Viral Video: ಲಂಡನ್; ಮಗಳ ಹೆಸರಿನಲ್ಲಿ 667 ಟ್ಯಾಟೂ ಹಾಕಿಸಿಕೊಂಡು ವಿಶ್ವದಾಖಲೆ ಮಾಡಿದ ಅಪ್ಪ
GWR: ವಿಶ್ವದಾಖಲೆ ಮಾಡಲೆಂದೇ ಮಾರ್ಕ್ ಓವನ್ ಇವಾನ್ 2017ರಲ್ಲಿ ಮಗಳ ಹೆಸರನ್ನು ಬೆನ್ನ ಮೇಲೆ ಹಾಕಿಕೊಂಡು ವಿಶ್ವದಾಖಲೆ ನಿರ್ಮಿಸಿದ್ದರು. ಈ ವ್ಯಕ್ತಿ ಇದೀಗ ತೊಡೆಯ ಮೇಲೆ ಹೆಚ್ಚುವರಿ ಹಚ್ಚೆಗಳನ್ನು ಹಾಕಿಸಿಕೊಂಡು ಮತ್ತೆ ವಿಶ್ವದಾಖಲೆ ನಿರ್ಮಿಸಿದ್ದಾರೆ. ವಿಶ್ವದಾಖಲೆಯ ಪ್ರಮಾಣಪತ್ರಗಳೊಂದಿಗೆ ಮಗಳೊಂದಿಗೆ ನಿಂತು ತೆಗೆಸಿಕೊಂಡ ಫೋಟೋ ಕೂಡ ಇಲ್ಲಿದೆ.
ಲಂಡನ್: ತನ್ನ ಮೈಮೇಲೆ 667 ಸಲ ಮಗಳ ಹೆಸರನ್ನು ಟ್ಯಾಟೂ ಹಾಕಿಸಿಕೊಂಡು ಗಿನ್ನೀಸ್ ವಿಶ್ವ ದಾಖಲೆ ಮಾಡಿದ್ದಾನೆ 49 ವರ್ಷದ ಮಾರ್ಕ್ ಓವನ್ ಇವಾನ್ಸ್ (Mark Owen Evans). 2017ರಲ್ಲಿ 267ಸಲ ತನ್ನ ಮಗಳು Lucyಯ ಹೆಸರನ್ನು ದೇಹದ ಮೇಲೆ ಹಾಕಿಸಿಕೊಂಡು ವಿಶ್ವದಾಖಲೆ ನಿರ್ಮಿಸಿದ್ದ. ಈಗ ಮತ್ತೆ 400 ಸಲ ಮಗಳ ಹೆಸರನ್ನು ಹಾಕಿಸಿಕೊಂಡಿದ್ಧಾನೆ. ಒಟ್ಟು 667 ಟ್ಯಾಟೂಗಳನ್ನು ತನ್ನ ಮೈಮೇಲೆ ಹಾಕಿಸಿಕೊಂಡು ಮತ್ತೊಮ್ಮೆ ವಿಶ್ವದಾಖಲೆ ನಿರ್ಮಿಸಿದ್ದಾನೆ ಮಾರ್ಕ್. ಈ ಮಧ್ಯೆ 2020ರಲ್ಲಿ ಅಮೆರಿಕದ ಡೈಡ್ರಾ ವಿಜಿಲ್ ತನ್ನ ಹೆಸರನ್ನು 300 ಬಾರಿ ಟ್ಯಾಟೂ ಹಾಕಿಸಿಕೊಂಡಿದ್ದರಿಂದ ವಿಶ್ವದಾಖಲೆ ಡೈಡ್ರಾ ಪಾಲಾಗಿತ್ತು.
ಇದನ್ನೂ ಓದಿ : Viral Video: ನಾನು ನಂದಿನಿ ಬೆಂಗಳೂರಿಗೆ ಬಂದೀನಿ; 5 ಮಿಲಿಯನ್ ಜನರನ್ನು ತಲುಪಿದ ‘ವಿಕಿಪೀಡಿಯಾ’ ರೀಲ್
ಬೆನ್ನಿನ ಮೇಲೆ ಹೆಚ್ಚುವರಿಯಾಗಿ ಮಗಳ ಹೆಸರನ್ನು ಟ್ಯಾಟೂ ಹಾಕಿಸಿಕೊಳ್ಳಲು ಜಾಗ ಇಲ್ಲದ ಕಾರಣ ಅವರು ತಮ್ಮ ತೊಡೆಗಳ ಮೇಲೆ ಹೊಸ ಟ್ಯಾಟೂಗಳನ್ನು ಹಾಕಿಸಿಕೊಂಡಿದ್ದಾರೆ. ಇಬ್ಬರು ಟ್ಯಾಟೂ ಕಲಾವಿದರು ಒಂದು ಗಂಟೆಯೊಳಗೆ ಈ ಟ್ಯಾಟೂ ಹಾಕುವಲ್ಲಿ ಯಶಸ್ವಿಯಾಗಿದ್ಧಾರೆ. ಇಂಗ್ಲಿಷ್ನಲ್ಲಿ ಸಾಲಾಗಿ ತಮ್ಮ ಮಗಳು Lucy ಯ ಹೆಸರನ್ನು ಮಾರ್ಕ್ ಹಾಕಿಸಿಕೊಂಡ ಫೋಟೋ ಇಲ್ಲಿದೆ.
ಎರಡನೇ ಸಲ ವಿಶ್ವದಾಖಲೆಗಾಗಿ ತೊಡೆಯ ಮೇಲೆ ಮಗಳ ಹೆಸರು
ಆರಂಭದಲ್ಲಿ ಲೂಸಿಯ ಹೆಸರನ್ನು 100 ಬಾರಿ ಟ್ಯಾಟೂ ಹಾಕಿಸಿಕೊಳ್ಳಲು ಮಾರ್ಕ್ ಯೋಚಿಸಿದ್ದರು. ನೂರು ಸಲ ಹಾಕಿಸಿಕೊಂಡರೆ ದಾಖಲೆ ಮಾಡಲು ಸೂಕ್ತ ಎಂದು ಅವರು ಭಾವಿಸಿದ್ದರು. ಆದರೆ ನಂತರ ಕಲಾವಿದರ ಕೈಯಲ್ಲಿ ಅದು ದ್ವಿಗುಣಗೊಂಡಿತು. ಒಂದೇ ಸಮಯದಲ್ಲಿ ಇಬ್ಬರು ಕಲಾವಿದರು ಹಚ್ಚೆ ಹಾಕುವಲ್ಲಿ ಯಶಸ್ವಿಯಾದರು. ಅಂತೂ ಇದೀಗ ಒಟ್ಟು 667 ಟ್ಯಾಟೂಗಳನ್ನು ಶಾಶ್ವತವಾಗಿ ತಮ್ಮ ಮೈಮೇಲೆ ಹಾಕಿಸಿಕೊಂಡಿದ್ದಾರೆ.
ಮಗಳೊಂದಿಗೆ ವಿಶ್ವದಾಖಲೆ ಪ್ರಮಾಣ ಪತ್ರದೊಂದಿಗೆ ಮಾರ್ಕ್
ಈ ಮೊದಲು ಅಮೆರಿಕದ ವ್ಯಕ್ತಿಯೊಬ್ಬರು ಒಂದು ವರ್ಷದ ಅವಧಿಯಲ್ಲಿ 777 ಸಿನೆಮಾಗಳನ್ನು ನೋಡಿ ವಿಶ್ವದಾಖಲೆ ಮಾಡಿದ್ದರು. 2022 ರಿಂದ 2023 ರ ಮಧ್ಯೆ ಒಟ್ಟು 777 ಪ್ರದರ್ಶನಗಳಿಗೆ ಅವರು ಹಾಜರಾಗಿದ್ದ ವಿಷಯವನ್ನು ಇಲ್ಲಿ ಸ್ಮರಿಸಬಹುದು. ಇನ್ನು ದೀರ್ಘ ಚುಂಬನದಲ್ಲಿ ಗಿನ್ನೀಸ್ ದಾಖಲೆ ಮಾಡಿದವರ ವಿವರಗಳನ್ನೂ ಓದಿದ್ದೀರಿ. ಆದರೆ ಆ ಸ್ಪರ್ಧೆ ಆರೋಗ್ಯಕ್ಕೆ ಮಾರಕ ಅಷ್ಟೇ ಅಲ್ಲ ಪ್ರಾಣಾಪಾಯವನ್ನೂ ತಂದೊಡ್ಡಿದ್ದರಿಂದ ಅದನ್ನು ಪಟ್ಟಿಯಿಂದ ಕೈಬಿಡಲಾಯಿತು.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 4:44 pm, Wed, 13 September 23