AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

9ನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಮಗನಿಗೆ 2.30 ಕೋಟಿ ರೂ. ಮೌಲ್ಯದ BMW ಕಾರು ಉಡುಗೊರೆ ನೀಡಿದ ತಂದೆ!

ಪಶ್ಚಿಮ ಬಂಗಾಳದ ಉದ್ಯಮಿಯೊಬ್ಬರು 9ನೇ ತರಗತಿಯ ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ತಮ್ಮ ಮಗನಿಗೆ ಬರೋಬ್ಬರಿ 2.30 ಕೋಟಿ ರೂ. ಮೌಲ್ಯದ BMW M4 ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ದುಬಾರಿ ಕಾರು ಸಿಕ್ಕರೂ 'ಓದಿಗೆ ಮೊದಲ ಆದ್ಯತೆ' ಎಂದ ವಿದ್ಯಾರ್ಥಿಯ ಮಾತು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

9ನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಮಗನಿಗೆ 2.30 ಕೋಟಿ ರೂ. ಮೌಲ್ಯದ BMW ಕಾರು ಉಡುಗೊರೆ ನೀಡಿದ ತಂದೆ!
BMW ಕಾರು ಉಡುಗೊರೆImage Credit source: instagram/talha__0555
ಅಕ್ಷತಾ ವರ್ಕಾಡಿ
|

Updated on: Nov 13, 2026 | 12:20 PM

Share

ಕೋಲ್ಕತ್ತಾ: 9ನೇ ತರಗತಿಯ ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ಮಗನ ಬಹುದಿನಗಳ ಕನಸನ್ನು ತಂದೆಯೊಬ್ಬರು ಭರ್ಜರಿಯಾಗಿ ನನಸು ಮಾಡಿದ್ದಾರೆ. ಪಶ್ಚಿಮ ಬಂಗಾಳದ ಪೂರ್ವ ಬುರ್ದ್ವಾನ್ ಜಿಲ್ಲೆಯ ಗಾಲ್ಸಿ ಪ್ರದೇಶದ ಪರಜ್ ನಿವಾಸಿ ಹಾಗೂ ಉದ್ಯಮಿ ಶಂಸುದ್ದೀನ್ ಮಿದ್ಯ ಅವರು ತಮ್ಮ ಮಗ ಮೊಹಮ್ಮದ್ ತಲ್ಹಾಗೆ ಬರೋಬ್ಬರಿ 2.30 ಕೋಟಿ ರೂ. ಮೌಲ್ಯದ ‘BMW M4 ಕಾಂಪಿಟೇಶನ್’ (BMW M4 Competition) ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.

ಪರೀಕ್ಷೆಯಲ್ಲಿ ಉತ್ತಮ ಸಾಧನೆಗೆ ಭರ್ಜರಿ ಉಡುಗೊರೆ:

ಉದ್ಯಮಿ ಶಂಸುದ್ದೀನ್ ಮಿದ್ಯ ಅವರ ಪುತ್ರ ಮೊಹಮ್ಮದ್ ತಲ್ಹಾ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಇತ್ತೀಚೆಗೆ ನಡೆದ ಅರ್ಧವಾರ್ಷಿಕ ಪರೀಕ್ಷೆಯಲ್ಲಿ ತಲ್ಹಾ ಉತ್ತಮ ಅಂಕಗಳನ್ನು ಗಳಿಸಿ ತೇರ್ಗಡೆಯಾಗಿದ್ದಾನೆ. ಮಗನ ಈ ಸಾಧನೆಯನ್ನು ವಿಶೇಷವಾಗಿ ಅಭಿನಂದಿಸಲು ಬಯಸಿದ ತಂದೆ, ಆತನ ಬಹುದಿನಗಳ ಕನಸಾಗಿದ್ದ ದುಬಾರಿ ಕಾರನ್ನು ಕೊಡಿಸಲು ನಿರ್ಧರಿಸಿದರು. ಅದರಂತೆ ತಕ್ಷಣವೇ ಮುಂಬೈಗೆ ತೆರಳಿದ ಶಂಸುದ್ದೀನ್, ಸುಮಾರು 2.30 ಕೋಟಿ ರೂ. ಮೌಲ್ಯದ ಹೊಸ BMW M4 ಕಾಂಪಿಟೇಶನ್ ಕಾರನ್ನು ಖರೀದಿಸಿ ಮಗನಿಗೆ ಉಡುಗೊರೆಯಾಗಿ ನೀಡಿದ್ದಾರೆ.

ದುಬಾರಿ ಕಾರು ಸಿಕ್ಕರೂ ಓದಿಗೆ ಮೊದಲ ಆದ್ಯತೆ ನೀಡಿದ ತಲ್ಹಾ:

ಕೋಟ್ಯಂತರ ರೂಪಾಯಿ ಮೌಲ್ಯದ ಐಷಾರಾಮಿ ಕಾರು ಉಡುಗೊರೆಯಾಗಿ ಸಿಕ್ಕಿದ್ದರೂ, ಬಾಲಕ ತಲ್ಹಾ ತನ್ನ ಓದಿನ ಮೇಲಿನ ಗಮನವನ್ನು ಕಳೆದುಕೊಂಡಿಲ್ಲ. “ನನಗೆ ಸದ್ಯಕ್ಕೆ ನನ್ನ ವಿದ್ಯಾಭ್ಯಾಸವೇ ಮೊದಲ ಆದ್ಯತೆ. ಚೆನ್ನಾಗಿ ಓದುವುದರತ್ತ ಗಮನ ಹರಿಸುತ್ತೇನೆ” ಎಂದು ತಲ್ಹಾ ಹೇಳಿದ್ದಾನೆ. ಅಪ್ರಾಪ್ತನಾಗಿರುವುದರಿಂದ ತಾನೇ ಕಾರು ಚಲಾಯಿಸದೆ, ವಾರಕ್ಕೊಮ್ಮೆ ತಂದೆ ಕಾರು ಚಲಾಯಿಸುವಾಗ ಅವರ ಪಕ್ಕದ ಸೀಟಿನಲ್ಲಿ ಕುಳಿತು ತನ್ನ ಕನಸಿನ ಕಾರಿನ ಪಯಣವನ್ನು ಆನಂದಿಸುವುದಾಗಿ ಆತ ಸಂತಸ ಹಂಚಿಕೊಂಡಿದ್ದಾನೆ.

ಇದನ್ನೂ ಓದಿ: 68ರ ವಯಸ್ಸಿನಲ್ಲೂ ಕಲಿಕೆಯ ಉತ್ಸಾಹ; ನಿವೃತ್ತ ಅಧಿಕಾರಿ ಈಗ ಸೈಕಾಲಜಿ ಸ್ಟೂಡೆಂಟ್!

9ನೇ ತರಗತಿಯ ಪರೀಕ್ಷೆಯ ಫಲಿತಾಂಶಕ್ಕೆ 2.30 ಕೋಟಿ ರೂ. ಮೌಲ್ಯದ ಕಾರು ಉಡುಗೊರೆ ನೀಡಿರುವುದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಮಗನ ಆಸೆ ಈಡೇರಿಸಿದ ತಂದೆಯ ಪ್ರೀತಿಯ ಜೊತೆಗೆ, ಇಷ್ಟು ದುಬಾರಿ ಉಡುಗೊರೆ ಸಿಕ್ಕರೂ ಓದಿಗೆ ಮೊದಲ ಆದ್ಯತೆ ನೀಡುತ್ತೇನೆ ಎಂಬ ತಲ್ಹಾ ಅವರ ಪ್ರಬುದ್ಧ ಮಾತುಗಳು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿವೆ.

ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಸದ್ಯ ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ರಾಜಕೀಯ, ಕ್ರೈಂ ಸುದ್ದಿಗಳನ್ನು ಬರೆಯುತ್ತಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಪ್ರಶಾಂತಿ ಕುಟೀರ ಸುವರ್ಣ ಮಹೋತ್ಸವದಲ್ಲಿ ಮೋದಿ ಭಾಗಿ ನೇರಪ್ರಸಾರ
ಪ್ರಶಾಂತಿ ಕುಟೀರ ಸುವರ್ಣ ಮಹೋತ್ಸವದಲ್ಲಿ ಮೋದಿ ಭಾಗಿ ನೇರಪ್ರಸಾರ
ಮೋದಿ ಸಂಚರಿಸುವಲ್ಲೆಲ್ಲ ಕೈ-ಕಮಲ ಕಾರ್ಯಕರ್ತರ ಫ್ಲೆಕ್ಸ್​ಗಳು ಝಗಮಗ!
ಮೋದಿ ಸಂಚರಿಸುವಲ್ಲೆಲ್ಲ ಕೈ-ಕಮಲ ಕಾರ್ಯಕರ್ತರ ಫ್ಲೆಕ್ಸ್​ಗಳು ಝಗಮಗ!
ಲಾಭ ಪಡೆಯಲು ಕಳ್ಳಾಟ ಆಡಿದ್ರಾ ಆಸಿಯಾ? ಸೌಂದರ್ಯಾ ಛೀಮಾರಿ
ಲಾಭ ಪಡೆಯಲು ಕಳ್ಳಾಟ ಆಡಿದ್ರಾ ಆಸಿಯಾ? ಸೌಂದರ್ಯಾ ಛೀಮಾರಿ
ಇಂದು ಈ ರಾಶಿಯವರು ಅತಿಯಾಗಿ ನಂಬಿದವರಿಂದ ಮೋಸ ಹೋಗುವ ಸಾಧ್ಯತೆ
ಇಂದು ಈ ರಾಶಿಯವರು ಅತಿಯಾಗಿ ನಂಬಿದವರಿಂದ ಮೋಸ ಹೋಗುವ ಸಾಧ್ಯತೆ
ಡಾ.ರಮ್ಯಾ ಬರೆದಿರುವ ‘ಚಲಿಸುವ ಬಂಡೆ’ ಪುಸ್ತಕದಲ್ಲಿ ಯಾವೆಲ್ಲಾ ವಿಚಾರಗಳಿವೆ?
ಡಾ.ರಮ್ಯಾ ಬರೆದಿರುವ ‘ಚಲಿಸುವ ಬಂಡೆ’ ಪುಸ್ತಕದಲ್ಲಿ ಯಾವೆಲ್ಲಾ ವಿಚಾರಗಳಿವೆ?
ಲೀಲಾವತಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಬಗ್ಗೆ ವಿನೋದ್ ರಾಜ್ ಬೇಸರ
ಲೀಲಾವತಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಬಗ್ಗೆ ವಿನೋದ್ ರಾಜ್ ಬೇಸರ
ಶಿವರಾಜ್ ಕೆಆರ್ ಪೇಟೆ ಹೊಸ ಸಿನಿಮಾ ‘ಹವಾಮಾನ ವರದಿ’ ಶುರುವಾಗಿದ್ದು ಹೀಗೆ..
ಶಿವರಾಜ್ ಕೆಆರ್ ಪೇಟೆ ಹೊಸ ಸಿನಿಮಾ ‘ಹವಾಮಾನ ವರದಿ’ ಶುರುವಾಗಿದ್ದು ಹೀಗೆ..
ಬೆಂಗಳೂರಿನ ಮನಮೋಹಕ ತಾಣ ನಲ್ಲಿಗುಡ್ಡೆ ಅಭಿವೃದ್ಧಿಗೆ ಸರ್ಕಾರದ ಒತ್ತು
ಬೆಂಗಳೂರಿನ ಮನಮೋಹಕ ತಾಣ ನಲ್ಲಿಗುಡ್ಡೆ ಅಭಿವೃದ್ಧಿಗೆ ಸರ್ಕಾರದ ಒತ್ತು
‘ಹವಾಮಾನ ವರದಿ’ ಸಿನಿಮಾ ಬಗ್ಗೆ ನಾಯಕಿ ನಿರೀಕ್ಷಾ ರಾವ್ ಮಾತು: ವಿಡಿಯೋ
‘ಹವಾಮಾನ ವರದಿ’ ಸಿನಿಮಾ ಬಗ್ಗೆ ನಾಯಕಿ ನಿರೀಕ್ಷಾ ರಾವ್ ಮಾತು: ವಿಡಿಯೋ
'ಮೈಲೇಜ್ ಕುಸಿತಕ್ಕೆ ಎಥೆನಾಲ್ ಅಲ್ಲ, ಗುಂಡಿ ಬಿದ್ದ ರಸ್ತೆಗಳೇ ಕಾರಣ': ಅಶೋಕ್
'ಮೈಲೇಜ್ ಕುಸಿತಕ್ಕೆ ಎಥೆನಾಲ್ ಅಲ್ಲ, ಗುಂಡಿ ಬಿದ್ದ ರಸ್ತೆಗಳೇ ಕಾರಣ': ಅಶೋಕ್