Video: ಅಪ್ಪನಿಗೆ ಕಾರು ಗಿಫ್ಟ್ ಕೊಟ್ಟ ಮಗಳು, ಈ ಸರ್ಪ್ರೈಸ್‌ಗೆ ತಂದೆ ಭಾವುಕ
ಹೆಣ್ಣು ಮಕ್ಕಳಿಗೆ ಅಪ್ಪನೇ ಪ್ರಪಂಚ. ಅಪ್ಪ ಮಗಳ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ಇದೀಗ ಮಗಳೊಬ್ಬಳು ತನ್ನ ತಂದೆಗೆ ಕೊಟ್ಟ ಗಿಫ್ಟ್ ನೆಟ್ಟಿಗರ ಗಮನ ಸೆಳೆದಿದೆ. ಮಗಳು ತನ್ನ ತಂದೆಗೆ ಕಾರನ್ನು ಉಡುಗೊರೆಯಾಗಿ ನೀಡಿದ್ದು, ಆತನನ್ನು ಭಾವುಕವನ್ನಾಗಿಸಿದೆ. ಈ ಹೃದಯ ಸ್ಪರ್ಶಿ ವಿಡಿಯೋ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಅಪ್ಪ (father) ಅಂದ್ರೆ ಹೆಣ್ಣು ಮಕ್ಕಳಿಗೆ ಪ್ರಾಣಕ್ಕಿಂತ ಹೆಚ್ಚು. ಇತ್ತ ತಂದೆಯು ತಮ್ಮ ಮಗಳ ಖುಷಿಗಾಗಿ ಏನು ಬೇಕಾದ್ರೂ ಮಾಡಲು ಸಿದ್ಧವಿರುತ್ತಾನೆ. ಇದೀಗ ಮಗಳು ತಂದೆಯನ್ನು ಖುಷಿ ಪಡಿಸಿದ್ದಾನೆ. ಟಾಂಜಾನಿಯಾದ ಯುವತಿ ತನ್ನ ತಂದೆಗೆ ಮೊದಲ ಕಾರು ಕೊಡಿಸಿದ್ದಾಳೆ. ಮಗಳ ಸರ್ಪ್ರೈಸ್ ಗಿಫ್ಟ್ ಗೆ ತಂದೆ ಭಾವುಕರಾಗಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಅಪ್ಪನಿಗೆ ಕಾರು ಉಡುಗೊರೆಯಾಗಿ ಕೊಟ್ಟ ಮಗಳು
ಸವ್ವಿ (@raisi_wa_first_year) ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಯುವತಿ ತಂದೆಗೆ ಗಿಫ್ಟ್ ಕೊಡುವ ವಿಶೇಷ ವಿಡಿಯೋ ಹಂಚಿಕೊಂಡಿದ್ದಾಳೆ. ಈ ಕ್ಲಿಪಿಂಗ್‌ನಲ್ಲಿ ತಂದೆ-ಮಗಳು ಕಾರಿನೊಳಗೆ ಕುಳಿತುಕೊಂಡಿರುವುದನ್ನು ಕಾಣಬಹುದು. ಇದರಲ್ಲಿ ತಂದೆಗೆ ಮೊದಲ ಕಾರನ್ನು ಉಡುಗೊರೆಯಾಗಿ ಕೊಡುವ ಕ್ಷಣವಿದೆ. ತನ್ನ ಪ್ರಪಂಚವಾಗಿರುವ ಅಪ್ಪನಿಗೆ ಈ ಕಾರು ಖರೀದಿಸಿದೆ. ಅಪ್ಪನ ಬಳಿ ಕಾರು ಇರಲಿಲ್ಲ. ಹೀಗಾಗಿ ಕಾರನ್ನು ಗಿಫ್ಟ್ ಆಗಿ ಕೊಟ್ಟೆ. ನನಗಿರುವುದು ಅವರೊಬ್ಬರೇ ಎಂದು ಹೇಳಿದ್ದಾಳೆ. ತನ್ನ ಮಗಳು ಕಾರನ್ನು ಉಡುಗೊರೆಯಾಗಿ ತನಗೆ ಕೊಟ್ಟಿದ್ದಾಳೆ ಎಂದು ತಿಳಿದು ತಂದೆಯ ಕಣ್ಣಲ್ಲಿ ನೀರು ಬಂದಿದೆ.
ವೈರಲ್ ವಿಡಿಯೋ ಇಲ್ಲಿದೆ
View this post on Instagram
ಇದನ್ನೂ ಓದಿ: ದೀಪಾವಳಿ ಹಬ್ಬಕ್ಕೆ ವಿದೇಶದಿಂದ ಬಂದ ಮಗಳು, ಈ ಸರ್ಪ್ರೈಸ್‌ಗೆ ಹೆತ್ತವರು ಭಾವುಕ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನಿಮ್ಮ ಮಾತು ಕೇಳಿ ಖುಷಿಯಾಯ್ತು ಎಂದಿದ್ದಾರೆ. ಇನ್ನೊಬ್ಬರು, ಇಂತಹ ಮಗಳನ್ನು ಪಡೆದ ನೀವೇ ಪುಣ್ಯವಂತರು ಎಂದು ಹೇಳಿದ್ದಾರೆ. ಮತ್ತೊಬ್ಬರು, ತಂದೆ ಮಗಳ ಬಾಂಧವ್ಯ ನೋಡಿ ಖುಷಿಯಾಯ್ತು ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
