Viral Video: ಜವಾನ ಜಮಾನಾ; ಕೀರ್ತಿ ಸುರೇಶ್, ಪ್ರಿಯಾ ಅಟ್ಲೀ ​’ಚಲೇಯಾ’ಗೆ ಡ್ಯಾನ್ಸ್​; 5 ಮಿಲಿಯನ್ ವೀಕ್ಷಣೆ

Chaleya: ನಟಿಯರಾದ ಕೀರ್ತಿ ಸುರೇಶ ಮತ್ತು ಪ್ರಿಯಾ ಅಟ್ಲೀ ಜವಾನ ಚಿತ್ರದ ಚಲೇಯಾ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅತಿ ವೇಗದಲ್ಲಿ ಇದು ನೆಟ್ಟಿಗರನ್ನು ತಲುಪಿದೆ. ಇವರಿಬ್ಬರ ಈ ನೃತ್ಯವನ್ನು ಸಾಕಷ್ಟು ಜನ ಮೆಚ್ಚಿ ಪ್ರತಿಕ್ರಿಯಿಸಿದ್ಧಾರೆ. ಈ ಹಾಡಿಗೆ ಅನೇಕರು ನರ್ತಿಸಿದ್ಧಾರೆ. ಆದರೆ ನಿಮ್ಮ ನೃತ್ಯ ಅತ್ಯಂತ ವಿಶೇಷವಾಗಿದೆ ಎಂದಿದ್ದಾರೆ. ಈ ರೀಲಿನ ಕೊನೆಯಲ್ಲಿ ನೋಡಲು ಮರೆಯದಿರಿ ಎಂದಿದ್ದಾರೆ ಕೀರ್ತಿ. ಏನಿದೆ ಅಂಥದ್ದು?

Viral Video: ಜವಾನ ಜಮಾನಾ; ಕೀರ್ತಿ ಸುರೇಶ್, ಪ್ರಿಯಾ ಅಟ್ಲೀ ​'ಚಲೇಯಾ'ಗೆ ಡ್ಯಾನ್ಸ್​; 5 ಮಿಲಿಯನ್ ವೀಕ್ಷಣೆ
ಕೀರ್ತಿ ಸುರೇಶ ಮತ್ತು ಪ್ರಿಯಾ ಅಟ್ಲೀ
Follow us
ಶ್ರೀದೇವಿ ಕಳಸದ
|

Updated on:Sep 14, 2023 | 10:38 AM

Jawan : ಗೌರಿ ಖಾನ್​ ನಿರ್ಮಾಣದ ಅಟ್ಲೀ ಕುಮಾರ್ ನಿರ್ದೇಶನದ ಶಾರುಖ್​ ಖಾನ್ (Shahrukh Khan)​ ಮತ್ತು ನಯನ್​ ತಾರಾ, ಸಾನ್ಯಾ ಮಲ್ಹೋತ್ರಾ, ಪ್ರಿಯಾಮಣಿ ಸೇತುಪತಿ ನಟಿಸಿರುವ ಜವಾನ ಸಿನೆಮಾದ ಚಲೇಯಾ ಹಾಡಿಗೆ ನಟಿಯರಾದ ಕೀರ್ತಿ ಸುರೇಶ್ ಮತ್ತು ಪ್ರಿಯಾ ಅಟ್ಲೀ ಹೆಜ್ಜೆ ಹಾಕಿದ್ದಾರೆ. 13 ಗಂಟೆಗಳ ಹಿಂದೆ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾದ ಈ ಹಾಡನ್ನು ಸುಮಾರು 5 ಮಿಲಿಯನ್​ ಜನರು ನೋಡಿದ್ದಾರೆ. 1 ಲಕ್ಷಕ್ಕಿಂತಲೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಆ್ಯಕ್ಷನ್ ಥ್ರಿಲ್ಲರ್ ಸಿನೆಮಾದ ಈ ಹಾಡು ಬಿಡುಗಡೆಯಾದಾಗಿನಿಂದ ಟ್ರೆಂಡಿಂಗ್​ನಲ್ಲಿದೆ. ಈ ರೊಮ್ಯಾಂಟಿಕ್ ಟ್ರ್ಯಾಕ್‌ಗೆ ನರ್ತಿಸಿದ ಪ್ರಿಯಾ ಅಟ್ಲಿ ಮತ್ತು ಕೀರ್ತಿ ಸುರೇಶ ಪೋಸ್ಟ್​ಗೆ ವರುಣ್ ಧವನ್, ಸಾನ್ಯಾ ಮಲ್ಹೋತ್ರಾ ಸೇರಿದಂತೆ ಅನೇಕ ತಾರೆಯರು, ನೆಟ್ಟಿಗರು ಪ್ರತಿಕ್ರಿಯೆಗಳ ಹೊಳೆಯನ್ನೇ ಹರಿಸಿದ್ದಾರೆ.

ಇದನ್ನೂ ಓದಿ : Viral Video: ಅಮೆರಿಕ; ವಿಟಮಿನ್ ಗುಳಿಗೆಯ ಬದಲಾಗಿ ಗಂಡನ ಆ್ಯಪಲ್ ಏರ್​ಪಾಡ್​ ನುಂಗಿದ ಮಹಿಳೆ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ರೀಲ್​ನ ಅಂತ್ಯದಲ್ಲಿ ಒಂದು ತಮಾಷೆ ಇದೆ ಎಂದು ಕುತೂಹಲ ಹುಟ್ಟಿಸಿದ್ದಾರೆ ಕೀರ್ತಿ. ಈ ವಿಡಿಯೋ ನೋಡಿದ ಅನೇಕರು ನೀವಿಬ್ಬರೂ ವೃತ್ತಿಪರ ನರ್ತಕಿಯರಂತೆ ತೋರುತ್ತಿದ್ದೀರಿ ಎಂದಿದ್ದಾರೆ. ಈವತ್ತು ಇಂಟರ್​ನೆಟ್​ನಲ್ಲಿ ನೋಡಿದ ಅತ್ಯುತ್ತಮ ಸಂಗತಿ ಎಂದರೆ ಈ ನಿಮ್ಮಿಬ್ಬರ ಡ್ಯಾನ್ಸ್​ ಎಂದಿದ್ದಾರೆ ಒಬ್ಬರು.

ಜವಾನನಿಗೆ ಹೆಜ್ಜೆ ಹಾಕಿದ ಕೀರ್ತಿ ಮತ್ತು ಪ್ರಿಯಾ

View this post on Instagram

A post shared by Priya Mohan (@priyaatlee)

ಈತನಕ ಮಾಡಿದ ಎಲ್ಲ ರೀಲ್​​ಗಿಂತ ಇದು ತುಂಬಾ ಆಕರ್ಷಕವಾಗಿದೆ ಎಂದಿದ್ದಾರೆ ಒಬ್ಬರು. ಇದು ಬಹಳ ಮುದ್ದಾಗಿದೆ ಎಂದಿದ್ದಾರೆ ಇನ್ನೊಬ್ಬರು. ಅಟ್ಲೀಕಾಮಿಯೋ! ಎಂದಿದ್ದಾರೆ ಮಗದೊಬ್ಬರು. ಅತ್ಯದ್ಭುತವಾಗಿ ನರ್ತಿಸಿದ್ದೀರಿ, ಅಭಿನಂದನೆಗಳು ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ಲಂಡನ್​; ಮಗಳ ಹೆಸರಿನಲ್ಲಿ 667 ಟ್ಯಾಟೂ ಹಾಕಿಸಿಕೊಂಡು ವಿಶ್ವದಾಖಲೆ ಮಾಡಿದ ಅಪ್ಪ

ನೀವು ಕೀರ್ತಿ ಜೊತೆ ಡ್ಯಾನ್ಸ್ ಮಾಡಿದ್ದಕ್ಕೆ ನಿಮ್ಮ ನಾಯಿಗೆ ಕೋಪ ಬಂದಿದೆ ಎಂದಿದ್ದಾರೆ ಒಬ್ಬರು. ಹೌದು, ಅದಕ್ಕೆಲ್ಲೋ ಬೇಸರ ಉಂಟಾಗಿದೆ, ಹಾಗಾಗಿಯೇ ನಿಮ್ಮ ಮುದ್ದನ್ನು ಅದು ಸ್ವೀಕರಿಸಿಲ್ಲ ಎಂದಿದ್ದಾರೆ ಇನ್ನೊಬ್ಬರು. ಆಗಲಿ ಈಗ ನೀವು ನಿಮ್ಮ ಮುದ್ದುನಾಯಿಯೊಂದಿಗೆ ಇದೇ ಹಾಡಿಗೆ ಡ್ಯಾನ್ಸ್​ ಮಾಡಿ ಮತ್ತೊಂದು ರೀಲ್ ಮಾಡಿ ಎಂದಿದ್ದಾರೆ ಕೆಲವರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 10:37 am, Thu, 14 September 23