AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಇವನನ್ನು ಅಚ್ಚರಿಗೊಳಿಸಲೆಂದೇ ಇಡೀ ಊರು ಮೂಕಭಾಷೆ ಕಲಿಯಿತು

Dumb and Deaf : ನಾವೆಲ್ಲ ಸ್ಕ್ರೀನಿಗಂಟಿಕೊಂಡು ನಮ್ಮನಮ್ಮ ಜಗತ್ತಿನಲ್ಲಿ ಮುಳುಗಿಹೋಗಿದ್ದೇವೆ. ಹೀಗಿದ್ದಾಗ ಅಕ್ಕಪಕ್ಕದ ಮನೆಯವರ ಬಗ್ಗೆ ಯೋಚಿಸಲು ಸಮಯ ಇದೆಯೇ, ಆಸಕ್ತಿ ಇದೆಯೇ, ಇಲ್ಲವಲ್ಲ? ಖಂಡಿತ ಇದೆ! ಎನ್ನುತ್ತದೆ ಈ ವಿಡಿಯೋ. ಈ ಮೂಕ ಯುವಕನಲ್ಲಿ ಸ್ಫೂರ್ತಿ ತುಂಬಲು ಈತನ ನೆರೆಮನೆಯವರು ಮಾಡಿದ ಈ ವಿಡಿಯೋ ನೋಡಿದರೆ ಖಂಡಿತ ಹೌದಲ್ಲವೆ? ಎನ್ನಿಸುತ್ತದೆ.

Viral Video: ಇವನನ್ನು ಅಚ್ಚರಿಗೊಳಿಸಲೆಂದೇ ಇಡೀ ಊರು ಮೂಕಭಾಷೆ ಕಲಿಯಿತು
ಮಾತು ಬರದಿದ್ದರೆ ಏನಂತೆ?
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ|

Updated on: Sep 19, 2023 | 2:32 PM

Share

Sign Language : ಹೀಗೆ ಬಂದು ಹಾಗೆ ಹೋಗುವ ಎಷ್ಟೋ ಸಮಸ್ಯೆಗಳಿಗೆ ಕೈಹೊತ್ತುಕೊಂಡು ಇನ್ನೇನು ಬದುಕೇ ಮುಗಿದುಹೋಯಿತು ಎನ್ನುವಂತೆ ಕುಸಿಯುವವರು ಇಲ್ಲಿದ್ದಾರೆ. ಎಲ್ಲ ಸರಿ ಇದ್ದರೂ ಇನ್ನೇನೋ ಕೊರತೆ ಇದೆ, ಇನ್ನೇನೋ ಬೇಕಿದೆ ಎಂದು ಸದಾ ಹಾತೊರೆಯುತ್ತ ತಮ್ಮ ಜಗತ್ತಿನಲ್ಲೇ ಮುಳುಗಿ ಹೋಗುವವರೂ ಇದ್ದಾರೆ. ಆದರೆ ನಮ್ಮಪಕ್ಕದ ಮನೆಯಲ್ಲಿ ಯಾರಿದ್ದಾರೆ, ಅವರಿಗೆ ಏನಾದರೂ ತೊಂದರೆ ಇದೆಯೇ? ಅವರಿಗೆ ಹೇಗೆ ಸಹಾಯ ಮಾಡಬಹುದು ಮತ್ತು ಶಕ್ತಿ ತುಂಬಬಹುದು ಎಂದು ಯೋಚಿಸುವವರು ಅದೆಷ್ಟು ಜನರಿದ್ದಾರೆ? ಈ ವಿಡಿಯೋದಲ್ಲಿರುವ ಯುವಕನಿಗೆ ಮಾತೂ ಬರುವುದಿಲ್ಲ, ಕಿವಿಯೂ ಕೇಳುವುದಿಲ್ಲ (Deaf and Dumb). ಹೀಗಿದ್ದಾಗ ಇವನ ಜಗತ್ತು ಮನೆಯವರು ಮತ್ತು ಕೆಲ ಸ್ನೇಹಿತರು ಮಾತ್ರ. ಆದರೆ ಇವನ ನೆರೆಮನೆಯವರು ಇವನನ್ನು ಅಚ್ಚರಿಪಡಿಸಬೇಕು ಆತ್ಮವಿಶ್ವಾಸ ತುಂಬಬೇಕೆಂದು ಊರತುಂಬಾ ಸಂಜ್ಞಾಭಾಷೆಯನ್ನು ಹರಡಿದರು.

ಇದನ್ನೂ ಓದಿ : Viral Video: ಮಂಕೀ ಮ್ಯಾನ್ ಎಂದರು ಕಲ್ಲನ್ನೂ ಎಸೆದರು ನಾನು ಧೃತಿಗೆಡಲಿಲ್ಲ

ಸೆ. 6ರಂದು ಇನ್​ಸ್ಟಾಗ್ರಾಂನಲ್ಲಿ ಮಾಡಿದ ಈ ಪೋಸ್ಟ್​ ಅನ್ನು ಈತನಕ ಸುಮಾರು 7.6 ಲಕ್ಷ  ಜನರು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಈತನ ನೆರೆಮನೆಯವರು ಈತನಿಗಾಗಿ ಕೊಟ್ಟ ಸಮಯ, ಆಪ್ತತೆ ಮತ್ತು ತುಂಬಿದ ಶಕ್ತಿ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇಂಥವರ ಬಗೆಗೆ ಸಾಮಾಜಿಕವಾಗಿ ಅರಿವು ಮೂಡಿಸುವ ಕುರಿತು ಚರ್ಚಿಸುತ್ತಿದ್ದಾರೆ.

ಆ ದಿನ ಈ ವ್ಯಕ್ತಿಯ ಬೆಳಗು ಶುರುವಾದದ್ದು ಹೀಗೆ

ಡೇಕೇರ್, ಪ್ರೀಸ್ಕೂಲ್ ಮತ್ತು ಎಲಿಮೆಂಟರಿ ಶಾಲೆಗಳಲ್ಲಿ ನಾವು ಈ ಮೂಕಭಾಷೆಯನ್ನು ಎಲ್ಲರಿಗೂ ಕಲಿಸಬೇಕು. ಹಲವಾರು ಕಾರಣಗಳಿಂದ ಮುಂದೆ ಇದು ಪ್ರಯೋಜನಕಾರಿಯಾಗುತ್ತದೆ ಎಂದಿದ್ದಾರೆ ಒಬ್ಬರು. ಮಾಧ್ಯಮಿಕ ಮತ್ತು ಪ್ರೌಢಶಾಲೆಗಳಲ್ಲಿ ಸ್ಪ್ಯಾನಿಷ್​, ಫ್ರೆಂಚ್​, ಇಟಾಲಿಯನ್​ ಮತ್ತು ಮುಂತಾದ ಭಾಷೆಯೊಂದಿಗೆ ಮೂಕಭಾಷೆಯನ್ನೂ ಕಲಿಸಬೇಕು ಎಂದಿದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : Viral Video: ಬೀದಿಪಾಲಾಗಿದ್ದ 81 ವರ್ಷದ ಬರ್ಮಾದ ಮರ್ಲಿನ್​ ಚೆನ್ನೈನಲ್ಲಿ ಮತ್ತೀಗ ಇಂಗ್ಲಿಷ್​ ಟೀಚರ್

ಪರಸ್ಪರ ಅರ್ಥ ಮಾಡಿಕೊಳ್ಳಲು ಇದು ಎಂಥ ಒಳ್ಳೆಯ ಅವಕಾಶ, ನಾನು ರೈಲು ನಿಲ್ದಾಣದಲ್ಲಿ ಕುಳಿತುಕೊಂಡು ಅಳುತ್ತಿದ್ದೇನೆ ಎಂದಿದ್ದಾರೆ ಮಗದೊಬ್ಬರು. ಇದು ಕೇವಲ ಮೂಕ ಮತ್ತು ಕಿವುಡರಿಗೆ ಮಾತ್ರ ಅಲ್ಲ, ಇದು ನಮ್ಮೆಲ್ಲರಿಗೂ ಅನ್ವಯ. ಎಲ್ಲರಿಗೂ ಎಲ್ಲ ಭಾಷೆಗಳು ಬರುವುದಿಲ್ಲ, ಆಗ ನಾವು ಮೊರೆಹೋಗುವುದು ಭಾವ ಮತ್ತು ವಿಚಾರವನ್ನು ವ್ಯಕ್ತಪಡಿಸುವ ಈ ಸನ್ನೆಗೇ ಅಲ್ಲವೆ? ಎಂದಿದ್ದಾರೆ ಇನ್ನೂ ಒಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Follow Us
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ

ಶ್ರೀದೇವಿ ಕಳಸದ : ಮುಖ್ಯ ಉಪಸಂಪಾದಕಿ. ವಿಜಯ ಕರ್ನಾಟಕ, ಸುವರ್ಣ ನ್ಯೂಸ್, ಪ್ರಜಾವಾಣಿ ಮತ್ತು ವಿವಿಧ ಮಾಧ್ಯಮ ಸಂಸ್ಥೆಗಳು ಸೇರಿದಂತೆ ಒಟ್ಟು 16 ವರ್ಷಗಳ ಅನುಭವ. ಸಂಗೀತ, ಸಾಹಿತ್ಯ ಮತ್ತು ಲಲಿತ ಕಲೆಗಳಲ್ಲಿ ವಿಶೇಷ ಆಸಕ್ತಿ.

ಬೆಂಗಳೂರು ಟ್ರಾಫಿಕ್ ಬಗ್ಗೆ ಡಿಕೆಶಿ ಜತೆ ಮೋದಿ ಅನೌಪಚಾರಿಕ ಮಾತುಕತೆ, ಸಲಹೆ
ಬೆಂಗಳೂರು ಟ್ರಾಫಿಕ್ ಬಗ್ಗೆ ಡಿಕೆಶಿ ಜತೆ ಮೋದಿ ಅನೌಪಚಾರಿಕ ಮಾತುಕತೆ, ಸಲಹೆ
ಸ್ವಾಮಿ ವೇಷಧಾರಿಗಳಾಗಿ ಮನೆಗೆ ನುಗ್ಗಿ ಬೆಳ್ಳಿ ಆಭರಣ ದೋಚಿದ ಗ್ಯಾಂಗ್
ಸ್ವಾಮಿ ವೇಷಧಾರಿಗಳಾಗಿ ಮನೆಗೆ ನುಗ್ಗಿ ಬೆಳ್ಳಿ ಆಭರಣ ದೋಚಿದ ಗ್ಯಾಂಗ್
ಮೋದಿ ಬೆಂಗಾವಲು ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ: ಮೈಸೂರಿನಲ್ಲೇ ಬಾಕಿ
ಮೋದಿ ಬೆಂಗಾವಲು ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ: ಮೈಸೂರಿನಲ್ಲೇ ಬಾಕಿ
ಕ್ಯಾಪ್ಟನ್ ಆದರೂ ಜಗದೀಶ್​​ಗೆ ಕಡಿಮೆ ಆಗಿಲ್ಲ ಭಯ; ಎಲಿಮಿನೇಷನ್ ಆತಂಕ
ಕ್ಯಾಪ್ಟನ್ ಆದರೂ ಜಗದೀಶ್​​ಗೆ ಕಡಿಮೆ ಆಗಿಲ್ಲ ಭಯ; ಎಲಿಮಿನೇಷನ್ ಆತಂಕ
ಮಣಿಪಾಲ: ಪಬ್‌ಗಳಲ್ಲಿ ಅಸಭ್ಯ ವರ್ತನೆಯ ವಿಡಿಯೋ ವೈರಲ್
ಮಣಿಪಾಲ: ಪಬ್‌ಗಳಲ್ಲಿ ಅಸಭ್ಯ ವರ್ತನೆಯ ವಿಡಿಯೋ ವೈರಲ್
ಪಿಂಕ್​ಲೈನ್ ಮೆಟ್ರೋ ಸಾರ್ವಜನಿಕ ಸಂಚಾರ ಶುರು
ಪಿಂಕ್​ಲೈನ್ ಮೆಟ್ರೋ ಸಾರ್ವಜನಿಕ ಸಂಚಾರ ಶುರು
ಇಂದು ಈ ರಾಶಿಯವರು ಮರೆತ ಹಣ ವಾಪಸ್ ಸಿಗುವ ಸಾಧ್ಯತೆ
ಇಂದು ಈ ರಾಶಿಯವರು ಮರೆತ ಹಣ ವಾಪಸ್ ಸಿಗುವ ಸಾಧ್ಯತೆ
ವೇದಿಕೆಯಲ್ಲೇ ಅಸ್ವಸ್ಥಗೊಂಡ ಮಹಿಳಾ ಕಾರ್ಯಕರ್ತೆ: ನೆರವಿಗೆ ಧಾವಿಸಿದ ಮೋದಿ
ವೇದಿಕೆಯಲ್ಲೇ ಅಸ್ವಸ್ಥಗೊಂಡ ಮಹಿಳಾ ಕಾರ್ಯಕರ್ತೆ: ನೆರವಿಗೆ ಧಾವಿಸಿದ ಮೋದಿ
ರಾಜ್ಯಪಾಲೆ ಡಾ. ಸುಧಾ ಯಾದವ್ ತ್ಯಾಗವನ್ನು ಕೊಂಡಾಡಿದ ಪ್ರಧಾನಿ ಮೋದಿ
ರಾಜ್ಯಪಾಲೆ ಡಾ. ಸುಧಾ ಯಾದವ್ ತ್ಯಾಗವನ್ನು ಕೊಂಡಾಡಿದ ಪ್ರಧಾನಿ ಮೋದಿ
ಬಿಗ್ ಬಾಸ್ ಕನ್ನಡ: ಸ್ವಾಭಿಮಾನ ಬಿಟ್ಟು ನಾನು ಆಟ ಆಡಲ್ಲ; ಶಪಥ ಮಾಡಿದ ಗಾನವಿ
ಬಿಗ್ ಬಾಸ್ ಕನ್ನಡ: ಸ್ವಾಭಿಮಾನ ಬಿಟ್ಟು ನಾನು ಆಟ ಆಡಲ್ಲ; ಶಪಥ ಮಾಡಿದ ಗಾನವಿ