಿ : Viral Video: ಅಮ್ಮನ ಮದುವೆಯಲ್ಲಿ ಮಗನ ಭಾವನಾತ್ಮಕ ಭಾಷಣ; ಕಣ್ಣೀರಾದ ನೆರೆದವರು
@mathcince ಎಂಬ ಇನ್ಸ್ಟಾ ಖಾತೆಯಲ್ಲಿ ಆಗಾಗ ಇಂಥ ವಿನೋದಾತ್ಮಕ, ಸಮಸ್ಯಾತ್ಮಕ ಮತ್ತು ಭ್ರಮಾತ್ಮಕ ಸವಾಲುಗಳನ್ನು ಪೊಸ್ಟ್ ಮಾಡಲಾಗುತ್ತದೆ. ನೆಟ್ಟಿಗರು ಅತ್ಯಾಸಕ್ತಿಯಿಂದ ಈ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಇದೀಗ ಇಲ್ಲಿ ಎರಡು ಮರಗಳ ಮೊತ್ತು 9. ಎರಡು ಗುಂಪು ಕಿತ್ತಳೆಗಳ ಮೊತ್ತ 16. ಹಾಗಿದ್ದರೆ ಎರಡು ಮರ ಮತ್ತು ಒಂದು ಕಿತ್ತಳೆಯ ಮೊತ್ತ ಎಷ್ಟು? ಪ್ರಯತ್ನಿಸುವಿರಾ?
ಈ ಚಿತ್ರ ನೋಡಿ ಸವಾಲನ್ನು ಬಿಡಿಸಿ
View this post on Instagram
ಈ ತನಕ ಸುಮಾರು 50,000 ಜನರು ಈ ಪೋಸ್ಟ್ ನೋಡಿದ್ದಾರೆ. ಸುಮಾರು 600 ಜನರು ಲೈಕ್ ಹಾಕಿದ್ದು ನೂರಾರು ಜನರು ಉತ್ತರ ಕಂಡುಕೊಳ್ಳಲು ಪ್ರಯತ್ನಿಸಿದ್ದಾರೆ. 10 ಇದು ಸರಿಯಾದ ಉತ್ತರ ಎಂದಿದ್ದಾರೆ ಅನೇಕರು. ಇನ್ನೂ ಕೆಲವರು 7 ಸರಿಯಾದ ಉತ್ತರ ಎಂದಿದ್ದಾರೆ. ಮತ್ತೊಬ್ಬರು. 4 ಸರಿಯಾದ ಉತ್ತರ. ಹೇಗೆ ಎಂದರೆ, 1 ಮರ=3, 8 ಕಿತ್ತಳೆ=8, 1 ಕಿತ್ತಳೆ=1, 1ಮರ+1 ಕಿತ್ತಳೆ=3+1=4.
ಇದನ್ನೂ ಓದಿ : Viral: ಇಸ್ರೋ ಅಧ್ಯಕ್ಷ ಸೋಮನಾಥರಿಗಿರುವ ಈ ಸಂಬಳ ನ್ಯಾಯಸಮ್ಮತವೆ? ಹರ್ಷ ಗೋಯೆಂಕಾ
ಎಲ್ಲರೂ 10 ಮತ್ತು 7 ಸರಿಯಾದ ಉತ್ತರ ಎಂದಿದ್ದಾರೆ. ನಿಮ್ಮ ಪ್ರಕಾರ ಸರಿಯಾದ ಉತ್ತರವೇನು? ತಿಳಿಸಿ. ಈ ಪೋಸ್ಟ್ ಅನ್ನು ನಿಮ್ಮ ಸ್ನೇಹಿತರಿಗೆ, ಮನೆಯ ಸದಸ್ಯರಿಗೆ, ಸಹೋದ್ಯೋಗಿಗಳಿಗೆ, ಮಕ್ಕಳಿಗೆ ತೋರಿಸಿ. ಅವರು ಏನು ಉತ್ತರ ಕಂಡುಕೊಳ್ಳಬಹುದು? ಎನ್ನುವ ಕುತೂಹಲವನ್ನು ನಿಮ್ಮದಾಗಿಸಿಕೊಳ್ಳಿ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ