AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋನಿಯಾ ಗಾಂಧಿ ಪುಸ್ತಕದಲ್ಲಿ ಗೋಧ್ರಾ ಪ್ರಕರಣ ವಿವಾದಿತವೆಂದು ಉಲ್ಲೇಖ: ಸತ್ಯ ಸಾಭೀತಾಗಿದೆ ಎಂದ ಮಾಜಿ ಸಿಬಿಐ ಅಧಿಕಾರಿ!

ಸೋನಿಯಾ ಗಾಂಧಿ ತಮ್ಮ ಆತ್ಮಕಥನದಲ್ಲಿ ಗೋಧ್ರಾ ರೈಲು ದಹನ ಪ್ರಕರಣದ ಕಾರಣ ವಿವಾದಿತವಾಗಿದೆ ಎಂದು ಉಲ್ಲೇಖಿಸಿರುವುದಕ್ಕೆ ಮಾಜಿ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿಧಿವಿಜ್ಞಾನ ಸಾಕ್ಷ್ಯಗಳು ಮತ್ತು ನ್ಯಾಯಾಲಯದ ತೀರ್ಪು ಪ್ರಕರಣದ ಸತ್ಯವನ್ನು ಸಾಬೀತುಪಡಿಸಿವೆ ಎಂದು ಅವರು ಹೇಳಿದ್ದಾರೆ. ಸೋನಿಯಾ ಹೇಳಿಕೆ ಹಾಗೂ ಅಸ್ತಾನಾ ಪ್ರತಿಕ್ರಿಯೆ ಇದೀಗ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಸೋನಿಯಾ ಗಾಂಧಿ ಪುಸ್ತಕದಲ್ಲಿ ಗೋಧ್ರಾ ಪ್ರಕರಣ ವಿವಾದಿತವೆಂದು ಉಲ್ಲೇಖ: ಸತ್ಯ ಸಾಭೀತಾಗಿದೆ ಎಂದ ಮಾಜಿ ಸಿಬಿಐ ಅಧಿಕಾರಿ!
ರಾಕೇಶ್ ಅಸ್ತಾನಾ
ಭಾವನಾ ಹೆಗಡೆ
|

Updated on: Nov 14, 2026 | 12:14 PM

Share

ಮುಖ್ಯಾಂಶಗಳು

  • ಸೋನಿಯಾ ಗಾಂಧಿ ಆತ್ಮಕಥನದಲ್ಲಿ ಗೋಧ್ರಾ ರೈಲು ದಹನದ ಕಾರಣ ವಿವಾದಿತವೆಂದು ಉಲ್ಲೇಖ.
  • ಸೋನಿಯಾ ಹೇಳಿಕೆಯನ್ನು ಮಾಜಿ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ತೀವ್ರವಾಗಿ ವಿರೋಧಿಸಿದ್ದಾರೆ.
  • ವಿಧಿವಿಜ್ಞಾನ ಸಾಕ್ಷ್ಯಗಳಿಂದ ಗೋಧ್ರಾ ಪ್ರಕರಣದ ಸತ್ಯ ಸಾಬೀತಾಗಿದೆ ಎಂದ ಅಸ್ತಾನಾ.

ನವದೆಹಲಿ, ನವೆಂಬರ್ 14: 2002ರ ಗುಜರಾತ್ ಗೋಧ್ರಾ ರೈಲು ದಹನ ಪ್ರಕರಣ ಮತ್ತೆ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ತಮ್ಮ ಆತ್ಮಕಥನದಲ್ಲಿ ಗೋಧ್ರಾ ರೈಲು ಅಗ್ನಿ ದುರಂತದ ಕಾರಣ ಇನ್ನೂ ವಿವಾದಿತವಾಗಿದೆ ಎಂದು ಉಲ್ಲೇಖಿಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಸೋನಿಯಾ ಗಾಂಧಿ ಅವರ ಈ ಹೇಳಿಕೆಯನ್ನು ಮಾಜಿ ಸಿಬಿಐ ವಿಶೇಷ ನಿರ್ದೇಶಕ ಹಾಗೂ ಗೋಧ್ರಾ ಪ್ರಕರಣದ ತನಿಖೆ ನಡೆಸಿದ್ದ ರಾಕೇಶ್ ಅಸ್ತಾನಾ ತೀವ್ರವಾಗಿ ವಿರೋಧಿಸಿದ್ದಾರೆ. ಗೋಧ್ರಾ ಪ್ರಕರಣದ ತನಿಖೆ ಸಂಪೂರ್ಣವಾಗಿ ನಡೆದಿದ್ದು, ವಿಧಿವಿಜ್ಞಾನ ಸಾಕ್ಷ್ಯಗಳು ಬೆಂಕಿಗೆ ಕಾರಣವನ್ನು ಸ್ಪಷ್ಟಪಡಿಸಿವೆ. ನ್ಯಾಯಾಲಯದಲ್ಲೂ ತನಿಖೆಯ ಸತ್ಯಾಸತ್ಯತೆ ಸಾಬೀತಾಗಿದೆ ಎಂದು ಅವರು ಹೇಳಿದ್ದಾರೆ.

ಸೋನಿಯಾ ಗಾಂಧಿ ಆತ್ಮಕಥನದಲ್ಲಿ ಏನಿದೆ?

ಸೋನಿಯಾ ಗಾಂಧಿ ತಮ್ಮ Belonging: A Journey of Love ಎಂಬ ಆತ್ಮಕಥನದಲ್ಲಿ 2002ರ ಗುಜರಾತ್ ಗಲಭೆಗಳ ಕುರಿತು ಉಲ್ಲೇಖಿಸಿದ್ದಾರೆ. 2002ರ ಫೆಬ್ರವರಿ 27ರಂದು ಅಯೋಧ್ಯೆಯಿಂದ ಅಹಮದಾಬಾದ್‌ಗೆ ಹಿಂದಿರುಗುತ್ತಿದ್ದ ಸಬರಮತಿ ಎಕ್ಸ್‌ಪ್ರೆಸ್ ರೈಲಿನ ನಾಲ್ಕು ಬೋಗಿಗಳಿಗೆ ಬೆಂಕಿ ಹಚ್ಚಲಾಗಿತ್ತು. ಈ ಘಟನೆಯಲ್ಲಿ 59 ಕರಸೇವಕರು ಮೃತಪಟ್ಟಿದ್ದರು. ಬಳಿಕ ಗುಜರಾತ್‌ನ ಹಲವು ಭಾಗಗಳಲ್ಲಿ ಕೋಮು ಗಲಭೆಗಳು ಭುಗಿಲೆದ್ದಿದ್ದವು. ಆದರೆ ರೈಲಿಗೆ ಬೆಂಕಿ ತಗುಲಿದ ಕಾರಣ ಇನ್ನೂ ವಿವಾದಿತವಾಗಿದೆ ಎಂದು ಸೋನಿಯಾ ಗಾಂಧಿ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.

‘ಅದು ಸಂಪೂರ್ಣ ತಪ್ಪು, ತನಿಖೆಯಲ್ಲಿ ಸತ್ಯ ಸಾಬೀತಾಗಿದೆ’

ಸೋನಿಯಾ ಗಾಂಧಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಾಜಿ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ, ಎಎನ್‌ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗೋಧ್ರಾ ಪ್ರಕರಣದ ತನಿಖೆ ಅಧಿಕೃತವಾಗಿ ಹಾಗೂ ಸಮಗ್ರವಾಗಿ ನಡೆದಿದೆ. ವಿಧಿವಿಜ್ಞಾನ ಸಾಕ್ಷ್ಯಗಳ ಮೂಲಕ ಬೆಂಕಿಗೆ ಕಾರಣವನ್ನು ದೃಢಪಡಿಸಲಾಗಿದೆ. ನ್ಯಾಯಾಲಯದಲ್ಲೂ ಇದು ಸಾಬೀತಾಗಿದೆ. ಈಗಲೂ ಈ ಪ್ರಕರಣದ ಬಗ್ಗೆ ಅನುಮಾನ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದ್ದರೆ ಅದರ ಹಿಂದೆ ರಾಜಕೀಯ ಉದ್ದೇಶವಿದೆ ಎಂದು ಅಸ್ತಾನಾ ಹೇಳಿದ್ದಾರೆ. ಯಾವುದೇ ಧರ್ಮದ ವ್ಯಕ್ತಿಯ ಸಾವು ಕೂಡ ಸಾವೇ, ಕೊಲೆ ಎಂದರೆ ಕೊಲೆಯೇ. ಹೀಗಾಗಿ ಈ ಪ್ರಕರಣವನ್ನು ಅಪರಾಧ ಕೃತ್ಯವೆಂದೇ ಪರಿಗಣಿಸಿ ತನಿಖೆ ನಡೆಸಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಗೋಧ್ರಾ ಪ್ರಕರಣದಲ್ಲಿ 31 ಮಂದಿಗೆ ಶಿಕ್ಷೆ!

2002ರ ಫೆಬ್ರವರಿ 27ರಂದು ನಡೆದ ರೈಲು ದಹನ ಪ್ರಕರಣದಲ್ಲಿ 2011ರಲ್ಲಿ ವಿಶೇಷ ನ್ಯಾಯಾಲಯ 31 ಮಂದಿಯನ್ನು ದೋಷಿಗಳೆಂದು ತೀರ್ಪು ನೀಡಿತ್ತು. 2014ರಲ್ಲಿ ಗುಜರಾತ್ ಹೈಕೋರ್ಟ್ 11 ಮಂದಿಯ ಶಿಕ್ಷೆಯನ್ನು ಎತ್ತಿಹಿಡಿದು, 20 ಮಂದಿಯನ್ನು ಖುಲಾಸೆಗೊಳಿಸಿತ್ತು. ಬಳಿಕ ಸುಪ್ರೀಂ ಕೋರ್ಟ್ ಕೂಡ ಅಪರಾಧಿಗಳ ಮೇಲ್ಮನವಿಗಳನ್ನು ತಿರಸ್ಕರಿಸಿ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿದಿತ್ತು. ಇದೀಗ ಸೋನಿಯಾ ಗಾಂಧಿ ಅವರ ಆತ್ಮಕಥನದ ಹೇಳಿಕೆ ಮತ್ತು ರಾಕೇಶ್ ಅಸ್ತಾನಾ ಅವರ ಪ್ರತಿಕ್ರಿಯೆ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಭಾವನಾ ಹೆಗಡೆ
ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More