Viral Video: ಆಗ್ರಾ; ಸರ್ಕಾರಿ ಮಕ್ಕಳ ಆಶ್ರಮದಲ್ಲಿ ಅಪ್ರಾಪ್ತ ಬಾಲಕಿಗೆ ಚಪ್ಪಲಿಯಿಂದ ಥಳಿಸಿದ ಮಹಿಳಾ ಅಧಿಕಾರಿ; ತನಿಖೆಗೆ ಆದೇಶ
Agra: ಆಗ್ರಾದ ಸರ್ಕಾರಿ ಮಕ್ಕಳ ಆಶ್ರಮದಲ್ಲಿ ಈ ಅಹಿತಕರ ಘಟನೆ ನಡೆದಿದೆ. ಆಶ್ರಮದ ಮಹಿಳಾ ಅಧಿಕಾರಿ ಅಪ್ರಾಪ್ತ ಬಾಲಕಿಯನ್ನು ಚಪ್ಪಲಿಯಿಂದ ಥಳಿಸಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಅಧಿಕಾರಿ ಪೂನಂ ಪಾಲ್ರನ್ನು ಅಮಾನತುಗೊಳಿಸಲಾಗಿದೆ. ಈ ಬಗ್ಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿ ಸಮಗ್ರ ತನಿಖೆಯಾಗುವಂತೆ ಒತ್ತಾಯಿಸಿದ್ಧಾರೆ.
Uttar Pradesh: ಆಗ್ರಾದ (Agra) ರಾಜಕಿಯಾ ಬಾಲ ಗೃಹದಲ್ಲಿ ಮಹಿಳಾ ಅಧಿಕಾರಿಯೊಬ್ಬರು ಅಪ್ರಾಪ್ತ ಬಾಲಕಿಯನ್ನು ಚಪ್ಪಲಿಯಿಂದ ಹೀನಾಯವಾಗಿ ಥಳಿಸುತ್ತಿದ್ದ ದೃಶ್ಯ ಇದೀಗ ವೈರಲ್ ಆಗಿದೆ. ಹಾಸಿಗೆಯ ಮೇಲೆ ಮಲಗಿರುವ ಅಪ್ರಾಪ್ತ ಬಾಲಕಿಯನ್ನು (15 ವರ್ಷ) ಹೀನಾಯವಾಗಿ ಥಳಿಸಿದ ಈ ಮಹಿಳಾ ಅಧಿಕಾರಿಗಳ ವಿರುದ್ಧ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಈ ಮಹಿಳೆ ಈ ಆಶ್ರಮದ ಸೂಪರಿಂಟೆಂಡೆಂಟ್ ಎಂದು ವರದಿಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ಈ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಡಿಪಿಒ ಅಧಿಕಾರಿಗೆ ಆದೇಶ ನೀಡಿದ್ದರು.
ಇದನ್ನೂ ಓದಿ : Viral Video: ನಾನು ನಂದಿನಿ ಬೆಂಗಳೂರಿಗೆ ಬಂದೀನಿ; 5 ಮಿಲಿಯನ್ ಜನರನ್ನು ತಲುಪಿದ ‘ವಿಕಿಪೀಡಿಯಾ’ ರೀಲ್
ಜಿಲ್ಲಾ ಮ್ಯಾಜಿಸ್ಟ್ರೇಟ್, ನಿರ್ದೇಶಕರು ಮತ್ತು ಲಕ್ನೋದಲ್ಲಿ ಮಹಿಳಾ ಕಲ್ಯಾಣ ಇಲಾಖೆಯ ಶಿಫಾರಸಿನ ಮೇರೆಗೆ ಡಿಪಿಒ ಮಕ್ಕಳ ಆಶ್ರಮಕ್ಕೆ ಭೇಟಿ ನೀಡಿ ವರದಿ ಸಲ್ಲಿಸಿದ ನಂತರ ಈ ಆಶ್ರಮದ ಸೂಪರಿಂಡೆಂಟ್ ಪೂನಂ ಪಾಲ್ ಅವರನ್ನು ಅಮಾನತುಗೊಳಿಸಲಾಗಿದೆ.
ಅಪ್ರಾಪ್ರ ಬಾಲಕಿಯನ್ನು ಚಪ್ಪಲಿಯಿಂದ ಥಳಿಸುತ್ತಿರುವ ದೃಶ್ಯ
In #Agra‘s govt run children shelterhome (Pachkuiyaan), Poonam Lal, the center superintendent was caught slapping a girl with slippers. Earlier she was booked for abetment to suicide in #Prayagraj district in 2021 after a 15-yr-old girl allegedly killed her self in shelter home pic.twitter.com/JE5V56jR7l
— Arvind Chauhan 💮🛡️ (@Arv_Ind_Chauhan) September 12, 2023
ಈ ಘಟನೆಯು ಸೆ. 4 ರಂದು ನಡೆದಿದ್ದು, ಈ ದೃಶ್ಯವನ್ನು ಇದೇ ಆಶ್ರಮದಲ್ಲಿರುವ ಇನ್ನೊಬ್ಬ ಅಧಿಕಾರಿಯು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ತನ್ನಪಾಡಿಗೆ ತಾನು ಹಾಸಿಗೆಯ ಮೇಲೆ ಮಲಗಿರುವ ಅಪ್ರಾಪ್ತ ಬಾಲಕಿಗೆ ಪೂನಂ ಪಾಲ್ ಚಪ್ಪಲಿಯಿಂದ ಥಳಿಸಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಆದರೂ ಪೂನಂ ಹೀಗೆ ವರ್ತಿಸಿದ್ದರ ಕಾರಣ ಇನ್ನೂ ತಿಳಿದುಬಂದಿಲ್ಲ. ಸೂಕ್ತ ತನಿಖೆಯ ನಂತರವಷ್ಟೇ ಸತ್ಯ ಬಹಿರಂಗವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ಧಾರೆ.
ಪೂನಂ ಪಾಲ್ ಅಮಾನತು
The department of woman and child development #UttarPradesh has suspended the accused superintendent Poonam Pal based on the investigation of #Agra DM. pic.twitter.com/jnLIxQtiQq
— Arvind Chauhan 💮🛡️ (@Arv_Ind_Chauhan) September 12, 2023
ಈ ಘಟನೆಯ ಬಗ್ಗೆ ಪೂನಂಗೆ ಪ್ರಶ್ನಿಸಿದಾಗ, ಮೊದಲು ಪ್ರತಿಕ್ರಿಯಿಸಲು ನಿರಾಕರಿಸಿ, ಈಗಾಗಲೇ ನಾನು ಡಿಪಿಒ ಅಜಯ್ ಪಾಲ್ ಸಿಂಗ್ ಅವರಿಗೆ ಈ ಬಗ್ಗೆ ಹೇಳಿದ್ದೇನೆ, ಮತ್ತೆ ಹೇಳಲು ನನ್ನ ಬಳಿ ಏನೂ ಇಲ್ಲ ಎಂದಿದ್ದಾರೆ. ಅಜಯ್ ಪಾಲ್ ಸಿಂಗ್, ‘ನಾನು ಮತ್ತು ಸಿಟಿ ಮ್ಯಾಜಿಸ್ಟ್ರೇಟ್ ಮಂಗಳವಾರ ಈ ಆಶ್ರಮಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದ್ದೇವೆ. ಈ ಬಾಲಕಿ ಇತರ ಮಕ್ಕಳ ಸಹಾಯದಿಂದ ತನ್ನನ್ನು ತಾನು ಪೆಟ್ಟಿಗೆಯಲ್ಲಿ ಅಡಗಿಸಿಟ್ಟುಕೊಳ್ಳುತ್ತಿದ್ದಳು ಎನ್ನುವ ವಿಷಯ ತಿಳಿದು ಬಂದಿದೆ’ ಎಂದಿದ್ಧಾರೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ